ಕೆಸರಿನಲ್ಲಿ ಒಂದು ದಿನ
Team Udayavani, Sep 6, 2019, 5:00 AM IST
ಸಾಂದರ್ಭಿಕ ಚಿತ್ರ
ಮನುಷ್ಯನು ನಾಗರಿಕನಾಗುವಲ್ಲಿ ಪ್ರಥಮ ಹೆಜ್ಜೆಯನ್ನಿಟ್ಟದ್ದು ಅವನು ಒಂದು ಕಡೆ ನೆಲೆಸಿ ಮಣ್ಣಿನೊಂದಿಗೆ ಪ್ರಯೋಗವನ್ನು ಶುರುಮಾಡಿದಾಗಿನಿಂದ- ಎನ್ನುವ ಅದ್ಭುತ ವ್ಯಾಖ್ಯೆಯನ್ನು ನಮಗೆ ಇತಿಹಾಸ ನೀಡುತ್ತದೆ. ಆದರೆ, ಅದು ಇಂದಿನ ಪರಿಸ್ಥಿತಿಯಲ್ಲಿ ಹೇಗಿದೆ ಎಂದರೆ- ಇಂದು ಮಾನವನು ಮಣ್ಣಿನ ಅವಲಂಬನೆಯಿಂದ ದೂರವಾಗಲು ಸಾಧ್ಯವಿಲ್ಲ ಎಂಬ ಪರಮ ಸತ್ಯ ತಿಳಿದಿದ್ದರೂ ತಾನೇ ಮಣ್ಣಿನ ಅವಲಂಬನೆಯಿಂದ ದೂರವಾಗುವ ಪ್ರಯತ್ನದಲ್ಲಿದ್ದಾನೆ.
ಮಣ್ಣಿಂದ ಕಾಯ ಮಣ್ಣಿಂದ ಎಂದಿದ್ದಾರೆ ದಾಸರು. ಸರ್ವವೂ ಮಣ್ಣಿನಿಂದ ಆಗಿರುವಾಗ ಮಣ್ಣನ್ನು ಕೊಳಕು ಎಂದು ಭಾವಿಸುವುದು ಅನಾಗರೀಕತೆಯಲ್ಲವೆ?
ದಿನ ಯುವಸಮಾಜ ಮಣ್ಣಿನಲ್ಲಿ ಇಳಿದು ಅದರ ಸೊಬಗನ್ನು ಅರಿಯುವ ಸಂಸ್ಕೃತಿಯಿಂದ ದೂರ ಸರಿಯುತ್ತಿರುವ ದಿನಗಳಿವು. ಇಂಥ ಸಂದರ್ಭದಲ್ಲಿ ನಮ್ಮ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಮುಖೇನ ಇತ್ತೀಚೆಗೆ ಕೆಸರುಗದ್ದೆಯಲ್ಲಿ ಒಂದು ದಿನ ಎನ್ನುವ ಅದ್ಭುತವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಬಹಳ ವಿಶೇಷವಾಗಿತ್ತು. ಏಕೆಂದರೆ, ಒಂದು ಕಡೆಯಿಂದ ಆಧುನಿಕತೆಯ ನೆಪದಲ್ಲಿ ನಮ್ಮ ನೆಲದ ಸಂಸ್ಕೃತಿಯನ್ನು ಯುವಸಮಾಜ ಮರೆಯುತ್ತಿದೆ. ಇಂಥ ಯುವ ಸಮುದಾಯವನ್ನು ಮತ್ತೆ ನಿಜ ಬದುಕಿನ ಕಡೆಗೆ ಸೆಳೆಯುವ ಸಾರ್ಥಕ ಪ್ರಯತ್ನವಿದು.
ಈ ಕಾರ್ಯಕ್ರಮದಲ್ಲಿ ಹಲವು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಇದೊಂದು ಹೊಸ ಅನುಭವ. ಮನೆಯಲ್ಲಿ ಗದ್ದೆ ಇದ್ದರೂ ಅದರಲ್ಲಿ ಕೆಲಸ ಮಾಡಿದ ಅನುಭವ ಅನೇಕರಿಗೆ ಇರುವುದಿಲ್ಲ. ಅವರೆಲ್ಲ ಅನಿವಾರ್ಯವಾಗಿ ಒಂದು ದಿನದ ಮಟ್ಟಿಗೆ ಕೆಸರಿನಲ್ಲಿ ಓಡಾಡಬೇಕಾಯಿತು.
ನಾವು ಎಷ್ಟೇ ಕಲಿತರೂ ಯಾವ ಉದ್ಯೋಗವನ್ನು ಹಿಡಿದರೂ ನಮ್ಮ ಮೂಲದ ಸಂಸ್ಕೃತಿ ನಮ್ಮನ್ನು ಬಿಡುವುದಿಲ್ಲ. ನಾವೂ ಅದನ್ನು ಬಿಡಬಾರದು !
ವಿಷ್ಣುಧರನ್
ದ್ವಿತೀಯ ಬಿಎ
ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.