ಚೀಟಿ ಬಿಡಿಸುವ ಸಮಯ
Team Udayavani, Aug 25, 2017, 6:30 AM IST
ಹೌದು, ಶಾಲೆಯೆಂದರೆ ಅಲ್ಲಿ ಮದುವೆಗೆ ಬಣ್ಣದ ಕಾಗದದ ತೋರಣ ಕಟ್ಟಿದಂತೆ ಸಾಲು ಸಾಲು ಪರೀಕ್ಷೆಗಳು, ಕಿರು ಪರೀಕ್ಷೆ, ಮಧ್ಯ ವಾರ್ಷಿಕ, ವಾರ್ಷಿಕ, ಸೆಮಿಸ್ಟರ್, ಮರುಪರೀಕ್ಷೆ, ಸಿದ್ಧತಾ ಪರೀಕ್ಷೆ, ಗಣಿತದ ಸಾಧನೆಗಳು, ರಾಸಾಯನ ಶಾಸ್ತ್ರದ ಸೂತ್ರಗಳು, ಜೀವ ಶಾಸ್ತ್ರದ ವೈಜ್ಞಾನಿಕ ಹೆಸರುಗಳು, ವಾರದಲ್ಲೊಂದು ಪರೀಕ್ಷೆ, ಒಂದು ಪಾಠ ಆದ ಮೇಲೊಂದು ಪರೀಕ್ಷೆ ಅದು, ಇದು ಒಂದೇ, ಎರಡೇ… ಒಂದು ತರಗತಿಯಲ್ಲಿ ಕನಿಷ್ಠ ಆರು ಪಠ್ಯಗಳು, ಎಂಟು ಪರೀಕ್ಷೆಗಳೆಂದು ಗುಣಿಸಿದ್ರೂ ಡಿಗ್ರಿ ಮುಗಿಯುವ ಹಂತಕ್ಕೆ 800 ಪರೀಕ್ಷೆಗಳನ್ನು ಗಡದ್ದಾಗಿ ಬರೆದಿರುತ್ತೇವೆ. ಇನ್ನೂ ಸಣ್ಣ ಸಣ್ಣ ಪರೀಕ್ಷೆಗಳನ್ನು ಸಂಕಲನ ಮಾಡಿದರೆ 1400 ಗಡಿ ದಾಟಬಹುದು. ಇಷ್ಟೊಂದು ಪರೀಕ್ಷೆಗಳಿಗೆ ತಯಾರಿ ಹೇಗಿರಬೇಡ? ಹØಹØಹØ… ಅಷ್ಟೊಂದು ಕಕ್ಕುಬೇಕಾದರೆ ಎಷ್ಟು ತಿನ್ನಬೇಡ !
ಮನೆಯಲ್ಲಿ ಅಮ್ಮನ ಕಣ್ಣು ಕಟ್ಟಲು, ಪುಸ್ತಕ ಬಿಡಿಸಿ ಓದಿದಂತೆ ನಟಿಸಿ, ಮತ್ತೆ ಪರೀಕ್ಷೆಗೆ ತಯಾರಿ ನಡೆಸುವ ಪರಿಯೋ ಬ್ರಹ್ಮನಿಗೆ ಪ್ರೀತಿ, ಹೌದು ಅದೆಷ್ಟು ಚೀಟಿಗಳು, ಪೆನ್ಸಿಲ್ ಕೆತ್ತನೆಗಳು, ಗೋಡೆ ಬರಹ, ಅಂಗಿ ಅಕ್ಷರಗಳು, ಡೆಸ್ಕಾ ಸಾಹಿತ್ಯ, ಮಣಿಗಂಟು ಲೇಖನ, ಹಲವು ಬಗೆ, ಯಾರು ತರಗತಿಯಲ್ಲಿ ಓದುತ್ತಾನೆಯೋ ಅವನ ತಲೆಗೆ ದಂಡ ಪಾವತಿಸಿ ಇಂಪಾರ್ಟೆಂಟ್ ಕ್ವೆಶ್ಚನ್ ಕೇಳಿ ಗೆರೆ ಹಾಕಿಯೋ, ಅಲ್ಲಿ ಇಲ್ಲಿ ಬರೆದೋ, ಯುದ್ಧಕ್ಕೆ ಶಸ್ತ್ರಾಭ್ಯಾಸಕ್ಕೆ ಸಿದ್ಧ ಅಂಗೈ ಅಗಲದ ಸಾಮಾನು ಚೀಟಿ ಎತ್ತಿ ಭೂತಕನ್ನಡಿಯಿಟ್ಟು ನೋಡುವಷ್ಟು ಪುಟ್ಟ ಅಕ್ಷರಗಳಾದರೂ ಸು#ಟ, ಸ್ಪಷ್ಟತೆಯಿಂದ ಎದ್ದು ಕಾಣುವಂತೆ ಬರೆದು ಸೋಲ್ಡಿ (ಲಕ್ಕಿಡಿಪ್ ಡ್ರಾ) ಹಾಕುವಂತೆ ಮಡಚಿ, ಉದ್ದ ತೋಳಿನ ಅಂಗಿಯ ಕೈಯಲ್ಲೋ, ಬೆಲ್ಟ… ನ ಸೆರೆಯಲ್ಲೋ, ಡೆಸ್ಕಿನ ಎಡೆಯಲ್ಲೋ, ಕಿಟಕಿಯ ಮೂಲೆಯಲ್ಲೋ, ಪೆನ್ನಿನೊಳಗೋ, ಕಂಪಾಸ್ ಡಬ್ಬದೊಳಗೋ, ಲಾಗ್ ಪುಸ್ತಕದ ಮಧ್ಯದಲ್ಲೋ, ಖಾಸಗಿ ಜಾಗಗಳಲ್ಲೋ ಸುಲಭವಾಗಿ ಸಿಗುವಂಥ, ಸುರಕ್ಷಾ ಸ್ಥಳಗಳಲ್ಲಿ ಇಟ್ಟು ಸಿದ್ಧಗೊಳ್ಳುವ ಪರಿಯೇ ಅಬ್ಟಾಬ್ಟಾ ಸೈನಿಕರನ್ನು ಮಿರಿಸುವ ಕರಾಮತ್ತು, ಚೀಟಿ ಬರೆದು ಸಿದ್ಧಪಡಿಸಿದರೆ ಸಾಕೇ… ಪರೀಕ್ಷೆಯಲ್ಲಿ ಬರುವ ಅಪರಿಚಿತ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲ , ಅದಕ್ಕೂ ಪಂಚವಾರ್ಷಿಕ ಯೋಜನೆಯಂತೆ, ಯಾವ ಪಾಠಕ್ಕೆ ಯಾವ ಚೀಟಿಯೆಂದು ಸಾಲು ಸಾಲು ಕ್ರಮಸಂಖ್ಯೆಗಳು, ಯಾವ ಪ್ರಶ್ನೆಗೆ ಯಾವ ಉತ್ತರ ಎಂಬುದು ಕೂಡ.
ಇನ್ನು ಚೀಟಿ ಬಿಡಿಸಿ ನೋಡುವ ಕ್ರಮವೋ ವರ್ಣಿಸಹೊರಟರೆ ಪುಟಗಳು ಸಾಲದು ! ನಮ್ಮ ಮನೆಬಿರುಕು ಉಂಟುಮಾಡುವ ಧಾರಾವಾಹಿಯ ಸೊಸೆ, ಅತ್ತೆಯನ್ನು ಬಾಗಿಲ ಸಣ್ಣ ಸಂದಿನಿಂದ ನೋಡುವಂತೆ, ಕಣ್ಣಿನ ರೆಪ್ಪೆಗಳಿಗೆ ಕೋನ ನೀಡಿ, ಪಂಚೇಂದ್ರಿಯಗಳು ಸೈನಿಕನಂತೆ ಸೆಟೆದು ನಿಂತು ಜತನದಿಂದ ಶಿಕ್ಷಕರ ಧ್ವನಿ, ಶಿಕ್ಷಕಿಯ ಬಳೆಯ ಸಂಗೀತ, ಹೊಸ ಮದುವೆಯಾದ ಟೀಚರಿನ ಕಾಲಿನ ಗೆಜ್ಜೆನಾದ, ತಲೆಗೆ ಮೂಡಿದ ಹೂವಿನ ಪರಿಮಳ, ನಿದ್ದೆ ಮಾಡಿದಂತೆ ನಟಿಸುವ ಮಾಸ್ತ್ರರ ದೃಷ್ಟಿ, ಅಲ್ಲಾಡುವ ನೆರಳು, ಗಾಳಿಯ ಒತ್ತಡವೆಲ್ಲವನ್ನು ಗ್ರಹಿಸಿಕೊಂಡು ಕಾಪಾಡಿಕೊಳ್ಳಬೇಕು. ಮೊದಲ ದಿನದ ಪರೀಕ್ಷೆಯಲ್ಲಿ ಮೊಹರು ಹಾಕಿದ ಉತ್ತರಪತ್ರಿಕೆಯನ್ನು ತೆಗೆದುಕೊಂಡು ಪುಟ ತುಂಬ ಬರೆದು ಮರುದಿನದ ಪರೀಕ್ಷೆಯಲ್ಲಿ ಹಗ್ಗ ಕಟ್ಟುವುದು ಇದೆ, ಮತ್ತೆ ಪ್ರಶ್ನೆಪತ್ರಿಕೆಯ ಕೆಳಗೆ, ಕಂಪಾಸು ಡಬ್ಬದ ಒಳಗೆ, ಕ್ಯಾಲ್ಕುಲೇಟರ್‌ನ ಮೇಲೆ, ಅಡಿಕೋಲುಗಳ ಅಡಿ ಭಾಗ, ಲಂಗದ ನಡುವೆ, ಹಳೆಯ ಪ್ರಶ್ನೆಪತ್ರಿಕೆಗಳÇÉೇ ಇನ್ನೂ ಹಲವಾರು. ಇಷ್ಟು ಮಾಡಿ ಪರೀಕ್ಷೆಯಲ್ಲಿ ಅದೇ ಪ್ರಶ್ನೆ ಬಂದು ಬರೆದೆ ಅಂದ್ರೆ ಮೊದಲ ಪ್ರಸವದಷ್ಟು ಖುಷಿ.
ಬರೀ ನಾವೇ ಬರೆದರಾಯಿತೆ? ದಾನಶೂರರಲ್ಲವೇ, ನಾವು ಬರೆಯುವುದಕ್ಕೂ ಸೈ, ಮತ್ತೂಬ್ಬರನ್ನು ಪ್ರೋತ್ಸಾಹಿಸಲು ಜೈ ಎಂಬಂತೆ ಈ ಚೀಟಿಗಳನ್ನು ವರ್ಗಾಯಿಸುವುದೋ ಅದೊಂದು ಕಷ್ಟದ ಸನ್ನಿವೇಶ. ಅವನದು ಕಿರಿಕಿರಿ, ಸಿಟ್ಟೋ ಸಿಟ್ಟು. ಆದರೂ ಗೆಳೆಯನಲ್ಲವೆ, ಕೊಡಬೇಕಲ್ವಾ! ನಾಳೆ ಅವನೇ ಬೇಕಲ್ಲಾ ಅದಕ್ಕಾಗಿ ಕಣನ್ನೆಗಳೇನು? ಪೆನ್ನಿನ ತುದಿಯಿಂದ ಕುಟ್ಟುವುದೇನು? ಕಾಲು ಗುದ್ದುವುದೇನು? ಕೈ ಮೇಲೆತ್ತುವುದೇನು? ರಬ್ಬರ್‌ಗೆ ಕಟ್ಟಿ ಬಿಸಾಡುವುದೇನು? ಮತ್ತೆ ಅಪರೂಪಕ್ಕೆ ಮಾಸ್ಟ್ರೆ ನೋಡಿದರೆಂದರೆ ಮೆಲ್ಲಗೆ ಕಿಟಕಿಯಿಂದ ಹಾರಿಸುವುದೇನು, ಚಡ್ಡಿ ಕಿಸೆಯೊಳಗೆ ಹಾಕುವುದೇನು, ಕುಪ್ಪಸದೊಳಗೆ ತುರುಕಿಸುವುದೇನು, ಕಾಲುಚೀಲದೊಳಗೆ ನುಗ್ಗಿಸುವುದೇನು- ಬಾಯಲ್ಲಿ ಹಾಕಿ ಜಗಿಯುವುದೇನು? ಅಬ್ಬಬ್ಟಾ ! ನಗು ಬರುತ್ತದೆ ಅಲ್ಲವೆ? ಹೌದು, ಪರೀಕ್ಷೆಯಲ್ಲಿ ಬರೆಯಬೇಕಾದರೆ ಹೀಗೆಲ್ಲ ಮಾಡುವುದು ಇದ್ದದ್ದು ಹೌದಾದರೂ ಓದುತ್ತಿರುವ ನೀವು ಅಪ್ಪ- ಅಮ್ಮನಾಗಿದ್ದರೆ ಮಗನಿಗೋ, ಮಗಳಿಗೋ ಇದನ್ನು ಹೇಳಿಕೊಡಬೇಡಿ. ಶಾಲೆ- ಕಾಲೇಜಿಗೆ ಹೋಗುವವರಾಗಿದ್ದರೆ ಕಷ್ಟಪಟ್ಟು ಓದಿ. ಖಂಡಿತಾ ನೀವು ಅಂದುಕೊಂಡದ್ದನ್ನು ಸಾಧಿಸುತ್ತೀರಿ. ಸಮಾಜಕ್ಕೆ , ನೌಕರಿಗೆ, ಬೇಕಾಗಿರೋವಷ್ಟು ಅಂಕಗಳನ್ನು ಪರೀಕ್ಷೆಗಳಲ್ಲಿ ಖಂಡಿತಾ ಗಳಿಸುತ್ತೀರಿ.
– ಭರತೇಶ ಅಲಸಂಡೆಮಜಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.