ಮೃತರ ಧ್ವನಿಯನ್ನೂ ಅನುಕರಿಸಲಿದೆ ಅಲೆಕ್ಸಾ!
Team Udayavani, Jun 24, 2022, 6:50 AM IST
ವಾಷಿಂಗ್ಟನ್: ಡಿಜಿಟಲ್ ಧ್ವನಿ ಸಹಾಯಕ ತಂತ್ರಜ್ಞಾನದ ಮೂಲಕ ಜಗತ್ತಿಗೆ “ಅಲೆಕ್ಸಾ’ ಎಂಬ ಗೆಳತಿಯನ್ನು ಪರಿಚಯಿಸಿದ್ದ ಅಮೆಜಾನ್ ಈಗ ಮತ್ತೂಂದು ಹೊಸ ಪ್ರಯೋಗಕ್ಕೆ ಕೈಹಾಕಿದೆ.
ಇಹಲೋಕವನ್ನು ತ್ಯಜಿಸಿ ಹೋಗಿರುವ ಪ್ರೀತಿ ಪಾತ್ರರ ಧ್ವನಿಯನ್ನು ಮತ್ತೆ ಮತ್ತೆ ಆಲಿಸಬೇಕು ಎಂದು ಯಾರ ಮನಸ್ಸುಗಳು ತುಡಿಯುತ್ತಿರುತ್ತವೆಯೋ, ಅವರಿಗೆಂದೇ ಈ ಪ್ರಯೋಗ ನಡೆಸಲಾಗುತ್ತಿದೆ. ಸುಧಾರಿತ ತಂತ್ರಜ್ಞಾನದ ಮೂಲಕ ಅಲೆಕ್ಸಾ ಈಗ, ಯಾರದ್ದಾದರೂ ಧ್ವನಿಯ ಮಾದರಿಯನ್ನು ಕೇವಲ ಒಂದು ನಿಮಿಷ ಕಾಲ ಕೇಳಿಸಿಕೊಂಡರೆ ಸಾಕು, ಆ ಧ್ವನಿಯನ್ನೇ ಅನುಕರಣೆ ಮಾಡುವಂಥ ಸಾಮರ್ಥ್ಯವನ್ನು ಪಡೆದಿದೆ.
ಹೀಗಾಗಿ, ಮೃತ ವ್ಯಕ್ತಿಗಳ ಧ್ವನಿಯ ಮಾದರಿಯನ್ನು ಅಲೆಕ್ಸಾಗೆ ಕೇಳಿಸಿದರೆ, ಅಲೆಕ್ಸಾ ಅದೇ ಧ್ವನಿಯನ್ನು ಅನುಕರಣೆ ಮಾಡುತ್ತದೆ. ಇದರಿಂದಾಗಿ, ಅಗಲಿರುವಂಥ ನಿಮ್ಮ ಪ್ರೀತಿಪಾತ್ರರೇ ನಿಮ್ಮ ಮನೆಯಲ್ಲಿದ್ದುಕೊಂಡು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ ಎಂದು ನಿಮಗೆ ಭಾಸವಾಗಲಿದೆ. ಈ ನಮ್ಮ ಪ್ರಯತ್ನವನ್ನು ಅನೇಕರು ಮೆಚ್ಚಿದ್ದಾರೆ ಎಂದು ಅಲೆಕ್ಸಾ ಕೃತಕ ಬುದ್ಧಿಮತ್ತೆ ವಿಭಾಗದ ಹಿರಿಯ ಉಪಾಧ್ಯಕ್ಷ ರೋಹಿತ್ ಪ್ರಸಾದ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.