ಜೀವನದ ಹಾದಿಯ ತಿರುವಿನಲಿ ! 


Team Udayavani, Mar 10, 2017, 3:45 AM IST

498744990.jpg

ನಂಗೆ ಬರೋಕೆ ಆಗಲ್ಲಾ ಸಾರಿ ಟ್ರೈ ಮಾಡಿ ನೋಡ್ತೀನಿ, ನಾನ್‌ ಖಂಡಿತ ಬರ್ತೀನಿ ಒಟ್ಟಿಗೆ ಹೋಗುವಾ ಮತ್ತೂಬ್ಬ ಬೇರೆ ಯಾರು ಬರುವವರಿದ್ದೀರಿ ಬೇಗ ಹೇಳಿ…” ಹಾಗೆ ಹೀಗೆ ಅಂತ ವಾಟ್ಸಾಪ್‌ ವೇದಿಕೆಯಲ್ಲಿ ಚರ್ಚೆಯಾಗುತ್ತಿತ್ತು. ನಾನೇನೋ ಹೊಸ ಮೂವಿ ಬಂತಲ್ಲಾ ಕಿರಿಕ್‌ ಪಾರ್ಟಿ ಅದಕ್ಕೇನಾದ್ರು ಕರೀತಾ ಇದ್ದಾರ ಅಂತಾ ಅನ್ಕೊಂಡೆ. ಸ್ವಲ್ಪಮುಂದಕ್ಕೆ ಹೋಗಿ ಮೆಸೇಜ್‌ ನೋಡಾªಗ ಗೊತ್ತಾಯ್ತು ನಮ್ಮ ಪಿಯು ಕಾಲೇಜಿನ ವಾರ್ಷಿಕೋತ್ಸವದ ಬಗ್ಗೆ ಚರ್ಚೆ ನಡೀತಿತ್ತು. ಇನ್ಯಾಕೆ ತಡಾ “ನಾನು ಬರ್ತೀನಿ’ ಅಂತ ಹೆಬ್ಬೆರಳೆತ್ತಿದೆ.

ಆ ಸುಂದರ ಸುದಿನಕ್ಕಾಗಿ ಕಾದಿದ್ದ ದಿನ ಕೊನೆಗೂ ಬಂದೇ ಬಿಡು¤ ನೋಡಿ. ಬರ್ತೀನಿ ಅಂದೋರಲ್ಲಿ ಅರ್ಧದಷ್ಟು ಜನ ಅಲ್ಲಿ ಇರ್ಲಿಲ್ಲ, ಆದ್ರೆ ಟೋಟಲ್‌ ಆಗಿ ನಾವು ಎಂಟು ಜನ ಇದ್ವಿ. ಏನೋ ಒಂದು ಸಂತೋಷ, ಏನೋ ಒಂಥರಾ ಹೆಮ್ಮೆ, ನಮ್ಮ ಹಳೇ ಕಾಲೇಜ್‌ಗೆ ಮತ್ತೆ ಎಂಟ್ರಿ ಕೊಡ್ತಿದ್ದೀವಿ ಅನ್ನೋ ಪುಳಕ. ಬಟ್‌ ಈಗ ಯಾರ್‌ ಭಯಾನೂ ಇಲ್ಲಾ, ಯಾಕಂದ್ರೆ ನಾವೀಗ ಹಳೆ ವಿದ್ಯಾರ್ಥಿಗಳು. ಆಗ ಹೆದರುತ್ತಿದ್ದ ದಿನಗಳು ಮಾತ್ರ ನೆನಪಾಗ್ತಿತ್ತು, ಆವತ್ತು ಕಾಲೇಜ್‌ಗೆ ಲೇಟಾಗಿ ಎಂಟ್ರಿ ಆಗ್ತಿದ್ದವರಲ್ಲಿ ನಾನು ಒಬ್ಬ. “ದಿನಾ ಯಾಕ್‌ ಲೇಟ್‌ ಅನ್ನೋದ್‌ ಕೇಳಿ ಕೇಳಿ ಕೆಲವೊಮ್ಮೆ  ಗೇಟ್‌ ಬಳಿ ಬಂದು ಸೀದಾ ಬೀಚ್‌ ಕಡೆಗೆ ಒಬ್ನೇ ಹೋಗ್ತಿದ್ದೆ.

ಹಾ… ನೆನಪಿನಂಗಳದಿಂದ ಹೊರಬಂದು ಗೇಟ್‌  ಒಳ ಪ್ರವೇಶಿಸಿದೆವು. ಒಂದು ಕಡೆ ಅಬ್ಬರದ ಪ್ರೋಗ್ರಾಮ್‌ ನಡೆಯುತ್ತಿದ್ದರೆ, ನನ್ನ ಕತ್ತುಗಳು ಕಲಿಸಿದ ಗುರುಗಳಿಗಾಗಿ ತಡಕಾಡುತ್ತಿತ್ತು. ಬಿಡುವಿಲ್ಲದ ಮಾತುಗಳು ಗುಂಪಿನಲ್ಲಿ ತಾ ಮುಂದು ಎಂಬಂತೆ ಸ್ಪರ್ಧೆಗಿಳಿದಿದ್ದವು. ಅಲ್ಲಿ ಬಂದವರೆಲ್ಲಾ ಪ್ರೋಗ್ರಾಮ್‌ ನೋಡೊದಕ್ಕಿಂತ ಹೆಚ್ಚಾಗಿ ತಮ್ಮ ತಮ್ಮ ಗೆಳೆಯರ ಜೊತೆ ಹರಟೆ ಹೊಡೆಯೋದರಲ್ಲೇ ಬ್ಯುಸಿಯಾಗಿದ್ದರು. ಈಗೀಗ ಸೆಲ್ಫಿ ತೆಗೆಯೋದು ಗೆಳೆತನದ ಅಚ್ಚೆಯಾಗಿದ್ದರಿಂದ ಸೆಲ್ಫಿ ದೆವ್ವಗಳ ಕಾಟ ಜಾಸ್ತಿನೇ ಇತ್ತು. ಪಕ್ಕದಲ್ಲೇ ಕಾಲೇಜು ಕಾರಿಡಾರ್‌ ನೋಡಿದಾಗ ನಗು ತಡೆಯಲಾಗಲಿಲ್ಲ ಕಾರಣ ಕಾಲೇಜು ದಿನಗಳಲ್ಲಿ ಮಾಡುತ್ತಿದ್ದ ತುಂಟಾಟಗಳು. 

ಪ್ರಾಧ್ಯಾಪಕರು ಏನಾದ್ರು ಬರೆಯಲಿಕ್ಕೆ ಕೊಟ್ಟರೆ ಒಂದೋ ಹುಡ್ಗಿರು ಕಂಪ್ಲೀಟ್‌ ಮಾಡಿದ ಬುಕ್‌ ನಮ್ಮ ಕೈಯಲ್ಲಿರ್ತಿತ್ತು, ಇಲ್ಲಾಂದ್ರೆ ನಮ್ಮ ಒಗ್ಗಟ್ಟು ಪ್ರದರ್ಶನ ಕಾರಿಡಾರ್‌ ನಲ್ಲಿ ತೋರಿಸ್ತಾ ಇರುತಿದ್ವಿ. ಯಾರೂ ಬರೆದು ತರ್ಲಿಲ್ಲಾ ಅನ್ನೋವಾಗ ನಮ್ಮ ಹುಡುಗರ ಗುಂಪನ್ನು ಕ್ಲಾಸಿನಿಂದ ಕಾರಿಡಾರ್‌ಗೆ ವರ್ಗಾವಣೆ  ಮಾಡ್ತಿದ್ರು ನಮ್ಮ ಗುರುವರ್ಯರು! ನಾವುಗಳು ಏನೂ ಆಗದಂತೆ ಹೊರಗಡೆ ಬಂದು ಪುನಃ ಹರಟೆ ಹೊಡೀತಿದ್ವಿ. ಕೊನೆಗೆ ಮೇಡಮ್‌ ಕ್ಲಾಸಿಂದ ಹೊರಗೆ ಬಂದು ಕಾಮನ್‌ ಡೈಲಾಗ್‌ ಹೊಡೆಯೋರು- “ನಾಯಿ ಬಾಲ ಡೊಂಕೇ…’ ಅಬ್ಬಬ್ಟಾ ನೆನಪುಗಳು ಸಾವಿರಾರು ಹೇಳಿಕೊಳ್ತಾ ಹೋದ್ರೆ ಮುಗಿಲೀಕೆ ಇಲ್ಲಾ…

ಇನ್ನೇನು ಪ್ರೋಗ್ರಾಮ್‌ ಮುಗಿಬೇಕು ಅನ್ನೋವಷ್ಟರಲ್ಲಿ ನಾವುಗಳೆಲ್ಲಾ ನಮ್ಮನ್ನು ತಿದ್ದಿ, ತೀಡಿ ಕಲಿಸಿದ ಶಿಕ್ಷಕರನ್ನು ಮಾತಿಗೆಳೆಯಲು ಹೋದೆವು. ಆದರೆ ನನಗಂತೂ ಪರಮಾಶ್ಚರ್ಯ. ಆವತ್ತು ನನ್ನನ್ನು ದುರಗುಟ್ಟಿ ನೋಡುತ್ತಿದ್ದ ಲೆಕ್ಚರರ್‌ ಎಲ್ಲರೂ ನನ್ನನ್ನೂ ಎಷ್ಟು ಆತ್ಮೀಯವಾಗಿ ಮಾತಾಡಿಸಿದ್ರು ಅಂದ್ರೆ, ನಂಬೋಕೆ ಆಗ್ತಾ ಇರ್ಲಿಲ್ಲ. “ನಾನು ಕಲಿಯೋದೆ ವೇ…’ ಅಂದವರೆಲ್ಲ , ನನ್ನನ್ನು ದಡ್ಡ ಎಂದು ಕೀಳಾಗಿ ಕಾಣಿ¤ದ್ದವರೆಲ್ಲ ಇವತ್ತು ಅಷ್ಟೆಲ್ಲಾ ಸ್ಟೂಡೆಂಟ್ಸ… ಎದುರಲ್ಲಿ ನನ್ನ ಬಗ್ಗೆ ಹೆಮ್ಮೆಯ ಮಾತನ್ನು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಅಂದು ನನ್ನ ಆತ್ಮೀಯ ಗೆಳೆಯ ನೀಡಿದ ಅಮೂಲ್ಯ ಸಲಹೆ, ಅದು ನನ್ನ ಜೀವನದ ತಿರುವನ್ನೇ ಬದಲಿಸಿಬಿಟ್ಟಿತು. ಹೌದು ಪಿಯು ನಂತರ ಬಿಕಾಂ ಓದಲು ಸಜ್ಜಾದ ನನಗೆ ಬಿ. ಎ. ಜರ್ನಲಿಸಮ್‌ ಆಯ್ಕೆಮಾಡಿಕೊಳ್ಳಲು ನನ್ನ ಗೆಳೆಯ ಉತ್ತೇಜಿಸಿದ ಪರಿಣಾಮ ಇಂದು ಪ್ರಪಂಚ ನನ್ನನ್ನು ನೋಡುವ ದೃಷ್ಟಿ  ಬದಲಾಗಿದೆ. ಇದಕ್ಕೆಲ್ಲಾ ಕಾರಣ  ಪತ್ರಿಕೋದ್ಯಮ ಹಾಗೂ ನನ್ನ ಗೆಳೆಯನ ಮಾರ್ಗದರ್ಶನ. ಅಲ್ಲಿ ಸೇರಿದ ಹೆಚ್ಚಿನ ಗುರುಗಳೆಲ್ಲ, “ಹೀಗೆ ಬರೀತಾ ಇರು ಇನ್ನು ಎತ್ತರಕ್ಕೆ ಹೋಗು’ ಎಂದು ಪ್ರೋತ್ಸಾಹದ ಮಾತುಗಳನ್ನಾಡಿದಾಗ ಕಣ್ಣಂಚಲ್ಲಿ ಪುಟ್ಟ ಹನಿಯೊಂದು ನನಗರಿವಿಲ್ಲದೇ ಕೆನ್ನೆ ಮುತ್ತಿಕ್ಕುತ್ತಿತ್ತು.

ಈ ಲೇಖನ ಸುಮ್ಮನೆ ಬರೆದದ್ದಲ್ಲ, ಯಾವುದೋ ವಿಷಯ ಆಯ್ಕೆ ಮಾಡಲು ಹೊರಟ ನನಗೆ, “ಅದು ಬೇಡ ಪತ್ರಿಕೋದ್ಯಮವನ್ನೇ ಆಯ್ಕೆ ಮಾಡು’ ಎಂದು ಸೂಚಿಸಿದ ನನ್ನ ಗೆಳೆಯನಿಗೆ ಅನಂತ ಅನಂತ ಧನ್ಯವಾದಗಳನ್ನು ಪುಟ್ಟ ಬರಹದ‌ ಮೂಲಕ ತಿಳಿಸುತ್ತಿದ್ದೇನೆ.

– ವಿಶ್ವಾಸ್‌ ಅಡ್ಯಾರ್‌
ವಿಶ್ವವಿದ್ಯಾನಿಲಯ ಕಾಲೇಜು
ಮಂಗಳೂರು

ಟಾಪ್ ನ್ಯೂಸ್

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

12

Sullia: ಕನಕಮಜಲು; ಅಂಗಡಿ, ಹೊಟೇಲ್‌ನಿಂದ ಕಳವು

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Mallika Sherawat breaks up with French boyfriend

Actress: ಫ್ರೆಂಚ್‌ ಗೆಳೆಯನೊಂದಿಗೆ ಬ್ರೇಕ್‌ಅಪ್‌ ಆಗಿದೆ: ಮಲ್ಲಿಕಾ ಶೆರಾವತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.