2 ವರ್ಷಗಳಲ್ಲೇ ಪ್ರತ್ಯಕ್ಷವಾಗಲಿದ್ದಾನೆ “ರಸ್ತೆಗಳ ರಾಜ’ : ಅಂಬಾಸಿಡರ್ 2.0
Team Udayavani, May 27, 2022, 9:10 AM IST
ಒಂದು ಕಾಲದಲ್ಲಿ ಭಾರತದ “ರಸ್ತೆಗಳ ರಾಜ’ನಾಗಿ ಮೆರೆದು, ನಂತರ ಇತಿಹಾಸದ ಪುಟ ಸೇರಿದ್ದ ಅಂಬಾಸಿಡರ್ ಕಾರುಗಳು ಮತ್ತೆ ರಸ್ತೆಗಿಳಿದರೆ ಹೇಗಿರುತ್ತೆ? ರಾಜಕಾರಣಿ ಗಳು, ಸರ್ಕಾರಿ ಅಧಿಕಾರಿಗಳಿಂದ ಹಿಡಿದು ಸೆಲೆಬ್ರಿಟಿಗಳವರೆಗೂ 1960ರಿಂದ 90ರ ದಶಕದವರೆಗೂ ಭಾರತದ “ಸ್ಟೇಟಸ್ ಸಿಂಬಲ್’ ಆಗಿದ್ದ ಅಂಬಾಸಿಡರ್ ಕಾರುಗಳು ಇನ್ನೆರಡು ವರ್ಷಗಳಲ್ಲೇ ಹೊಸ ಅವತಾರದಲ್ಲಿ ಮತ್ತೆ ರಸ್ತೆಗಿಳಿಯಲಿವೆ.
ಹೊಸದಿಲ್ಲಿ: ಕೆಲವು ದಶಕಗಳ ಹಿಂದೆ ದೇಶದ ಕಾರು ಮಾರು ಕಟ್ಟೆಯನ್ನು ಆಳಿ ಈಗ ಮರೆಗೆ ಸರಿದಿರುವ ಅಂಬಾಸಡರ್ ಕಾರು ಮತ್ತೆ ಹೊಸ ಅವತಾರದೊಂದಿಗೆ ಪ್ರತ್ಯಕ್ಷವಾಗಲಿದೆಯೇ?
ಹೌದು. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ವರ್ಷಗಳಲ್ಲಿ ಇದು ನಿಜವಾಗಲಿದೆ. ಹಿಂಡ್ ಮೋಟಾರ್ ಫೈನಾನ್ಶಿಯಲ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಚ್‌ಎಂಎಫ್ಸಿಐ) ಮತ್ತು ಫ್ರೆಂಚ್ ಕಾರು ಕಂಪೆನಿ ಪಝೋಟ್ “ಆ್ಯಂಬಿ’ಯ ಹೊಸ ನೂತನ ವಿನ್ಯಾಸ ಮತ್ತು ಎಂಜಿನ್‌ಗಾಗಿ ಸಹಯೋಗ ಸ್ಥಾಪಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಅನಾವರಣಗೊಳಿಸಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನು ಹಿಂದೂಸ್ತಾನ್ ಮೋಟಾರ್ನ ಚೆನ್ನೈ ಘಟಕದಲ್ಲಿ ಉತ್ಪಾದಿಸಲಾಗುತ್ತದೆ ಎಂದು ವರದಿಯಾಗಿದೆ.
ವಿನ್ಯಾಸ, ಎಂಜಿನ್ ನಿರ್ಮಾಣ :
ಹಿಂಡ್ ಮೋಟಾರ್ ಫಿನಾನ್ಶಿಯಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಫ್ರಾನ್ಸ್‌ನ ಕಾರು ತಯಾರಕ ಕಂಪನಿ ಪ್ಯೂಗಟ್ ಜಂಟಿಯಾಗಿ “ಆ್ಯಂಬಿ’ ಕಾರುಗಳ ವಿನ್ಯಾಸ ಮತ್ತು ಎಂಜಿನ್ ನಿರ್ಮಾಣದಲ್ಲಿ ತೊಡಗಿವೆ. ಸಿಕೆ ಬಿರ್ಲಾ ಸಮೂಹದ ಅಂಗಸಂಸ್ಥೆಯಾದ ಹಿಂದುಸ್ತಾನ್ ಮೋಟಾರ್ಸ್ ನ ಚೆನ್ನೈ ಘಟಕದಲ್ಲಿ ಹೊಸ ಮಾದರಿಯ ನಿರ್ಮಾಣ ಕಾರ್ಯ ನಡೆಯ ಲಿದೆ. ಈ ಘಟಕವು ಈ ಹಿಂದೆ ಮಿಟ್ಸುಬಿಶಿ ಕಾರುಗಳನ್ನು ತಯಾರಿಸಿತ್ತು.
ಉತ್ಪಾದನೆ ನಿಂತಿದ್ದೇಕೆ? :
ದೇಶದ ಅತ್ಯಂತ ಹಳೆಯ ಕಾರು ತಯಾರಕ ಕಂಪನಿ ಹಿಂದುಸ್ತಾನ್ ಮೋಟಾರ್ಸ್ 2014ರಲ್ಲಿ ಅಂಬಾಸಿಡರ್ ತಯಾರಿಕೆಯನ್ನು ಸ್ಥಗಿತಗೊಳಿ ಸಿತ್ತು. ಭಾರೀ ಪ್ರಮಾಣದ ಸಾಲ ಹಾಗೂ ಬೇಡಿಕೆಯ ಕೊರತೆಯಿಂದಾಗಿ
ಈ ನಿರ್ಧಾರ ಕೈಗೊಂಡಿತ್ತು. ತಂತ್ರಜ್ಞಾನ ಹಾಗೂ ಆರಾಮದಾಯಕತೆಯಲ್ಲಿ ಬೇರೆ ಕಾರುಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗದ ಕಾರಣ ಅಂಬಾಸಿಡರ್ ಇತಿಹಾಸದ ಪುಟ ಸೇರಿತ್ತು. 2017ರಲ್ಲಿ ಈ ಕಂಪನಿಯ ಮಾಲೀಕ ಸಿಕೆ ಬಿರ್ಲಾ ಗ್ರೂಪ್, ಈ ಕಾರಿನ ಬ್ರ್ಯಾಂಡ್ ಅನ್ನು ಫ್ರಾನ್ಸ್‌ನ ಕಂಪನಿಗೆ 80 ಕೋಟಿ ರೂ.ಗಳಿಗೆ ಮಾರಾಟ ಮಾಡಿತ್ತು.
ಕಾರು ಕಥನ… :
- ಎಷ್ಟು ವರ್ಷ ಇದು ಭಾರತದ ರಸ್ತೆಗಳಲ್ಲಿ ರಾರಾಜಿಸಿತ್ತು?: 1958 ರಿಂದ 2014
- ಹಳೆಯ ಅಂಬಾಸಿಡರ್ ತಯಾರಿಕೆ ಸ್ಥಗಿತಗೊಂಡಿದ್ದು: 2014ರಲ್ಲಿ
- 80ರ ದಶಕದಲ್ಲಿ ಅಂಬಾಸಿಡರ್ ವಾರ್ಷಿಕ ಮಾರಾಟ ಎಷ್ಟಿತ್ತು?: 20,000
- 2013-14ರ ವೇಳೆಗೆ ಎಷ್ಟು ಕಾರು ಮಾರಾಟವಾಗುತ್ತಿತ್ತು?: 2,000
- ಹೊಸ ಅವತಾರದಲ್ಲಿ ರಸ್ತೆಗಿಳಿಯಲು ಇನ್ನೆಷ್ಟು ವರ್ಷ ಬೇಕು?: 2
- ಹೊಸ ಮಾಡೆಲ್ ನಿರ್ಮಾಣ ಎಲ್ಲಿ?: ಚೆನ್ನೈನ ಹಿಂದುಸ್ತಾನ್ ಮೋಟಾರ್ಸ್ (ಎಚ್‌ಎಂ) ಘಟಕದಲ್ಲಿ.
ಕಾರಿನ ನೂತನ ಎಂಜಿನ್‌ನ ಮೆಕ್ಯಾನಿಕಲ್ ವಿನ್ಯಾಸದ ಕೆಲಸವು ನಿರ್ಣಾ ಯಕ ಹಂತಕ್ಕೆ ಬಂದಿದೆ. ಹೊಸ ಲುಕ್‌ನಲ್ಲಿ ಇನ್ನೆರಡು ವರ್ಷ ಗಳಲ್ಲೇ “ಆ್ಯಂಬಿ’ ರಸ್ತೆಗಿಳಿಯಲಿದೆ. -ಉತ್ತಮ್ ಬೋಸ್, ಎಚ್‌ಎಂ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.