ಪ್ರೇಮ್‌ ಕಹಾನಿ!


Team Udayavani, Dec 13, 2019, 4:49 AM IST

sa-3

ಕಾಲೇಜ್‌ ಎಂಬ ಸಾಮ್ರಾಜ್ಯದ ಗೋಡೆಯ ಮೇಲೆ ಅಲ್ಲಲ್ಲಿ ಹೃದಯದ ಗುರುತಿನ ಕೆತ್ತನೆಗಳು, ಡೆಸ್ಕ್ಗಳ ಮೇಲೆ ಪ್ರೀತಿಯ ಕವನಗಳು, ಪ್ರತಿ ಕ್ಲಾಸ್‌ನಿಂದ ಒಂದಾದರೂ ಲವ್‌ ಬರ್ಡ್ಸ್‌ ಜೋಡಿ ಸರ್ವೇಸಾಮಾನ್ಯವಾಗಿದೆ. “ಅವರಿಬ್ಬರು ಕಮಿಟೆಡ್‌ ಅಂತೆ. ನಿನ್ನೆ ಇಬ್ಬರು ಜಗಳ ಆಡಿ ಬ್ರೇಕಪ್‌ ಆಯ್ತಂತೆ’ ಎಂಬ ಮಾತುಗಳನ್ನು ಎಲ್ಲರೂ ಕೇಳಿರುತ್ತೇವೆ. ಅದೆಷ್ಟೋ ಪ್ರೇಮ…ಕಹಾನಿಗಳು ಗಾಸಿಪ್‌ಪ್ರಿಯರ ನಾಲಿಗೆ ತುದಿಯಿಂದ ಇನ್ನೊಬ್ಬರ ಕಿವಿಗೆ ಹೊಕ್ಕಿ ರಾರಾಜಿಸುತ್ತಿರುತ್ತದೆ. ಈ ವಯಸ್ಸಿನಲ್ಲಿ ಪ್ರೇಮ…ಕಹಾನಿಯ ಬದಲು ಪ್ರೇಮ್‌ ಕ ಹಾನಿ ತಿಳಿದಿದ್ದರೆ ಉತ್ತಮ. ಅದ್ಯಾರನ್ನೋ ನೋಡಿ ಕ್ರಶ್‌ ಆಗೋದು, ಒಂದೇ ಭೇಟಿಗೆ ಲವ್‌ ಹುಟ್ಟೋದು, ಸಣ್ಣ ಜಗಳ-ಮನಸ್ತಾಪಗಳಿಗೇ ಅಪರಿಚಿತರಂತೆ ವರ್ತಿಸೋದು- ಇವೆಲ್ಲವೂ ಹದಿಹರೆಯದ ವಯಸ್ಸಿನವರ ವಿವೇಕದ ಅಪಕ್ವತೆ ಎಂದು ಹೇಳಬಹುದಾದರೂ ಇಂಥ ವಿಷಯಗಳಲ್ಲಿ ವಾಸ್ತವಪ್ರಜ್ಞೆ ಇದ್ದರೆ ಒಳಿತು. ಹುಚ್ಚು ಕೋಡಿ ಮನಸ್ಸು ಇದು ಹದಿನಾರರ ವಯಸ್ಸು ಎಂಬ ಮಾತೇ ಇದೆ. ಅಂದ-ಚಂದ ನೋಡಿ ಕೈಲೊಂದು ಗುಲಾಬಿ ಹಿಡಿದು ಶುರುವಾಗುವುದು ಪ್ರೀತಿಯಲ್ಲ. ಅದು ಬರಿಯ ಆಕರ್ಷಣೆ.

ಒಂದಂತೂ ಸತ್ಯ, ಜಗತ್ತಿನಲ್ಲಿ ಪ್ರೀತಿಸದ ಜೀವಿ ಎಲ್ಲೂ ಇಲ್ಲ. ದುಂಬಿಗೆ ಹೂವೆಂದರೆ ಪ್ರೀತಿ, ಸಮುದ್ರದ ಅಲೆಗೆ ದಡವೆಂದರೆ ಪ್ರೀತಿ, ಪ್ರಾಣಿಗಳಿಗೆ ತನ್ನ ಕರುಳಬಳ್ಳಿಯ ಮರಿಗಳೆಂದರೆ ಪ್ರೀತಿ- ಹೀಗೆ ಬಗೆ ಬಗೆಯ ರೀತಿಯಲ್ಲಿ. ತಾಯಿಯ ಪ್ರೀತಿ ಅತ್ಯಂತ ನಿಷ್ಕಲ್ಮಶವಾದದ್ದು. ಅಣ್ಣ-ತಂಗಿ, ತಂದೆ-ಮಕ್ಕಳು, ಗಂಡ-ಹೆಂಡತಿ, ಗುರು-ಶಿಷ್ಯ, ಅಜ್ಜಿ-ಮೊಮ್ಮಕ್ಕಳು, ಹೀಗೆ ಮಾನವ ಸಂಬಂಧಗಳೆಲ್ಲ ಈ ಪ್ರೀತಿಯೆಂಬ ಅಡಿಪಾಯದ ಮೇಲೆ ಭವ್ಯ ಅರಮನೆಯಾಗಿ ನಿಂತಿದೆ.

ಆದರೆ, ಇಂದು ಈ ಪ್ರೀತಿ ಎಂಬ ಪದ ಅದರ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಹದಿಹರೆಯದವರಲ್ಲಿ ಮೂಡುವ ವಯೋಸಹಜ ಆಕರ್ಷಣೆ ಅಥವಾ ಸೆಳೆತ ಪ್ರೀತಿ ಎಂಬ ಲೇಪನವನ್ನು ಮೆತ್ತಿಕೊಂಡಿದೆ. ಇಂದಿನ ತರುಣ-ತರುಣಿಯರಿಗೆ “ಪ್ರೀತಿ’ ಬರಿ ಒಂದು ಹೃದಯಕ್ಕೆ ಬಾಣತಾಗಿ ರಕ್ತ ಸೋರಿದ ಚಿತ್ರಗಳಲ್ಲಿ ಕಾಣುತ್ತಿದೆ. ಮೂರನೆಯ ಕ್ಲಾಸಿನ ಹುಡುಗಿ ತನ್ನ ಸಹಪಾಠಿಯೊಬ್ಬನಿಗೆ, “ಐ ಲವ್‌ ಯು’ ಎಂದು ಹೇಳುವಷ್ಟರ ಮಟ್ಟಿಗೆ ಪ್ರೀತಿ ಅರ್ಥಹೀನವಾಗುತ್ತಿದೆ. ಕಾರಣ ಕೇಳಿದಾಗ, “ಆತ ನೋಡಲು ಚಂದ ಇ¨ªಾನೆ’ ಎಂಬ ಉತ್ತರ ಬಂತು. ಅಂದ ಚಂದ ನೋಡಿ ಪ್ರೀತಿ ಹುಟ್ಟುತ್ತಾ? ದೈಹಿಕ ಆಕರ್ಷಣೆಗೆ ಪ್ರೀತಿ ಎಂಬ ಹಣೆಪಟ್ಟಿ ಕೊಟ್ಟಿದ್ದೇವೆಯೆ?

ಇವೆಲ್ಲದಕ್ಕೂ ಕಾರಣ, ಇಂದಿನ ಮಾಧ್ಯಮ, ಸಿನೆಮಾ, ಸಾಮಾಜಿಕ ಜಾಲತಾಣಗಳು ಹಾಗೂ ಎಲ್ಲೋ ಶಿಥಿಲವಾಗುತ್ತಿರುವ ನಮ್ಮ ಸನಾತನ ಪರಂಪರೆಯ ಕೌಟುಂಬಿಕ ನೆಲೆಗಟ್ಟು. ಆದರೆ, ಯೌವನದ ಈ ಆಕರ್ಷಣೆಗಳು ಎಂದಿಗೂ ಪ್ರೀತಿಯಾಗುವುದಿಲ್ಲ. ಪ್ರೀತಿ ಎಂಬ ಪದಕ್ಕಿರುವ ಅಗಾಧ ಅರ್ಥ, ವಿಶಾಲ ಹೃದಯ ಇಂದಿನ ಪೀಳಿಗೆಗೆ ತಿಳಿದಿಲ್ಲ, ಅಲ್ಲದೆ ತಿಳಿಯಲು ಸೂಕ್ತ ವಾತಾವರಣವೇ ಇಲ್ಲವಾಗಿದೆ.

ಹದಿಹರೆಯದ, ಪ್ರೀತಿಯ ಲೇಪನವನ್ನು ಮತ್ತಿಕೊಂಡಿರುವ ವಯೋಸಹಜ ಆಕರ್ಷಣೆ ಎಂದಿಗೂ ಹೃದಯದಲ್ಲಿರಬೇಕೇ ಹೊರತು ತಲೆಗೇರಬಾರದು. ಒಮ್ಮೆ ಈ ಆಕರ್ಷಣೆ ಎಂಬ ಮಾಯೆ ತಲೆಗೇರಿದರೆ ಆ ವ್ಯಕ್ತಿಯ ಜೀವನ ಸೂತ್ರವಿಲ್ಲದ ಗಾಳಿಪಟದಂತಾಗಬಹುದು. ಉಜ್ವಲ ಭವಿಷ್ಯದ ಗುರಿ ಹೊಂದಿರುವ ಯಾವುದೇ ವ್ಯಕ್ತಿ ಆಕರ್ಷಣೆಯನ್ನು ಪ್ರೀತಿ ಎಂದು ಅರ್ಥೈಸಿಕೊಂಡರೆ ಅವರ ಜೀವನ ಅಧೋಗತಿ. ನಾವು ಕಾಲೇಜ್‌ ಮೆಟ್ಟಿಲು ಹತ್ತಿರುವ ಉದ್ದೇಶ, ಅದರ ಹಿಂದಿನ ತಂದೆ-ತಾಯಿಯ ಪರಿಶ್ರಮ, ಆಸೆ, ಕನಸುಗಳನ್ನು ಮರೆಯದಿರೋಣ. ಸಾಧಕನಿಗೆ ವಿದ್ಯೆಯೇ ಹೊರತು ಭ್ರಮೆಯಲ್ಲಿರುವವನಿಗೆ ಅಲ್ಲ.

ಇಂಚರಾ ಜಿ. ಜಿ.
ಪ್ರಥಮ ಬಿಎ (ಪತ್ರಿಕೋದ್ಯಮ), ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

1-srrrr

English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.