ದೇಶಕ್ಕೆ 5ಜಿ ಪ್ರವೇಶ; 4ಜಿ ಗಿಂತ 10 ಪಟ್ಟು ವೇಗ…


Team Udayavani, Oct 1, 2022, 6:30 AM IST

ದೇಶಕ್ಕೆ 5ಜಿ ಎಂಟ್ರಿ; 4ಜಿ ಗಿಂತ 10 ಪಟ್ಟು ವೇಗ

ಅ.1ರಿಂದ ಭಾರತದಲ್ಲಿ 5ಜಿ ಸೇವೆ ಆರಂಭವಾಗುತ್ತಿದೆ. ದೇಶದಲ್ಲಿ ಡಿಜಿಟಲ್‌ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ 5ಜಿ ಸೇವೆ ಸಹಕಾರಿಯಾಗಿದೆ. ಈಗಾಗಲೇ 5ಜಿ ಸ್ಮಾರ್ಟ್‌ ಮೊಬೈಲ್‌ ಪೋನ್‌ ಹೊಂದಿರುವ ದೇಶದ 100 ಮಿಲಿಯನ್‌ ಜನರು 5ಜಿ ಸೇವೆಯ ಲಭ್ಯತೆಗಾಗಿ ಕಾಯುತ್ತಿದ್ದಾರೆ. 5ಜಿ ಸೇವೆಯಿಂದ ಇಂಟರ್ನೆಟ್‌ ವೇಗ ಹೆಚ್ಚುವ ಜತೆಗೆ ಹಲವಾರು ಉಪಯೋಗಗಳ ಬಗ್ಗೆ ವಿಸ್ತೃತ ಮಾಹಿತಿ ಇಲ್ಲಿದೆ.

4ಜಿ ಗಿಂತ 10 ಪಟ್ಟು ವೇಗ:
ಪ್ರಸ್ತುತ 4ಜಿ ಸೇವೆಗಳಿಗಿಂತ ಸುಮಾರು 10 ಪಟ್ಟು ಹೆಚ್ಚಿನ ವೇಗ ಮತ್ತು ಸಾಮರ್ಥ್ಯವನ್ನು 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳು ಹೊಂದಿರಲಿದೆ. ಟೆಲಿಕಾಂ ಸೇವಾ ಪೂರೈಕೆದಾರರಿಂದ 5ಜಿ ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಮಧ್ಯಮ ಮತ್ತು ಉನ್ನತ ಬ್ಯಾಂಡ್‌ ಸ್ಪೆಕ್ಟ್ರಮ್‌ ಅನ್ನು ಬಳಸಿಕೊಳ್ಳಲಾಗುತ್ತದೆ.

8 ಸಂಸೆೆ§ಗಳಲ್ಲಿ ಟೆಸ್ಟ್‌ ಬೆಡ್‌:
ದೇಶದ ಎಂಟು ಉನ್ನತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಸ್ಥಾಪಿಸಲಾದ 5ಜಿ ಟೆಸ್ಟ್‌ ಬೆಡ್‌ ಭಾರತದಲ್ಲಿ ದೇಶೀಯ 5ಜಿ ತಂತ್ರಜ್ಞಾನ ಪ್ರಸರಣವನ್ನು ತ್ವರಿತಗೊಳಿಸಿದೆ.

ಮೊಬೈಲ್‌ಗ‌ಳು, ಟೆಲಿಕಾಂ ಉಪಕರಣಗಳಿಗಾಗಿ ಉತ್ಪಾದನೆ ಆಧರಿತ ಪೋತ್ಸಾಹಧನ(ಪಿಎಲ್‌ಐ) ಯೋಜನೆಗಳು ಮತ್ತು ದೇಶೀಯವಾಗಿ ಸೆಮಿಕಂಡಕ್ಟರ್‌ ಉತ್ಪಾದನೆ ಯೋಜನೆಗೆ ಚಾಲನೆ ನೀಡಿರುವುದು 5ಜಿ ಸೇವೆಗಳ ಆರಂಭಕ್ಕೆ ಪೂರಕ ಪರಿಸರ ವ್ಯವಸೆೆ§ಯನ್ನು ನಿರ್ಮಿಸಿದೆ.

ಇಂಡಿಯನ್‌ ಟೆಲಿಗ್ರಾಫ್ ರೈಟ್‌ ಆಫ್ ವೇ ತಿದ್ದುಪಡಿ ನಿಯಮಗಳು 2022ರ ಪ್ರಕಾರ, ಡಿಜಿಟಲ್‌ ಮೂಲಸೌಕರ್ಯ, ಏರಿಯಲ್‌ ಫೈಬರ್‌ ಮತ್ತು ಸ್ಟ್ರೀಟ್‌ ಫೈಬರ್‌ಗಳ ತ್ವರಿತ ಪ್ರಸರಣದಲ್ಲಿ ಉದ್ಯಮಕ್ಕೆ 5ಜಿ ಸಹಾಯ ಮಾಡುತ್ತದೆ.

ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಲಭ್ಯ:
ಭಾರತದಲ್ಲಿ 5ಜಿ ಇಂಟರ್ನೆಟ್‌ ಸೇವೆಗಳು ಮೊದಲ ಹಂತದಲ್ಲಿ 13 ನಗರಗಳಲ್ಲಿ ಲಭ್ಯವಿರಲಿವೆ. ಬೆಂಗಳೂರು, ಅಹಮದಾಬಾದ್‌, ಚಂಡೀಗಢ, ಚೆನ್ನೈ, ನವದೆಹಲಿ, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್‌, ಜಾಮ್ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದಲ್ಲಿ 5ಜಿ ಸೇವೆ ಲಭ್ಯವಿರಲಿದೆ.

ದರ ಹೆಚ್ಚಳ ಸಾಧ್ಯತೆ ಕಡಿಮೆ:
3ಜಿ ಮತ್ತು 4ಜಿ ಸೇವೆಗಳಂತೆ, ಟೆಲಿಕಾಂ ಕಂಪನಿಗಳು ಶೀಘ್ರದÇÉೇ 5ಜಿ ಸೇವೆಗಳ ಬಗೆಗಿನ ದರಪಟ್ಟಿ ಘೋಷಿಸಲಿವೆ. ಗ್ರಾಹಕರು ತಮ್ಮ ಸಾಧನಗಳಲ್ಲಿ 5ಜಿ ಸೇವೆಗಳನ್ನು ಬಳಸಲು ಕೊಂಚ ಹೆಚ್ಚು ಮೊತ್ತವನ್ನು ಪಾವತಿಸಬೇಕಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಇನ್ನೊಂದೆಡೆ, ಏರ್‌ಟೆಲ್‌ ಚೀಫ್ ಟೆಕ್ನಾಲಜಿ ಆಫಿಸರ್‌(ಸಿಟಿಒ) ರಣದೀಪ್‌ ಸೆಖೋನ್‌ ಪ್ರಕಾರ, “ಜಾಗತಿಕವಾಗಿ 5ಜಿ ಮತ್ತು 4ಜಿ ದರಗಳ ನಡುವೆ ಭಾರಿ ವ್ಯತ್ಯಾಸವಿಲ್ಲ. ಹಾಗಾಗಿ ಭಾರತದಲ್ಲಿ 5ಜಿ ಸೇವೆಗಳ ದರವು 4ಜಿ ದರಗಳಿಗೆ ಸಮಾನವಾಗಿರಲಿದೆ. ನಾವು ಕೂಡ ಇದನ್ನೇ ನಿರೀಕ್ಷಿಸುತ್ತಿದ್ದೇವೆ,’ ಎಂದು ಹೇಳಿದ್ದಾರೆ. ಹಾಗಾಗಿ 4ಜಿ ಸೇವೆಗಳಿಗೆ ಹೋಲಿಸಿದರೆ 5ಜಿ ಸೇವೆಗಳಿಗೆ ದರ ಹೆಚ್ಚಳ ಸಾಧ್ಯತೆ ಕಡಿಮೆ ಎನ್ನಬಹುದು.

ಎಲ್ಲಾ ವಿಭಾಗದ ಗ್ರಾಹಕರಿಗೆ ಪ್ರಯೋಜನ:
5ಜಿ ಸೇವೆಯಿಂದ ಎಲ್ಲಾ ವಿಭಾಗದ ಗ್ರಾಹಕರು ಪ್ರಯೋಜನ ಪಡೆಯಬಹುದು. ಮನೆಯಲ್ಲಿ 5ಜಿ ಬಳಸುವ ಗ್ರಾಹಕರು ಫೈಬರ್‌ ಸಾಧನ ಅಥವಾ 5ಜಿ ಹ್ಯಾಂಡ್‌ಸೆಟ್‌ ಬಳಸಿ ಹೆಚ್ಚಿನ ವೇಗದ ಇಂಟರ್ನೆಟ್‌ ಪಡೆಯಬಹುದು. ಸಾಮಾಜಿಕ ವಲಯಗಳಾದ ಕೃಷಿ, ಆರೋಗ್ಯ, ಶಿಕ್ಷಣ, ಇತ್ಯಾದಿ ಕ್ಷೇತ್ರಗಳಿಗೆ ಇದು ನೆರವಾಗಲಿದೆ.

ಭಾರತದ ಆರ್ಥಿಕತೆಗೆ ಪುಷ್ಟಿ :
5ಜಿ ತಂತ್ರಜ್ಞಾನದಿಂದ ಭಾರತಕ್ಕೆ ಹೆಚ್ಚು ಪ್ರಯೋಜನ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ 2023 ಮತ್ತು 2040ರ ನಡುವೆ ಭಾರತದ ಆರ್ಥಿಕತೆಗೆ 36.4 ಲಕ್ಷ ಕೋಟಿ ರೂ. ಹರಿದುಬರುವ ಸಾಧ್ಯತೆಯಿದೆ ಎಂದು ಮೊಬೈಲ್‌ ನೆಟ್‌ವರ್ಕ್‌ ಆಪರೇಟರ್‌ಗಳ ಜಾಗತಿಕ ಉದ್ಯಮ ಸಂಸ್ಥೆಯ ಇತ್ತೀಚಿನ ವರದಿಯು ಅಂದಾಜಿಸಿದೆ.

5ಜಿ ಸೇವೆ ಹೊಂದಲು ಬಳಕೆದಾರರು ಸಿದ್ಧ:
2030ರ ವೇಳೆಗೆ ಭಾರತದಲ್ಲಿ ಒಟ್ಟು ಸಂಪರ್ಕಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚು 5ಜಿ ತಂತ್ರಜ್ಞಾನ ಇರಲಿದೆ. ಮುಂದಿನ ಎಂಟು ವರ್ಷಗಳಲ್ಲಿ 2ಜಿ ಮತ್ತು 3ಜಿ ಪಾಲು ಶೇ.10ಕ್ಕಿಂತ ಕಡಿಮೆಯಾಗಲಿದೆ ಎಂದು ಗ್ಲೋಬಲ್‌ ಸಿಸ್ಟಮ್‌ ಫಾರ್‌ ಮೊಬೈಲ್‌ ಕಮ್ಯುನಿಕೇಷನ್ಸ್ ವರದಿ ಹೇಳಿದೆ.

ಭಾರತದ ಹೆಚ್ಚಿನ ಪ್ರಮಾಣದ 4ಜಿ ಬಳಕೆದಾರರು(ಶೇ.79ರಷ್ಟು ಬಳಕೆದಾರರು) 5ಜಿ ಸೇವೆಗೆ ಅಪ್‌ಡೇಟ್‌ ಆಗಲು ಇಚ್ಛಿಸಿದ್ದಾರೆ. ಅಲ್ಲದೇ 5ಜಿ ತಂತ್ರಜ್ಞಾನದಿಂದ ಉತ್ಪಾದನಾ ವಲಯ, ಚಿಲ್ಲರೆ ವ್ಯಾಪಾರ ಮತ್ತು ಕೃಷಿ ವಲಯಗಳು ಲಾಭ ಪಡೆಯಲಿವೆ ಎಂದು ವರದಿ ತಿಳಿಸಿದೆ. ಹೊಸತಾಗಿ ಬಿಡುಗಡೆ ಆಗುತ್ತಿರುವ ಫೋನ್‌ಗಳಲ್ಲಿ 5ಜಿ ತಂತ್ರಜ್ಞಾನವನ್ನು ಬೆಂಬಲಿಸುವ ವ್ಯವಸ್ಥೆ ಇದೆ. ಸದ್ಯ ಹೊಸತಂತ್ರಜ್ಞಾನ ಹೊಂದಿರುವ ಮೊಬೈಲ್‌ಗ‌ಳ ಬೆಲೆ 15 ಸಾವಿರ ರೂ.ಗಳಿಗಿಂತ ಹೆಚ್ಚಾಗಿದೆ. ದೇಶಾದ್ಯಂತ ತಂತ್ರಜ್ಞಾನ ಬಳಕೆಗೆ ಬಂದಾಗ ಹೆಚ್ಚಿನ ಮೊಬೈಲ್‌ಗ‌ಳ ದರ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು.

ದೀಪಾವಳಿಯಿಂದ ಲಭ್ಯ:
ದೀಪಾವಳಿಯಿಂದ ತಮ್ಮ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಲಿದೆ ಎಂದು ಈಗಾಗಲೇ ಜಿಯೋ ಮತ್ತು ಏರ್‌ಟೆಲ್‌ ಕಂಪನಿಗಳು ತಿಳಿಸಿವೆ. ಆದರೆ ಸದ್ಯ ಆರಂಭದಲ್ಲಿ ನವದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಮಾತ್ರ 5ಜಿ ಸೇವೆ ಲಭ್ಯವಾಗಲಿದೆ. 2023ರ ಅಂತ್ಯದ ವೇಳೆಗೆ ದೇಶದ ಎಲ್ಲ ಭಾಗಗಳಲ್ಲಿ 5ಜಿ ಸೇವೆ ದೊರೆಯಲಿವೆ ಎಂದು ಜಿಯೋ ಮತ್ತು ಏರ್‌ಟೆಲ್‌ ಕಂಪನಿಗಳು ಹೇಳಿವೆ.

5ಜಿ ಸೇವೆಯ ಉಪಯೋಗಗಳು:
* ಒಂದೇ ಕಚೇರಿಯಲ್ಲಿ ಅನೇಕ ಸಿಬ್ಬಂದಿ ಒಂದೇ ಸೆಕೆಂಡಿಗೆ 1 ಜಿಬಿ ಡೇಟಾ ಡೌನ್ಲೋಡ್ ಮಾಡಿಕೊಳ್ಳಬಹುದು.
* ಮೆಟ್ರೋಪಾಲಿಟನ್‌ ನಗರಗಳಲ್ಲಿ ಸೆಕೆಂಡಿಗೆ 100 ಮೆಗಾಬೈಟ್‌ಗಳ ದತ್ತಾಂಶ ಪ್ರಮಾಣದಲ್ಲಿ ಇಂಟರ್ನೆಟ್‌ ವೇಗ ಲಭ್ಯವಾಗಲಿದೆ.
* ಸೆೆ³ಕ್ಟ್ರಲ್‌ ದಕ್ಷತೆಯು 4ಜಿಗೆ ಹೋಲಿಸಿದರೆ ಗಮನಾರ್ಹವಾಗಿ ವರ್ಧಿಸಲಿದೆ.
* ಒಂದೇ ಬಾರಿಗೆ ಅನೇಕ ಬಳಕೆದಾರರಿಗೆ ಸೆಕೆಂಡಿಗೆ ಹತ್ತಾರು ಮೆಗಾಬೈಟ್‌ಗಳ ದತ್ತಾಂಶ ಪ್ರಮಾಣದಲ್ಲಿ ಇಂಟರ್ನೆಟ್‌ ವೇಗ ಲಭ್ಯವಾಗಲಿದೆ.
* ವ್ಯಾಪ್ತಿ ಸುಧಾರಣೆಯಾಗಲಿದೆ, ಸಿಗ್ನಲಿಂಗ್‌ ದಕ್ಷತೆ ಹೆಚ್ಚಲಿದೆ.

* ವರದಿಯೊಂದರ ಪ್ರಕಾರ, 2030ರ ವೇಳೆಗೆ ಭಾರತದಲ್ಲಿ ಒಟ್ಟು ಸಂಪರ್ಕಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚು 5ಜಿ ತಂತ್ರಜ್ಞಾನ ಇರಲಿದೆ.
* ಮುಂದಿನ ಎಂಟು ವರ್ಷಗಳಲ್ಲಿ 2ಜಿ ಮತ್ತು 3ಜಿ ಪಾಲು ಶೇ.10ಕ್ಕಿಂತ ಕಡಿಮೆಯಾಗಲಿದೆ.
* ಭಾರತದ ಹೆಚ್ಚಿನ ಪ್ರಮಾಣದ 4ಜಿ ಬಳಕೆದಾರರು(ಶೇ.79ರಷ್ಟು ಬಳಕೆದಾರರು) 5ಜಿ ಸೇವೆಗೆ ಅಪ್‌ಡೇಟ್‌ ಆಗಲು ಇಚ್ಛಿಸಿದ್ದಾರೆ.

ಸ್ಪೆಕ್ಟ್ರಂ ಹರಾಜಿನಲ್ಲಿ
ಕಂಪನಿ ಮೊತ್ತ
ರಿಲಯನ್ಸ್‌ ಜಿಯೋ 88,078 ಕೋಟಿ ರೂ.
ಭಾರ್ತಿ ಏರ್‌ಟೆಲ್‌ 43,084 ಕೋಟಿ ರೂ.
ವೋಡಾಫೋನ್‌ ಐಡಿಯಾ 18,799 ಕೋಟಿ ರೂ.
ಅದಾನಿ 212 ಕೋಟಿ ರೂ.
13,365 ಕೋಟಿ ರೂ.- ಕೇಂದ್ರ ಸರ್ಕಾರಕ್ಕೆ ಸಂಭಾವ್ಯ ಆದಾಯ
1,50,173 ಕೋಟಿ ರೂ.- 5ಜಿ ಸ್ಪೆಕ್ಟ್ರಂ ಮಾರಾಟದಿಂದ ಬಂದ ಲಾಭ

-ಸಂತೋಷ್‌ ಪಿ.ಯು.

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.