ಖುಷಿ ಎಂದರೆ ಖುಷಿಯೇ !


Team Udayavani, Mar 31, 2017, 3:45 AM IST

CAT.jpg

ಅದೊಂದು ದಿನ ಕಾಲೇಜು ಮುಗಿಸಿಕೊಂಡು ಮನೆಗೆ ವಾಪಸು ಬರುವಾಗ ಮುದ್ದಾದ ಬೆಕ್ಕಿನಮರಿಯೊಂದು ರಸ್ತೆಯ ಬದಿಯಲ್ಲಿ ಕಣ್ಣಿಗೆ ಬಿತ್ತು. ನನಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು . ಬೆಕ್ಕಿನ ಮರಿಯನ್ನು ನೋಡಿದ ಮರುಕ್ಷಣವೇ ಎತ್ತಿಕೊಂಡು ಮುದ್ದಾಡಲು ಆರಂಭಿಸಿದೆ. ಬಿಟ್ಟು ಬರಲೂ ಮನಸ್ಸು ಒಪ್ಪಲಿಲ್ಲ ಜೊತೆಯಲ್ಲಿಯೇ ಮನೆಗೆ ಕರೆದುಕೊಂಡು ಬಂದೆ. ತಂದ ಬೆಕ್ಕಿನಮರಿ ಇಷ್ಟವಾಗದೆ ಅಪ್ಪ-ಅಮ್ಮ ಬೈತಾರೆ ಅಂತ ಒಂದು ಕಡೆ ಭಯ. ಹೇಗೋ ಧೈರ್ಯ ಮಾಡಿ ಒಳಗೆ ಕರೆದುಕೊಂಡು ಹೋಗಿಬಿಟ್ಟೆ.

ಬೆಕ್ಕಿನಮರಿ ನೋಡಿದ ಕ್ಷಣವೇ ಅಪ್ಪ ಅಮ್ಮನ ಮುಖದಲ್ಲಿ ಮಂದಹಾಸ. “ಎಲ್ಲಿ ಸಿಕ್ಕಿತು’ ಎಂದು ಅಪ್ಪ ಕೇಳಿದಾಗ, ರಸ್ತೆಯಲ್ಲಿ ಸಿಕ್ಕಿದ ವಿಚಾರ ತಿಳಿಸಿದೆ. “ನಿಮ್ಮಗೆ ಇಷ್ಟವಿಲ್ಲ ಎಂದರೇ ಬಿಟ್ಟು ಬರುವೆ’ ಎಂದಾಗ ಅಪ್ಪ‌ “ಬೆಕ್ಕಿನಮರಿಯನ್ನು ಬಿಟ್ಟು ಬರುವುದು ಬೇಡ ನಾವೇ ಸಾಕೋಣ’ ಎಂದರು.ಆಗ ನನ್ನ ಸಂತೋಷಕ್ಕೆ ಪರಿವೇ ಇಲ್ಲದಂತೆ ಮನಸ್ಸಿನಲ್ಲಿ ಆನಂದವೋ ಆನಂದ. ಎಲ್ಲರ ಮೊಗದಲ್ಲಿ ಸಂತೋಷ ತರಿಸಿದ ಬೆಕ್ಕಿನಮರಿಗೆ “ಖುಷಿ’ ಎಂದು ನಾಮಕರಣ ಮಾಡಿದೆವು. ಮನೆಸದಸ್ಯರಲ್ಲಿ ಖುಷಿಯೂ ಒಒºಳಾದಳು. ಅವಳ ಕೊರಳಿಗೆ ಗಂಟೆಯನ್ನು ಕಟ್ಟಿ ಓಡಾಡುವುದನ್ನು  ನೋಡುತ್ತ ದಿನ ಕಳೆಯುತ್ತಿದ್ದೆವು.

ಕಾಲೇಜು ಮುಗಿಸಿಕೊಂಡು ಗೆಳತಿಯರೊಂದಿಗೆ ವಾಲಿಬಾಲ್‌ ಶೆಟಲ್‌ ಆಟವಾಡುತ್ತಿದ್ದ ನಾನು ಎಲ್ಲವನ್ನು ಬಿಟ್ಟು “ಖುಷಿ’ಯೊಂದಿಗೆ ಸಮಯವನ್ನು ಕಳೆಯಲೂ ಆರಂಭಿಸಿದೆ. ಎಲ್ಲಿಗೆ ಹೋಗುವುದಿದ್ದರೂ ಜೊತೆಯಲ್ಲಿ “ಖುಷಿ’ ಬೇಕು.  ಅವಳನ್ನು ಬಿಟ್ಟರೆ ಬೇರೇನೂ ಬೇಡ ಎನ್ನುವಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೆ. ಅವಳು ಕೂಡ ಕಾಲೇಜಿನಿಂದ ಮನೆಗೆ ಬಂದರೆ ಸಾಕು ಓಡಿ ಬಂದು  ಸ್ಪರ್ಶಿಸಿ ಹೋಗುತ್ತಿದ್ದಳು. ಬೆಳಿಗ್ಗೆ ಅವ‌ಳ ಗಂಟೆಯ ಸದ್ದನ್ನು ಕೇಳಿಯೇ ಏಳುತ್ತಿದ್ದೆ. ದಿನನಿತ್ಯ ಅವಳ ಮುಖವನ್ನು ನೋಡುತ್ತಿದ್ದೆ. ನಮ್ಮ ಪಾಲಿನ ಅದೃಷ್ಟ ದೇವತೆಯೇ ಆಗಿಬಿಡುತ್ತಿದ್ದಳು.

ದಿನಗಳು ಕಳೆದಂತೆ “ಖುಷಿ’ ಸಿಕ್ಕಿ ಒಂದು ವರ್ಷವಾಯಿತು. “ಖುಷಿ’ ಸಿಕ್ಕ ದಿನವನ್ನು ಹುಟ್ಟುಹಬ್ಬವಾಗಿ ಆಚರಿಸಿ ನಾವೆಲ್ಲ ಸಂಭ್ರಮಿಸಿದೆವು. “ಖುಷಿ’ಯ ಬಗ್ಗೆ ಹೊಸ ಕಲ್ಪನೆಯನ್ನೇ ಕಟ್ಟಿಕೊಂಡೆ. “ಖುಷಿ’ ಎಂದರೆ ಮನೆಯಲ್ಲಿ ಎಲ್ಲರಿಗೂ ಮಗುವಿನ ಹಾಗೆ. ಅವಳನ್ನು ಜೋಪಾನ ಮಾಡುವುದೇ ಒಂದು ಖುಷಿ.

ಯಾವ ಸಮಯದಲ್ಲಿ “ಖುಷಿ’ ಎಂದು ಹೆಸರಿಟೊ ಗೊತ್ತಿಲ್ಲ ಅಂದಿನಿಂದ ಮನೆಯಲ್ಲಿ ಸಂತೋಷಕ್ಕೆ ಪರಿವೇ ಇಲ್ಲ. ಯಾರಾದರೂ  ಸಂಬಂಧಿಕರು ಮನೆಗೆ ಬಂದರೆ ಸಾಕು, ಖುಷಿಯನ್ನು ಎತ್ತಿ ಮದ್ದಾಡಿ ಹೋಗದವರೇ ಇಲ್ಲ. ಎಲ್ಲರನ್ನು ಆಕರ್ಷಿಸುತ್ತಿದ್ದ  ಗುಣ ಅವಳದ್ದು. ಯಾರು ಮಾತನಾಡಿಸಿದರೂ “ಖುಷಿಯನ್ನು ಸಾಕುತ್ತೇವೆ, ನಮಗೆ ಕೊಟ್ಟುಬಿಡಿ’ ಎಂದು ಹೇಳುತ್ತಿದ್ದರು. ಕೇಳಿದವರ ಹತ್ತಿರ ಜಗಳ ಮಾಡಿಯೇ ಕಳುಹಿಸುತ್ತಿದ್ದೆ.

ಹೀಗಿರುವಾಗಲೇ ಅನಿರೀಕ್ಷಿತವಾಗಿ “ಖುಷಿ’ಯನ್ನು ಬಿಟ್ಟು ಎರಡು ದಿನಗಳು ಕಾಲೇಜಿನಿಂದ ಪ್ರವಾಸಕ್ಕೆಂದು ಹೋಗುವ ಸಂದರ್ಭ ಒದಗಿ ಬಂತು. “ಖುಷಿಯನ್ನು ಬಿಟ್ಟು  ಹೋಗುವುದಿಲ್ಲ’ ಎಂದು ಹೇಳಿದೆ, ಅಮ್ಮ “ನಾವು ಚೆನ್ನಾಗಿ ನೋಡಿ ಕೊಳ್ಳುತ್ತೇವೆ’ ಎಂದು ಧೈರ್ಯ ತುಂಬಿ ಕಳುಹಿಸಿಬಿಟ್ಟರು. “ಸರಿ’ ಎಂದು ಖುಷಿಯನ್ನು ಮುದ್ದಾಡಿ ಹೊರಟೆ. ಅದೇ ಕೊನೆಯ ಭೇಟಿ. ಅವಳು ಇನ್ನು ಜೊತೆ ಇರುವುದಿಲ್ಲ ಎಂಬ ಕಲ್ಪನೆ ಕೂಡ ಇರಲಿಲ್ಲ. ಅಂದು ಖುಷಿ ಮನೆಬಿಟ್ಟು ನಡೆದವಳು ಮತ್ತೆ ಮರಳಿ ಬರಲೇ ಇಲ್ಲ.

ನನ್ನ ಬಿಟ್ಟು “ಖುಷಿ’ ಹೋಗಿದ್ದಾಳೆ ಎಂಬ ಯಾವುದೇ ಅರಿವು ಇಲ್ಲದೆ ಮನೆಗೆ ಬಂದೆ. ಬಾಗಿಲ ಬಳಿಗೆ ಹುಡುಕಿ ಕೊಂಡು ಓಡಿಬಂದು ನೋಡುತ್ತಿದ್ದ “ಖುಷಿ’ ಬರಲೇ ಇಲ್ಲ. ಮಲಗಿಕೊಂಡಿರಬೇಕು ಎಂದು ನಾನೇ ಹುಡುಕತೊಡಗಿದೆ.  ಎಷ್ಟೇ ಹುಡುಕಿದರೂ “ಖುಷಿ’ ಕಣ್ಣಿಗೆ ಕಾಣಲೇ ಇಲ್ಲ.  ಯಾವ ಅನುಬಂಧವೋ ಗೊತ್ತಿಲ್ಲ. “ಖುಷಿ’ ಎಂಬ ಪುಟ್ಟ ಜೀವಿ ನಮ್ಮ ಬದುಕಿನೊಳಗೆ ಬಂದು, ನಮ್ಮ ಬದುಕಿನ ಒಂದು ಭಾಗವೇ ಆಗಿ, ನಮ್ಮನ್ನೆಲ್ಲ ಖುಷಿಯಾಗಿರಿಸಿ ಇದ್ದಕ್ಕಿದ್ದಂತೆಯೇ ಎದ್ದು ಹೋಗಿದೆ. ಅದು ಪ್ರಾಣಿಯೇ ಆದರೂ ಅದಕ್ಕೂ ಒಂದು ಜೀವಂತಿಕೆ ಇದ್ದೇ ಇದೆಯಲ್ಲ ! ಮನಸ್ಸು ಎಂಬುದು ಪ್ರಾಣಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ, ಅದು “ಖುಷಿ’ ನಮ್ಮೊಂದಿಗೆ ಇದ್ದ ದಿನಗಳನ್ನು ನೆನಪಿಸಿಕೊಂಡರೆ, ಪ್ರಾಣಿಗೂ ಸ್ಪಂದಿಸುವ ಗುಣವಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. 

ಮನೆಯಲ್ಲಿ ಅವಳ ಪೋಟೋವನ್ನು ನೋಡಿದಾಗ ಮತ್ತೆ “ಖುಷಿ’ಯ ಚಿತ್ರ ಕಣ್ಣ ಮುಂದೆ ಮೂಡಲಾರಂಭಿಸುತ್ತದೆ. ಎಲ್ಲಿ ಹೋದರೂ ಅಡ್ಡಿಯಿಲ್ಲ ಖುಷಿ, ಅಲ್ಲಿ ಸುಖವಾಗಿರು ಎಂದಷ್ಟೇ ಹಾರೈಸುವೆ.
     
– ಸುಶ್ಮಿತಾಗೌಡ
ದ್ವಿತೀಯ ಎಮ್‌ಸಿಜೆ,
ಎಸ್‌.ಡಿ.ಎಂ ಕಾಲೇಜು, ಉಜಿರೆ.

ಟಾಪ್ ನ್ಯೂಸ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Bengaluru: ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Fraud: ಡ್ರಗ್ಸ್ ಕೇಸ್‌ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ  ಜನರ ಭೇಟಿ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Pustaka Santhe: 3 ದಿನಗಳ ಪುಸ್ತಕ ಸಂತೆಗೆ ಹರಿದು ಬಂದ ಜನಸಾಗರ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Fraud: ಉದ್ಯಮಿಗೆ 1 ಕೋಟಿ ರೂಪಾಯಿ ವಂಚನೆ

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Bengaluru: ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ; ದೂರು ದಾಖಲು

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.