ಮಾರುಕಟ್ಟೆಗೆ ಬರುತ್ತಿದೆ 20 ಲಕ್ಷದ ಕವಾಸಕಿ ನಿಂಜಾ ಬೈಕ್!
2020 ನಿಂಜಾ ಝಡ್ ಎಕ್ಸ್ 14 ಆರ್ ಬೈಕಿನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?
Team Udayavani, Oct 18, 2019, 7:30 PM IST
ನವದೆಹಲಿ: ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಹೊಂದಿರುವ ಕವಾಸಕಿ ಕಂಪನಿ ಇದೀಗ ಹೊಸ 2020 ನಿಂಜಾ ಝಡ್.ಎಕ್ಸ್. 14ಆರ್ ಬೈಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದ್ದು ಈಗಾಗಲೇ ಈ ಬೈಕಿನ ಬುಕ್ಕಿಂಗ್ ಪ್ರಾರಂಭವಾಗಿದೆ. ಆಕರ್ಷಕ ರೂಪದಲ್ಲಿ ಮತ್ತು ಸುಧಾರಿತ ತಂತ್ರಜ್ಞಾನದಲ್ಲಿ ಹೊರಬರುತ್ತಿರುವ ಈ ಸ್ಪೋರ್ಟ್ಸ್ ಬೈಕಿನ ಎಕ್ಸ್ ಶೋರೂಂ ಬೆಲೆ 19.70 ಲಕ್ಷ ರೂ ಆಗಿರಲಿದೆ.
ಈ ಬೈಕುಗಳ ಮುಂಗಡ ಬುಕ್ಕಿಂಗ್ ಈ ತಿಂಗಳ 19ನೇ ತಾರೀಖಿನವರೆಗೆ ಮಾತ್ರ ಇರಲಿದೆ. ಯಾಕೆಂದರೆ ಈ ಬುಕ್ಕಿಂಗ್ ಆಧಾರದ ಮೇಲೆ ಬೈಕ್ ಗಳ ಉತ್ಪಾದನೆ ನಡೆದು ಆ ಬೈಕುಗಳು ದೇಶದಲ್ಲಿ ಬಿ.ಎಸ್.6 ನಿಯಮಾವಳಿ ಜಾರಿಗೊಳ್ಳುವ ಮೊದಲು ಅಂದರೆ 2020ರ ಎಪ್ರಿಲ್ 1ನೇ ತಾರೀಖಿನೊಳಗೆ ರಸ್ತೆಗಿಳಿಯಲೇಬೇಕಾಗಿರುವುದರಿಂದ ಬುಕ್ಕಿಂಗ್ ಅನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ ಎಂದು ಡೀಲರ್ಸ್ ಗಳು ಮಾಹಿತಿ ನೀಡಿದ್ದಾರೆ.
2020 ಕವಾಸಕಿ ಝಡ್‌ಎಕ್ಸ್ 14 ಆರ್. ಬೈಕ್ ಗಳು ಮೆಟಾಲಿಕ್ ಡಯಾಬ್ಲೊ ಬ್ಲಾಕ್ ಹಾಗೂ ಗೋಲ್ಡನ್ ಬ್ಲೇಜ್ಡ್ ಗ್ರೀನ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಗ್ರಾಹಕರಿಗೆ ಲಭಿಸಲಿದೆ. ಮಾರುಕಟ್ಟೆಗೆ ಹೊಸದಾಗಿ ಬರಲಿರುವ ಈ ಸ್ಪೋರ್ಟ್ಸ್ ಬೈಕ್ ಸದ್ಯ ಮಾರುಕಟ್ಟೆಯಲ್ಲಿರುವ ಎಲ್ಲಾ ಬೈಕ್ ಗಳ ಬಣ್ಣಕ್ಕಿಂತ ವಿಭಿನ್ನವಾಗಿ ಕಾಣಿಸಿಕೊಳ್ಳಲಿದೆ ಎಂಬ ಭರವಸೆಯನ್ನು ಕಂಪನಿ ನೀಡಿದೆ.
ಬಿಎಸ್ 4 ಎಂಜಿನ್
ಇದರಲ್ಲಿ ಬಿಎಸ್ 4 ಎಂಜಿನ್ ಅನ್ನು ಅಳವಡಿಸಿದ್ದು, ಹೊಸ ಬಣ್ಣದ ಹೊರತಾಗಿ ಈ ಬೈಕಿನಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಇದೀಗ ಮಾರುಕಟ್ಟೆಗೆ ಬರಲಿರುವ ಈ ಬೈಕ್ ಸದ್ಯ ಮಾರುಕಟ್ಟೆಯಲ್ಲಿರುವ ಝಡ್.ಎಕ್ಸ್. 14 ಆರ್. ಮಾದರಿಯ ಕೊನೆಯ ಆವೃತ್ತಿಯಾಗಿರಲಿದ್ದು ಆ ಬಳಿಕ ಕವಾಸಕಿ ಕಂಪನಿಯು ಶೀಘ್ರದಲ್ಲೇ ಈ ನವೀನ ಮಾದರಿಯ ಬೈಕ್ ಗಳನ್ನು ಹೊರತರುವ ನಿರೀಕ್ಷೆ ಇದೆ.
ಕವಾಸಕಿ ಝಡ್‌ಎಕ್ಸ್ 14 ಆರ್. ಬೈಕಿನಲ್ಲಿ 1,441 ಸಿಸಿಯ ಲಿಕ್ವಿಡ್ ಕೂಲ್ಡ್ ಇನ್ ಲೈನ್ ನೊಂದಿಗೆ 4 ಸಿಲಿಂಡರ್ ಎಂಜಿನ್ ಅಳವಡಿಸಲಾಗಿದ್ದು, ದೊಡ್ಡ ಗಾತ್ರದ ಎಂಜಿನ್ ಎರಡು ಪವರ್ ಔಟ್ ಪುಟ್ ಗಳನ್ನು ಉತ್ಪಾದಿಸುತ್ತದೆ. ಎಂಜಿನ್ ಅಲ್ಲಿ ಒಟ್ಟು ಆರು ಸ್ಪೀಡಿನ ಗೇರ್ ಬಾಕ್ಸ್ ಇದ್ದು, ಕವಾಸಕಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಜೊತೆಗೆ ಹೆಚ್ಚುವರಿ ಸುರಕ್ಷತೆಗಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.