ಅಪರೂಪಕ್ಕೆ ಬೆಸೆದ ಸಂಬಂಧ…
Team Udayavani, Oct 5, 2018, 6:00 AM IST
ಮನೆಗೆ ತೆರಳುತ್ತ ಇದ್ದಾಗ ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತ ಹೋಗುತ್ತಿದ್ದೆ. ಅದಾಗಲೇ ನೆನಪಾದ್ದು ನಾನು ಹತ್ತನೆಯ ತರಗತಿಯಲ್ಲಿ ಕಲಿಯುತ್ತ ಇರುವಾಗ ನಡೆದಂತಹ ಒಂದು ಘಟನೆ. ಆ ಸಮಯ ಶಾಲೆಗೆ ರಜೆ ಇತ್ತು. ಅಪ್ಪ ಮತ್ತು ನಾನು ಅಜ್ಜಿ ಮನೆಯಿಂದ ವಾಪಸು ಮನೆಗೆ ಬರುತ್ತಿದ್ದೆವು. ಗಂಟೆ ನಾಲ್ಕು ಆಗಿತ್ತು. ಬಸ್ಸು ಏರಿ ಸೀಟು ಹಿಡಿದು ಒಂದು ಸೀಟಿನಲ್ಲಿ ಕುಳಿತುಕೊಂಡೆ. ಅಪ್ಪ ಪಕ್ಕದ ಸೀಟಿನಲ್ಲಿ ಕುಳಿತುಕೊಂಡಿದ್ದರು. ನನ್ನ ಪಕ್ಕದಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬ ಕುಳಿತಿದ್ದ.
ಬಸ್ಸು ತುಂಬ ರಶ್ ಆಗಿತ್ತು. ಸ್ವಲ್ಪ ಹೊತ್ತಿನ ಬಳಿಕ ಒಬ್ಬ ವೃದ್ಧ ವ್ಯಕ್ತಿಯೊಬ್ಬ ಬಸ್ಸನ್ನೇರಿದರು. ಮೊದಲೇ ಹೇಳಿದ ಹಾಗೆ ಬಸ್ಸು ರಶ್ ಇದ್ದುದರಿಂದ ಆ ವ್ಯಕ್ತಿಗೆ ನಿಂತುಕೊಳ್ಳಲು ಕಷ್ಟವಾಗುತ್ತಿದ್ದರಿಂದ, ಬದಿಗೆ ಸರಿದು “ಕುಳಿತುಕೊಳ್ಳಿ’ ಅಂತ ಹೇಳಿದೆ. ಅವರು ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ಆರಂಭಿಸಿದರು. ನಾನು ಅವರ ಮಾತುಗಳನ್ನು ಆಲಿಸುತ್ತಿಲ್ಲವೆಂದು ಅನಿಸಬಾರದು, ಅವರಿಗೆ ಬೇಸರವಾಗುತ್ತದೆ ಎಂಬ ಕಾರಣಕ್ಕೆ ಹೂಂಗುಟ್ಟಲು ಶುರು ಮಾಡಿದೆ.
ಬಳಿಕ ಅವರು ನನ್ನ ಹತ್ತಿರದಲ್ಲಿ ಕುಳಿತಿದ್ದ ಹುಡುಗನನ್ನು ಗಮನಿಸಿದರು ಅಂತ ಕಾಣಿಸುತ್ತೆ. “ನನಗೂ ನಿಮ್ಮ ಹಾಗೆ ಇಬ್ಬರು ಮೊಮ್ಮಕ್ಕಳಿದ್ದಾರೆ, ಆದರೆ ಅವರು ನನ್ನೊಂದಿಗೆ ಇಲ್ಲ’ ಅಂತ ಹೇಳಿದಾಗ ಅಲ್ಲಿಯವರೆಗೆ ಹೂಂಗುಟ್ಟುತ್ತಿದ್ದ ನಾನು ಕುತೂಹಲದಿಂದ “ಅವರು ಎಲ್ಲಿದ್ದಾರೆ?’ ಎಂದು ಕೇಳಿದೆ. ಆ ಸಮಯದಲ್ಲಿ ಅವರಂದಿದ್ದು, “ನನ್ನ ಮಗ ಮತ್ತು ಸೊಸೆ ಇಬ್ಬರೂ ವಿದೇಶದಲ್ಲಿದ್ದಾರೆ, ಅವರ ಜೊತೆ ಮೊಮ್ಮಕ್ಕಳು ಸಹ ಅಲ್ಲಿಯೇ ಇದ್ದಾರೆ’ ಎಂದು ಕೊಂಚ ದುಃಖದಲ್ಲಿ ಹೇಳಿದರು.
ಸಂಬಂಧಗಳ ಮಹತ್ವ ತಿಳಿದಿರದಿದ್ದ ನನಗೆ ಅವರೊಂದಿಗೆ ಕೊಂಚ ಹೊತ್ತು ಮಾತಾಡಿದ್ದು, ನನ್ನ ಮನಸ್ಸಿನಲ್ಲಿ ಸಂಬಂಧಗಳ ಬಗ್ಗೆ ಇದ್ದ ಯೋಚನೆಯನ್ನೇ ಬದಲಿಸಿತು. ನನಗೆ ಸಂಬಂಧಗಳ ಬಗ್ಗೆ ಅರಿವು ಮೂಡಿಸಿದ ಅಜ್ಜ ನಿಗೆ ಮನಸ್ಸಿನಲ್ಲಿಯೇ ಧನ್ಯವಾದ ಹೇಳಿದೆ.
ಜಯಶ್ರೀ ಬಲ್ಯಾಯ
ದ್ವಿತೀಯ ಪತ್ರಿಕೋದ್ಯಮ, ವಿವೇಕಾನಂದ ಕಾಲೇಜು, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.