ರಾಂಚಿ: ಮಿಂಚಿನ ಆಟವಾಡಿ ಗೆದ್ದ ಆಸೀಸ್
Team Udayavani, Mar 9, 2019, 12:30 AM IST
ರಾಂಚಿ: ಸತತ 2 ಪಂದ್ಯಗಳನ್ನು ಸೋತು ಸರಣಿ ಸೋಲಿನ ಅಂಚಿನಲ್ಲಿದ್ದ ಆಸ್ಟ್ರೇಲಿಯ ರಾಂಚಿಯಲ್ಲಿ ಮಿಂಚಿನ ಆಟವಾಡಿ ಗೆಲುವಿನ ಖಾತೆ ತೆರೆದಿದೆ. ಸರಣಿಯನ್ನು ಜೀವಂತವಾಗಿರಿಸುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 5 ವಿಕೆಟಿಗೆ 313 ರನ್ ಪೇರಿಸಿದರೆ, ಭಾರತ 281ಕ್ಕೆ ಆಲೌಟ್ ಆಯಿತು. ಭಾರತದ ಅಭಿಮಾನಿಗಳಿಗೆ ಸಮಾಧಾನ ಮೂಡಿಸಿದ ಸಂಗತಿಯೆಂದರೆ ನಾಯಕ ವಿರಾಟ್ ಕೊಹ್ಲಿ ಬಾರಿಸಿದ ಸತತ 2ನೇ ಶತಕ. ಆರಂಭಿಕರ ವೈಫಲ್ಯದ ಬಳಿಕ ತಂಡದ ಬ್ಯಾಟಿಂಗ್ ಭಾರ ಹೊತ್ತ ಕೊಹ್ಲಿ 95 ಎಸೆತಗಳಿಂದ 123 ರನ್ ಸೂರೆಗೈದರು (16 ಬೌಂಡರಿ, 1 ಸಿಕ್ಸರ್). ಇದು ಕೊಹ್ಲಿ ಅವರ 41ನೇ ಏಕದಿನ ಶತಕ. ತವರಿನ ಹೀರೋ ಧೋನಿ ಕೇವಲ 26 ರನ್ ಮಾಡಿ ನಿರಾಸೆ ಮೂಡಿಸಿದರು.
ಖ್ವಾಜಾ-ಫಿಂಚ್ ಭರ್ಜರಿ ಪಂಚ್
ಉಸ್ಮಾನ್ ಖ್ವಾಜಾ ಮತ್ತು ನಾಯಕ ಆರನ್ ಫಿಂಚ್ 32ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು ಭಾರತದ ಬೌಲರ್‌ಗಳನ್ನು ಗೋಳುಹೊಯ್ದುಕೊಂಡರು. ಇವರ ಅಬ್ಬರದ ಜತೆಯಾಟದಲ್ಲಿ 193 ರನ್ ಹರಿದು ಬಂತು. ಖ್ವಾಜಾ ಮೊದಲ ಶತಕ ಸಂಭ್ರಮವನ್ನಾಚರಿಸಿದರೆ, ಬ್ಯಾಟಿಂಗ್ ಬರಗಾಲದಿಂದ ಹೊರಬಂದ ಫಿಂಚ್ ಏಳೇ ರನ್ನಿನಿಂದ ಸೆಂಚುರಿ ತಪ್ಪಿಸಿಕೊಂಡರು. ಖ್ವಾಜಾ 113 ಎಸೆತಗಳನ್ನೆದುರಿಸಿ 104 ರನ್ ಬಾರಿಸಿದರು. ಇದರಲ್ಲಿ 11 ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿತ್ತು. ಫಿಂಚ್ ಅವರ 93 ರನ್ 99 ಎಸೆತಗಳಿಂದ ಬಂತು. ಸಿಡಿಸಿದ್ದು 10 ಫೋರ್, 3 ಸಿಕ್ಸರ್. ಫಿಂಚ್ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸುವ ಮೂಲಕ ಕುಲದೀಪ್ ಯಾದವ್ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ರಾಂಚಿಯಲ್ಲಿ ರನ್ ಸರಾಗವಾಗಿ ಹರಿದು ಬರುತ್ತಿದ್ದುದನ್ನು ಗಮನಿಸಿದ ಫಿಂಚ್, 3ನೇ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕ್ರೀಸಿಗೆ ಇಳಿಸಿದರು. ಎಂದಿನ ಸಿಡಿಲಬ್ಬರದ ಹೊಡೆತಗಳಿಗೆ ಮುಂದಾದ “ಮ್ಯಾಕ್ಸಿ’, 31 ಎಸೆತಗಳಿಂದ 47 ರನ್ ಬಾರಿಸಿದರು (3 ಬೌಂಡರಿ, 3 ಸಿಕ್ಸರ್).
ಸಾಮಾನ್ಯವಾಗಿ ಡೆತ್ ಓವರ್‌ಗಳಲ್ಲಿ ಧಾರಾಳ ರನ್ ಬಿಟ್ಟುಕೊಡುತ್ತಿದ್ದ ಭಾರತದ ಬೌಲರ್‌ಗಳು ಇಲ್ಲಿ ನಿಯಂತ್ರಣ ಸಾಧಿಸಿದ್ದು ವಿಶೇಷವಾಗಿತ್ತು. ಕೊನೆಯ 10 ಓವರ್‌ಗಳಲ್ಲಿ ಆಸೀಸ್‌ಗೆ ಗಳಿಸಲು ಸಾಧ್ಯವಾದದ್ದು 69 ರನ್ ಮಾತ್ರ. ಇಲ್ಲವಾದರೆ ಪ್ರವಾಸಿಗರ ಸ್ಕೋರ್ 350ರ ಗಡಿ ದಾಟುವ ಎಲ್ಲ ಸಾಧ್ಯತೆ ಇತ್ತು.
ಯೋಧರ ಕ್ಯಾಪ್ ಧರಿಸಿದ ಕ್ರಿಕೆಟಿಗರು
ರಾಂಚಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಭಾರತೀಯ ಕ್ರಿಕೆಟಿಗರು ರಾಂಚಿ ಪಂದ್ಯದ ವೇಳೆ ಗೌರವ ಸಲ್ಲಿಸಿದ್ದಾರೆ. ಟೀಮ್ ಇಂಡಿಯಾ ಸದಸ್ಯರೆಲ್ಲರೂ ಯೋಧರ ಕ್ಯಾಪ್ ಧರಿಸಿ ಆಡಿದರು. ಭಾರತೀಯ ಸೇನೆಯ ಗೌರವ ಲೆಫ್ಟಿನೆಂಟ್ ಆಗಿರುವ ಧೋನಿ ಈ ಕ್ಯಾಪ್‌ಗ್ಳನ್ನು ಹಸ್ತಾಂತರಿಸಿದರು. ಜತೆಗೆ ಭಾರತದ ಆಟಗಾರರೆಲ್ಲ ಒಂದು ದಿನದ ಪಂದ್ಯದ ಸಂಭಾವನೆಯನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಅರ್ಪಿಸಿದ್ದಾರೆ. ಒಂದು ಏಕದಿನ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರಿಗೆ ತಲಾ 8 ಲಕ್ಷ ರೂ. ಸಿಗುತ್ತದೆ. ಮೀಸಲು ಆಟಗಾರರಿಗೆ ಇದರ ಅರ್ಧದಷ್ಟು ಸಂಭಾವನೆ ಸಿಗುತ್ತದೆ. ಎಲ್ಲ ಆಟಗಾರರಿಂದ ಸೇರಿ ಒಟ್ಟು 1.2 ಕೋಟಿ ರೂ. ರಕ್ಷಣಾ ನಿಧಿಗೆ ಸೇರಲಿದೆ.
ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ
ಆರನ್ ಫಿಂಚ್ ಎಲ್‌ಬಿಡಬ್ಲ್ಯು ಕುಲದೀಪ್ 93
ಉಸ್ಮಾನ್ ಖ್ವಾಜಾ ಸಿ ಬುಮ್ರಾ ಬಿ ಶಮಿ 104
ಗ್ಲೆನ್ ಮ್ಯಾಕ್ಸ್‌ವೆಲ್ ರನೌಟ್ 47
ಶಾನ್ ಮಾರ್ಷ್ ಸಿ ಶಂಕರ್ ಬಿ ಕುಲದೀಪ್ 7
ಮಾರ್ಕಸ್ ಸ್ಟೋಯಿನಿಸ್ ಔಟಾಗದೆ 31
ಪೀಟರ್ ಹ್ಯಾಂಡ್ಸ್‌ಕಾಂಬ್ ಎಲ್‌ಬಿಡಬ್ಲ್ಯು ಕುಲದೀಪ್ 0
ಅಲೆಕ್ಸ್ ಕ್ಯಾರಿ ಔಟಾಗದೆ 21
ಇತರ 10
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 313
ವಿಕೆಟ್ ಪತನ: 1-193, 2-239, 3-258, 4-263, 5-263.
ಬೌಲಿಂಗ್:
ಮೊಹಮ್ಮದ್ ಶಮಿ 10-0-52-1
ಜಸ್‌ಪ್ರೀತ್ ಬುಮ್ರಾ 10-0-53-0
ರವೀಂದ್ರ ಜಡೇಜ 10-0-64-0
ಕುಲದೀಪ್ ಯಾದವ್ 10-0-64-3
ವಿಜಯ್ ಶಂಕರ್ 8-0-44-0
ಕೇದಾರ್ ಜಾಧವ್ 2-0-32-0
ಭಾರತ
ಶಿಖರ್ ಧವನ್ ಸಿ ಮ್ಯಾಕ್ಸ್‌ವೆಲ್ ಬಿ ರಿಚರ್ಡ್‌ಸನ್ 1
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ಕಮಿನ್ಸ್ 14
ವಿರಾಟ್ ಕೊಹ್ಲಿ ಬಿ ಝಂಪ 123
ಅಂಬಾಟಿ ರಾಯುಡು ಬಿ ಕಮಿನ್ಸ್ 2
ಎಂ.ಎಸ್. ಧೋನಿ ಬಿ ಝಂಪ 26
ಕೇದಾರ್ ಜಾಧವ್ ಎಲ್‌ಬಿಡಬ್ಲ್ಯು ಝಂಪ 26
ವಿಜಯ್ ಶಂಕರ್ ಸಿ ರಿಚರ್ಡ್‌ಸನ್ ಬಿ ಲಿಯೋನ್ 32
ರವೀಂದ್ರ ಜಡೇಜ ಸಿ ಮ್ಯಾಕ್ಸ್‌ವೆಲ್ ಬಿ ರಿಚರ್ಡ್‌ಸನ್ 24
ಕುಲದೀಪ್ ಯಾದವ್ ಸಿ ಫಿಂಚ್ ಬಿ ಕಮಿನ್ಸ್ 10
ಮೊಹಮ್ಮದ್ ಶಮಿ ಸಿ ಕಮಿನ್ಸ್ ಬಿ ರಿಚರ್ಡ್‌ಸನ್ 8
ಜಸ್‌ಪ್ರೀತ್ ಬುಮ್ರಾ ಔಟಾಗದೆ 0
ಇತರ 15
ಒಟ್ಟು (48.2 ಓವರ್‌ಗಳಲ್ಲಿ ಆಲೌಟ್) 281
ವಿಕೆಟ್ ಪತನ: 1-11, 2-15, 3-27, 4-86, 5-174, 6-219, 7-251, 8-273, 9-281.
ಬೌಲಿಂಗ್:
ಪ್ಯಾಟ್ ಕಮಿನ್ಸ್ 8.2-1-37-3
ಜೇ ರಿಚರ್ಡ್‌ಸನ್ 9-2-37-3
ಮಾರ್ಕಸ್ ಸ್ಟೋಯಿನಿಸ್ 5-0-39-0
ನಥನ್ ಲಿಯೋನ್ 10-0-57-1
ಆ್ಯಡಂ ಝಂಪ 10-0-70-3
ಗ್ಲೆನ್ ಮ್ಯಾಕ್ಸ್‌ವೆಲ್ 5-0-30-0
ಪಂದ್ಯಶ್ರೇಷ್ಠ: ಉಸ್ಮಾನ್ ಖ್ವಾಜಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ
Pro Kabbaddi: ಅಗ್ರಸ್ಥಾನಿ ಹರಿಯಾಣ 11ನೇ ವಿಕ್ರಮ; ಪುಣೇರಿ ಪಲ್ಟಾನ್‌ಗೆ ಸೋಲು
Asia Cup Hockey: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 11-0 ಅಂತರದ ಜಯ
Syed Mushtaq Ali Trophy: ಸೌರಾಷ್ಟ್ರಕ್ಕೆ ಶರಣಾದ ಕರ್ನಾಟಕ
Singapore: ವಿಶ್ವ ಚೆಸ್ ಚಾಂಪಿಯನ್‌ಶಿಪ್: ಮೂರನೇ ಪಂದ್ಯದಲ್ಲಿ ಗುಕೇಶ್ ಗೆಲುವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Puttur: ಕೊಕ್ಕೊ ಧಾರಣೆ ತುಸು ಚೇತರಿಕೆ; ಸಿಂಗಲ್ ಚೋಲ್‌ಗೆ ಬೇಡಿಕೆ
IPL Auction: ಗುಜರಾತ್ ಟೈಟಾನ್ಸ್ ಪಾಲಾದ ಸಿರಾಜ್; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ
EVM Issue: ಇವಿಎಂಗೂ ಮುನ್ನ ರಾಹುಲ್‌ರನ್ನು ಬದಲಿಸಿ ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್
MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.