ಸೀನಿಯರ್‌ ಮತ್ತು ಜೂನಿಯರ್‌ ಎಂಬ ಭೇದವೇಕೆ?


Team Udayavani, Jun 22, 2018, 6:30 AM IST

admission-open-pgdmaa.jpg

ಕಾಲೇಜು ಶುರುವಾಗಿ ಎರಡು ದಿನ ಕಳೆದವು. ರಜೆಯನ್ನು ಮಜಾದೊಂದಿಗೆ ಮುಗಿಸಿದೆವು. ಈಗ ಎರಡನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ನಾವೀಗ ಹಿರಿಯರು. ಅರ್ಥಾತ್‌ ಸೀನಿಯರ್ಸ್‌. ಈ ಸಲ ನಾವೇ ಅಧಿಕಾರಸ್ಥರು ಎಂಬ ಭಾವನೆ ಇದೆ. ಒಂದು ರೀತಿಯಲ್ಲಿ ಆಳುವ ಸರ್ಕಾರದಂತೆ. ಹೊಸದಾಗಿ ಬರುವ ಜೂನಿಯರ್‌ಗಳನ್ನು ಓರೆಗಣ್ಣಿನಲ್ಲಿ ನೋಡುತ್ತಿದ್ದೇವೆ. ಅವರು ಕಿರಿಯರು ಎಂಬ ಮನೋಭಾವನೆ ಮನಸ್ಸಿನೊಳಗೆ ನೆಲೆಯಾಗಿದೆ.

ನಾವು ಕೂಡ ಜೂನಿಯರ್‌ಗಳಾಗಿದ್ದ ಅನುಭವವನ್ನು ಪಡೆದವರು. ಆಗ ನಮ್ಮ ನಮ್ಮ ಸೀನಿಯರ್‌ಗಳು ನಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದ್ದರೋ ಹಾಗೆಯೇ ನಮಗಿಂತ ಕಿರಿಯರನ್ನು ನಡೆಸಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದೇವೆ. ಹಾಗಾಗಿ, ಕಾಲೇಜು ಎಂಬುದು ನಮಗೆ ಪರಿಚಿತ ಸ್ಥಳವಾಗಿ ಈ ವಲಯಕ್ಕೆ ನಾವೇ ಕೇಳುವವರು ಎಂಬ ಭಾವನೆಯನ್ನು ತಳೆದಿದ್ದೇವೆ. ಹೊಸದಾಗಿ ಬಂದವರು ತಮ್ಮ ತರಗತಿಯನ್ನು ಹುಡುಕುತ್ತ ಅಡ್ಡಾದಿಡ್ಡಿ ಹುಡುಕುತ್ತಿರುವಾಗ ನಾವು ನಮ್ಮಲ್ಲಿಯೇ ನಗುತ್ತೇವೆ.

ಶಿಕ್ಷಕರು ಕೂಡ ನಮ್ಮ ಪರವಾಗಿದ್ದಾರೆ ಮತ್ತು ಅವರು ನಮ್ಮನ್ನು ಹೆಚ್ಚು ತಿಳಿದಿದ್ದಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಅವರು ನಮಗೆ ಹೇಳಿದ ಕೆಲಸಗಳನ್ನು ನಾವು ನಿರ್ವಹಿಸಲೇಬೇಕು. ಆದರೆ, ಈಗ ಜೂನಿಯರ್‌ಗಳಿರುವ ಕಾರಣದಿಂದ ನಮ್ಮ ಕೆಲಸಗಳನ್ನು ಅವರಿಗೆ ದಾಟಿಸುತ್ತಿದ್ದೇವೆ.ಸಾಮಾನ್ಯವಾಗಿ ಜೂನಿಯರ್‌ಗಳು ಕಾಲೇಜಿಗೆ ಬರುವಾಗ ಸ್ವಾಗತಿಸುವುದು ವಿದ್ಯಾರ್ಥಿ ಧರ್ಮ. ಆದರೆ, ಈ ಸಂಪ್ರದಾಯವನ್ನು ಹೆಚ್ಚಿನ ಕಡೆಗಳಲ್ಲಿ ಅನುಸರಿಸುವುದಿಲ್ಲ. ಹೊಸದಾಗಿ ಬಂದ ಕಿರಿಯರನ್ನು ನಾನಾ ರೀತಿಯಲ್ಲಿ ಕಾಡುತ್ತಾರೆ. ಇದನ್ನು ರ್ಯಾಗಿಂಗ್‌ ಎಂದು ಕರೆಯುತ್ತಾರೆ.

ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸಬೇಕಾದ ವಿದ್ಯಾರ್ಥಿ ಜೀವನದಲ್ಲಿ ಮನುಷ್ಯ-ಮನುಷ್ಯರು ದ್ವೇಷ ಸಾಧಿಸುವಂಥ ಸಂದರ್ಭ ಒದಗಿಬರುತ್ತಿದೆ! ಜೂನಿಯರ್‌ಗಳು ಗೌರವ ನೀಡಬೇಕೆಂದು ಸೀನಿಯರ್‌ಗಳು ಬಯಸುತ್ತಾರೆ. ಅದು ತಪ್ಪಲ್ಲ. ಆದರೆ, ಜೂನಿಯರ್‌ಗಳು ಗೌರವ ಕೊಟ್ಟರೂ ಅದನ್ನು ಸ್ವೀಕರಿಸದೇ ಅವರ ಮೇಲೆ ಕೆಟ್ಟದಾಗಿ ನಡೆದುಕೊಳ್ಳುವುದು ಸರಿಯಲ್ಲ. ಸೀನಿಯರ್‌ಗಳಾದ ನಾವು ನಮ್ಮ ಕಾಲೇಜಿನಲ್ಲಿ ಜೂನಿಯರ್‌ಗಳನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡೆವು. ಅವರು ಕೂಡ ಅತ್ಯಂತ ಅಭಿಮಾನದಿಂದ ನಮ್ಮನ್ನು ಕಂಡರು. 

ಜೂನಿಯರ್‌ಗಳು ಕಾಲೇಜಿನ ಮುಖವನ್ನೇ ನೋಡದವರು. ಅವರಿಗೆ ಅನೇಕ ರೀತಿಯ ಕುತೂಹಲಗಳು ಇರುವುದು ಸಹಜ. ಆಗ ಅವರ ಕುತೂಹಲಗಳನ್ನು ತಣಿಸುವಂಥ ಕೆಲಸ ಮಾಡಬೇಕು. ನಾವು ನಮ್ಮ ಕಿರಿಯರನ್ನು ಕರೆದೊಯ್ದು ಕಾಲೇಜಿನ ಪರಿಚಯ ಮಾಡಿಕೊಟ್ಟೆವು.

ಅನೇಕ ಬಾರಿ ಬಣ್ಣದ ಕನಸುಗಳನ್ನು ಕಟ್ಟಿಕೊಂಡು ಬರುವ ಕಿರಿಯರಿಗೆ ಕಾಲೇಜಿನ ಸ್ಥಿತಿಯನ್ನು ನೋಡಿದ ಕೂಡಲೇ ಅವರ ಕನಸುಗಳು ಕಮರಿ ಹೋಗುತ್ತವೆ. ಕಳೆದ ಬಾರಿ ನಾವು ಇದೇ ಕಾಲೇಜಿಗೆ ಬಂದಿದ್ದಾಗ ನಮ್ಮ ಹಿರಿಯರು ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಂಡುದರಿಂದ ನಮ್ಮ ಕನಸುಗಳು ಅರಳಿದ್ದವು.

ಕಾಲೇಜು ಲೈಫ್ ಎಂದರೆ ಲವಲವಿಕೆ ಸಮಯ. ಪ್ರಾಯ ಸಹಜವಾದ ಭಾವನೆಗಳು ಅರಳಿರುತ್ತವೆ. ಪ್ರೀತಿ-ಜಗಳಗಳು ಸಾಮಾನ್ಯ. ಆದರೆ, ಜಗಳ ಎಂಬುದು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಕಾಲೇಜಿನ ಜೀವನ ಪ್ರೇರಣೆಯಾಗಬಾರದು.

ಮನೆಯಲ್ಲಿ ಅಣ್ಣ-ತಮ್ಮ, ಅಕ್ಕ-ತಮ್ಮ, ಅಣ್ಣ-ತಂಗಿ ಇಂಥ ಸಂಬಂಧಗಳು ಹೇಗೆ ಇರುತ್ತವೆಯೋ ಹಾಗೆಯೇ ಕಾಲೇಜಿನಲ್ಲಿ ಸೀನಿಯರ್‌-ಜೂನಿಯರ್‌ಗಳ ಸಂಬಂಧ. ಮನೆಯಲ್ಲಿ ಅಕ್ಕನ ಪುಸ್ತಕವನ್ನು ತಮ್ಮ ಬಳಸುತ್ತಾನೆ. ಯಾವುದಾದರೂ ಪಾಠ ಅರ್ಥವಾಗದಿದ್ದರೆ ಆಗ ತಂಗಿ, ಅಣ್ಣನೊಂದಿಗೆ ಆ ಪಾಠದ ವಿವರವನ್ನು ಹೇಳಿಕೊಡುವಂತೆ ಕೇಳುತ್ತಾಳೆ. “ಸುಮ್ಮನೆ ಟ್ಯೂಶನ್‌ಗೆ ಹೋಗುವುದು ಎಂತಕ್ಕೆ ? ಅಣ್ಣನಲ್ಲಿ ಕೇಳಬಾರದೆ?’ ಎಂದು ಅಮ್ಮನೂ ಹೇಳುತ್ತಾರೆ. ಮನೆಯಲ್ಲಿಯೂ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಆಮೇಲೆ, ತಂದೆ-ತಾಯಿಗೆ ದೂರು ಕೊಡುವ ಸಂಪ್ರದಾಯವೂ ಇದೆ. ಇವು ಯಾವುದೂ ತಪ್ಪಲ್ಲ. ಆದರೆ, ಇಂಥ ಕಹಿ ಭಾವನೆಗಳು ತಾತ್ಕಾಲಿಕ ಮಾತ್ರ. ಇವು ಮತ್ತೂಂದು ಕ್ಷಣದಲ್ಲಿ ಮರೆತೇ ಹೋಗುತ್ತವೆ. 

ಮನೆಯಲ್ಲಿ ನಾವು ಹಿರಿಯರಾಗಿ ಕಿರಿಯರನ್ನು ಹೇಗೆ ನಡೆಸುತ್ತೇವೆಯೋ ಹಾಗೆ, ಕಿರಿಯರನ್ನು ಕಾಲೇಜಿನಲ್ಲಿಯೂ ನಡೆಸಿಕೊಳ್ಳಬೇಕು. ನಮ್ಮ ಕಿರಿಯ ತರಗತಿಯಲ್ಲಿ ನಮ್ಮ ತಮ್ಮನೂ ಇರಬಹುದು, ತಂಗಿಯೂ ಇರಬಹುದು. ಇರದಿದ್ದರೆ, ಅಲ್ಲಿ ಇರುವವರನ್ನೇ ತಮ್ಮ-ತಂಗಿಯರೆಂದು ಭಾವಿಸುವುದು ಉತ್ತಮ.

ಬನ್ನಿ  ಜೂನಿಯರ್ , ನಿಮ್ಮೊಂದಿಗೆ ನಾವೂ ಇದ್ದೇವೆ.

– ಅಕ್ಷಯ್‌ ಕುಮಾರ್‌, ಪಲ್ಲಮಜಲು
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ 
ವಿವೇಕಾನಂದ ಕಾಲೇಜ್‌, ಪುತ್ತೂರು 

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.