ನಮ್ಮದೊಂದು ಕ್ಯಾಂಪಸ್‌ ಟಾಕ್‌


Team Udayavani, Jun 29, 2018, 6:00 AM IST

x-13.jpg

ಮಾತಿಗೆ, ಅಭಿವ್ಯಕ್ತಿಗೆ ತುಡಿಯುವ ಮನಸ್ಸು ಬಹಳ ಇರುತ್ತದೆ. ವ್ಯಕ್ತಪಡಿಸಬೇಕಾದದ್ದನ್ನು ವ್ಯಕ್ತಪಡಿಸದೆ ಹುದುಗಿಡಬೇಕಾದ ವಾತಾವರಣ ನಮ್ಮ ಸುತ್ತಮುತ್ತ ದೊಡ್ಡಮಟ್ಟದಲ್ಲಿ ಹರಡಿಕೊಂಡಿದೆ. ಇವತ್ತಿನ ರಾಜಕೀಯ ಸನ್ನಿವೇಶ, ಸಾಮಾಜಿಕ ಪರಿಸ್ಥಿತಿ ನಮ್ಮನ್ನು ತಕ್ಷಣವೇ ಪ್ರತಿಕ್ರಿಯಿಸುವಂತೆ ಮಾಡುತ್ತದೆ. ಪ್ರತಿಕ್ರಿಯಿಸದೇ ಇದ್ದರೆ ಒಬ್ಬ ಪ್ರಜ್ಞಾವಂತರಾಗಿದ್ದುಕೊಂಡು ನಾವು ಅಸಹಾಯಕರಾದಂತೆ. ಒಂದರ್ಥದಲ್ಲಿ ಪ್ರತಿಕ್ರಿಯಿಸಿಯೂ ನಾವು ಅಸಹಾಯಕರೇ ಆಗಿರುತ್ತೇವೆ. ಆದರೂ ನಮ್ಮ ಇರುವಿಕೆಯನ್ನು ತಿಳಿಸಲು ಇಂತಹ ಸ್ಪಂದನದ ಅಗತ್ಯವಿದೆ.

ಮಿತ್ರ ಚರಣ್‌ ಜೊತೆಗೆ ಕಾಲೇಜು ಕ್ಯಾಂಪಸ್‌ನಲ್ಲಿ ಅವನ ಪರಿಚಯವಾದಾಗಿನಿಂದ ನಮ್ಮಿಬ್ಬರ ನಡುವೆ ಅಭಿವ್ಯಕ್ತಿಯ ಕುರಿತು, ಕ್ಯಾಂಪಸ್‌ನ ಜೀವಂತಿಕೆಯ ಕುರಿತು ಗಂಭೀರವಾದ ಚರ್ಚೆ ನಡೆಯುತ್ತಿತ್ತು. ಚರಣ್‌ ನನ್ನ ಜ್ಯೂನಿಯರ್‌ ಮಾತ್ರವಲ್ಲದೆ ಹಾಸ್ಟೆಲ್‌ನಲ್ಲಿ ರೂಮ್‌ ಮೇಟ್‌ ಕೂಡಾ ಆಗಿದ್ದರಿಂದ ನಮಗೆ ಬಹಳಷ್ಟು ವಿಚಾರಗಳನ್ನು ಹಂಚಿಕೊಳ್ಳುವುದಕ್ಕೆ, ಚರ್ಚಿಸುವುದಕ್ಕೆ ಅನುಕೂಲವಾಗಿತ್ತು. ಕ್ಯಾಂಪಸ್‌ ಗೆ ಬಂದು ಎರಡು ವರ್ಷವಾದರೂ ಇಲ್ಲಿನ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಕಲೆ-ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಲ್ಲದೆ ನಿರ್ಜೀವ ಭಾವ ನನ್ನೊಳಗೆ ಸೃಷ್ಟಿಯಾಗಿದ್ದಲ್ಲದೆ ಈ ಸಂಗತಿ ಆತನಿಗೂ ಸ್ಪಷ್ಟವಾಗಿ ಅನುಭವಕ್ಕೆ ಬಂದಿತ್ತು. ಕಾಲೇಜು  ಅವಧಿಯ ಕೊನೆಯ ದಿನಗಳ ಸಂದರ್ಭದಲ್ಲಿ ನಮ್ಮಲ್ಲಿ ಹುಟ್ಟಿಕೊಂಡ ಹೊಸ ಕನಸೇ ಈ ಕ್ಯಾಂಪಸ್‌ ಟಾಕ್‌.

ನಮ್ಮ ಚರ್ಚೆ ಮತ್ತಷ್ಟು ಗಂಭೀರವಾಗಿ ನಮ್ಮ ಯೋಚನೆಗಳನ್ನು ಕಾರ್ಯರೂಪಕ್ಕಿಳಿಸುವ ಪ್ರಯತ್ನ ನಮ್ಮೊಳಗೇ ಸೃಷ್ಟಿಯಾಗುತ್ತಿತ್ತು. ಅಂದು ರಾತ್ರಿ ಎಂದಿನಂತೆ ಹಾಸ್ಟೆಲ್‌ನಿಂದ ಕ್ಯಾಂಪಸ್‌ ಕಡೆ ಮಾತನಾಡುತ್ತಾ ಹೆಜ್ಜೆ ಹಾಕಿದ್ದೆವು. ಹೀಗೊಂದು ಪ್ರಯತ್ನ ಮಾಡಿಯೇ ಬಿಡಬೇಕು ಎಂಬ ಹಠ, ವಿಶೇಷ ಏನಿಲ್ಲ, ಕೊನೆಯ ಪಕ್ಷ ನಾವೇ ಕೆಲವು ಗೆಳೆಯರು ಸಂಜೆ ಒಂದೆಡೆ ಸೇರಿ ಚಹಾ ಕುಡ್ಕೊಂಡು ಹೀಗೇ ಸುಮ್ಮನೆ ಚರ್ಚೆ ಮಾಡೋಣ ಎಂದಾಗಿತ್ತು ನಮ್ಮ ಯೋಚನೆ. ಅತೀವ ಉತ್ಸಾಹದೊಂದಿಗೆ ಕ್ಯಾಂಪಸ್‌ ನಲ್ಲಿ ದೊರಕುವ ಬಿಟ್ಟಿ  ವೈಫೈ ಬಳಸಿಕೊಂಡು ಮೊದಲು ಒಂದು ಹೊಸ ವಾಟ್ಸಾಪ್‌ ಗ್ರೂಪ್‌ ಕ್ರಿಯೇಟ್‌ ಮಾಡಿದೆವು. ನಮಗೆ ಬೆಂಬಲ ಸೂಚಿಸಬಹುದು ಮತ್ತು ನಮ್ಮೊಂದಿಗೆ ಕೈಜೋಡಿಸಬಲ್ಲರು ಎಂಬ ಭರವಸೆಯ ಸಾಹಿತ್ಯದ ಗೆಳೆಯರನ್ನು ಗ್ರೂಪಿಗೆ ಸೇರಿಸಿ ಅವರಿಗೂ ಸಂಗತಿ ತಿಳಿಸಿದೆವು. ಅವರೆಲ್ಲರೂ ಎಷ್ಟೊಂದು ಉತ್ಸಾಹ ಹೊಂದಿದ್ದರೆಂದರೆ ಉತ್ತಮ ರೀತಿಯಲ್ಲಿ ಸ್ಪಂದಿಸಿದರು, ಖುಷಿಗೊಂಡರು. ನಮಗೋ ಕಣ್ಣಮುಂದೆ ಎಂತೆಂಥ ಕನಸು. ಅದುವರೆಗೂ ಈ ಗ್ರೂಪಿಗೆ ನಾಮಕರಣ ಆಗಿರಲಿಲ್ಲ. ಹೆಸರು ಸೂಚಿಸಿ ಎಂದು ಗ್ರೂಪಿನಲ್ಲಿ ಕೇಳಿಕೊಂಡಾಗ ಉತ್ಸಾಹಿ ಸ್ನೇಹಿತ ಮುಸ್ತಾಫಾ ಕಳಿಸಿದ ಹಲವು ಹೆಸರುಗಳಲ್ಲಿ ಬಹಳ ಸೂಕ್ತವೆನಿಸಿದ್ದು “ಕ್ಯಾಂಪಸ್‌ ಟಾಕ್‌’. ಅದನ್ನೇ ಗಟ್ಟಿಯಾಗಿ ಇಟ್ಟುಕೊಂಡು ಮರುದಿನ ಸಂಜೆ ಪೂರ್ವನಿಗದಿಯಂತೆ ನಾವೆಲ್ಲ ಕ್ಯಾಂಪಸ್‌ನ ಕ್ಯಾಂಟೀನ್‌ ಮುಂದಿನ ಆವರಣದಲ್ಲಿ ಒಂದಾದೆವು. ಚಹಾ ಜೊತೆ ಮಾತು! ಒಂದು ಪುಟ್ಟ ಮೀಟಿಂಗ್‌ ಮಾಡಿದೆವು. ಈ ತಂಡವನ್ನಿಟ್ಟುಕೊಂಡು ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಿದೆವು. ವಿಶೇಷವೆಂದರೆ, ಅದೇ ಮೊದಲ ದಿನವೇ ಹಲವು ಸಾಹಿತ್ಯದ ವಿಷಯಗಳನ್ನೊಳಗೊಂಡು ಗಂಭೀರ, ಆರೋಗ್ಯಕರ ಚರ್ಚೆ ನಡೆದಿತ್ತು. ಬುದ್ಧ ಬಸವ ಗಾಂಧಿ ಅಂಬೇಡ್ಕರ್‌ ಸುಳಿದಾಡಿ ಹೋಗಿದ್ದರು. ವಾಸ್ತವದಲ್ಲಿ ಮೊದಲಿನಿಂದಲೂ ಚರಣ್‌, ಸಂದೀಪ್‌ ಮತ್ತು ನಾನು ಪ್ರತಿದಿನ ಸಂಜೆ ಅಲ್ಲಿ ಚರ್ಚೆ ಮಾಡುತ್ತ ಮಾತನಾಡುತ್ತ¤ ಇರುತ್ತಿದ್ದೆವು.

ಮರುದಿನ ನಾನು ಚರಣ್‌ ಸೇರಿ ಒಂದು ಲೋಗೋ ಮತ್ತು ಬೋರ್ಡ್‌ ಡಿಸೈನ್‌ ಸಿದ್ದಪಡಿಸಿದೆವು. ಅದು ಮಾರ್ಚ್‌ ತಿಂಗಳಾಗಿದ್ದರಿಂದ ತಿಂಗಳ ಹನ್ನರಡನೆಯ ತಾರೀಕಿನಂದು ಮಹಿಳಾ ದಿನಾಚರಣೆಯ ಅಂಗವಾಗಿ (ಮಾ. 8ರಂದು ವಿ.ವಿ. ವತಿಯಿಂದ ಕಾರ್ಯಕ್ರಮ ನಡೆಯುವುದರಿಂದ ಅದರ ನಡುವೆ ನಮ್ಮ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ) ತಾಯಿಯ ಕುರಿತ ಕವನಗಳ ಚರ್ಚೆ ಮತ್ತು ಸ್ವರಚಿತ ಕವನಗಳ ವಾಚನ ಎಂದು ವಿಷಯ ಇಟ್ಕೊಂಡು ಅದಕ್ಕೊಂದು ಪೋಸ್ಟರ್‌ ಸಿದ್ಧಪಡಿಸಿ ವಾಟ್ಸಾಪ್‌ ಫೇಸ್‌ಬುಕ್‌ಗಳಲ್ಲಿ ಹರಿಬಿಟ್ಟೆವು. ಫೇಸ್‌ಬುಕ್‌ನಲ್ಲಿ ಹಲವರು, “ನಮಗೂ ಭಾಗವಹಿಸಬಹುದೆ?’ ಎಂದು ಕೇಳಿದ್ದರು. ಅವಧಿ ಅಂತರ್ಜಾಲ ಪತ್ರಿಕೆಯಲ್ಲೂ ಇದು ಪ್ರಕಟಗೊಂಡು ರಾಜ್ಯವನ್ನೇ ತಲುಪಿತು. ಕೊನೆಗೂ ನಾವೆಲ್ಲ ಕಾತರದಿಂದ ಕಾಯುತ್ತಿದ್ದ ಆ ದಿನ ಬಂದಿತು. ತರಗತಿಗಳ ನಡುವೆ ಇದಕ್ಕಾಗಿ ತಯಾರಿ ಕಷ್ಟವೆನಿಸಿತ್ತಾದರೂ ಅಡ್ಜಸ್ಟುಮೆಂಟಿನ ಹೆಸರು ಹೇಳಿಕೊಂಡು ಮಾಡುತ್ತಿ¨ªೆವು. ಸಂಜೆ ಕಾರ್ಯಕ್ರಮ. ಮಧ್ಯಾಹ್ನ ಆದರೂ ಬೋರ್ಡ್‌ ಸಿದ್ಧವಾಗಿಲ್ಲ. ದೊಡ್ಡಮಟ್ಟದ ಪ್ರಿಂಟ್‌ಗೆ ನಮ್ಮಲ್ಲಿ ಹಣವಿಲ್ಲ. ನಾವು ತಯಾರಿಸಿದ್ದ ಡಿಸೈನನ್ನು ಎ-4 ಶೀಟಿನಲ್ಲಿ ಪ್ರಿಂಟ್‌ ಮಾಡಿಸಿದೆವು. ಆದರೆ, ಅದನ್ನು ಗಟ್ಟಿಯಾಗಿ ನಿಲ್ಲಿಸಲು ಅದಕ್ಕೊಂದು ಆಧಾರ ಸಿಗದೇ ಹೋದಾಗ ಯಾವುದೋ ಒಂದು ಬರ್ತ್‌ಡೇ ಕೇಕಿನ ರಟ್ಟಿನ ಪೆಟ್ಟಿಗೆಯನ್ನು ಕತ್ತರಿಸಿ ಅದರ ಮೇಲೆ ಅಂಟಿಸಿ ಬಹಳ ಚೆಂದವಾಗಿ ಪುಟ್ಟದಾದ ಬೋರ್ಡ್‌ ರೆಡಿ ಮಾಡಿದೆವು. ಹೆಚ್ಚೇನಿಲ್ಲ, ನಾಲ್ಕೈದು ಜನ ನಾವು ಈ ಬೋರ್ಡ್‌ ಹಿಡ್ಕೊಂಡು ಒಂಚೂರು ಸಂಕೋಚ ಒಂದಿಷ್ಟು ಆರಂಭದ ಭಯ, ಬೆಟ್ಟದಷ್ಟು ಉತ್ಸಾಹ ಇಟ್ಟುಕೊಂಡು ನಡೆದೆವು. ಕ್ಯಾಂಟೀನ್‌ನ ಮುಂದಿನ ಭಾಗ ನಮ್ಮ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದ ಜಾಗ. ಅಲ್ಲಿ ನಮಗಾಗಿ ಮುಸ್ತಾಫಾ ಅರ್ಧ ಗಂಟೆ ಮೊದಲೇ ಬಂದು ಕೂತಾಗಿತ್ತು. ಎಷ್ಟು ಜನ ಸೇರಬಹುದೆಂಬ ಕುತೂಹಲ ಕಣ್ಣಿಗೆ. ಕದ್ದು ಕದ್ದು ಅತ್ತಿತ್ತ ನೋಡುತ್ತಲೇ ಇದ್ದೆವು. ಸ್ವಲ್ಪ ಹೊತ್ತಿನಲ್ಲೇ ಕಾರ್ಯಕ್ರಮ ಶುರುಮಾಡಿದೆವು. ಗೆಳತಿ ಶ್ವೇತಾಕುಮಾರಿ, “ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ…’ ಎಂಬ ಧ್ವನಿಪೂರ್ಣ ಹಾಡಿನ ಮೂಲಕ ಕಾರ್ಯಕ್ರಮದ ಆರಂಭಕ್ಕೆ ಜೀವ ತುಂಬಿದಳು. ಒಬ್ಬೊಬ್ಬರಾಗಿ ಕ್ಯಾಂಪಸ್‌ನ ಬೇರೆ ಬೇರೆ ವಿಭಾಗದ ವಿದ್ಯಾರ್ಥಿಗಳು ಬಂದು ನಮ್ಮನ್ನು ಸೇರತೊಡಗಿದರು. ಕೆಲವರು ಕ್ಲಾಸು ಮುಗಿಸಿ ಮನೆಗೆ ಹೊರಟಿದ್ದವರೂ ಬಂದು ಕೂತರು. ಫೇಸ್‌ಬುಕ್‌ ಗೆಳೆಯರೊಬ್ಬರೂ ಬಂದಿದ್ದರು. ಲಂಕೇಶ್‌, ಆರಿಫ್ರಾಜಾರ ಕವಿತೆಗಳು ಚರ್ಚೆಯ ಕೇಂದ್ರ ವಸ್ತು. ಕೆಲವರು ತಾಯಿಯ ಕುರಿತು ಅನಿಸಿಕೆ, ಇನ್ನು ಕೆಲವರು ಸ್ವರಚಿತ ಕವನ, ಮತ್ತೆ ಕೆಲವರು ಹೀಗೇ ಮಾತು, ಅಭಿಪ್ರಾಯ ಎಲ್ಲವೂ ವ್ಯಕ್ತವಾದವು. ಬಿಸಿಬಿಸಿ ಚಹಾ ಹೀರುತ್ತ ಸಂತೋಷದಿಂದಲೇ ಚರ್ಚಿಸುತ್ತಿದ್ದೆವು. ಚರ್ಚೆಯ ಆಯಾಮ ಒಂದು ಹಂತದಲ್ಲಿ ಬದಲಾಗಿತ್ತು.  ಕಾರ್ಯಕ್ರಮದ ಅರ್ಧಕ್ಕೆ ನಮ್ಮ ಮೇಲೆ ಪ್ರೀತಿಯಿಟ್ಟು ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿ. ಎಲ್ಲ ಧರ್ಮ ಬಂದಿದ್ದರು. ಅವರ ಜೊತೆಗೆ ಬೇರೆ ಕಾರ್ಯನಿಮಿತ್ತ ಕ್ಯಾಂಪಸ್‌ಗೆ ಬಂದಿದ್ದ ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್‌ ಕೂಡ ಬಂದಿದ್ದರು. ನಮಗೆ ಮತ್ತಷ್ಟು ಬಲ ಬಂದಂತಾಯ್ತು. ಅವರಿಬ್ಬರೂ ವ್ಯಕ್ತಪಡಿಸಿದ ಪ್ರಶಂಸೆ ನಮಗೆ ಸ್ಫೂರ್ತಿಯಾದವು. ಧರ್ಮ ಹೇಳಿದರು : “ಕಳೆದ ಇಪ್ಪತ್ತೆಂಟು ವರ್ಷಗಳಲ್ಲಿ ಇಂತಹ ಕಾರ್ಯಕ್ರಮ ಇದೇ ಮೊದಲು ಎನ್ನುವಾಗ ಖುಷಿಪಡದಿರಲು ಹೇಗೆ ತಾನೆ ಸಾಧ್ಯ ?’ ನಾಲ್ಕು ಮಂದಿ ಕುಳಿತು ಮಾತಾಡೋಣವೆಂದು ಶುರುವಿಟ್ಟ ಮೊತ್ತಮೊದಲ ಕಾರ್ಯಕ್ರಮಕ್ಕೆ ಸೇರಿದ ಒಟ್ಟು ಮಂದಿಯ ಸಂಖ್ಯೆ ನಲವತ್ತೆರಡು ! ಮಾತಿಗೆ, ಅಭಿವ್ಯಕ್ತಿಗೆ ಅವಕಾಶ ಹುಡುಕುವವರು, ವರ್ತಮಾನಕ್ಕೆ ಮಿಡಿಯುವ ಮನಸ್ಸುಗಳು ಕ್ಯಾಂಪಸ್‌ನ ತುಂಬ ಇವೆ. ಆದರೆ ಹೀಗೊಂದು ವೇದಿಕೆ ಇಲ್ಲದಿರುವುದು ಮತ್ತು ಹೀಗೆ ಯಾರೂ ಮಾತು ಶುರು ಹಚ್ಚದೇ ಇರುವುದು ಇವರ ಸಮಸ್ಯೆ ಎಂಬುದನ್ನು ಮನದಟ್ಟು ಮಾಡಿಕೊಂಡೆವು. 

ಮರುದಿನ ಕನ್ನಡದ ಪ್ರಮುಖ ದಿನಪತ್ರಿಕೆಗಳು “ಕ್ಯಾಂಪಸ್‌ ಟಾಕ್‌’ ನ ಕುರಿತು ಸುದ್ದಿ ಪ್ರಕಟಿಸಿ ಹೆಚ್ಚು ಪ್ರಚಾರ ದೊರಕುವುದಕ್ಕೆ ಸಹಾಯ ಮಾಡಿದವು. “ಕ್ಯಾಂಪಸ್‌ಟಾಕ್‌’ಗೆ ನಾವೇ ಕೆಲವು ನಿಯಮಗಳನ್ನು ಸೃಷ್ಟಿಸಿದ್ದೇವೆ. ಇಲ್ಲಿ ನಡೆಯುವ ಕಾರ್ಯಕ್ರಮ ತೀರಾ ಅನೌಪಚಾರಿಕವಾಗಿರುತ್ತದೆ. ವೇದಿಕೆಯೇ ಇಲ್ಲದಿರುವುದು ಇದರ ವಿಶೇಷ. ಕ್ಯಾಂಪಸ್‌ನ ಎಲ್ಲರಿಗೂ ಭಾಗವಹಿಸಬಹುದು. ಬರೀ ಕಲೆ, ಸಾಹಿತ್ಯ ಮಾತ್ರವಲ್ಲದೆ, ಸಂಸ್ಕೃತಿ, ವಿಜ್ಞಾನ, ಸಂಗೀತ, ಹಾಗೂ ಇನ್ನಿತರ ವಿಷಯಗಳ ಕುರಿತೂ ಕಾರ್ಯಕ್ರಮ ನಡೆಸುವ ಯೋಜನೆ. ಮಾತನಾಡುವ ಅವಕಾಶ ಎಲ್ಲರಿಗೂ ಇದೆ. ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎನ್ನುವ ಭಾವ. ವಿಶೇಷ ಅತಿಥಿಗಳಾಗಿ ಯಾರನ್ನೂ ಕರೆಯುವ ಕ್ರಮ ಇಲ್ಲ. ಈ ರೀತಿಯಾಗಿ “ಕ್ಯಾಂಪಸ್‌ ಟಾಕ್‌’ ವಿದ್ಯಾರ್ಥಿ ಧ್ವನಿಯಾಗಿ ಮುಂದುವರಿಯುತ್ತಿದೆ. 

ಸ್ನೇಹಿತರೆ, ಇವಿಷ್ಟನ್ನು ಇಲ್ಲಿ ಹಂಚಿಕೊಂಡದ್ದು ಕಾಲೇಜು ವಿದ್ಯಾರ್ಥಿಗಳು ಇದನ್ನು ಓದಿ ಸ್ಫೂರ್ತಿ ಪಡೆಯಲಿ ಎಂಬ ಸದುದ್ದೇಶದಿಂದ. ಒಂದು ಹೋರಾಟಕ್ಕೆ, ಚಳುವಳಿಗೆ, ಹೊಸಪ್ರಯತ್ನಕ್ಕೆ ಆರಂಭದ ಕೊರತೆ ಇದ್ದೇ ಇರುತ್ತದೆ. ಅಂತಹ ಸವಾಲುಗಳನ್ನು ಎದುರುಗೊಳ್ಳುವುದು ಮತ್ತು ಮನಸ್ಸು ಮಾಡಿದರೆ ಹೇಗೆಲ್ಲಾ ಆರಂಭ ಪಡೆಯಬಹುದು ಎನ್ನುವುದಕ್ಕೆ ನಿದರ್ಶನವಾಗಿ ನಮ್ಮ ಅನುಭವಗಳನ್ನು ಯಥಾವತ್ತಾಗಿ ಇಲ್ಲಿ ದಾಖಲಿಸಿದ್ದೇನೆ. ನೀವೂ ಶುರು ಮಾಡಿ ನಿಮ್ಮದೊಂದು ಸಾಹಿತ್ಯ, ವಿಚಾರಗಳ ಚರ್ಚೆಯ ಗುಂಪು. 

ಮಹಮ್ಮದ್‌ ಶರೀಫ್ ಕಾಡುಮಠ, ಮಂಗಳೂರು ವಿ.ವಿ., ಮಂಗಳಗಂಗೋತ್ರಿ

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.