ಆಶ್ರಮದಲ್ಲಿ ಕಳೆದ ದಿನಗಳು
Team Udayavani, Jan 18, 2019, 12:30 AM IST
ನನ್ನ ಜೀವನದಲ್ಲಿ ಕಳೆದ ಅತ್ಯುತ್ತಮ ಕ್ಷಣಗಳಲ್ಲಿ ಆಶ್ರಮದಲ್ಲಿ ಕಳೆದ ಸಮಯವೂ ಒಂದಾಗಿದೆ. ಹೆತ್ತು, ಹೊತ್ತು, ಎತ್ತಿ ಮುದ್ದಾಡಿ ಕಷ್ಟಪಟ್ಟು ಬೆಳೆಸಿದ ಮಕ್ಕಳೇ ಮುಂದಿನ ದಿನ ತನ್ನ ಸ್ವಾರ್ಥಕ್ಕಾಗಿ ಯಾವ ಆಲೋಚನೆಯನ್ನೂ ಮಾಡದೆ ತಮ್ಮ ಹೆತ್ತವರನ್ನೇ ಆಶ್ರಮಕ್ಕೆ ಕಳುಹಿಸಿ ಬಿಡುತ್ತಾರೆ. ಆದರೆ, ಅಲ್ಲಿಯ ಪಾಲಕರಾದವರು ಮಾತ್ರ ಅವರನ್ನು ತಮ್ಮ ಹೆತ್ತವರಂತೆಯತೇ ನೋಡಿಕೊಳ್ಳುತ್ತಾರೆ. ತಮ್ಮ ಸ್ವಂತ ಮಕ್ಕಳಿಗಿಂತಲೂ ಆಶ್ರಮದ ಮಂದಿಗೆ ಹೆಚ್ಚು ಪ್ರೀತಿಯನ್ನು ಕೊಡುತ್ತಾರೆ. ಆದರೂ, ಹೆತ್ತವರ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಕಡೆ ತನ್ನ ಮಕ್ಕಳು ತನ್ನನ್ನು ನೋಡಿಕೊಳ್ಳಲಿಲ್ಲವೆಂಬ ಕೊರಗು ಇದ್ದೇ ಇರುತ್ತದೆ.
ತಂದೆತಾಯಿ ತಮ್ಮ ಮಕ್ಕಳು ಅರಿತೋ ಅಥವಾ ಅರಿಯದೆಯೋ ಮಾಡಿದ ತಪ್ಪುಗಳನ್ನು ಮಕ್ಕಳಿಗೆ ತಿಳಿಹೇಳಿ ಕ್ಷಮಿಸಿಬಿಡುತ್ತಾರೆ. ತಮ್ಮ ಮಕ್ಕಳಲ್ಲಿ ಯಾವತ್ತೂ ಬೇಧಭಾವ ಮಾಡುವುದಿಲ್ಲ. ಅವರಿಗೆ ಒಂಚೂರು ನೋವಾಗದಂತೆ ನೋಡಿಕೊಳ್ಳುತ್ತಾರೆ. ತಮಗೆ ಎಷ್ಟು ಕಷ್ಟವಾದರೂ ಪರವಾಗಿಲ್ಲ ಮಕ್ಕಳ ಸಂತೋಷವೇ ನಮ್ಮ ಸಂತೋಷ ಎಂದು ತಮ್ಮ ಜೀವಮಾನವನ್ನೇ ಮಕ್ಕಳಿಗೋಸ್ಕರ ಮುಡಿಪಾಗಿಡುತ್ತಾರೆ. ಆದರೆ, ಅವರ ವೃದ್ಧಾಪ್ಯದ ದಿನಗಳಲ್ಲಿ ಮಕ್ಕಳು ಮಾತ್ರ ಅವರ ನೆರಳಾಗುವುದಿಲ್ಲ.
ನಾನು ಒಮ್ಮೆ ನಮ್ಮ ಕಾಲೇಜಿನ ರೋವರ್ ರೇಂಜರ್ ಗ್ರೂಪಿನೊಂದಿಗೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ¨ªೆ. ಅಲ್ಲಿ ಅಜ್ಜ-ಅಜ್ಜಿಯರೊಂದಿಗೆ ಕಳೆದ ಸಮಯ ನನ್ನ ಜೀವನದಲ್ಲಿ ಮರೆಯಲು ಅಸಾಧ್ಯ. ಅಲ್ಲಿ ಅವರ ಚುರುಕು ಸ್ವಭಾವ, ಮಕ್ಕಳ ಬಗೆಗಿನ ಪ್ರೀತಿ ಹಾಗೂ ಮುದಿ ಹುಚ್ಚುತನಕ್ಕೆ ಒಳಗಾದವರನ್ನು ನೋಡಿ ಒಮ್ಮೆ ಬೆಚ್ಚಿಬಿಟ್ಟಿದ್ದೆ. ಅಲ್ಲಿ ಅವರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಅಂತ ಹೇಳಬಹುದು. ಅಲ್ಲಿ ಹೋದಾಗ ಅವರ ಪ್ರತಿನಿತ್ಯದ ದಿನಚರಿಯನ್ನು ನಮಗೆ ತಿಳಿಸಿದರು. ಅವರು ನಮ್ಮೊಂದಿಗೆ ಚಿಕ್ಕ ಮಕ್ಕಳ ರೀತಿ ಆಡುತ್ತಿದ್ದರು. ಅವರ ಕಥೆ-ವ್ಯಥೆಗಳನ್ನು ಕೇಳಿದಾಗ ಮನಸ್ಸಿಗೆ ಖೇದವೆನಿಸಿತು. ನಾವು ಎಷ್ಟೇ ದೊಡ್ಡ ಸಾಧನೆ ಮಾಡಿದರೂ ತಂದೆ-ತಾಯಿಯನ್ನು ನೋಡಿಕೊಳ್ಳಲಾಗದವನ ಜೀವನ ಜೀವನವೇ ಅಲ್ಲ. ಅಲ್ಲಿ ಕಳೆದ ನಾಲ್ಕು ದಿನಗಳು ನನ್ನ ಜೀವನದಲ್ಲಿ ಮರೆಯಲಾಗದ ನೆನಪನ್ನು ತಂದಿದೆ. ಅಲ್ಲಿ ಹಿರಿಯರಿಂದ ಕಲಿತುಕೊಂಡ ವಿಷಯಗಳು, ಮೌಲ್ಯಗಳು ಅನೇಕ. ಇನ್ನಾದರೂ ವೃದ್ಧಾಶ್ರಮಗಳ ಸಂಖ್ಯೆ ಕ್ಷೀಣಿಸಲಿ. ಮಕ್ಕಳು ತಮ್ಮ ಹೆತ್ತವರಿಂದ ಮೌಲ್ಯಗಳನ್ನು ಕಲಿಯಲಿ.
ಆಕರ್ಷ ಆರ್. ಆರಿಗ
ದ್ವಿತೀಯ ಪತ್ರಿಕೋದ್ಯಮ, ವಿವೇಕಾನಂದ ಪದವಿ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.