KSRTC ಪ್ರಯಾಣಿಕರಿಗೆ ಸಿಹಿಸುದ್ದಿ; ಉಚಿತ ಇಂಟರ್ನೆಟ್ ಬಳಸಿ ಪ್ರಯಾಣಿಸಿ
Team Udayavani, Jun 25, 2018, 6:21 PM IST
ಭಾರತದ ಸಾರಿಗೆ ವ್ಯವಸ್ಥೆಯಲ್ಲೇ ಅತ್ಯುನ್ನತ ಸೇವೆಗಳನ್ನು ನೀಡುತ್ತಿರುವ ಕೆ.ಎಸ್.ಆರ್.ಟಿ.ಸಿ ಸಾರಿಗೆ ಸಂಸ್ಥೆ, ಇದೀಗ ತನ್ನ ಪ್ರಯಾಣಿಕರಿಗೆ ಉಚಿತ ಡೇಟಾ ನೀಡಲಿದ್ದು ಇನ್ಮುಂದೆ ಪ್ರಯಣದುದ್ದಕ್ಕೂ ಸ್ಮಾರ್ಟ್ಫೋನ್’ಲ್ಲಿ ಉಚಿತವಾಗಿ ಸಿನೆಮಾ, ಧಾರಾವಾಹಿ, ರಿಯಾಲಿಟಿ ಶೋ ಹಾಗ0ೂ ಇನ್ನೂ ಹೆಚ್ಚಿನ ಮನರಂಜನೆಯನ್ನು ಸವಿಯಬಹುದು.
ಈ ರೀತಿಯ ಉಚಿತ ಇಂಟರ್ನೆಟ್ ಸೇವೆ ಖಾಸಗಿ ಸಾರಿಗೆಗಳಲ್ಲಿ ದೊರೆಯುತ್ತಿತ್ತು ಆದರೆ ಇದೀಗ ಕೆ.ಎಸ್.ಆರ್.ಟಿ.ಸಿ ಕೂಡ ಪ್ರಯಾಣಿಕರನ್ನು ತನ್ನತ್ತ ಸೆಳೆಯಲು ಈ ಯೋಜನೆಯನ್ನು ರೂಪಿಸಿದ.
ಕಿವಿ – ವೂಟ್.ಕಾಂ’ನ ಒಪ್ಪಂದದೊಂದಿಗೆ ವೈ-ಫೈ ಹಾಟ್ ಸ್ಪಾಟ್ ಸೇವೆಯನ್ನು ಸರ್ಕಾರಿ ಬಸ್ಸುಗಳಲ್ಲಿ ಅಳವಡಿಸಲಾಗಿದ್ದು, ವೈ-ಫೈ ಮೂಲಕ ಉಚಿತವಾಗಿ ಸಂಪರ್ಕಿಸಿಕೊಂಡು ಮನೋರಂಜನೆ ಪಡೆಯಬಹುದು.
ಇದನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ಸಂಪರ್ಕ ಪಡೆಯಬಹುದು:
◆ ಮೊದಲು ಸೆಟ್ಟಿಂಗ್ ಗೆ ಹೋಗಿ ವೈ-ಫೈ ಕ್ಲಿಕ್ ಮಾಡಿ.
◆ Wi-Fi / WLAN ಶುರು ಮಾಡಿದ ನಂತರ ಕೆಳಗಿರುವ ಲಿಸ್ಟ್’ ನಲ್ಲಿ KIVI ಎಂಬ ನೆಟ್ವರ್ಕ್ ಆಯ್ಕೆ ಮಾಡಿ.
◆ ಈಗ ಸೆಟ್ಟಿಂಗ್ ನಿಂದ ಹೊರಗೆ ಬಂದು ಗೂಗಲ್ ಕ್ರೋಮ್ / ಸಫಾರಿ ಇತರೆ ( ಬ್ರೌಸರ್) ತೆರೆಯಿರಿ.
◆ ಬ್ರೌಸರ್’ನಲ್ಲಿ www.voot.com ಅಂತ ಟೈಪ್ ಮಾಡಿ ಮುಂದುವರೆಯಿರಿ ಹಾಗೂ ಆರಾಮವಾಗಿ ಕುಳಿತು ಚಲನಚಿತ್ರ ಮತ್ತು ಇತರ ಕಾರ್ಯಕ್ರಮವನ್ನು ಸವಿಯಿರಿ.
ಈ ಉಚಿತ ಡೇಟಾ ಯೋಜನೆಯಲ್ಲಿ ನೀವು ಕೇವಲ www.voot.com ಮಾತ್ರ ಬಳಸಿಕೊಳ್ಳಬಹುದಾಗಿದ್ದು ಫೇಸ್ಬುಕ್, ವಾಟ್ಸಾಪ್, ಯೌಟ್ಯೂಬ್ ಹಾಗೂ ಇನ್ನಿತರ ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಹಾಗೂ ಈ ಸೇವೆ ಪ್ರಾರಂಭಿಕ ಹಂತದಲ್ಲಿದ್ದು ಒಂದಿಷ್ಟು ಆಯ್ದ ಸರ್ಕಾರಿ ಬಸ್ಸುಗಳಲ್ಲಿ ಇದು ಲಭ್ಯವಿದೆ ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಂತ ಎಲ್ಲ ಬಸ್ಸುಗಳಲ್ಲೂ ಈ ಸೇವೆ ದೊರೆಯುವ ಸಾಧ್ಯತೆಗಳಿವೆ.
*ಸೂರಜ್ ಅಣ್ವೇಕರ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.