ಬೆವರುಗುಳ್ಳೆ-ಗೃಹೋಪಚಾರ


Team Udayavani, Apr 12, 2019, 6:00 AM IST

h-16

ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಬೆವರಿಗುಳ್ಳೆ ಉಷ್ಣದ ಗುಳ್ಳೆಗಳು ಎಲ್ಲೆಡೆ ಹಾಗೂ ಎಲ್ಲಾ ವಯಸ್ಸಿನವರಲ್ಲೂ ಕಂಡುಬರುತ್ತವೆ. ಅಧಿಕ ಬೆವರು ಉಂಟಾದಾಗ ಬೆವರಿನ ಗ್ರಂಥಿಗಳಲ್ಲಿ ಸೋಂಕು (ಬ್ಯಾಕ್ಟೀರಿಯಾ, ಸೂಕ್ಷ್ಮಜೀವಿಗಳ) ಉಂಟಾಗಿ ತನ್ಮೂಲಕ ಚರ್ಮದಲ್ಲಿ ಕೆಂಪು ಸಣ್ಣ ಗುಳ್ಳೆಗಳು ಉಂಟಾಗುತ್ತವೆ. ತುರಿಕೆ, ಉರಿ ಅಧಿಕವಿರುವ ಈ ಗುಳ್ಳೆಗಳು ಕುತ್ತಿಗೆ, ಹೊಟ್ಟೆ, ಬೆನ್ನು , ಮುಖ ಹಾಗೂ ತೊಡೆಯ ಭಾಗದ ಚರ್ಮದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.

ಮನೆಯಲ್ಲಿಯೇ ಈ ತೊಂದರೆ ನಿವಾರಣೆಗೆ ಆಹಾರ, ಮದ್ದು, ಉಪಚಾರಗಳನ್ನು ಮಾಡಬಹುದು. ಇವು ಬೆವರುಗುಳ್ಳೆಯ ನಿವಾರಣೆಯೊಂದಿಗೆ ತನುಮನಗಳಿಗೂ ತಂಪು ನೀಡುತ್ತವೆ.

ಓಟ್‌ಮೀಲ್‌ ಸ್ನಾನ
1 ಟಬ್‌ ನೀರಿಗೆ 1-2 ಕಪ್‌ ಓಟ್‌ಮೀಲ್‌ ಬೆರೆಸಬೇಕು. ಇದರಲ್ಲಿ 10-15 ನಿಮಿಷವಿದ್ದು, ಟಬ್‌ಬಾತ್‌ ಅಥವಾ ಅವಾಗಾಹ ಸ್ನಾನ ಮಾಡಿದರೆ ಶಮನಕಾರಿ. ಇದು ಬೆವರಿನ ಗ್ರಂಥಿಗಳ ಅವರೋಧ ನಿವಾರಣೆ ಮಾಡಿ, ಚರ್ಮದ ಉರಿಯೂತ ಗುಣಪಡಿಸುತ್ತದೆ. ಬೆವರುಗುಳ್ಳೆ ನಿವಾರಣೆಯಾಗುವುದರ ಜೊತೆಗೆ ದೇಹಕ್ಕೂ ಹಿತ ಹಾಗೂ ಶ್ರಮನಿವಾರಕ ಈ ಸ್ನಾನ. ಎರಡು ದಿನಕ್ಕೊಮ್ಮೆ ಬಳಸಿದರೆ ಉತ್ತಮ.

ಎಲೋವೆರಾ ಹಾಗೂ ಅರಸಿನದ ಲೇಪ
ಎಲೋವೆರಾವು ಚರ್ಮಕ್ಕೆ ಟಾನಿಕ್‌ನಂತೆ ಜೊತೆಗೆ ಉರಿಯೂತ ನಿವಾರಕ ಅರಸಿನವು ಸಹ ಬ್ಯಾಕ್ಟೀರಿಯಾ ಮೊದಲಾದ ಸೂಕ್ಷ್ಮಾಣು ಜೀವಿಗಳನ್ನು ನಿವಾರಣೆ ಮಾಡುತ್ತದೆ. ದಿನಕ್ಕೆ 1-2 ಬಾರಿ ಈ ಲೇಪ ಹಚ್ಚಿದರೆ ಶೀಘ್ರವಾಗಿ ಬೆವರುಗುಳ್ಳೆ ನಿವಾರಣೆಯಾಗುತ್ತದೆ. ಇದು ಚರ್ಮದಲ್ಲಿ ಜಲೀಯ ಅಂಶದ ಕೊರತೆ ಉಂಟಾಗದಂತೆ ಸಹ ಕಾರ್ಯವೆಸಗುತ್ತದೆ.

ಕಡಲೆಹಿಟ್ಟು ಹಾಗೂ ಗುಲಾಬಿ ಜಲದ ಲೇಪ
ಕಡಲೆಹಿಟ್ಟು 3 ಚಮಚ, ಗುಲಾಬಿ ಜಲ 10 ಚಮಚ, ಫ್ರಿಜ್‌ ನೀರು 4 ಚಮಚ ಬೆರೆಸಿ ಲೇಪಿಸಿದರೆ ಶಮನಕಾರಿ. ಇದೇ ರೀತಿ ಮುಲ್ತಾನಿ ಮಿಟ್ಟಿ , ಗುಲಾಬಿ ಜಲದ ಲೇಪನವೂ ಹಿತಕಾರಿ. ಮುಖ ಹಾಗೂ ಕುತ್ತಿಗೆಯ ಭಾಗದಲ್ಲಿ ಬೆವರುಗುಳ್ಳೆ ಉಂಟಾದಾಗ ಈ ಎರಡು ಲೇಪಗಳು ಶೀಘ್ರ ಫ‌ಲಕಾರಿ.

ಅಡುಗೆಸೋಡಾದಿಂದ ಗೃಹೋಪಚಾರ
ಮೈಯ ಅಧಿಕ ಭಾಗದ ಚರ್ಮದಲ್ಲಿ ಬೆವರು ಗುಳ್ಳೆಗಳು ಕಂಡುಬಂದರೆ ಈ ಲೇಪ ಹಿತಕರ. 8-10 ಚಮಚ ಅಡುಗೆ ಸೋಡಾವನ್ನು 2 ಕಪ್‌ ನೀರಿಗೆ ಬೆರೆಸಿ ಕಲಕಬೇಕು. ಇದರಲ್ಲಿ ದಪ್ಪ ಹತ್ತಿ ಉಂಡೆ ಅದ್ದಿ, ಅದನ್ನು ಬೆವರುಗುಳ್ಳೆ ಇರುವ ಕಡೆಗೆ ಉಜ್ಜಬೇಕು. 4-5 ನಿಮಿಷದ ಬಳಿಕ ಸ್ನಾನ ಮಾಡಬೇಕು. ಕ್ಷಾರೀಯ ಅಂಶ ಹಾಗೂ ಬ್ಯಾಕ್ಟೀರಿಯಾ ನಿರೋಧಕ ಗುಣವಿರುವುದರಿಂದ ಇದು ಬೆವರುಗುಳ್ಳೆಗಳನ್ನು ಶೀಘ್ರ ಗುಣಪಡಿಸುತ್ತದೆ.

ಆಲೂಸ್ಲೆ„ಸ್‌ ಮಾಲೀಶು
ತಾಜಾ ಆಲೂಗಡ್ಡೆಯನ್ನು ದುಂಡಗೆ ಬಿಲ್ಲೆಗಳಾಗಿ ಕತ್ತರಿಸಬೇಕು. ಇದನ್ನು ಫ್ರಿಜ್‌ ನೀರಿನಲ್ಲಿ ಅದ್ದಿ ಬೆವರುಗುಳ್ಳೆ ಇರುವ ಭಾಗಕ್ಕೆ ಮಾಲೀಶು ಮಾಡಬೇಕು. ಹತ್ತು ನಿಮಿಷದ ಬಳಿಕ ತೊಳೆಯಬೇಕು. (ದಿನಕ್ಕೆ 1-2 ಬಾರಿ). ಇದು ಚರ್ಮಕ್ಕೆ ಎಮೋಲಿಯಂಟ್‌.

ಕಲ್ಲಂಗಡಿ ಜ್ಯೂಸ್‌ ಚಿಕಿತ್ಸೆ
ಕಲ್ಲಂಗಡಿ ಹಣ್ಣಿನ ರಸ ದಪ್ಪಗೆ ಲೇಪಿಸಿ, 20 ನಿಮಿಷಗಳ ಬಳಿಕ ತೊಳೆಯಬೇಕು. ದಿನಕ್ಕೆ 1-2 ಕಪ್‌ ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಸೇವಿಸಬೇಕು. ಇದು ಅಧಿಕ ನೀರಿನ ಅಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಕೂಡಿದ್ದು ಚರ್ಮದ ಟಾನಿಕ್‌ ಹಾಗೂ ದೇಹಕ್ಕೆ ತಂಪು. ಆದ್ದರಿಂದ ಬೆವರಿನ ಗುಳ್ಳೆ , ಉಷ್ಣದ ಗುಳ್ಳೆಗಳನ್ನು ಶೀಘ್ರ ನಿವಾರಣೆ ಮಾಡುತ್ತದೆ.

ಹಸಿಶುಂಠಿ ಜಲದ ಮನೆಮದ್ದು
2 ಚಮಚ ಹಸಿ ಶುಂಠಿಯ ತುರಿಯನ್ನು 2 ಕಪ್‌ ನೀರಿಗೆ ಬೆರೆಸಿ ಕುದಿಸಿ ಸೋಸಬೇಕು. ಆರಿದ ಬಳಿಕ, ಹತ್ತಿ ಉಂಡೆಯನ್ನು ಈ ನೀರಿನಲ್ಲಿ ಅದ್ದಿ ಬೆವರುಗುಳ್ಳೆಗಳಿಗೆ ಲೇಪಿಸಬೇಕು. 10-15 ನಿಮಿಷಗಳ ಬಳಿಕ ತೊಳೆಯಬೇಕು. ತುಂಬಾ ತುರಿಕೆ ಹಾಗೂ ಪೂಯಯುಕ್ತ ಬೆವರುಗುಳ್ಳೆಗಳಿದ್ದಾಗ ಶುಂಠಿಯ ಜಲದ ಪ್ರಯೋಗ ಪರಿಣಾಮಕಾರಿ.

ಕರ್ಪೂರದ ಎಣ್ಣೆಯ ಪ್ರಯೋಗ
2 ಬಿಲ್ಲೆ ಕರ್ಪೂರವನ್ನು 10 ಚಮಚ ಕಹಿಬೇವಿನ ಎಣ್ಣೆಯಲ್ಲಿ ಪುಡಿಮಾಡಿ ಬೆರೆಸಬೇಕು. ಚೆನ್ನಾಗಿ ಕಲಕಿ ಗಾಜಿನ ಬಾಟಲಲ್ಲಿ ಹಾಕಿಡಬೇಕು. ಇದನ್ನು ಬೆವರುಗುಳ್ಳೆಗಳಿಗೆ ಲೇಪಿಸಿ 10 ನಿಮಿಷದ ಬಳಿಕ ತೊಳೆಯಬೇಕು. ತುರಿಕೆ ಹಾಗೂ ಉರಿ ಅಧಿಕವಿರುವ ಬೆವರು ಗುಳ್ಳೆಗಳಿಗೆ ಈ ಮನೆಮದ್ದು ಉತ್ತಮ.

ಡಾ. ಅನುರಾಧಾ ಕಾಮತ್‌

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.