ಒನ್‌ ಡೇ ಸೆಲೆಬ್ರೆಟಿ ಫೀಲಿಂಗೂ…

Team Udayavani, Mar 29, 2019, 6:00 AM IST

17

ಅದು ಮಾರ್ಚ್‌ 20ರ ಮಧ್ಯರಾತ್ರಿ. ಪ್ರತೀ ರಾತ್ರಿಯು ಆ ಸಮಯದಲ್ಲಿ ಸೈಲೆಂಟಾಗಿದ್ದ ನನ್ನ ಮೊಬೈಲ್‌ ಅಂದೇಕೋ ಸ್ವಲ್ಪ ಕಿರಿಕಿರಿ ಮಾಡಿತ್ತು. ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದ ನನ್ನನ್ನು ವಾಸ್ತವಕ್ಕೆ ಎಳೆದುಕೊಂಡು ಬಂದಿದ್ದು ವಾಟ್ಸಾಪ್‌ನ ಮೆಸೇಜ್‌ ಸದ್ದು. ಅರೆಬರೆ ತೆರೆದ ಕಣ್ಣು ಮೊಬೈಲ್‌ ಪರದೆಯನ್ನೇ ನೋಡುತ್ತಿತ್ತು. ವಾಟ್ಸಾಪ್‌ ತೆರೆದು ನೋಡಿದಾಗ ಮೊದಲು ಕಂಡಿದ್ದು ನಾಲ್ಕೈದು ಜನರ ಮೆಸೇಜ್‌ ನೋಟಿಫಿಕೇಶನ್‌. ಅದರಲ್ಲಿ ಮೊದಲ ಮೆಸೇಜ್‌ ಓಪನ್‌ ಮಾಡಿ ನೋಡಿದಾಗ ಗೊತ್ತಾಯ್ತು, ಓಹೋ ಹೀಗೋ ವಿಷ್ಯಾ ಅಂತ ! ಬಂದಿದ್ದ ನಾಲ್ಕೈದು ಮೆಸೇಜ್‌ಗೆ ರಿಪ್ಲೆ ಮಾಡಿ ಮುಗಿಸುವಷ್ಟರಲ್ಲಿ ನಿದ್ರೆಯು ಆವರಿಸಿಬಿಟ್ಟಿತು.

ಮರುದಿನ, ಅಂದ್ರೆ ಮಾರ್ಚ್‌ 21 ಎಂದಿನಂತೆ ಆವತ್ತು ಕೂಡ ಬೆಳಗ್ಗಿನ ಜಾವ 5.30ಕ್ಕೆ ಅಲರಾಂ ಸದ್ದು ನನ್ನ ನಿದ್ರೆಗೆ ಬ್ರೇಕ್‌ ಹಾಕಿತ್ತು. ಅಲರಾಂ ಆಫ್ ಮಾಡಿ ಇಷ್ಟವಿಲ್ಲದ ಮನಸ್ಸಿನಿಂದ ಎದ್ದು ಎಂದಿನಂತೆ ಮೊಬೈಲ್‌ ಕಡೆ ಕಣ್ಣು ಹಾಯಿಸಿದಾಗ ಮೊಬೈಲ್‌ ಪರದೆ ಮೇಲೆ ನೋಟಿಫಿಕೇಶನ್‌ಗಳ ರಾಶಿಯೇ ಇತ್ತು. ಪ್ರತೀದಿನ ಒಂದೋ ಎರಡೋ ಇರುತ್ತಿದ್ದ ನೋಟಿಫಿಕೇಶನ್‌ ಇಂದು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿತ್ತು. ಅರೆ! ನನಗಂತೂ ಆಶ್ಚರ್ಯದ ಜೊತೆಗೆ ಸಂತೋಷವೂ ಆಯ್ತು. ಇನ್ನು ಸ್ಟೇಟಸ್‌ ಓಪನ್‌ ಮಾಡಿದ್ರೆ ಎಲ್ಲರ ಸ್ಟೇಟಸಲ್ಲೂ ನನ್‌ ಫೊಟೋನೆ ಕಾಣಿ¤ತ್ತು. ಜೊತೆಗೆ ವರ್ಷದ 364 ದಿನಗಳಲ್ಲಿ ಒಂದು ದಿನವೂ ಮೆಸೇಜ್‌ ಮಾಡದವರು ಇಂದು ಮೆಸೇಜ್‌ ಮಾಡಿದ್ದಾರೆ ! ಆಗ್ಲೆ ನೋಡಿ ಒಂಥರಾ ಸೆಲೆಬ್ರೆಟಿ ಫೀಲ್‌ ಸ್ಟಾರ್ಟ್‌ ಆಗಿದ್ದು.

ಅಬ್ಟಾ ! ಆ ಸೆಲೆಬ್ರೆಟಿ ಫೀಲ್‌ ಮಧ್ಯೆ ಕಾಲೇಜ್‌ಗೆ ಹೋಗ್ಬೇಕು ಅನ್ನೋದೇ ಮರೆತು ಹೋಗಿತ್ತು. ಆ ಮೆಸೇಜ್‌ ನೋಡ್ತಾನೆ ಅರ್ಧ ಗಂಟೆ ಕಳೆದಿತ್ತು. ಇನ್ನು ಉಳಿದಿರೋದು ಬರೀ ಅರ್ಧ ಗಂಟೆ ಅಷ್ಟೆ. ಅಷ್ಟರಲ್ಲಿ ನಾನು ಹೊರಡಬೇಕಿತ್ತು. ಹಾಗೋ-ಹೀಗೋ ಹೇಗೇಗೋ ಅರ್ಧ ಗಂಟೆಯಲ್ಲಿ ತಯಾರಾಗಿ ಹೊರಟು ಕಾಲೇಜ್‌ ತಲುಪುವಷ್ಟರಲ್ಲಿ ಶುಭಾಶಯಗಳ ಹೊಳೆಯೇ ಹರಿದುಬಂತು. ಕ್ಲಾಸ್‌ನೊಳಗೆ ಕಾಲಿಡುತ್ತಿದ್ದಂತೆ ಗೆಳೆಯ-ಗೆಳತಿಯರು ವಿಶ್‌ ಮಾಡೋ ಮೊದ್ಲೆ ಪಾರ್ಟಿ ಯಾವಾಗ, ಪಾರ್ಟಿ ಎಲ್ಲಿ ಅಂತ ಕೇಳುತ್ತಲೇ ವಿಶ್‌ ಮಾಡತೊಡಗಿದರು.

ಇವೆಲ್ಲ ಓಕೆ… ಆದ್ರೆ ಯಾಕೆ ಎಲ್ಲರೂ ವಿಶ್‌ ಮಾಡ್ತಿದ್ದಾರೆ, ಏನ್‌ ಸ್ಪೆಷಲ್‌, ಯಾವಾªದ್ರೂ ಸ್ಪರ್ಧೆ ವಿನ್‌ ಆಗಿದ್ದೇನಾ, ಕೆಲ್ಸ ಸಿಕ್ತಾ ಅಥವಾ ಮದ್ವೆ ಏನಾದ್ರೂ ಫಿಕ್ಸ್‌ ಆಯ್ತಾ ಅಂತ ನೀವು ಅಂದ್ಕೋತೀರಾ. ಅವೆಲ್ಲ ಏನೂ ಅಲ್ಲವೇ ಅಲ್ಲ. ಆವತ್ತು ನನ್ನ ಬರ್ತ್‌ಡೇ. ಅಂದು ನನಗೆ ಸೆಲೆಬ್ರೆಟಿ ಫೀಲ್‌ ಆಗಿದ್ದಂತೂ ನಿಜ.

ಬರ್ತ್‌ಡೇ ಅನ್ನೋದು ಎಲ್ಲರ ಜೀವನದಲ್ಲೂ ಒಂದು ಸ್ಪೆಷಲ್‌ ಡೇ. ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರೆ ಆ ದಿನಗಳಲ್ಲಿ ಆಚರಿಸುತ್ತಿದ್ದ ನಮ್ಮ ಬರ್ತ್‌ಡೇಯ ನೆನಪಾಗುತ್ತದೆ ಆ ಸಂಭ್ರಮವೇ ಬೇರೆ. ಅಂದು ಎಲ್ಲ ಮಕ್ಕಳು ಯೂನಿಫಾರ್ಮ್ ಹಾಕಿ ಬಂದರೆ ಬರ್ತ್‌ಡೇಯ ಮಗುವಿಗೆ ಮಾತ್ರ ಎಲ್ಲರಿಗಿಂತ ವಿಭಿನ್ನವಾಗಿ ಬಣ್ಣದ ಹೊಸಬಟ್ಟೆ ತೊಟ್ಟು ಶಾಲೆಗೆ ಬರುವ ಅವಕಾಶ. ಟೀಚರ್‌ ಕ್ಲಾಸ್‌ಗೆ ಬಂದು ಹಾಜರಿ ಹಾಕಿದ ಮೇಲೆ ಬರ್ತ್‌ಡೇ ಹುಡುಗ ಅಥವಾ ಹುಡುಗಿಯನ್ನು ಮುಂದೆ ಬರುವಂತೆ ಹೇಳಿ ಎಲ್ಲಾ ಮಕ್ಕಳಿಂದ ಸಾಮೂಹಿಕವಾಗಿ ಶುಭಾಶಯ ಹೇಳಿಸುವಾಗ ಒಂದು ರೀತಿಯ ಸೆಲೆಬ್ರೆಟಿ ಫೀಲ್‌ ಬಂದೇ ಬಿಡುತ್ತಿತ್ತು. ಎಲ್ಲರಿಗೆ ಚಾಕಲೇಟ್‌ ಹಂಚಿ ಸಂಜೆಯವರೆಗೆ ಕಲರ್‌ ಡ್ರೆಸ್ಸಿನಲ್ಲಿ ಎಲ್ಲರ ಗಮನ ಸೆಳೆಯೋ ಆ ಮಜಾನೇ ಬೇರೆ! ಆಗಿನ ಆ ಬರ್ತ್‌ಡೇಯ ಸಂಭ್ರಮಾಚರಣೆಗಳು ಇಂದಿನ ಬರ್ತ್‌ಡೇ ಪಾರ್ಟಿ, ಸ್ಟೇಟಸ್‌, ಗಿಫ್ಟ್ಗಳನ್ನು ಮೀರಿಸುವಂಥದ್ದು. ಇಂದು ನಮ್ಮ ಬರ್ತ್‌ಡೇ ಅಂದರೆ ಪಾರ್ಟಿ, ಗಿಫ್ಟ್, ವಾಟ್ಸಾಪ್‌, ಫೇಸುºಕ್‌, ಇನ್‌ಸ್ಟಾಗ್ರಾಂಗಳಲ್ಲಿ ಮೆಸೇಜ್‌, ಸ್ಟೇಟಸ್‌ ಇವುಗಳಲ್ಲೇ ಇರುತ್ತದೆ. ಅದೇನೇ ಇದ್ದರೂ ನನಗೂ ನನ್ನ ಬರ್ತ್‌ಡೇ ದಿನ ಅವೆಲ್ಲ ತುಂಬಾ ಖುಷಿ ಕೊಟ್ಟಿತು. ಜತೆಗೆ ಆ ದಿನ ನನಗೆ ಸೆಲೆಬ್ರೆಟಿ ಫೀಲ್‌ ನೀಡಿದ್ದಂತೂ ನಿಜ. ಎಲ್ಲರೂ ಇಂದು ಶಾಶ್ವತವಾಗಿ ಸೆಲೆಬ್ರೆಟಿಯಾಗಲು ಆಗದಿದ್ರೂ ಬರ್ತ್‌ಡೇ ದಿನವಾದರೂ ಸೆಲೆಬ್ರೆಟಿ ಆಗೇ ಆಗ್ತಿವಿ ಅನ್ನೋದೇ ಸಂತೋಷದ ವಿಚಾರ.

ಭಾವನಾ ಕೆರ್ವಾಶೆ
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ
ಆಳ್ವಾಸ್‌ ಕಾಲೇಜು, ಮೂಡಬಿದ್ರಿ

ಟಾಪ್ ನ್ಯೂಸ್

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

2

Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.