ಬಾಲ್ಯದ ಮಳೆಗಾಲ


Team Udayavani, Jun 28, 2019, 5:00 AM IST

13

ಸಾಂದರ್ಭಿಕ ಚಿತ್ರ

ಆಹಾ! ಎಷ್ಟು ಚೆಂದ ನಮ್ಮ ಬಾಲ್ಯತನ. ಆ ಆಟಗಳು, ಕುಣಿದಾಟ, ಮಕ್ಕಳಾಟ, ಹೊಡೆದಾಟ ಎಲ್ಲವೂ ಮತ್ತೂಮ್ಮೆ ಬಂದರೆ . ಮಳೆಗಾಲದಲ್ಲಂತೂ ಕೇಳುವುದೇ ಬೇಡ ಸಡಗರ. ಶಾಲಾ ಆರಂಭದ ದಿನಗಳಲ್ಲೇ ಮಳೆಗಾಲದ ಪ್ರಾರಂಭ. ಆಗಂತೂ ಖುಷಿಯೇ ಖುಷಿ. ಅಮ್ಮನ ಜೊತೆ ಹಠಮಾಡಿ ಅತ್ತು ಹೋಗಿ ತರುತ್ತಿದ್ದ ಬಣ್ಣದ ಕೊಡೆಗಳು ಇಂದಿಗೂ ಕಣ್ಮುಂದೆ ಇದೆ.

ಮಳೆಗಾಲ ಬಂತೆಂದರೆ ನಮ್ಮೂರ ಬಯಲುಗಳು, ಹೊಳೆ-ಬಾವಿಗಳು ತುಂಬಿ ಹರಿಯುವ ಸೊಬಗು ನೋಡಲು ಕಣ್ಣಿಗೆ ಎಷ್ಟೊಂದು ತಂಪು. ಹೊಳೆಯ ನೀರು ಉಕ್ಕಿ ಹರಿದು ನೆರೆ ಹತ್ತುವುದನ್ನು ದೂರದಿಂದ ನೋಡಬೇಕು. ಎಂಥ ಸುಂದರ ದೃಶ್ಯ! ಮಳೆಯ ಜೊತೆ ಗದ್ದೆಯನ್ನು ಉಳುವುದು, ಭತ್ತ ನೆನೆ ಹಾಕಿ ಬಿತ್ತುವುದು, ನಾಟಿ ಮಾಡುವುದು ಎಷ್ಟು ಖುಷಿ. ಮಳೆಗಾಲದ ದಿನಗಳಲ್ಲಿ ಬಯಲಂಚಿನಲ್ಲಿ ಒಮ್ಮೆ ನಿಂತರೆ ಮನಸ್ಸು ಶಾಂತವಾಗಿಬಿಡುತ್ತದೆ. ಮಳೆಗಾಲ ಬಂದರೆ ಎಷ್ಟೋ ದಿನಗಳನ್ನು ಗದ್ದೆಯಲ್ಲೇ ಕಳೆದದ್ದುಂಟು. ಇನ್ನು ಶಾಲೆಯ ಕಡೆ ಬಂದರೆ ಮೋಜು, ಮಸ್ತಿ, ಕುಣಿದಾಟ ಕೇಳಬೇಕೆ? ಸ್ನೇಹಿತರೊಂದಿಗೆ ಮಳೆಯಲ್ಲಿ ಆಟ, ಊಟದ ಬಟ್ಟಲನ್ನು ಮಾಡಿನ ನೀರಿನಲ್ಲಿ ತೊಳೆದು ನೀರು ಚುಮುಕಿಸುವ ತುಂಟಾಟ ಎಷ್ಟು ಸೊಗಸು. ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರಕ್ಕೇನು ಕಮ್ಮಿ ಇಲ್ಲ. ಒಬ್ಬರಿಗೆ ಬಂತೆಂದರೆ ಸಾಕು ಇಡೀ ತರಗತಿಗೆ ಹರಡುತ್ತಿತ್ತು. ಅಮ್ಮ ಬಾಟಲಿಗೆ ತುಂಬಿಸಿಕೊಡುತ್ತಿದ್ದ ಬಿಸಿನೀರಿನ ಜೊತೆ ಶಾಲೆಯಲ್ಲಿಟ್ಟ ಡ್ರಮ್‌ನ ನೀರನ್ನು ಕುಡಿದು ಆರೋಗ್ಯ ಕೆಡಿಸಿಕೊಂಡು ಅಮ್ಮನ ಬೈಗುಳ ಕೇಳುವ ಮಜಾವೇ ಬೇರೆ. ಮನೆಗೆ ಹೋಗುವಾಗ ಮಳೆ-ಗಾಳಿ ರಭಸಕ್ಕೆ ಕೊಡೆ ಎಲ್ಲೋ ನಾವೆಲ್ಲೋ ಆಗಿ ಪೂರ್ತಿ ಒದ್ದೆಯಾಗಿ ಅಮ್ಮನ ಬೈಗುಳದ ಮಧ್ಯೆಯೂ ಅವಳು ಪ್ರೀತಿಯಿಂದ ಮಾಡಿಟ್ಟ ಒಂದು ಲೋಟ ಬಿಸಿ ಹಾಲಿನೊಂದಿಗೆ ಕರಿದ ಕರುಂ ಕರುಂ ಹಪ್ಪಳವನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಅಂಗಳದ ತುಂಬ ನೀರು ನಿಂತಾಗ ಕಾಗದದ ದೋಣಿ ಬಿಟ್ಟು ಅದರ ಹಿಂದೆ ಹೋಗಿ ಜಾರಿಬಿದ್ದ ಸವಿನೆನಪು ಎಂದಿಗೂ ಮಾಸದು. ಬಾಲ್ಯವೆಂದರೆ ಹಾಗೆ. ಕುಣಿದಾಟ, ಹೊಡೆದಾಟ, ಏನೂ ಅರಿಯದ ಮುಗ್ಧತೆ ಅದು. ಆದರೆ, ಈಗ ದೊಡ್ಡವರಾಗಿದ್ದೇವೆ ಎನ್ನುವ ಮುಜುಗರ.

ಮೊದಲಿನ ಕಾಲ ಎಷ್ಟು ಚೆಂದ. ಈಗ ಎಲ್ಲವೂ ಬದಲಾಗಿದೆ. ಮೊದಲೆಲ್ಲ ಬೇಸಿಗೆಯಲ್ಲಿ ನಮ್ಮೂರಿನ ಬಾವಿಯ ನೀರು ಒಣಗುತ್ತಿರಲಿಲ್ಲ. ಆದರೆ, ಈಗ ನೀರಿಗಾಗಿ ಪರದಾಟ. ಎಲ್ಲಿ ಹೋದರೂ ಕೇಳುವುದು ನಿಮ್ಮಲ್ಲಿ ನೀರಿದೆಯಾ ಎಂಬ ಪ್ರಶ್ನೆ.

ನಯನಾ ಶೆಟ್ಟಿ
ಉಡುಪಿ ಗ್ರೂಪ್‌ ಆಫ್ ಇನ್‌ಸ್ಟಿಟ್ಯೂಷನ್‌, ಮಣಿಪಾಲ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.