ಯುನಿಟಿ ಇನ್ ಯೂನಿಫಾರ್ಮ್
Team Udayavani, Oct 18, 2019, 5:50 AM IST
ಅದು ಜುಲೈ ತಿಂಗಳ ಕೊನೆಯ ವಾರ. ಜೀವನದ ಹೊಸ ಮೆಟ್ಟಿಲು ಏರುತ್ತಿರುವ ಸಂತೋಷ ಒಂದೆಡೆಯಾದರೆ, ವಿದ್ಯಾರ್ಥಿ ಜೀವನದ ಕೊನೆಯ ಹಂತ ಎನ್ನುವ ಬೇಸರ ಇನ್ನೊಂದೆಡೆ. ಅದು ಏನೇ ಇರಲಿ, ನನ್ನ ಮಟ್ಟಿಗೆ ಕಾಲೇಜು ಮಾತ್ರ ಹಳೆಯದೆ. ಬಿಲ್ಡಿಂಗ್ ಬೇರೆ. ಕ್ಲಾಸ್‌ರೂಮ್ ಬೇರೆ, ಅಧ್ಯಾಪಕರು ಮತ್ತು ಸ್ನೇಹಿತರು ಹೊಸಬರೇ. ಸೀನಿಯರ್ಸ್ ಆಗಿ ಮೆರೆದಿದ್ದ ನಾವು ಮತ್ತೂಮ್ಮೆ ಜೂನಿಯರ್‌ಗಳಾಗುವ ಬೇಜಾರು. ಅದು ನನ್ನ ಸ್ನಾತಕೋತ್ತರ ಪದವಿಯ ಮೊದಲ ದಿನ. ಮೊದಲ ದಿನವೇನೋ ಓರಿಯೆಂಟೇಶನ್ ಕೊಡುವುದರಲ್ಲಿಯೇ ಕಳೆದು ಹೋಯಿತು. ನಂತರ ದಿನಗಳು ಉರುಳುತ್ತಿದ್ದುದು ಗೊತ್ತೇ ಆಗಲಿಲ್ಲ. ಎಲ್ಲ ವಿಭಾಗಗಳು ಸಂಜೆ ನಾಲ್ಕಕ್ಕೆ ಮುಚ್ಚಿದರೆ ನಮ್ಮ ವಿಭಾಗ ಮಾತ್ರ ರಾತ್ರಿ ಎಂಟಾದರೂ ಮುಚ್ಚುತ್ತಲೇ ಇರಲಿಲ್ಲ. ಕಾಲೇಜು ಶುರುವಾಗಿ ಒಂದು ತಿಂಗಳಾದರೂ ನಮಗೆ ಒಂದೇ ಚಿಂತೆ. ಯೂನಿಫಾರ್ಮ್ ಯಾವಾಗ ಸಿಗುತ್ತದೆ ಎಂಬುದು.
ಹೀಗೆ ಕಾಲೇಜು ಶುರುವಾಗಿ ಒಂದೂವರೆ ತಿಂಗಳು ಕಳೆದರೂ ಯೂನಿಫಾರ್ಮ್ ಬಗ್ಗೆ ಯಾರೊಬ್ಬ ಅಧ್ಯಾಪಕರು ಮಾತನಾಡುತ್ತಿರಲಿಲ್ಲ. ಬೇರೆ ಬೇರೆ ವಿಷಯಗಳನ್ನು ಕಲಿಯುತ್ತಿದ್ದ ನನ್ನ ಗೆಳತಿಯರೆಲ್ಲ ಅದಾಗಲೇ ಯುನಿಫಾರ್ಮ್ ಹಾಕಿಕೊಂಡು ಮೆರೆಯಲು ಪ್ರಾರಂಭಿಸಿದ್ದರು. ಕೊನೆಗೂ ಒಂದು ದಿನ ನಮ್ಮ ಕೂಗು ಪ್ರಾಧ್ಯಾಪಕರಿಗೆ ಅರ್ಥವಾಗಿ ಸ್ಯಾಂಪಲ್ ಪೀಸ್‌ನ ಒಂದು ಪುಸ್ತಕವನ್ನೇ ತಂದು ಮುಂದಿಟ್ಟರು. ಅಷ್ಟು ದಿನ ಯುನಿಫಾರ್ಮ್ ಬಂದಿಲ್ಲ ಎನ್ನುತ್ತಿದ್ದ ನಮಗೆ ಯಾವ ಕಲರ್ ಆಯ್ಕೆ ಮಾಡುವುದು ಅನ್ನೋ ಚಿಂತೆ. ಅರ್ಧ ಗಂಟೆಯಲ್ಲಿ ಅದನ್ನು ಹೇಳಬೇಕಿತ್ತು. ನಮ್ಮ ತರಗತಿಯಲ್ಲಿ ಇದ್ದ ಇಪ್ಪತ್ತು ಜನ ಒಂದು ವೃತ್ತ ಮಾಡಿ ಕುಳಿತು ಪ್ಯಾನೆಲ್ ಡಿಸ್ಕಶನ್ ಶುರು ಮಾಡಿದೆವು. ಪ್ರತಿಯೊಬ್ಬರದ್ದು ವಿಭಿನ್ನ ಆಲೋಚನೆ. ಯಾವುದೇ ಆಯ್ಕೆ ಮಾಡಿಕೊಂಡರೂ ಇನ್ನೊಬ್ಬರ ಆಕ್ಷೇಪ. ಅದು ಬಿಟ್ಟು ಇದು ಬಿಟ್ಟು ಅದು- ಅಂತ ಯೋಚನೆ ಮಾಡಿ ತಲೆಕೆಡಿಸಿಕೊಂಡು ಕಡೆಗೂ ಒಂದು ಕಲರ್ ಅನ್ನು ಆಯ್ಕೆ ಮಾಡಿ ಅಧ್ಯಾಪಕರ ಮುಂದೆ ಇಟ್ಟೆವು. ನಮ್ಮ ದುರದೃಷ್ಪವೇನೋ ! ಅಧ್ಯಾಪಕರು “ಆ ಕಲರ್ ಬೇಡ’ ಎಂದರು. ಸರ್ ಹೇಳಿದ ಕಲರ್ ನಮಗೆಲ್ಲ ಇಷ್ಟವಾಗದಿದ್ದರೂ ಒಪಿಕೊಳ್ಳಲೇಬೇಕಾಯಿತು. ಒಂದು ದಿನ ಆ ಯುನಿಫಾರ್ಮ್ ಕೈಗೂ ಸೇರಿತು.
ಯೂನಿಫಾರ್ಮ್ ಸಿಕ್ಕಿತು ಎಂದು ಖುಷಿ ಪಡಬೇಕೋ ಅಥವಾ ಕಲರ್ ನೋಡಿ ಬೇಸರ ಪಡಬೇಕೋ ಎಂದು ತಿಳಿಯದೆ ಸಪ್ಪಗಾದೆವು. ಬಸ್ಸಿನ ಕಂಡೆಕ್ಟರ್ ತೊಡುವ ಬಣ್ಣದ ಆ ಯೂನಿಫಾರ್ಮ್ನ್ನು ನಾವು ನಮಗೇ ಬಸ್ ಕಂಡಕ್ಟರ್ ಬಂದರು ಎಂದು ತಮಾಷೆ ಮಾಡಿದ್ದೂ ಇದೆ.
ಕೊನೆಗೂ ಯುನಿಫಾರ್ಮ್ ಧರಿಸಿ ಕಾಲೇಜಿಗೆ ಬಂದಾಗ ಬಗೆ ಬಗೆಯ ಕಾಮೆಂಟ್‌ಗಳು ಬರಬಹುದೆಂದು ಊಹಿಸಿದ್ದ ನಮಗೆ ಎಲ್ಲರಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಆಶ್ಚರ್ಯದ ಜೊತೆ ಸಂತೋಷ ಕೂಡ ಆಯಿತು.
ಕೀರ್ತನಾ. ವಿ. ಭಟ್
ಪ್ರಥಮ ಬಿ. ಎ. (ಪತ್ರಿಕೋದ್ಯಮ)
ಆಳ್ವಾಸ್ ಕಾಲೇಜು, ಮೂಡಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.