ಜು. 23 ಹಾಗೂ 24ರಂದು ಅಮೆಜಾನ್ ಪ್ರೈಮ್ ಡೇ ಸೇಲ್: ಭರ್ಜರಿ ರಿಯಾಯಿತಿಗಳ ಘೋಷಣೆ
Team Udayavani, Jul 22, 2022, 8:35 PM IST
ಬೆಂಗಳೂರು: ಅಮೆಜಾನ್ ಪ್ರೈಮ್ ಗ್ರಾಹಕರು ಎದುರು ನೋಡುತ್ತಿದ್ದ ಪ್ರೈಮ್ ಡೇ ಸೇಲ್ ಮತ್ತೆ ಬಂದಿದೆ. ವರ್ಷಕ್ಕೊಮ್ಮೆ ಪ್ರೈಮ್ ಡೇ ಸೇಲ್ ನಡೆಯುತ್ತಿದ್ದು, ಜು. 23 ಹಾಗೂ 24ರಂದು ಭರ್ಜರಿ ಸೇಲ್ ಆರಂಭವಾಗಲಿದೆ.
ಗ್ರಾಹಕರು ಹಲವು ದಿನಗಳಿಂದ ಕೊಳ್ಳಬೇಕೆಂದುಕೊಂಡಿದ್ದ ಗ್ಯಾಜೆಟ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕ್ ಸಾಧನಗಳ ಖರೀದಿಗೆ ಇದು ಪ್ರಶಸ್ತ ಸೇಲ್ ಆಗಿದೆ. ಅಮೆಜಾನ್‍ನಲ್ಲಿ ಮಾಮೂಲಿ ದಿನಗಳ ಮಾರಾಟ ದರಕ್ಕಿಂತ ಕಡಿಮೆ ದರದಲ್ಲಿ ವಸ್ತುಗಳು ಪ್ರೈಮ್ ಡೇ ಸೇಲ್‍ನಲ್ಲಿ ಲಭ್ಯವಾಗುತ್ತವೆ.
ಅಮೆಜಾನ್.ಇನ್ ಆನ್‍ಲೈನ್ ಸ್ಟೋರ್ ನಲ್ಲಿ ದೊರಕುವ ಬಹುತೇಕ ವಸ್ತುಗಳ ಮೇಲೆ ಈ ಎರಡು ದಿನಗಳ ಮಾರಾಟದಲ್ಲಿ ಭಾರಿ ರಿಯಾಯಿತಿ ದೊರಕಲಿದೆ. ಲ್ಯಾಪ್‍ಟಾಪ್, ಆಡಿಯೋ ವಿಡಿಯೋ ಉಪಕರಣಗಳು, ಸ್ಮಾರ್ಟ್ ಫೋನ್‍ಗಳು, ಅಮೆಜಾನ್ ಅಲೆಕ್ಸಾ ಸಾಧನಗಳು, ಸ್ಮಾರ್ಟ್ ಟಿವಿಗಳು ಅಲ್ಲದೇ ಗೃಹೋಪಯೋಗಿ ಉಪಕರಣಗಳಾದ ಮಿಕ್ಸಿ, ಫ್ರಿಜ್, ಎಸಿ ಇನ್ನಿತರ ಪದಾರ್ಥಗಳಿಗೆ, ಫ್ಯಾಷನ್ ಉಡುಗೆ ತೊಡುಗೆಗಳಿಗೆ ರಿಯಾಯಿತಿ ಲಭ್ಯವಾಗಲಿದೆ.
ರಿಯಾಯಿತಿ ಮಾರಾಟದ ಜೊತೆಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿ ಮಾಡಿದಾಗ ಶೇ. 10ರಷ್ಟು ರಿಯಾಯಿತಿ ಸಹ ದೊರಕುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಮೆಜಾನ್ ಇಂಡಿಯಾದ ಪ್ರೈಮ್ ಮತ್ತು ಫುಲ್‌ಫಿಲ್ಮೆಂಟ್ ಅನುಭವದ ನಿರ್ದೇಶಕ ಅಕ್ಷಯ್ ಸಾಹಿ: “ಭಾರತದಲ್ಲಿ ನಮ್ಮ ಆರನೇ ಪ್ರೈಮ್ ಡೇ ಇದಾಗಿದೆ. ಮತ್ತು ಹೋಲಿಕೆಯಿಲ್ಲದ ಶಾಪಿಂಗ್ ಮತ್ತು ಮನರಂಜನೆ ಅನುಭವಗಳನ್ನು ಒಳಗೊಂಡಿದೆ. ಪ್ರೈಮ್ ಸದಸ್ಯರಿಂದ ಉತ್ತಮ ಬೆಂಬಲ ಮತ್ತು ಪ್ರತಿಕ್ರಿಯೆ ದೊರೆತಿದೆ. ಆಕರ್ಷಕ ಡೀಲ್‌ಗಳು, ಹೊಸ ಬಿಡುಗಡೆಗಳು ಮತ್ತು ಬ್ಲಾಕ್‌ಬಸ್ಟರ್ ಮನರಂಜನೆಯನ್ನು ಈ ಪ್ರೈಮ್ ಡೇಯಲ್ಲಿ ಅವರು ಕಂಡುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಈ ಪ್ರೈಮ್ ದಿನದಂದು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅಮೆಜಾನ್ ಬೆಂಬಲವನ್ನು ಮುಂದುವರಿಸುತ್ತದೆ ಮತ್ತು ಲಕ್ಷಾಂತರ ವ್ಯಾಪಾರಿಗಳು, ಉತ್ಪಾದಕರು, ಸ್ಟಾರ್ಟಪ್‌ಗಳು ಮತ್ತು ಬ್ರ್ಯಾಂಡ್‌ಗಳು, ಮಹಿಳಾ ಉದ್ಯಮಿಗಳು, ಕಲಾಕಾರರು, ನೇಕಾರರು ಮತ್ತು ಸ್ಥಳೀಯ ಅಂಗಡಿಗಳು ಒದಗಿಸುವ ಉತ್ಪನ್ನಗಳಿಗೆ ಉತ್ತೇಜನ ನೀಡಲಾಗುತ್ತದೆ.
ಸ್ಯಾಮ್‌ಸಂಗ್, ಒನ್‍ಪ್ಲಸ್, ಶಿಯೋಮಿ, ಬೋಟ್, ಇಂಟೆಲ್, ಲೆನೊವೊ, ಸೋನಿ, ಬಜಾಜ್, ಯುರೇಕಾ ಫೋರ್ಬ್ಸ್, ಪುಮಾ, ಅಡಿಡಾಸ್, ಯುಎಸ್‌ಪಿಎ, ಮ್ಯಾಕ್ಸ್, ಆಸಿಕ್ಸ್, ಫಾಸ್ಟ್ರ್ಯಾಕ್, ಟ್ರೆಸೆಮೆ, ಮಾಮಾ ಅರ್ಥ್, ಸರ್ಫ್ ಎಕ್ಸೆಲ್, ಡಾಬರ್, ಕೋಲ್ಗೇಟ್, ವರ್ಲ್‌ಪೂಲ್, ಐಎಫ್‌ಬಿ ಮತ್ತು ಇನ್ನಷ್ಟು 400 ಕ್ಕೂ ಹೆಚ್ಚು ಭಾರತೀಯ ಮತ್ತು ಜಾಗತಿಕ ಬ್ರ್ಯಾಂಡ್‌ಗಳಿಂದ ಹೊಸ ಬಿಡುಗಡೆಗಳು ಪ್ರೈಮ್ ಡೇಯಲ್ಲಿ ದೊರಕಲಿವೆ.
ಅಮೆಜಾನ್ ಪ್ರೈಮ್ ಸದಸ್ಯತ್ವಕ್ಕೆ ವಾರ್ಷಿಕ 1,499 ಕ್ಕೆ ಅಥವಾ ತಿಂಗಳಿಗೆ ರೂ. 179 ದರವಿದೆ. ಪ್ರೈಮ್ ಸದಸ್ಯರಿಗೆ ಉಚಿತ ಮತ್ತು ವೇಗದ ಡೆಲಿವರಿ, ಅನಿಯಮಿತ ಪ್ರೈಮ್ ವೀಡಿಯೋ, ಜಾಹೀರಾತು ರಹಿತ ಸಂಗೀತ, ಎಕ್ಸ್‌ಕ್ಲೂಸಿವ್ ಡೀಲ್‌ಗಳು, ಜನಪ್ರಿಯ ಮೊಬೈಲ್ ಗೇಮ್‌ನಲ್ಲಿ ಗೇಮ್ ಒಳಗೆ ಉಚಿತ ಕಂಟೆಂಟ್ ಹಾಗೂ ಇತ್ಯಾದಿ ಪ್ರಯೋಜನ ದೊರಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
ಶೀಘ್ರವೇ ದೇಶದ ಬುಲೆಟ್; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.