ಒಂದು ಮಗು ಹುಟ್ಟಿದಾಗ ಒಬ್ಬ ಅಪ್ಪ ಹುಟ್ಟುತ್ತಾನೆ !


Team Udayavani, Jul 27, 2018, 6:00 AM IST

11.jpg

ಅಪ್ಪ ಎಂದರೆ ಆಕಾಶ’- ಈ ಮಾತು ನೂರಕ್ಕೆ ನೂರು ನಿಜ. ಎಲ್ಲರಿಗೂ ಅಪ್ಪ ಎಂದರೆ ಇಷ್ಟ . ಹೆಣ್ಣುಮಕ್ಕಳಿಗಂತೂ ಕೇಳುವುದೇ ಬೇಡ. “ಒಂದು ಮಗು ಹುಟ್ಟಿದಾಗ ಒಬ್ಬ ಅಪ್ಪ ಹುಟ್ಟುತ್ತಾನೆ’ ಎಂದು ಹೇಳುವುದು ನಿಜ. ಅಪ್ಪನಿಗೆ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳ ಮೇಲೆ ಪ್ರೀತಿ ಹೆಚ್ಚು. ಮಗು ಹುಟ್ಟಿದಾಗ ಅದೆಷ್ಟೋ ಅಪ್ಪಂದಿರು ಕುಣಿದು ಕುಪ್ಪಳಿಸುತ್ತಾರೆ. ತನ್ನ ಮಗುವನ್ನು ನೋಡುವ ಆತುರದಿಂದ “ಹೆರಿಗೆ ಆಯ್ತಾ’ ಎಂದು ಡಾಕ್ಟರ್‌ ಹತ್ರ ಕೇಳ್ತಾ ಇರುತ್ತಾರೆ. ಅಷ್ಟೊಂದು ಆತುರ ಅವರಲ್ಲಿ ಮಗುವನ್ನು ನೋಡಲು!

ಆದರೆ, ನನ್ನ ಜೀವನದಲ್ಲಿ ಹಾಗೆ ಆಗಲಿಲ್ಲ. ನಾನು ಹುಟ್ಟಿದಾಗ ನನ್ನ ಅಪ್ಪ ನನ್ನನ್ನು ನೋಡಲೇ ಇಲ್ಲ. ನಾನು ಹುಟ್ಟಿ ನಾಲ್ಕು ದಿವಸವಾದರೂ ನನ್ನಪ್ಪ , “ಮಗು ಹೇಗಿದೆ? ಹೆಣ್ಣು ಮಗುವಾ? ಗಂಡು ಮಗುವಾ?’ ಅಂತಲೂ ಕೇಳಲೇ ಇಲ್ಲ. ಹೀಗೆ ಕೇಳದಿರಲೂ ಒಂದು ಕಾರಣವಿದೆ. ಅದೇನೆಂದರೆ, ನಾನು ಹುಟ್ಟುವ ಮೊದಲು ವೈದ್ಯರು ಹೇಳಿದ್ದರು, “ಒಂದೋ ಮಗು ಉಳಿಯುತ್ತೆ, ಇಲ್ಲಾಂದ್ರೆ ತಾಯಿ’ ಅಂತ. ಹೀಗಿರುವಾಗ ನಾನು ಹುಟ್ಟಿದಾಗ ನನ್ನನ್ನು ಮೊದಲು ವೈದ್ಯರು ಹೊರಗೆ ತಂದು ಮನೆಯವರಿಗೆ ತೋರಿಸಿ, ನನ್ನ ಅಮ್ಮನನ್ನು ಮಾತ್ರ ನೋಡಲು ಬಿಡಲಿಲ್ಲವಂತೆ. ಹಾಗಾಗಿ, ನನ್ನನ್ನು ಅಪ್ಪ ನೋಡಲಿಲ್ಲ ಅಂತ ಅನ್ನಿಸುತ್ತದೆ. ಅಮ್ಮನಿಗೆ ಹುಷಾರಿಲ್ಲದ ಕಾರಣ ಐಸಿಯುನಲ್ಲಿ ಇಟ್ಟಿದ್ದರಿಂದ ಅಮ್ಮನನ್ನು ತೋರಿಸಲಿಲ್ಲ. ಮತ್ತೆ ಅಮ್ಮ ಹುಷಾರಾದಾಗ ಎಲ್ಲವೂ ಸರಿ ಹೋಯಿತು. ಅಪ್ಪ ನನ್ನನ್ನು ನೋಡಿ ಖುಷಿ ಪಟ್ಟರು. ನನ್ನ ಅಪ್ಪನಿಗೆ ನಾನು ಮೂರನೆಯ ಮಗು. ನನಗೆ ಇಬ್ಬರು ಅಕ್ಕಂದಿರಿದ್ದಾರೆ. ನಾವು ಮೂವರೂ ಹೆಣ್ಣುಮಕ್ಕಳು. ಆದರೆ ಅಪ್ಪ ಎಂದೂ ಹೆಣ್ಣುಮಕ್ಕಳೆಂದು ಬೇಸರಿಸಿದವರಲ್ಲ. ನಮ್ಮನ್ನು ಗಂಡುಮಕ್ಕಳಂತೆಯೇ ಬೆಳೆಸಿದ್ದಾರೆ.

ನಾನು ಪಿಯುಸಿ ಓದುತ್ತಿರುವಾಗ ಅಪ್ಪ ಬಾಂಬೆಗೆ ಹೋಗಿದ್ದರು. ಅದೇ ಸಮಯದಲ್ಲಿ ನನ್ನ ಕೆಮೆಸ್ಟ್ರಿ ಪರೀಕ್ಷೆ ಮೂರು ಮೂರು ಬಾರಿ ಮುಂದೆ ಹೋದಾಗ ನಾನು ತುಂಬಾ ಧೈರ್ಯ ಕಳೆದುಕೊಂಡೆ. ಆಗ ಅಪ್ಪ ಬಾಂಬೆಯಿಂದ ನನಗೆ ಆಗಾಗ ಫೋನ್‌ ಮಾಡ್ತಾನೆ ಇದ್ದರು. ನನಗೆ ಧೈರ್ಯ ಹೇಳಿ ಸಮಾಧಾನ ಮಾಡುತ್ತಿದ್ದರು. “ಎಲ್ಲ ಒಳ್ಳೆಯದೇ ಆಗುತ್ತದೆ, ಬೇಸರ ಮಾಡಬೇಡ’ ಎನ್ನುತ್ತಿದ್ದರು. ನನ್ನಪ್ಪ ನನಗೆ ಅಷ್ಟೊಂದು ಧೈರ್ಯ ಹೇಳದಿದ್ದರೆ ಆವಾಗ ನನ್ನ ಪರಿಸ್ಥಿತಿ ಹೇಗಿರುತ್ತಿತ್ತು ಅಂತ ನನಗೆ ಎಣಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮನ್ನು ದೊಡ್ಡವರನ್ನಾಗಿ ಮಾಡಲು ನಮ್ಮಪ್ಪ ತುಂಬಾ ಕಷ್ಟಪಟ್ಟಿದ್ದಾರೆ. ಅದರಲ್ಲೂ ನಾವು ಮೂವರೂ ಹೆಣ್ಣು ಮಕ್ಕಳಾದ್ದರಿಂದ, ನಮ್ಮ ಕುಟುಂಬದವರೇ ನಮ್ಮನ್ನು ದೂರ ಇಡುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ನಮ್ಮ ಅಪ್ಪ ನಮ್ಮನ್ನು ಚೆನ್ನಾಗಿ ಓದಿಸಿದ್ದಾರೆ. ನನ್ನ ಅಕ್ಕಂದಿರೂ ವಿದ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸದಲ್ಲಿದ್ದಾರೆ. ಇದಕ್ಕೆಲ್ಲ ನಮ್ಮಪ್ಪನೇ ಕಾರಣ. ಹೀಗೆ ಹೇಳಲು ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನನ್ನಪ್ಪ ನನ್ನ ಜೀವನದ ನಿಜವಾದ ಹೀರೋ.

ಸೌಮ್ಯಾ, ಎಂಜಿಎಂ ಕಾಲೇಜು, ಕುಂಜಿಬೆಟ್ಟು , ಉಡುಪಿ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಕರ್ನಾಟಕ ವಿರುದ್ಧ 218 ರನ್‌ ಹಿನ್ನಡೆಯಲ್ಲಿ ಚಂಡೀಗಢ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Ranji Trophy: ಶಮಿ ಭರ್ಜರಿ ಪುನರಾಗಮನ; ಬಂಗಾಳಕ್ಕೆ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Australia vs Pakistan T20: ಪಾಕ್‌ ವಿರುದ್ಧ ಆಸೀಸ್‌ಗೆ 2-0 ಸರಣಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.