ಮರೆಯಲಾಗದ ಗುರುಗಳು
Team Udayavani, Jun 21, 2019, 5:00 AM IST
ಸಾಂದರ್ಭಿಕ ಚಿತ್ರ
ಆಗುಂಬೆ’ ಇದುವೇ ಪಶ್ಚಿಮಘಟ್ಟದ ಸೌಂದರ್ಯದ “ಗೊಂಬೆ’. ನಾನೇ ಎಲ್ಲ, ನನ್ನಿಂದಲೇ ಎಲ್ಲ ಎಂದು ಅಹಂಕಾರದಿಂದ ಬೀಗು ತ್ತಿರುವ ಮನುಷ್ಯನೆಡೆಗೆ ಕಿರುನಗೆ ಬೀರಿ, ಮರೆಮಾಚುವ ಸೂರ್ಯ. ಅಬ್ಟಾ ! ಇಂತಹ ಮನಮೋಹಕವಾದ ದೃಶ್ಯವನ್ನು ಕಣ್ತುಂಬಿಕೊಂಡು ಸಾಗಿಬರುತ್ತಿರುವಾಗ ಸಿಗುವ ಊರೇ “ಹೆಬ್ಬೇರಿ’.
ಹೆಬ್ಬೇರಿಯ ಕೇಂದ್ರ ಎಲ್ಲರೂ ಕೈ ಎತ್ತಿ ಮುಗಿಯುವ ವಿದ್ಯಾ ದೇಗುಲ, ಸರ್ವರ ಅಚ್ಚುಮೆಚ್ಚಿನ ಮನೆಮಾತಾಗಿರುವ ಶಾಲೆ. ಹಲವಾರು ದಶಕಗಳ ಇತಿಹಾಸವಿರುವ, ಇತಿಹಾಸದುದ್ದಕ್ಕೂ ಸಾಧನೆಯ ಶಿಖರವನ್ನೇರಿದ ಸಂಸ್ಥೆ. ಅಂದ ಹಾಗೆ, ನಮ್ಮ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ, ಬೆಳವಣಿಗೆಗೆ ಕಾರಣ ನನ್ನೆಲ್ಲ ಪೂಜ್ಯನೀಯ ಗುರುಗಳು. ನನ್ನ ಗುರುಗಳು ಪ್ರತಿವಿದ್ಯಾರ್ಥಿಗಳನ್ನು ಸಮಾನ ದೃಷ್ಟಿಯಿಂದ ನೋಡುವವರು. ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ, ಕ್ರೀಡೆ, ವಿಜ್ಞಾನ ಹೀಗೆ ಪ್ರತಿಕ್ಷೇತ್ರದಲ್ಲಿಯೂ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೂ ಕೂಡ ತೀವ್ರವಾದ ಪೈಪೋಟಿಯನ್ನು ನೀಡುವಂತೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವವರು ನನ್ನೆಲ್ಲ ಗುರುಗಳು.
ಯಾವುದೇ ಒಂದು ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿ ಹಮ್ಮಿಕೊಂಡರೆ, ಆ ಪ್ರತಿ ಕಾರ್ಯಕ್ರಮಕ್ಕೂ ಅನಂತಪದ್ಮನಾಭನ ಉತ್ಸವಕ್ಕೆ ಜನಸ್ತೋಮ ಹರಿದು ಬರುವಂತೆ ಜನಸಾಗರವೇ ಸೇರುತ್ತಿತ್ತು. ಶಾಲಾ ವಾರ್ಷಿಕೋತ್ಸವದ ವಿಷಯಕ್ಕೆ ಬಂದರೆ, ಮನೆಯಲ್ಲಿ ಮದುವೆ-ಮುಂಜಿಗಳಲ್ಲಿ ಸಂತೋಷದ ವಾತಾವರಣವಿದ್ದಂತೆ, ನಮ್ಮ ಶಾಲೆಯಲ್ಲಿ ವಾರ್ಷಿಕೋತ್ಸವವೆಂದರೆ ಪ್ರತಿಯೊಬ್ಬರಿಗೂ ಮನೆಯ ಕಾರ್ಯಕ್ರಮವೇ. ಶಿಕ್ಷಕರೊಂದಿಗೆ ಕಾರ್ಯಕ್ರಮಗಳಿಗೆ ತಯಾರಿ ನಡೆಸುವ ಭರದಲ್ಲಿ, ಕೆಲವು ಪಾಠದ ಅವಧಿ ತಪ್ಪಿತಲ್ಲ ಎಂದು ನನ್ನಂಥ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಸಂತೋಷ. ಅಂತೂ ಭರದಲ್ಲಿ ಸಿದ್ಧತೆ ನಡೆಯುತ್ತ ವಾರ್ಷಿಕೋತ್ಸವದ ದಿನ ಹತ್ತಿರ ಬಂದಂತೆ ಸಂತೋಷದ ನಡುವೆ ಎಲ್ಲೋ ಒಂದು ಕಡೆ, ಛೇ… ಇಷ್ಟುಬೇಗ ಮುಗಿಯಿತಲ್ಲ ಎನ್ನುವ ಬೇಸರ. ಅದನ್ನು ಮರೆಮಾಚಲು ಶಾಲಾ ಪ್ರವಾಸದ ದಿನವೂ ನಿಗದಿ. ನನ್ನ ನೆಚ್ಚಿನ ಗುರುಗಳೊಂದಿಗೆ ಪಾಲ್ಗೊಂಡ ಬಳ್ಳಾರಿ ಪ್ರವಾಸ ಜೀವನದಲ್ಲಿ ಮರೆಯಲಾಗದ ಅವಿಸ್ಮರಣೀಯ ನೆನಪು.
ಕೆಲವು ಶಿಕ್ಷಕರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಯ ಜೊತೆಗೆ “ಅತ್ಯುತ್ತಮ ಶಿಕ್ಷಕ’ ರೆಂಬ ಬಿರುದನ್ನು ಸಹ ಪಡೆದವರು. ಕೆಲವರು ಭಾಷಣ, ಜ್ಞಾನ-ವಿಜ್ಞಾನ, ಕಲೆ ಸಾಹಿತ್ಯದಲ್ಲಿ ಅದ್ವಿತೀಯರು. ಇನ್ನು ಕೆಲವರು ಯಕ್ಷಗಾನ ಪ್ರಸಂಗವನ್ನೇ ರಚಿಸಿದ ಅನುಭವಿಗಳು. ಅಷ್ಟೇ ಅಲ್ಲದೆ, ಬೇರೆ ಬೇರೆ ಸಂಘಸಂಸ್ಥೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಊರಿನ ಜನರಿಗೆಲ್ಲ ಚಿರಪರಿಚಿತರು. ಒಟ್ಟಾರೆ ಹೇಳುವುದಾದರೆ, ಎಲ್ಲೋ ಬಿದ್ದಿದ್ದ ಕಲ್ಲನ್ನು ಕೆತ್ತಿ ಸುಂದರ ಶಿಲೆಯನ್ನಾಗಿ ಪರಿವರ್ತಿಸುವಲ್ಲಿ ಅವಿರತ ಪ್ರಯತ್ನವನ್ನು ಮಾಡುತ್ತಿರುವ ಶಿಲ್ಪಿಗಳು ಈ ಗುರುಗಳು.
ಅಕ್ಷಿತಾ ಕೆ. ಶೆಟ್ಟಿ
ಪ್ರಥಮ ಪಿಯುಸಿ, ಸ.ಪ.ಪೂ. ಕಾಲೇಜು, ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.