
ಸಂಡೇ ಲಹರಿ
Team Udayavani, Oct 25, 2019, 4:53 AM IST

ಶುಕ್ರವಾರ ಬಂತೆಂದರೆ ಒಂದು ನಿಟ್ಟುಸಿರು ಬಿಟ್ಟಂತಾಗುತ್ತದೆ. ಶನಿವಾರ ಒಂದರ್ಧ ದಿನ ಹೋದರೆ ಮತ್ತೆ ಕಾಲೇಜಿನತ್ತ ಹೆಜ್ಜೆ ಹಾಕುವುದು ಸೋಮವಾರ.
ರವಿವಾರದಂದು ನನಗೆ ಸೂರ್ಯೋದಯವಾಗುವುದೇ ಹನ್ನೊಂದು ಗಂಟೆಯ ನಂತರ. ನಾನು ಸೂರ್ಯವಂಶದವಳು ಅಂದರೆ ತಪ್ಪಾಗಲಿಕ್ಕಿಲ್ಲ. ಅದಾಗಿ ಬಾತ್ ರೂಮ್ ಸಿಂಗಿಂಗ್ ಶೋನಿಂದ ನನ್ನ ದಿನ ಪ್ರಾರಂಭ. ತಿನ್ನುವ ವಿಷಯದಲ್ಲಿ ನಮ್ಮದು ಎತ್ತಿದ ಕೈ. ಬೆಳಗಿನ ಉಪಹಾರ ಹಾಗು ಮಧ್ಯಾಹ್ನದ ಊಟ ಏಕಕಾಲದಲ್ಲಾಗುತ್ತದೆ.
ಊಟದ ಬಳಿಕ ಕುಂಭಕರ್ಣನ ಸಿದ್ಧಾಂತವನ್ನು ಪಾಲಿಸುವ ನಾನು ಎರಡನೆಯ ಸುತ್ತಿನ ನಿದ್ರೆಗೆ ಜಾರುತ್ತೇನೆ. ಸಂಜೆ 5 ಗಂಟೆಗೆ ಎದ್ದು ಕಾಪಿ ಹೀರಿ ತಮ್ಮನೊಂದಿಗೆ ಜಗಳ ಮಾಡಿದ ಬಳಿಕ ನೆನಪಾಗುವುದು ಸೋಮವಾರಕ್ಕೆ ಬಾಕಿ ಇಟ್ಟಿರುವ ಹೋಂವರ್ಕ್‌ಗಳು. ತಮ್ಮನೊಂದಿಗೆ ಜಗಳವಾಡಿ ಸಮಯ ವ್ಯರ್ಥ ಮಾಡುವುದಕ್ಕಿಂತ ಆಗಲೇ ಹೋಮ್‌ವರ್ಕ್ ಮಾಡಬಹುದಿತ್ತಲ್ಲ ಎಂದು ಜ್ಞಾನೋದಯವಾಗುತ್ತದೆ. ತಿಳಿ ಸಂಜೆಯ ಹೊತ್ತಿಗೆ ಸೂರ್ಯ ಇಳಿಯುತ್ತಿದ್ದಂತೆ ಮನಸ್ಸಿನಲ್ಲಿ ಅದೇನೋ ದುಗುಡ ಸೋಮವಾರ ಬಂತೆಂದು!
ಮನೆಗೆಲಸದಲ್ಲಿ ಬಹಳ ಉದಾಸೀನಳಾಗುವ ನಾನು ಎಲ್ಲ ಕೆಲಸವನ್ನು ಅಮ್ಮನ್ನಿಂದಲೇ ಮಾಡಿಸುತ್ತೇನೆ ! ಇನ್ನೇನು, ಕೆಲವು ಗಂಟೆಗಳಲ್ಲಿ ಬೆಳಗಾಗಿ ಮತ್ತೆ ಕಾಲೇಜಿಗೆ ಬೇಗ ಎದ್ದು ಹೊರಡಬೇಕಲ್ಲ ಎಂದು ಯೋಚಿಸಿ ಮಲಗುತ್ತೇನೆ.
ಯಾರಾದರೂ ವಿಜ್ಞಾನಿಗಳು ಬಂದು ರಿಮೋಟ್ ಕಂಡು ಹಿಡಿದರೆ ಅದನ್ನು ಮೊದಲು ನಾನು ಖರೀದಿಸಿ ಸಂಡೇಯನ್ನು ಪ್ವಾಸ್ ಮಾಡಿ ಮಂಡೆ ಪ್ಲೇ ಆಗದಂತೆ ಮಾಡುತ್ತಿದ್ದೆ.
ವೈಷ್ಣವಿ ಜೆ. ರಾವ್
ಪ್ರಥಮ ಬಿ.ಎ, ಅಂಬಿಕಾ ಮಹಾವಿದ್ಯಾಲಯ, ಪುತ್ತೂರು
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.