ಬಟ್ಟೆಗಳಿಗೂ ಭಾಷೆಯಿದೆ !


Team Udayavani, May 25, 2018, 6:00 AM IST

c-14.jpg

ಹೇ ! ಇವತ್ತು ನೀನು ತುಂಬಾ ಚೆನ್ನಾಗಿ ಕಾಣುತ್ತಾ ಇದ್ದಿಯಾ. ನಿನ್ನ ಡ್ರೆಸ್‌ ಸೂಪರ್‌ ಆಗಿದೆ. ಎಲ್ಲಿ ತೆಗೆದುಕೊಂಡಿ? ನಿನಗೆ ಮ್ಯಾಚಿಂಗ್‌ ಆಗಿದೆ. ಅಲ್ಲಿ ನೋಡೆ, ಅವನು ಸೂಪರ್‌ ಆಗಿದ್ದಾನೆ. ನಮ್ಮಿಬ್ಬರದು ಸೇಮ್‌ ಪಿಂಚ್‌. ಅವಳು ಸಾರಿಯಲ್ಲಿ ಪಕ್ಕಾ ಭಾರತೀಯ ನಾರಿ. ಅವನದು ನೋಡೇ ಧೋತಿ-ಪಂಚೆ-ಶರ್ಟ್‌”- ಹೀಗೆ ಕಾಲೇಜಿನ “ಎಥಿ°ಕ್‌ ಡೇ’ ದಿನದಂದು ಕಾಲೇಜು ಮೈದಾನದಲ್ಲಿ ಕೇಳಿಬರುತ್ತಿದ್ದ ಸಂಭಾಷಣೆಗಳು.

ದಿನಾಲು ಉಡುವ ಉಡುಪುಗಳಿಗೆ ಸ್ವಲ್ಪಮಟ್ಟಿಗೆ ವಿಶ್ರಾಂತಿ ನೀಡಿ ಹೊಸ ಹೊಸ ಉಡುಪುಗಳ ಕಡೆ ಮನವಾಲಿದೆ. ಒಂದೊಂದು ಉಡುಪುಗಳು ಒಂದೊಂದು ರೀತಿಯ ಮಹಣ್ತೀವನ್ನು ಪಡೆದು, ಅದರ ವೇಷಭೂಷಣ ತನ್ನದೇ ಆದಂತಹ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ವಿವಿಧತೆಯಲ್ಲಿ ಏಕತೆ ಕಾಣುವುದು ದೇಶದ ಸಮಗ್ರ ಸಮೃದ್ಧಿಯ ಸಂಕೇತ. ನಾವು ಧರಿಸುವ ನಮ್ಮ ವೇಷಭೂಷಣಗಳು ನಮ್ಮಲ್ಲಿರುವ ಅವಗುಣಗಳು, ನಡೆ, ನುಡಿ, ನಿಷ್ಠೆ, ಪ್ರಾಮಾಣಿಕತೆ ಎಲ್ಲವನ್ನೂ ತೋರಿಸುತ್ತದೆ.

ನಾನು ಹಾಗೇ ಗಮನಿಸುತ್ತಾ ಇದ್ದೆ. ಅದೇ ಕಾಲೇಜು, ಅದೇ ಗೆಳೆಯ-ಗೆಳತಿಯರು. ಅದೇ ಉಪನ್ಯಾಸಕರು. ಅದೇ ಸ್ಥಳ. ಅದೇ ನೋಟ. ಆದರೂ ಏನೋ ಬದಲಾಗಿದೆ ಎನಿಸುತ್ತದೆ ಅಲ್ಲವೆ? ನಮ್ಮಲ್ಲಿ ಅಡಗಿರುವ ಭಾವನೆಗಳು ಬದಲಾಗಿವೆ. ಭಾವನೆಗಳು ಬದಲಾದಂತೆ ಅಭಿಪ್ರಾಯಗಳು ಬದಲಾಗಿವೆ ಎಂದು ಹೊಗಳದ ಸೌಂದರ್ಯತೆ ಬಗ್ಗೆ ಆ ಬಟ್ಟೆ ಧರಿಸಿದಾಗ ಬರುವ ಮಾತುಗಳೇ ಕೇಳಲು ಇಂಪು-ತಂಪು ಮತ್ತು ಸೋಜಿಗ. ಕೆಲವೊಮ್ಮೆ ಬಟ್ಟೆಗಳಿಗೆ ಇರುವ ಬೆಲೆ ಮಾನವನಿಗೆ ಇಲ್ಲವಲ್ಲ ಎಂದೆನಿಸುತ್ತದೆ. ಇರಲಿ, ಅದೇ ಶಾಮಿಯಾನದಲ್ಲಿ ಅದೇ ವೇದಿಕೆಯಲ್ಲಿ ಅದೇ ಸ್ಥಳದಲ್ಲಿ ಅಂದು ನೋಡುವ ದೃಷ್ಟಿಕೋನ ವಿಭಿನ್ನ. ಬರುವ ಉತ್ಸಾಹ ವಿಭಿನ್ನ. ಕಂಗೊಳಿಸುವ ಕಣ್ಣೋಟ ವಿಭಿನ್ನ. ಮನರಂಜಿಸುವ ಮನರಂಜನೆ ವಿಭಿನ್ನ. ಬರುವ ಸಂಭಾಷಣೆ ವಿಭಿನ್ನ. ಆಗುವ ಸಂತೋಷ, ಸಂಭ್ರಮ, ಆನಂದ ವಿಭಿನ್ನ. ಭಿನ್ನ-ವಿಭಿನ್ನಗಳ ಮಧ್ಯೆ ಏಕತೆಯನ್ನು ತೋರಿಸುವ ಕಾರ್ಯಕ್ರಮಗಳು ಸಹ ಇಂದು ವಿಶಿಷ್ಟಮಯವಾಗಿವೆ.

ಮೊದಲೆಲ್ಲ ಧರಿಸುವ ಬಟ್ಟೆಗಳ ಆಧಾರದ ಮೇಲೆ ಇವರು ಇಂತಹ ಪ್ರಾಂತ್ಯದವರು ಎಂದು ಸುಲಭವಾಗಿ ಗುರುತಿಸಬಹುದಿತ್ತು.  ಪ್ರಾಂತ್ಯ ಪ್ರಾಂತ್ಯಕ್ಕೂ ಧರಿಸುವ ಬಟ್ಟೆ , ವಿಧಾನ ಭಿನ್ನವಾಗಿತ್ತು. ಗಾಂಧಿ ಟೋಪಿ, ನೆಹರು ಶರ್ಟ್‌, ಧೋತಿ ಉಡುಪುಗಳನ್ನು ಧರಿಸಿದ ಜನರನ್ನು ಕಂಡರೆ ಅವರು ಉತ್ತರ ಕರ್ನಾಟಕದವರು, ಅದೇ ಉಡುಪಿಗೆ ಗಾಂಧಿ ಟೋಪಿ ಬದಲು ರುಮಾಲು ಸುತ್ತಿದ್ದರೆ ಶ್ರೀಮಂತರು, ದೊಡ್ಡಸ್ತಿಕೆ. ಮನೆಯ ಹಿರಿತಲೆ, ರುಮಾಲು ಸುತ್ತಿಕೊಂಡು ಊರಿನಲ್ಲಿ ಬರುತ್ತಿದ್ದರೆ ಅವರ ಗತ್ತೇ ಬೇರೆಯಾಗಿರುತ್ತಿತ್ತು. ಅವರವರ ಕಾಯಕದ ಮೇಲೆ ಉಡುಪುಗಳನ್ನು ಧರಿಸುತ್ತಿದ್ದರು. ದಕ್ಷಿಣಕರ್ನಾಟಕದಲ್ಲಿ ಪಂಚೆ ಉಟ್ಟು ಹೆಗಲ ಮೇಲೆ ಒಂದು ರೇಷ್ಮೆ ವಸ್ತ್ರ ಧರಿಸುತ್ತಿದ್ದರು. ಇನ್ನು ಹೆಣ್ಣುಮಕ್ಕಳು ಗಮನಿಸಿದಾಗ ಕರ್ನಾಟಕದಲ್ಲಿ ಲಂಬಾಣಿ ಜನಾಂಗದ ಮಹಿಳೆಯರ ವೇಷಭೂಷಣ ಬಿಟ್ಟರೆ ಹೆಚ್ಚಿನ ಮಹಿಳೆಯರ ಉಡುಪುಗಳು ಸಾಮಾನ್ಯವಾಗಿ ಒಂದೇ ರೀತಿಯಾಗಿ ಕಾಣಬಹುದು. ಹೆಣ್ಣುಮಕ್ಕಳು ಲಂಗದಾವಣಿ, ಮಾತೆಯರು ಕುಪ್ಪಸ-ಸೀರೆಗಳನ್ನು ಧರಿಸುತ್ತಿದ್ದರು. ಅಲ್ಲದೇ ಅಲಂಕಾರದ ಒಡವೆಗಳಾದ ನಡುಪಟ್ಟಿ , ಜುಮುಕಿ, ಕರಿಮಣಿಸರ, ಕಿವಿಯೋಲೆ ಧರಿಸಿಕೊಂಡು ಹೊರಟರೆ ಅವರ ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲದು. ಹಿಂದೆ ರಾಜಮನೆತನಗಳಲ್ಲೂ ಸಹ ವಿವಿಧ ರೀತಿಯ ಆಭರಣಗಳನ್ನು ತೊಡುತ್ತಿದ್ದರು. ಮೊಗಲ್‌ ದೊರೆಗಳು ಮತ್ತು ಭಾರತೀಯ ರಾಜಮನೆತನದ ವೇಷಭೂಷಣಗಳು ವಿಭಿನ್ನವಾಗಿವೆ.

ಬದಲಾವಣೆ ಜಗದ ನಿಯಮ ಎಂಬ ಮಾತಿನಂತೆ ಯುವಜನಾಂಗ ತಮ್ಮ ಕಾಯಕಕ್ಕಾಗಿ ಪಟ್ಟಣಗಳಿಗೆ  ಅರಸಿ ಬಂದ ನಂತರ ಉಡುಗೆ-ತೊಡುಗೆಗಳು ಬದಲಾದವು. ಹಿಂದೆ ಕಾಯಕಗಳ ಆಧಾರವಾಗಿ ವ್ಯತ್ಯಾಸ ಕಾಣುವ ಉಡುಪುಗಳು ಈಗ ನಗರ ಮತ್ತು ಹಳ್ಳಿಗಳ ನಡುವೆ ವ್ಯತ್ಯಾಸ ಕಾಣುತ್ತಿವೆ. ಜೀನ್ಸ್‌ ಪ್ಯಾಂಟ್‌, ಟೀಶರ್ಟ್‌, ಚೂಡಿದಾರ್‌, ನೈಟಿ, ಕೋಟು, ಟೈ, ಬೆಲ್ಟ್, ವಾಚ್‌- ಹೀಗೆ ಧರಿಸುವವರು ನಗರದ ಜನತೆಯಾದರೆ, ಶರ್ಟ್‌-ಪಂಚೆ, ಲುಂಗಿ-ಟೋಪಿ-ರುಮಾಲು, ಹೆಗಲ ಮೇಲೆ ಟವೆಲ್‌, ಲಂಗದಾವಣಿ, ಸೀರೆ, ಧೋತಿ ಮುಂತಾದ ಉಡುಪುಗಳನ್ನು ಹಳ್ಳಿ ಜನರು ಧರಿಸುತ್ತಾರೆ. ಈಗ ಹಳ್ಳಿ ಮತ್ತು ಪಟ್ಟಣಗಳಲ್ಲಿ ವೇಷಭೂಷಣದಲ್ಲಿ ವ್ಯತ್ಯಾಸ ಕಾಣುವುದು ತುಂಬಾ ವಿರಳವಾಗಿದೆ.

ಸುಮಾರು ವರ್ಷಗಳ ಹಿಂದೆ ಅಪ್ಪ ಯಾವುದೋ ಕೆಲಸದ ನಿಮಿತ್ತವಾಗಿ ಬೆಂಗಳೂರಿನಲ್ಲಿ ಆಗಿನ ನಮ್ಮ ಜಿಲ್ಲೆ ಸಚಿವರಾದ ಬಿ.ಬಿ. ಚಿಮ್ಮನಕಟ್ಟೆಯವರನ್ನು ಭೇಟಿ ಮಾಡಲು ಹೋಗಿದ್ದರು. ವಿಧಾನಸೌಧದಲ್ಲಿ ಸಚಿವರು ಇಲ್ಲದ ಕಾರಣ ಅಲ್ಲಿನ ಸಲಹೆಗಾರರೊಬ್ಬರು “ಅವರ ಮನೆಗೆ ಹೋದರೆ ಅವರನ್ನು ಭೇಟಿ ಮಾಡಲು ಆಗುತ್ತೆ’ ಎಂದು ಹೇಳಿದಾಗ, ಅಪ್ಪನ ಜೊತೆ ಬಂದ ನಾಲ್ಕು ಜನ ಸೇರಿ ಆಟೋರಿಕ್ಷಾದಲ್ಲಿ ಸಚಿವರ ಮನೆ ತಲುಪಿದರು. “”ಇದೇ ಏನಪ್ಪ ಚಿಮ್ಮನಕಟ್ಟೆ ಸಾಹೇಬರ ಮನೆ”

“”ಹೌದು ನೀವು ಯಾರು? ಇಲ್ಲಿಗೆ ಏಕೆ ಬಂದಿರಿ? ಏನು ಕೆಲಸ ಇದೆ? ಸಾಹೇಬರು ಇಲ್ಲ” ಎಂದು ವಾಚ್‌ಮನ್‌ ಹೇಳುತ್ತಿದ್ದ ಈ ಸಂಭಾಷಣೆ ಕೇಳಿದ ಸಚಿವರ ಧರ್ಮಪತ್ನಿ ಹೊರಗೆ ಬಂದು, “”ಅವರು ನಮ್ಮವರು, ಒಳಗೆ ಬಿಡು” ಎಂದು ಹೇಳಿದರು. ಪೂರ್ವಾಪರ ವಿಚಾರಿಸದೇ ನೇರವಾಗಿ ನಮ್ಮವರೇ ಬಿಡು ಎಂದು ಹೇಳುತ್ತಿದ್ದಾರಲ್ಲ ಎಂದು ಆಶ್ಚರ್ಯಚಕಿತರಾಗಿಯೇ ಒಳ ನಡೆದರು. 

“”ಬನ್ನಿ ಕಾಕಾ, ಎಲ್ಲಾರು ಆರಾಮ ಅದಿರಲ್ಲ. ಮಳೆ-ಬೆಳೆ ಹೈಂಗೈತ್ರಿ, ಚಲೋ ಐತಿಲಿ. ಬಾಳ ದಿನ ಆಯಿತ್ರಿ ನಮ್ಮ ಕಡೆ ಜನನ ಕಂಡೇ ಇಲ್ಲ. ನೀವು ಮಾತಾಡೊ ಭಾಷೆ, ನೀವು ಹಾಕಿದ ಗಾಂಧಿಟೋಪಿ, ನೆಹರು ಶರ್ಟ್‌, ಧೋತಿ ನೋಡಿ ನಮ್ಮ ಕಡೆಯವರು ಅಂತ ಗೊತ್ತಾಯಿತ್ರಿ” ಎಂದು ಪಟಪಟನೆ ಮಾತನಾಡಿದ್ದರಂತೆ. ಯಾರು ಏನು ಎಂಬುದೇ ಗೊತ್ತಿಲ್ಲ. ಬಟ್ಟೆಗಳ ಆಧಾರದ ಮೇಲೆ ಇವರು ನಮ್ಮವರು, ನಮ್ಮ ಕಡೆಯವರು, ನಮ್ಮ ಜಿಲ್ಲೆಯವರು ಎಂಬ ಅಭಿಮಾನ ಉಕ್ಕಿ ಹರಿಯುತ್ತಿತ್ತು. ಅಪರಿಚಿತರನ್ನು ಪರಿಚಯಿಸುವ ತಾಕತ್ತು ನಾವು ಧರಿಸುವ ಬಟ್ಟೆಗಳಿಗಿವೆ. ಅಷ್ಟೇ ಅಲ್ಲ, ಬಟ್ಟೆಗಳಿಗೂ ಭಾಷೆ ಇದೆ. ನಾವು ಹಾಕುವ ಬಟ್ಟೆಗಳ ಮೇಲೆ ಭಾಷೆ ಬದಲಾಗುತ್ತದೆ ಎಂದು ಅಪ್ಪ ಆಗಾಗ ಹೇಳಿದ್ದು ನನಗೆ ನೆನಪು ಬಂತು.

ಇಂದು ನಗರ, ಪಟ್ಟಣ, ಹಳ್ಳಿಗಳಿಗೆ ಹೋಲಿಕೆ ಮಾಡಿದಾಗ ಉಡುಪುಗಳಲ್ಲಿ ಅಷ್ಟೊಂದು ವ್ಯತ್ಯಾಸ ಕಾಣದಿದ್ದರೂ ಸ್ವಲ್ಪ ಮಟ್ಟಿಗೆ ವಿಭಿನ್ನತೆ ಕಾಣಬಹುದು. ಎಲ್ಲರೂ ಆರ್ಥಿಕವಾಗಿ ಸಬಲರಾಗಿ ತಮಗೆ ಯಾವ ರೀತಿಯ ಬಟ್ಟೆಗಳು ಬೇಕೋ ಆ ರೀತಿಯ ಬಟ್ಟೆಗಳನ್ನು ಧರಿಸುತ್ತಾ ತಾವು ಯಾರಿಗೂ ಕಮ್ಮಿ ಇಲ್ಲದಂತೆ ಎಲ್ಲ ರೀತಿಯ ಫ್ಯಾಶನ್‌ ಮಾಡುವವರು.

ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸುತ್ತಾ, ತಮ್ಮ ಉಡುಗೆ-ತೊಡುಗೆ-ಊಟಗಳಲ್ಲಿ ಸಹ ಬದಲಾವಣೆ ಆಗಿದೆ. ಹಾಗೇ ಸಾಂಪ್ರದಾಯಿಕವಾಗಿ ಬಂದ ಉಡುಪುಗಳನ್ನು ಮರೆಯುತ್ತ ಇದ್ದಾರೆ ಎನ್ನುವ ಆತಂಕದಲ್ಲಿಯೇ ಕಾಲೇಜುಗಳಲ್ಲಿ “ಎಥಿ°ಕ್‌ ಡೇ’ ಎಂದು ಆಚರಿಸುವಾಗ ಎಲ್ಲರೂ ತಮ್ಮ ದಿನಚರಿಯ ಉಡುಪುಗಳನ್ನು ಬದಿಗೆ ಸರಿಸಿ ಸಾಂಪ್ರದಾಯಿಕವಾದ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾರೆ. ಆಗ ಅಲ್ಲಿ ನಿರ್ಮಾಣವಾಗುವ, ಆವರಿಸುವ ವಾತಾವರಣವೇ ಒಂದು ಸೋಜಿಗಮಯ.

ಬಸವರಾಜ ಪೂಜಾರ ಅಂತಿಮ ವರ್ಷ ಯೇನಪೋಯಾ ತಾಂತ್ರಿಕ ಮಹಾವಿದ್ಯಾಲಯ,  ಮೂಡಬಿದಿರೆ

ಟಾಪ್ ನ್ಯೂಸ್

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Tamil film Maharaja to be released in China on November 29

Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್‌!

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.