ಸ್ಟೂಡೆಂಟ್‌ ಲೆಕ್ಚರರ್‌ ಆದರೆ !


Team Udayavani, Sep 29, 2017, 6:30 AM IST

c.jpg

ಅರೆ ಏನಿದು? ಲೆಕ್ಚರರ್ಸ್‌ಗೆ ಡ್ರೆಸ್‌ ಕೋಡು ಇದೆಯಾ? ಅದು ಚೂಡಿದಾರನ? ನೋಡೋಕೆ ಕಾಲೇಜು ಸ್ಟೂಡೆಂಟ್‌ ತರ ಇದ್ದಾರೆ, ಇವರೆಂತಹ ಲೆಕ್ಚರರ್‌. ಹೌದು ಇದೆಲ್ಲಾ ಮಾತುಗಳು ನಿಮ್ಮ ಮನದಾಳದಲ್ಲಿ ಹುಟ್ಟುವುದು ಸಹಜ. ಹಾಗೇ ಎದುರು ಸಿಕ್ಕವರಿಗೆ ಕೇಳಿಯೇ ಕೇಳುತ್ತಿರಿ.ಕಾಲೇಜಲ್ಲಿ ಇದ್ದವರಿಗೆ ಇದು ಮಾಮೂಲಿ, ಅದೇ ನೀವೇನಾದರೂ ಹೊಸಬರು ಆಗಿದ್ದರೆ, ನಿಮಗೆ ಒಮ್ಮೆ ಆಶ್ಚರ್ಯ ಆಗುವುದು ನಿಜ. ನಿತ್ಯ ತರಗತಿಗಳು ನಡೆಯುತ್ತ  ಇರುವಾಗ ನೀವೊಮ್ಮೆ ಕಾಲೇಜು ಕಾರಿಡಾರಿನಲ್ಲಿ ಸರಿದಾಡುತ್ತ, ಕ್ಲಾಸುಗಳೆಡೆಗೆ ಕಣ್ಣು ಹಾಯಿಸಿದಾಗ ನಿಮಗೆ ಇಂಥ ಆಲೋಚನೆ ಬರುವುದು ದಿಟ.

ಹೌದು, ನಿಜವಾಗಲೂ ಇದು ಆಶ್ಚರ್ಯ ಪಡಬೇಕಾದುದೇ. ಒಂದು ಚೂರು ಅಂಜಿಕೆ, ಅಳುಕು ಇಲ್ಲದೆ ನಿರರ್ಗಳವಾಗಿ ಮಾತಾಡುವುದನ್ನು ಕಂಡು ಇದಕ್ಕೆ ಹೇಳುವ ಇನ್ನೊಂದು ಹೆಸರೇ ಸ್ಟೂಡೆಂಟ್‌ ಫ್ಯಾಕಲ್ಟಿ . ಇನ್ನು ವಿಸ್ತಾರವಾಗಿ ಹೇಳುವುದಾದರೆ ಅಂತಿಮ ಪದವಿ, ಹಾಗೂ ಸ್ನಾತಕೋತ್ತರ ಅಭ್ಯಸಿಸುತ್ತಲೇ ತಮ್ಮ ಜೂನಿಯರಿಗೆ ಪಾಠ ಮಾಡುವ ಅವಕಾಶವನ್ನು ಸ್ವಸಾಮರ್ಥ್ಯದಿಂದ ಪಡೆದಿರುವ ನಿಜವಾದ ಶಿಕ್ಷಕರು. ಇದು ಉಜಿರೆಯ ಎಸ್‌.ಡಿ.ಎಂ. ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಡಾ| ಬಿ. ಯಶೋವರ್ಮ ಅವರ ಕನಸಿನ ಕೂಸಾಗಿ ಹುಟ್ಟಿದ್ದು ಈವಾಗಲೂ ನಡೆಯುತ್ತಿದೆ.

ನಿಮಗೆ ಅನಿಸಬಹುದು, ಇದು ಹೇಗೆ ಎಂದು? ಇದು ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಅವಕಾಶ. ತಮಗೆ ಯಾವ ಸಬೆjಕ್ಟ್‌ನಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಅವರಿಗೆ ಭಾಗವಹಿಸುವ ಅವಕಾಶವಿರುತ್ತದೆ. ಹೀಗೆ ಆಸಕ್ತಿ ಇದ್ದ ವಿದ್ಯಾರ್ಥಿಗಳಿಗೆ ಸಂದರ್ಶನ ಕೂಡ ನಡೆಯುತ್ತದೆ. ಈ ಸಂದರ್ಶನಕ್ಕೆ ಉಪನ್ಯಾಸಕರೇ ಜಡ್ಜ್jಗಳು, ಆಯ್ಕೆ ಬಯಸಿಬಂದ ವಿದ್ಯಾರ್ಥಿಗಳು ಉಪನ್ಯಾಸಕರ ಎದುರು ತಮ್ಮಿಚ್ಛೆಯ ವಿಷಯವನ್ನು ಪ್ರಾಯೋಗಿಕವಾಗಿ ಬೋಧಿಸಬೇಕು. ಪಕ್ಕ ಪ್ರೊಫೆಶ‌ನಲ್‌ ಇಂಟರ್‌ವ್ಯೂ ರೀತಿಯನ್ನೇ ಇಲ್ಲಿಯೂ ಬಳಸಲಾಗುತ್ತದೆ. ಹಾಗೆಯೇ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಅವಕಾಶ ಜಡ್ಜ್ಗಳಿಗೆ ಇದೆ. ನಂತರ ಆಯ್ಕೆ ಅದವರ ಹೆಸರನ್ನು ನೋಟೀಸ್‌ಬೋರ್ಡ್‌ನಲ್ಲಿ ಸೂಚಿಸಲಾಗುತ್ತದೆ, ಹೀಗೆ ಆಯ್ಕೆ ಆದ ವಿದ್ಯಾರ್ಥಿಗಳು ತಮ್ಮ ಆಯ್ಕೆ ಮಾಡಿದ ವಿಷಯಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಸಂಬಂಧಪಟ್ಟ ಉಪನ್ಯಾಸಕರ ಮಾರ್ಗದರ್ಶನದಲ್ಲಿ ತಾವೇ ಸಿದ್ಧಪಡಿಸಬೇಕು. ತನ್ನ ವಿದ್ಯಾರ್ಥಿ ಕೆಲಸ ಓದಿನ ಜೊತೆಗೆ, ಬೋಧನೆಗೆ ಬೇಕಾದ ಎಲ್ಲಾ ಮಾಹಿತಿ ಅಂಕಿಅಂಶಗಳನ್ನು ಸಿದ್ಧಪಡಿಸಬೇಕು. ತಾನು ಬೋಧಿಸಿದ ವಿಷಯವನ್ನು ಉಪನ್ಯಾಸಕರು ಮತ್ತೂಮ್ಮೆ ಬೋಧಿಸದೆ ಇರುವುದರಿಂದ ಎಲ್ಲಾ ಜವಾಬ್ದಾರಿಯೂ ಅವರ ಮೇಲಿರುತ್ತದೆ. ತಾನು ಪಾಠ ಮಾಡುವ ಅವಧಿಯಲ್ಲಿ ಉಪನ್ಯಾಸಕರು ಇಲ್ಲದೆ ಇರುವುದರಿಂದ ಹಾಜರಾತಿಯಿಂದ ಹಿಡಿದು, ಬೋಧಿಸಿದ ವಿಷಯದ ಕುರಿತು ವಿದ್ಯಾರ್ಥಿಗಳ ಸಂಶಯವನ್ನು ನಿವಾರಿಸಬೇಕು. ತಾನು ಮಾಡಿದ ಪಾಠದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಸ್ವಾತಂತ್ರ್ಯ ಅವರಿಗಿದೆ. ಜೊತೆಗೆ ತುಂಟ ವಿದ್ಯಾರ್ಥಿಗಳ ಕೀಟಲೆಯನ್ನು ಸಹಿಸಿಕೊಳ್ಳಬೇಕು.

ಈವಾಗ ನಿಮ್ಮ ಮನಸ್ಸಿನಲ್ಲಿ ಯೋಚನೆ ಬರಬಹುದು. ಇದರಿಂದ ಏನು ಪ್ರಯೋಜನ? ಪ್ರಯೋಜನ ಇದೇರಿ, ಇದೊಂದು ವೇದಿಕೆ ನಮ್ಮ ಜೀವನದ ದಿಕ್ಕನೇ ಬದಲಿಸಬಹುದು, ನಮ್ಮಲ್ಲಿರುವ ಹೊಸ ಆಲೋಚನೆಗಳಿಗೆ ಹೊಸ ಬುನಾದಿ. ನಮ್ಮ ಸಂಕೋಚ, ಭಯವನ್ನು ದೂರ ಮಾಡುತ್ತದೆ, ಸಂವಹನ ಕಲೆಯನ್ನು, ಜವಾಬ್ದಾರಿ ನಿರ್ವಹಿಸುವ ಕಲೆಯನ್ನು ವೃದ್ಧಿಸುತ್ತದೆ. ಎಲ್ಲೇ ಹೋದರೂ ಚಾಕಚಕ್ಯದಿಂದ ಮಾತಾಡಿಸುವ ಭಾವನೆಯನ್ನು ಮೂಡಿಸುತ್ತದೆ, ಅಲ್ಲದೆ ನಾಳೆ ಅದೆಷ್ಟೇ ಸಂದರ್ಶನಕ್ಕೆ ಹೋದಾಗ ನಿರರ್ಗಳವಾಗಿ ಮಾತಾಡುವಂತೆ ಮಾಡುವ ಕಲೆಯು ಇದಕ್ಕಿದೆ. 

ಹೀಗೆ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ವಾರ್ಷಿಕ ದಿನದ ಸಂಭ್ರಮಾಚರಣೆಯ ವೇದಿಕೆಯಲ್ಲಿ ವಿಶೇಷ ಪ್ರಮಾಣಪತ್ರ ಮತ್ತು ನಿಗದಿಪಡಿಸಿದ ನಗದು ಬಹುಮಾನವನ್ನು ನೀಡಲಾಗುವುದು. ಇದು ಇವರಿಗೊಂದು ಮರೆಯಲಾಗದ ದಿನವೆ‌ಂದು ಹೇಳಿದರೂ ತಪ್ಪಾಗಲಾರದು. ನಗದು ಬಹುಮಾನವಾದರೆ, ಪ್ರಮಾಣಪತ್ರ ಭವಿಷ್ಯದ ಸಂಭಾವನೆಗೆ ನೀಡಲ್ಪಟ್ಟಿದ್ದು.

ಹೂಂ! ಇಷ್ಟೆಲ್ಲ ಹೇಳಿದ ಮೇಲೆ ಉಪನ್ಯಾಸಕರಾಗಿ ಅಥವಾ ಉಪನ್ಯಾಸಕಿಯಾಗಿ ಬೋಧನೆ ಮಾಡಿದ ವಿದ್ಯಾರ್ಥಿಗಳ ಅನುಭವ ಏನು ಎಂದು ಕೇಳ್ಳೋಣ? “ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ, ಅಲ್ಲದೆ ಒಂದು ರೀತಿಯ ಹೊಸ ಅನುಭವ ನೀಡುತ್ತದೆ. ಮುಂದೆ ಲೆಕ್ಚರ್‌ ಆಗಬೇಕು ಅಂದುಕೊಂಡವರಿಗೆ ಸಣ್ಣಮಟ್ಟದಲ್ಲಿ ಮೊದÇ ವೇದಿಕೆ’ ಎನ್ನುತ್ತಾರೆ ವಿದ್ಯಾರ್ಥಿನಿ ಸುವರ್ಚಲಾ. 

– ಸ್ವಸ್ತಿಕಾ 
ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.