ಸೈನಿಕರಿಗೆ ಸಲಾಂ
Team Udayavani, Sep 6, 2019, 5:00 AM IST
ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಂಥ ದೃಶ್ಯ ನಿಜಕ್ಕೂ ಎಲ್ಲರ ಮನಮುಟ್ಟುವಂತಿತ್ತು. ಪ್ರವಾಹದಲ್ಲಿ ಸಿಲುಕಿದ್ದ ಮಹಿಳೆಯೋರ್ವರು ತಮ್ಮನ್ನು ರಕ್ಷಿಸಿದ ಯೋಧರ ಪಾದ ಮುಟ್ಟಿ ನಮಸ್ಕರಿಸಿ ಕೃತಜ್ಞತಾಭಾವವನ್ನು ಮೆರೆದ ದೃಶ್ಯ ಅದಾಗಿತ್ತು.
ಯುದ್ಧ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರಾಕೃತಿಕ ವಿಕೋಪದಂತಹ ತುರ್ತು ಪರಿಸ್ಥಿತಿಗಳಲ್ಲಿಯೂ ಜನರ, ಮೂಕ ಜೀವಿಗಳ ರಕ್ಷಣೆಗೆ ಸದಾ ಸಿದ್ಧರಾಗಿರುತ್ತಾರೆ ನಮ್ಮ ಯೋಧರು. ಇದಕ್ಕೆ ಪೂರಕವೆಂಬಂತೆ ನಮ್ಮ ರಾಜ್ಯದಲ್ಲಿ ಹಾಗೂ ನೆರೆಯ ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಸಂಭವಿಸಿದ ಪ್ರವಾಹದಿಂದ ಅದೆಷ್ಟೋ ಜನರ ಜೀವನವೇ ಅಸ್ತವ್ಯಸ್ತವಾಯಿತು. ಈ ಸಂದರ್ಭದಲ್ಲಿ ಬಿಎಸ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಯೋಧರ ತಂಡವು ನೆರೆಪೀಡಿತ ಪ್ರದೇಶಗಳಿಗೆ ಆಗಮಿಸಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಿ ಅವರ ಬಾಳಿಗೆ ಬೆಳಕಾದರು.
ನಮ್ಮ ಯೋಧರ ಬಗ್ಗೆ ಹೇಳಲು ಪದಗಳೇ ಸಾಲವು. ಶ್ರದ್ಧೆ, ದೇಶಪ್ರೇಮ, ಕರ್ತವ್ಯನಿಷ್ಠೆಗೆ ಮತ್ತೂಂದು ಹೆಸರು ಯೋಧ ಎಂದರೆ ತಪ್ಪಾಗಲಾರದು.
ಇಂದು ನಾವು ನೆಮ್ಮದಿಯಿಂದ ನಿದ್ರೆ, ನಮ್ಮ ಸಂಬಂಧಿಕರೊಡನೆ ಖುಷಿಯಿಂದ ಕಾಲಕಳೆಯುತ್ತಿದ್ದೇವೆಂದರೆ ಅದಕ್ಕೆ ಮೂಲಕಾರಣ ತಮ್ಮವರಿಂದ ದೂರವಿದ್ದು, ದೇಶಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ವೀರಯೋಧರು !
ಯಶಸ್ವಿ ಕೆ.,
ದ್ವಿತೀಯ ಪಿಯುಸಿ,
ಕಪಿತಾನಿಯೋ ಪದವಿಪೂರ್ವ ಕಾಲೇಜು, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.