ಡೈರಿ ಬರೆಯಿರಿ…
Team Udayavani, Jun 23, 2017, 3:45 AM IST
ಡೈರಿ ಬರೆಯಿರಿ ರಿಲ್ಯಾಕ್ಸ್ ಆಗಿರಿ - ಆಧುನಿಕ ಯುಗದಲ್ಲಿ ಯುವ ಪೀಳಿಗೆಯಲ್ಲಿ ಬಹುತೇಕರು ಡೈರಿ ಎಂಬ ಹೆಸರನ್ನೇ ಮರೆತಂತಿದೆ. ಫೇಸ್ ಬುಕ್, ವಾಟ್ಸಾಪ್ ಹಾಗೂ ಗೂಗಲ್‌ನ ಯುಗದಲ್ಲಿ ಇಂದಿನ ಯುವ ಜನಾಂಗವಿದೆ. ಬೆರಳ ತುದಿಯಲೇ ಟಚ್ ಅಂಡ್ ಟೈಪ್ ಯುಗವಾಗಿ ಈಗಿನ ಕಾಲ ಬೆಳೆಯುತ್ತಲಿದೆ. ಇದರ ಮಧ್ಯೆ ಡೈರಿ ಬರೆಯುವ ಅಭ್ಯಾಸ ವಿರುವರು ಕೆಲವರು ಮಾತ್ರ, ಡೈರಿ ಬರೆಯುವ ಅನುಭವವೇ ಅದ್ಭುತ. ದಿನನಿತ್ಯದ ಘಟಕಗಳನ್ನು ಮೆಲುಕು ಹಾಕುತ್ತ ರಾತ್ರಿ ಮಲಗುವ ಮುನ್ನ ಡೈರಿ ಬರೆಯುವುದು ಒಂದು ಸುಂದರ ಅನುಭವ ನೀಡುತ್ತದೆ. ಪ್ರತಿನಿತ್ಯ ಬರೆದ ಘಟನೆಯನ್ನು ಬಿಡುವಿನ ವೇಳೆಯಲ್ಲಿ ಓದಿದಾಗ ಮನಸ್ಸಿಗೆ ಆಗುವ ಸಂತೋಷ ಹೇಳಲು ಮಾತುಗಳೇ ಬರಲಾರವು. ಡೈರಿ ಬರೆಯುವುದರಿಂದ ಮಾನಸಿಕ ಒತ್ತಡ ಮತ್ತು ಬರವಣಿಗೆಯ ವೃದ್ಧಿಯ ಜೊತೆಗೆ ತಪ್ಪುಗಳನ್ನು ತಿಳಿಯಬಹುದು. ನಿಜವಾದ ಬರವಣಿಗೆಯ ಆನಂದ ಸಿಗುವುದು ಡೈರಿ ಬರವಣಿಗೆಯಿಂದ ಎಂದರೆ ತಪ್ಪಗಾಲಾರದು.
ಡೈರಿಯನ್ನು ಏಕೆ ಬರೆಯಬೇಕು ?
ನಿಜಕ್ಕೂ ಆಧುನಿಕ ಯುಗದ ಭರಾಟೆಯಲ್ಲಿರುವ ಪ್ರತಿಯೊಬ್ಬರಿಗೂ ಅನಿಸುವ ಮಾತಿದು, “ಫೇಸ್‌ಬುಕ್, ವಾಟ್ಸಾಪ್‌ನಲ್ಲಿಯು ಬರೆಯುತ್ತೇವೆ ತಾನೆ? ಮತ್ತೇಕೆ ಈ ಡೈರಿಯನ್ನು ಬರೆಯಬೇಕು’ ಏನ್ನುವರು. ಆದರೆ ಡೈರಿ ಬರೆಯುವುವಿಕೆ ಲಾಭ ಬಲ್ಲವರೆ ಬಲ್ಲರು.
ಮನಸ್ಸು ಹಗುರವಾಗಿಸಲು…
ಮನೋವೈದ್ಯರ ಪ್ರಕಾರ ಮನುಷ್ಯನ ಹಲವು ಕಾಯಿಲೆಗಳಿಗೆ ಮಾನಸಿಕ ಒತ್ತಡಗಳೇ ಕಾರಣ. ಮುಂಜಾನೆಯಿಂದ ಸಂಜೆಯವರೆಗೂ ಒತ್ತಡಗಳ ಮಧ್ಯೆ ನಮ್ಮ ಜೀವನ ಸಾಗಿರುತ್ತದೆ. ರಾತ್ರಿ ಮಲಗುವ ಮುನ್ನ ನೀವು ಅದೇ ಫೇಸುºಕ್, ವಾಟ್ಸಾಪ್‌ನಲ್ಲಿ ಮುಳುಗಿದರೆ ನಿಮ್ಮ ಮನಸ್ಸು ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತದೆ. ನೀವು ರಾತ್ರಿ ಪುನಃ ಒತ್ತಡದಲ್ಲಿ ಇರಬೇಕಾಗುತ್ತದೆ. ಇದರ ಬದಲು ನೀವು ರಾತ್ರಿ ಡೈರಿ ಬರೆಯಿರಿ. ಅದರಲ್ಲಿ ನಿಮ್ಮ ನಿತ್ಯ ಜೀವನದಲ್ಲಿ ನಡೆದ ಎಲ್ಲಾ
ಘಟನೆಯನ್ನು ಬರೆಯಿರಿ. ನೀವು ನಿಮ್ಮ ಮನಸ್ಸಿನಲ್ಲಿ ಮುಚ್ಚಿಟ್ಟ ಎಲ್ಲಾ ಭಾವನೆಗಳು, ಮಾತುಗಳು ಅಕ್ಷರ ರೂಪ ಪಡೆಯಲಿ. ಇದರಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ. ಯಾವುದೇ ಒತ್ತಡವಿಲ್ಲದೆ ನೀವು ನೆಮ್ಮದಿಯಿಂದ ಬದುಕಬಹುದು. ಅಲ್ಲದೆ, ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗುವುದರಿಂದ ಮಾನಸಿಕ ಕಾಯಿಲೆಗಳು ನಿಮ್ಮಿಂದ ದೂರವಾಗುತ್ತವೆ.
ಬರವಣಿಗೆಯ ಕೌಶಲ ವೃದ್ಧಿಗಾಗಿ…
ಬರವಣಿಗೆ ನಮ್ಮ ಸಂಪತ್ತು. ಆದರೆ, ಫೇಸುºಕ್, ವಾಟ್ಸಾಪ್ ನಮ್ಮ ಬರವಣಿಗೆಯಲ್ಲ , ಇದರಲ್ಲಿ ಬರೆದ ಬರವಣಿಗೆಯಿಂದ ನೀವು ಯಾವ ಅನುಕೂಲವನ್ನೂ ಪಡೆಯಲಾರಿರಿ. ಡೈರಿ ಬರೆಯುವುದರಿಂದ ನಿಮ್ಮ ಬರವಣಿಗೆಯ ಕೌಶಲ ವೃದ್ಧಿಸುವ ಜೊತೆಗೆ ಅಕ್ಷರದ ಮತ್ತು ಪದ ಸಂಪತ್ತು ಹೆಚ್ಚಾಗುತ್ತದೆ. ನಿರಂತರ ಬರವಣಿಗೆಯಿಂದ ನಮ್ಮ ಬರವಣಿಗೆಯ ವೇಗ ಹೆಚ್ಚುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಏಕಾಗ್ರತೆ ಮತ್ತು ಏಕಾಂತದ ಅನುಭವಕ್ಕಾಗಿ…
ನೀವು ಡೈರಿ ಬರೆಯುತ್ತೀರಿ ಎಂದಾದರೆ ನಿಮಗೆ ಏಕಾಗ್ರತೆ ಒಲಿದಿದೆ ಎಂದೆ ತಿಳಿಯಿರಿ. ನೀವು ರಾತ್ರಿ ಮಲಗುವ ಮುನ್ನ ಡೈರಿ ಬರೆಯುವಾಗ ನಿಮ್ಮ ಮನಸ್ಸು ಶಾಂತಸ್ಥಿತಿಯನ್ನು ಹೊಂದಿರುತ್ತದೆ. ನಿಮ್ಮ ಮನಸ್ಸಿನ ಒತ್ತಡಗಳೆಲ್ಲ ಅಲ್ಲಿ ಮಾಯವಾಗಿ ಬೀಡುತ್ತದೆ. ನೀವು ಏಂಕಾತದಲ್ಲಿ ಡೈರಿ ಬರೆಯುವುದರಿಂದ ನಿಮ್ಮ ಮನಸ್ಸು ಏಕಾಗ್ರತೆ ಯನ್ನು ಹೊಂದುತ್ತದೆ. ಇದರಿಂದ ನೀವು ನಿತ್ಯವೂ ಹಸನ್ಮುಖೀಯಾಗಿ ಶಾಂತರೀತಿಯಲ್ಲಿ ಕೆಲಸ ಮಾಡಬಹುದು.
ತಪ್ಪುಗಳನ್ನು ಅರಿಯಲು…
ನೀವು ಬರೆದ ಡೈರಿಯನ್ನು ಒಮ್ಮೆ ಫ್ರೀ ಟೈಮ್‌ನಲ್ಲಿ ಓದಿ ಆಗ ನಿಮಗಾಗುವ ಅನುಭವ ಅದ್ಭುತ ಎನ್ನಬಹುದು. ಡೈರಿ ಬರೆಯುವಾಗ ನೀವು ಎಲ್ಲಾ ವಿಷಯವನ್ನು ಬರೆದಿಡುತ್ತೀರಿ. ಈ ವಿಷಯವನ್ನು ನೀವು ಓದಿದಾಗ ನಿಮ್ಮ ತಪ್ಪುಗಳು ನಿಮಗೆ ತಿಳಿಯುತ್ತವೆ. ಮುಂದೆ ಜೀವನದಲ್ಲಿ ಈ ತಪ್ಪುಗಳನ್ನು ಎಂದೂ ಮಾಡುವುದಿಲ್ಲ ಅಲ್ಲದೆ, ಕೆಲವೊಂದು ಘಟನೆಗಳು ನಮ್ಮ ಜೀವನದಲ್ಲಿ ಪದೇ ಪದೇ ನಡೆಯುತ್ತಿರುತ್ತವೆ. ಆದರೆ, ಇದರ ಮೂಲ ನಮಗೆ ತಿಳಿಯುವುದಿಲ್ಲ. ಈ ರೀತಿ ಡೈರಿ ಬರೆದು ಓದುವುದರಿಂದ ನಮ್ಮ ಜೀವನದಲ್ಲಿ ತಪ್ಪುಗಳನ್ನು ತಡೆಯಬಹುದು.
ನೆನಪುಗಳ ಜೀವಂತಿಕೆಗೆ…
ಡೈರಿಯಲ್ಲಿ ನೀವು ನಿತ್ಯವು ಬರೆದ ಘಟನೆಗಳನ್ನು ಮುಂದೆ ಓದಿದಾಗ ನಿಮಗೆ ಒಂದು ಸುಂದರ ಅನುಭವ ಸಿಗುತ್ತದೆ. ಕೆಲವೊಂದು ಘಟನೆಗಳನ್ನು ಮತ್ತು ಕೆಲವೊಂದು ವ್ಯಕ್ತಿಗಳನ್ನು ಮರೆಯುತ್ತಿರುತ್ತೇವೆ. ಆದರೆ ಡೈರಿಯಲ್ಲಿ ಅಕ್ಷರ ರೂಪ ಪಡೆದ ಇಂತಹ ಘಟನೆಗಳು ಮತ್ತು ವ್ಯಕ್ತಿಗಳನ್ನು ನಾವು ಮರೆಯುವುದಿಲ್ಲ. ಇಂತಹ ಸಂದರ್ಭಗಳನ್ನು ನಾವು ಬಿಡುವಿನ ವೇಳೆಯಲ್ಲಿ ಓದಿದಾಗ ನಾವು ಹಳೆಯ ನೆನಪುಗಳಿಗೆ ಹೋಗುತ್ತೇವೆ. ಅಕ್ಷರಗಳು ನೀಡುವ ಅನುಭವವೇ ಅದ್ಭುತ ಅಲ್ಲವೆ?
ಏಕಾಂಗಿತನದ ನಿವಾರಣೆಗಾಗಿ…
ನೀವು ಏಕಾಂಗಿ ಎಂದು ಕೊರಗುತ್ತಿದ್ದರೆ ಡೈರಿ ಬರೆಯುವ ಅಭ್ಯಾಸ ಮಾಡಿಕೊಳ್ಳಿ . ಏಕೆಂದರೆ, ಏಕಾಂಗಿ, ಒಂಟಿಜೀವ ಎಂಬ ಭಾವನೆಯಲ್ಲಿ ಕೊರಗುತ್ತಿದ್ದರೆ ಹಲವು ಮಾನಸಿಕ ಖಾಯಿಲೆ ಖಜಾನೆಯನ್ನೇ ಹೊತ್ತು ತರುತ್ತದೆ. ಈ ಸಮಸ್ಯೆಯಿಂದ ನೀವು ದೂರವಾಗಲು ಡೈರಿ ಸಹಾಯಕವಾಗುತ್ತದೆ. ರಾತ್ರಿ ಮಲಗುವ ಮುನ್ನ ಡೈರಿಯಲ್ಲಿ ನಿಮ್ಮ ಆ ದಿನದ ಅನುಭವ ಮತ್ತು ಹೇಳದೆ ಉಳಿದ ಮಾತುಗಳನ್ನು ಬರೆಯಿರಿ ಡೈರಿಯು ನಿಮಗೆ ಒಬ್ಬ ಸ್ನೇಹಿತನಾಗುತ್ತಾನೆ. ನಿಮ್ಮ ಮಾನಸಿಕ ಭಾವನೆಗಳು ಅಕ್ಷರ ರೂಪದಲ್ಲಿ ಹೊರಹೊಮ್ಮುವುದರಿಂದ ನೀವು ಫುಲ್ ರಿಲ್ಯಾಕ್ಸ್Õ ಅಗುತ್ತೀರಿ. ಇದರಿಂದ ನಿಮ್ಮ ಏಕಾಂಗಿಯ ಭಾವನೆ ದೂರವಾಗಲು ಸಾಧ್ಯವಾಗುತ್ತದೆ.
– ಕಾವ್ಯಾ ಎಚ್. ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.