ನಿವೃತ್ತಿ ಹೊಂದುತ್ತಿರುವ ಮೇಡಮ್‌ಗೆ…
Team Udayavani, Apr 20, 2018, 6:15 AM IST
Good morning madam… ನಮಸ್ತೆ ಮೇಡಮ್ …
– ಹೀಗೆ ಸಂಧ್ಯಾ ನಂಬಿಯಾರ್ ಅವರೊಂದಿಗೆ ಮಾತು ಪ್ರಾರಂಭಿಸಿದ್ರೆ ಅತ್ತ ಕಡೆಯಿಂದ ಆತ್ಮೀಯತೆಯ ಮಾತು ಮುಗುಳು ನಗೆಯಿಂದ ಕೇಳಿ ಬರುತ್ತದೆ.ಸಂಧ್ಯಾ ನಂಬಿಯಾರ್ ನಮ್ಮ ಕಾಲೇಜಿನ ಎರಡನೆಯ ಮಹಿಳಾ ಪ್ರಿನ್ಸಿಪಾಲ್ ಕಳೆದ 35 ವರ್ಷದಿಂದ ಲೆಕ್ಚcರಿಂಗ್ ವೃತ್ತಿಯನ್ನು ಪ್ರಾಮಾಣಿಕತೆಯಿಂದ ಅನುಸರಿಸಿ ಅನುಭವಿಸಿ ವಿದ್ಯಾರ್ಥಿಗಳಿಗೆ ಜ್ಞಾನದ ಪರಿಪಾಠವನ್ನು ಹಂಚಿ ತಿದ್ದಿತೀಡಿ ಹತ್ತು ಹಲವಾರು ಭವಿಷ್ಯದ ಕನಸಿನಲ್ಲಿ ದಾರಿದೀಪಕ್ಕೆ ನಾಂದಿಯಾದವರು. ಕಾಲೇಜಿನ ಹಳೆವಿದ್ಯಾರ್ಥಿಯಾಗಿರುವ ಸಂಧ್ಯಾ ಮೇಡಮ್ ವಿದ್ಯಾರ್ಥಿ ಜೀವನದಲ್ಲಿ ಕಲಾವಿಭಾಗವನ್ನು ಆಯ್ದುಕೊಂಡು, ಎಲ್‌ಎಲ್‌ಬಿ ಪದವಿಯನ್ನು ಗಿಟ್ಟಿಸಿಕೊಂಡು ಕನಸು ಸಾಕಾರಗೊಳಿಸಿಕೊಂಡವರು.}
ಸಂಧ್ಯಾ ಮೇಡಮ್ ಎಲ್ಲರಿಗೂ ಇಷ್ಟವಾಗೋದು ಅವ್ರ ಸರಳತೆಯಿಂದ. ವಿದ್ಯಾರ್ಥಿಗಳಿಗೆ “”ಇಂಗ್ಲಿಷ್ ಮಾತಾಡಿ. ಕಷ್ಟ ಇಲ್ಲ, ಹಿಂಜರಿಯಬೇಡಿ” ಎನ್ನುತ್ತಾ ಹುರಿದುಂಬಿಸುವ ಅವ್ರ ಗುಣ ಎಲ್ಲರಿಗೂ ಇಷ್ಟ. ಕ್ಲಾಸ್‌ರೂಮ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಯಾವತ್ತೂ ರೇಗಿದವರಲ್ಲ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಲುವಾಗಿ ಸೆಮಿನಾರ್‌ಗಳನ್ನು ಮಾಡಿಸುತ್ತಿದ್ದರು. ಪ್ರತಿ ಒಬ್ಬ ವಿದ್ಯಾರ್ಥಿ ಮುಂದೆ ಬಂದು ಮಾತಾಡ್ಬೇಕು ಅದು ಕನ್ನಡದಲ್ಲಿ ಆಗಲಿ, ಇಂಗ್ಲಿಶ್‌ನಲ್ಲಿ ಆಗಲಿ ಅವರ ನಡುವೆ ಆತ್ಮೀಯತೆ ಆಶಾಕಿರಣವನ್ನು ಮೂಡಿಸಿದವರು. ವಿದ್ಯಾರ್ಥಿಗಳಿಗೆ ಯಾವ ಸಮಯದಲ್ಲಿ ಬೇಕಾದ್ರೂ ಲಭ್ಯವಾಗಿ ಅವರ ವೈಯಕ್ತಿಕ ಸಮಸ್ಯೆಯಲ್ಲೂ ಪರಿಹಾರದ ಒಂದು ರೀತಿಯ ವಿಶ್ವಾಸವನ್ನು ಮೂಡಿಸುತ್ತಿದ್ದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕವನ್ನು ತನ್ನ ವೈಯಕ್ತಿಕ ಖರ್ಚಿನಿಂದ ಭರಿಸಿ, ಅವ್ರ ಓದಿನಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದ ಮಹಾತೆ¾.ಕಾಲೇಜಿನಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ ಅದರಲ್ಲಿ ಅಧ್ಯಕ್ಷರ ಸ್ಥಾನವನ್ನು ಅಲಂಕರಿಸಿ ನಿಂತಿದ್ದೆ.
ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಎರಡು ಹಿತನುಡಿಗಳನ್ನು ಆಡಿ ಕಾಲೇಜಿನ ಆಗು-ಹೋಗುಗಳ ಜೊತೆಗೆ ಸೂಕ್ತ ನಿರ್ಧಾರವನ್ನು ಕೈಗೊಳ್ಳುವುದು ಸಂಧ್ಯಾ ಮ್ಯಾಮ್‌ನಲ್ಲಿ ಎಲ್ಲರೂ ಮೆಚ್ಚುವ ಗುಣ. ಕುಸುಮಾ ಮೇಡಮ್‌ರ ನಂತರ ಕಾಲೇಜಿನ ಆಡಳಿತ ಮಂಡಳಿಯ ಸಾರಥ್ಯದಲ್ಲಿ ಪ್ರಿನ್ಸಿಪಾಲ್ ಹುದ್ದೆಗೆ ಅನುಭವದ ಆಧಾರದಲ್ಲಿ ಮತ್ತು ಕಾಲೇಜಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಸಂಧ್ಯಾ ಮೇಡಮ್‌ರನ್ನು ಆಯ್ಕೆ ಮಾಡಿತ್ತು. ಕಳೆದ ಆರು ತಿಂಗಳ ಅವಧಿಯಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಹುದ್ದೆಯನ್ನು ನಿರ್ವಹಿಸಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡು ಎಲ್ಲರ ಮೆಚ್ಚುಗೆಯನ್ನು ಗಳಿಸಿಕೊಂಡು ಇದೀಗ ನಿವೃತ್ತಿಯ ಹೊಸ್ತಿಲಲ್ಲಿ ನಿಂತಿದ್ದೆ.ಇತ್ತೀಚೆಗಷ್ಟೇ ಸಂಧ್ಯಾ ಮೇಡಮ್‌ನ ಫೇರ್‌ವೆಲ್ ಕಾರ್ಯಕ್ರಮ ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮುಖ್ಯಸ್ಥರ ನೇತೃತ್ವದಲ್ಲಿ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು. ತಾವು ಕಲಿಸಿದ ವಿದ್ಯಾರ್ಥಿಗಳ, ಹಿರಿಯರ ಮುಂಭಾಗದಲ್ಲಿ ತನ್ನ ಅನುಭವವನ್ನು ಹಂಚಿಕೊಳ್ಳುವಾಗ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿತು. ತಮ್ಮ ನೆಚ್ಚಿನ ಮೇಡಮ್ ನಿವೃತ್ತಿಯಾಗೋದನ್ನು ಒಪ್ಪದ ಕೆಲ ವಿದ್ಯಾರ್ಥಿಗಳು ಕೂಡ ಕಣ್ಣಂಚು ಒದ್ದೆಮಾಡಿಕೊಂಡರು.
ಅವರ ನಿವೃತ್ತಿ ಜೀವನ ಸುಖ-ಶಾಂತಿಯಿಂದ ಕೊಡಿರಲಿ.
ಮಿಸ್ ಯೂ ಮೇಡಮ್.
ಸುಹಾನ್
ಪತ್ರಿಕೋದ್ಯಮ ವಿಭಾಗ
ಎಂ.ಜಿ.ಎಂ ಕಾಲೇಜು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.