ರಿಕ್ಷಾ ಚಾಲಕಿ ಜಾಸ್ಮಿನ್‌ಗೆ ತಂದೆಯೇ ಗುರು
ಕಾಯಕ ಗುರುವಿಗೆ ನಮೋ ನಮಃ
Team Udayavani, Sep 5, 2019, 5:00 AM IST
ಬದುಕಿನ ದಾರಿ ತೋರಿಸ ಬೇಕಾದ ತಂದೆಯೇ ಗುರುವಾಗಿ ಜೀವನದ ದಿಕ್ಕನ್ನು ಬದಲಾಯಿಸಿ ದ್ದಾರೆ. ಅವರು ಕಲಿಸಿದ ವಿದ್ಯೆ ಯಿಂದ ಇಂದು ಜೀವನ ಸಾಗಿಸಲು ಸಾಧ್ಯವಾಯಿತು ಎನ್ನುತ್ತಾರೆ ಜಿಲ್ಲೆಯ ಕೈಸ್ತ ಸಮುದಾಯದ ಮೊದಲ ಮಹಿಳಾ ರಿಕ್ಷಾ ಚಾಲಕಿ ಪೆರಂಪಳ್ಳಿಯ 25 ವರ್ಷದ ಜಾಸ್ಮಿನ್ ಡಿ’ಕೋಸ್ತಾ.
ಛಲ, ಪರಿಶ್ರಮ, ಪ್ರಾಮಾಣಿಕತೆ ಇದ್ದಾಗ ಏನು ಬೇಕಾದರೂ ಸಾಧಿಸ ಬಹುದು. ಈ ಪ್ರಪಂಚದಲ್ಲಿ ‘ಆಗದು’ಎಂದು ಯಾವುದೂ ಇಲ್ಲ ಎಂಬುದಕ್ಕೆ ಉದಾಹರಣೆ ಜಾಸ್ಮಿನ್ ಡಿ’ಕೋಸ್ತಾ. ತಂದೆ ಲೆಸ್ಲಿ ಡಿ’ಕೊಸ್ತಾ ಅವರೇ ನನ್ನ ಗುರು. ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವಾಗ ನನಗೆ ರಿಕ್ಷಾ ಕಲಿ ಯುವಂತೆ ಪ್ರೋತ್ಸಾಹಿಸಿದರು. ಅವರೇ ಲೈಸೆನ್ಸ್ ಮಾಡಿಸಿಕೊಟ್ಟರು. ಅವರ ನಿಧನದ ಬಳಿಕ ರಿಕ್ಷಾ ಚಾಲಕಿ ಯಾಗಿದ್ದೇನೆ ಎನ್ನುತ್ತಾರೆ ಜಾಸ್ಮಿನ್.
ಹೆಮ್ಮಕ್ಕಳು ಗಂಡು ಮಕ್ಕಳಿಗೆ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ನನ್ನ ತಂದೆ ನನ್ನನ್ನು ಬೆಳೆಸಿದ್ದಾರೆ. ಬದುಕನ್ನು ಹೇಗೆ ರೂಪಿಸಿಕೊಳ್ಳ ಬೇಕು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ರಿಕ್ಷಾ ಚಾಲಕರಿಗೆ ಬೇಕಾದ ಜ್ಞಾನ, ತಾಳ್ಮೆ, ನಿರ್ಧಾರ, ಧೈರ್ಯವನ್ನು ಧಾರೆ ಎರೆದಿದ್ದಾರೆ. ಅಂದು ಅವರು ಒತ್ತಾಯಪೂರ್ವಕವಾಗಿ ಹೇಳಿಕೊಟ್ಟ ಈ ವಿದ್ಯೆ ಇಂದು ನನ್ನ ಬದುಕಿಗೆ ದಾರಿದೀಪವಾಗಿದೆ – ಜಾಸ್ಮಿನ್ ವಿವರಿಸುತ್ತಾರೆ.
ಜಾಸ್ಮಿನ್ ಒಂದೂವರೆ ವರ್ಷ ದಿಂದ ರಿಕ್ಷಾ ಚಾಲಕಿಯಾಗಿದ್ದಾರೆ. ಪರಿಸರದಲ್ಲಿ ರಾತ್ರಿಯೂ ನಿರ್ಭಯ ವಾಗಿ ಬಾಡಿಗೆಗೆ ತೆರಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳ ಜತೆಗೆ ಶಿಕ್ಷಕರಿಗೂ ಆನ್ ಲೈನ್ ಕ್ಲಾಸ್ ಎಂಬ ಹೊಸ ಅನುಭವ
ವಿದ್ಯಾರ್ಥಿಗಳ ನೇರ ಒಡನಾಟವಿಲ್ಲದೇ ವೃತ್ತಿ ಜೀವನ ಬೇಸರವೆನಿಸಿದೆ
ಈಗ ಶಾಲಾ ಕಾಲೇಜುಗಳಲ್ಲಿ ಎಲ್ಲರ ಬಾಯಲ್ಲೂ ಆನ್ ಲೈನ್ ತರಗತಿಗಳದ್ದೇ ವಿಚಾರ
ಮಕ್ಕಳೊಂದಿಗೆ ಇದ್ದು ಪಾಠ ಮಾಡುವ ಖುಷಿ ಆನ್ ಲೈನ್ ಕ್ಲಾಸ್ ನಲ್ಲಿ ಸಿಗಲ್ಲ..!
ವಸತಿ ಪ್ರದೇಶಕ್ಕೆ ತೆರಳಿ ಮಕ್ಕಳ ಕಲಿಕೆಗೆ ಶ್ರಮಿಸುತ್ತಿರುವ ಶಿಕ್ಷಕರು ಅಭಿನಂದನಾರ್ಹರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.