ಅಮ್ಮ ನಕ್ಕ ದಿನ ನನ್ನ ಜನ್ಮ ದಿನ
Team Udayavani, Feb 22, 2019, 12:30 AM IST
ಅಬ್ದುಲ್ ಕಲಾಂ ಅವರು ತಾಯಿಯ ಕೊಡುಗೆ ಮತ್ತು ತನ್ನ ಜನ್ಮದ ಕುರಿತು ಹೀಗೆ ಹೇಳಿದ್ದಾರೆ- ತನ್ನ ಮಗು ಅತ್ತಾಗ ತಾಯಿ ನಕ್ಕ ಮೊದಲ ದಿನವೇ ತನ್ನ ಜನ್ಮ ದಿನ !
ನನ್ನ ಪಾಲಿಗೆ ನನ್ನ ಅಮ್ಮನೇ ನಿಜವಾದ ಹೀರೋಯಿನ್! ಅವಳಿಂದ ನಾನು ಪಡೆದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಮಾನವ ಹುಟ್ಟಿದಾಗ ವಿಶ್ವ ಮಾನವ, ಬೆಳೆಯುತ್ತ ಬೆಳೆಯುತ್ತ ಅಲ್ಪಮಾನವನಾಗುತ್ತಾನೆ- ಎಂದು ಕುವೆಂಪು ಅವರ ಒಂದು ಮಾತಿದೆ. ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆಯೋ ಅವುಗಳು ಹಾಗೆಯೇ ಬೆಳೆಯುತ್ತವೆ ಎಂಬುದು ವಾಸ್ತವ ಸಂಗತಿ. ಮನೆಯೇ ವೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಜೀವನದಲ್ಲಿ ತಾಯಿಯ ಪ್ರೀತಿಯನ್ನು ಜಗತ್ತಿನಲ್ಲಿ ಬೇರಾರೂ ನೀಡಲು ಸಾಧ್ಯವೇ ಇಲ್ಲ. ನನ್ನ ತಾಯಿ ಕಷ್ಟ ಎಂಬ ಪದಕ್ಕೆ ಸಡ್ಡು ಹೊಡೆದು ತನ್ನ ಇಬ್ಬರು ಮಕ್ಕಳನ್ನು ದಡ ಸೇರಿಸಲು ತುಂಬಾ ಕಷ್ಟ ಪಟ್ಟವಳು. ತಂದೆಯನ್ನು ಕಳೆದುಕೊಂಡ ನಾವುಗಳು ಎಂದೂ ಕೊರಗಬಾರದು, ಯಾವ ಕೊರತೆಯೂ ಅವರಿಗೆ ಉಂಟಾಗಬಾರದೆಂದು ಕೆಲಸಕ್ಕೆ ಹೋಗಲು ಶುರು ಮಾಡಿದಾಗ ನನ್ನ ತಾಯಿಗೆ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಒದಗಿದಾಗಲೂ ಎಂದೂ ಕೊರಗದೆ ನಮ್ಮನ್ನು ದಡ ಸೇರಿಸಬೇಕೆಂದು ಜೀವವನ್ನೇ ತನ್ನ ಮಕ್ಕಳಿಗಾಗಿ ಪಣವಾಗಿಟ್ಟಳು. ತಾಯಿ ಎಂಬ ಕರುಳಿನ ಭಾಂದವ್ಯವೇ ಹಾಗೇ ಅಲ್ಲವೆ, ಯಾವತ್ತೂ ತನ್ನ ಮಕ್ಕಳಿಗಾಗಿ ಮಿಡಿಯುವ ಪ್ರೇರಕವಾದ ಶಕ್ತಿಯವಳು. ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಎಂದಿಗೂ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂಬ ಮಾತನ್ನು ತುಂಬ ಸಲ ಕೇಳಿದ್ದೇವೆ.
ಖ್ಯಾತ ಮಾನವತಾವಾದಿ ಬಾಬಾ ಆಮ್ಟೆಯವರ ತಾಯಿ ಹೆಚ್ಚು ಓದಿದವರಲ್ಲ. ಆದರೆ, ಬಹಳ ಬುದ್ಧಿಶಾಲಿಯಾಗಿದ್ದರು. ಯಾವ ವಿಷಯವನ್ನಾದರೂ ಬಹಳ ಚೆನ್ನಾಗಿ ಮನಸ್ಸಿಗೆ ನಾಟುವಂತೆ ತಿಳಿಸುತ್ತಿದ್ದರು. ಒಮ್ಮೆ ಬಾಬಾ ಆಮ್ಟೆಗೆ ಒಂದು ಜಪಾನ್ ಬೊಂಬೆಯನ್ನು ಖರೀದಿಸಿ ತಂದು ಕೊಟ್ಟರು. ಅದು ಬಿದ್ದಷ್ಟೂ ಎದ್ದು ನಿಲ್ಲುತ್ತಿತ್ತು. “ಮಗ, ಈ ಬೊಂಬೆಯನ್ನು ನೀನು ಬೀಳಿಸುತ್ತಾ ಬೀಳಿಸುತ್ತಾ ನೀನು ಸುಸ್ತಾಗುವಿಯಷ್ಟೇ, ಆದರೆ ಅದು ಪ್ರತಿಸಲವೂ ಎದ್ದು ನಿಲ್ಲುತ್ತದೆ’ ಎಂದು ತಾಯಿ. “ಈ ಬೊಂಬೆಯ ರೀತಿಯಲ್ಲೇ ನೀನು ಸಹ ಜೀವನದಲ್ಲಿ ಅನೇಕ ಸಲ ಬೀಳಬೇಕಾಗಬಹುದು. ಬಿದ್ದರೂ ಸಹ ತಕ್ಷಣ ಏಳುವುದರಲ್ಲಿ ಜಿನವಾದ ಘನತೆಯಿದೆ. ಸೋತರೂ ಸಹ ಸೋಲಿನಿಂದ ಕುಗ್ಗದಿರುವುದೇ ಬದುಕಿನ ಇನ್ನೊಂದು ಹೆಸರು’ ಎಂದರು ತಾಯಿ. ತಾಯಿಯ ಈ ಸಲಹೆಯನ್ನು ಚೆನ್ನಾಗಿ ಗ್ರಹಿಸಿದ ಅಮ್ಟೆ ಈ ಮಾತನ್ನು ಆದರ್ಶವಾಗಿಟ್ಟುಕೊಂಡು, ಅನೇಕ ಕಷ್ಟ-ವಿಪತ್ತುಗಳು ಬಂದರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ, ಅವರು ಭಾರತದ ಉದ್ದಗಲಕ್ಕೂ ಓಡಾಡಿ ಕುಷ್ಠ ರೋಗಿಗಳ ಸೇವೆಯಲ್ಲಿ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಶ್ರುತಿ ಸಂದೇಶ್ ನೆರಿಯ
ಅಂತಿಮ ಬಿ.ಎ, ಶ್ರೀ ಧ. ಮಂ. ಕಾಲೇಜು, ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.