ನಿಮಗೆಷ್ಟು ಗೊತ್ತು ‘ಅಮಾಂಗ್ ಅಸ್’ ಎಂಬ ಮಲ್ಟಿಪ್ಲೇಯರ್ ಗೇಮ್ ಬಗ್ಗೆ.? ಇಲ್ಲಿದೆ ಮಾಹಿತಿ


ಶ್ರೀರಾಜ್ ವಕ್ವಾಡಿ, May 9, 2021, 4:34 PM IST

Among Us is a 2018 online multiplayer social deduction game developed and published by American game studio Innersloth

ಅಮಾಂಗ್ ಅಸ್ ಒಂದು ಮಲ್ಟಿಪ್ಲೇಯರ್ ಗೇಮ್ ಆಗಿದ್ದು, ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್‌ ಗಳಲ್ಲಿ ಆಡಬಹುದಾಗಿದೆ. ಈ ಗೇಮ್ 2018 ರಲ್ಲಿ ಹುಟ್ಟು ಪಡೆದಿತ್ತಾದರೂ, ಕೋವಿಡ್-19 ಸಾಂಕ್ರಾಮಿಕದ ಭೀತಿಯಿಂದ ಜಗತ್ತಿನಾದ್ಯಂತ ಜಾರಿಯಲ್ಲಿದ್ದ ಲಾಕ್‌ ಡೌನ್‌ ನಿಂದಾಗಿ, ಈ ಆಟವು 2020 ರಲ್ಲಿ ಕೆಲವು ಜನಪ್ರಿಯ ಟಿಕ್‌ ಟಾಕ್ ಹಾಗೂ ಯೂಟ್ಯೂಬ್ ಗೇರ‍್ಸ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪರಿಚಯಿಸಿದ್ದರಿಂದ ಬಹಳ ಪ್ರಸಿದ್ಧಿಯನ್ನು ಪಡೆಯಿತು. ಅಮಾಂಗ್ ಅಸ್ ಗೇಮ್ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಆ್ಯಪ್ ಸ್ಟೋರ್ ಸೇರಿದಂತೆ ಅನೇಕ ಪ್ಲಾಟ್‌ ಫಾರ್ಮ್ ಗಳಲ್ಲಿ 90 ದಶಲಕ್ಷಕ್ಕೂ ಅಧಿಕ ಭಾರಿ ಡೌನ್‌ ಲೋಡ್‌ ಆಗಿದೆ.

ಏನಿದು ಅಮಾಂಗ್ ಅಸ್?

ವೀಡಿಯೋ ಗೇಮ್ ಡೆವಲಪ್ಪರ್ ಇನ್ನರ್‌ ಸ್ಲಾತ್ ಅಭಿವೃದ್ಧಿಪಡಿಸಿರುವ ಗೇಮ್ ‘ಅಮಾಂಗ್ ಅಸ್’ ಒಂದು ಮಲ್ಟಿಪ್ಲೇಯರ್ ಗೇಮ್ ಆಗಿದ್ದು, ಅದರಲ್ಲಿ ಗರಿಷ್ಠ 10 ಆಟಗಾರರು ಆಕಾಶ ನೌಕೆ ಅಥವಾ ಒಂದು ಗ್ರಹದ ನೆಲೆಯಂತಿರುವ ಕೋಣೆಯೊಳಗೆ ಇಳಿಯುತ್ತಾರೆ. ಅಲ್ಲಿ ಪ್ರತಿಯೊಬ್ಬ ಆಟಗಾರನನ್ನು “ಕ್ರೀವ್‌ ಮೇಟ್ಸ್” ಅಥವಾ ‘ಇಂಪೋಸ್ಟರ್’ (ಮೋಸಗಾರ) ನ ಪಾತ್ರದೊಂದಿಗೆ ನೇಮಿಸಲಾಗುತ್ತದೆ. ಯಾರು, ಯಾವ ಪಾತ್ರ ನಿಭಾಯಿಸುತ್ತಿದ್ದಾರೆ ಎಂಬುವುದು ಇಂಪೋಸ್ಟರ್‌ಗಳಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಇದರಲ್ಲಿ ಇಂಪೋಸ್ಟರ್ ಆಗಿರುವವನು, ಯಾರಿಗೂ ಗೊತ್ತಾಗದೆ, ತನ್ನ ಕ್ರೀವ್‌ಮೇಟ್ಸ್ಗೆ ಹೊಡೆತ ನೀಡಬೇಕು(ಒಂದೇಟಿನ ಕೊಲೆ). ಆ ಮೋಸಗಾರ ಯಾರು ಎಂಬುವುದನ್ನು ಕ್ರೀವ್‌ಮೇಟ್ಸ್ ಪತ್ತೆ ಹಚ್ಚಿದರೆ, ಅವರು ವಿಜಯಿ ಆದಂತೆ.

ಓದಿ : ಜಗತ್ ಕಿಲಾಡಿ! ವೈದ್ಯನೆಂದು ಹೇಳಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಹಣ್ಣಿನ ವ್ಯಾಪಾರಿ!

ಅಮಾಂಗ್ ಅಸ್ ಲಭ್ಯವಿರುವ ಪ್ಲ್ಯಾಟ್‌ ಫಾರ್ಮ್ ಗಳು ?

ಈ ಗೇಮ್ ಪ್ರಸ್ತುತ ಆಂಡ್ರಾಯ್ಡ್, ಐಒಎಸ್ ಮತ್ತು ವಿಂಡೋಸ್ ಪ್ಲಾಟ್‌ ಫಾರ್ಮ್ ಲಭ್ಯವಿದೆ. ಆಂಡ್ರಾಯ್ಡ್ ಮತ್ತು ಐಒಎಸ್‌ ನಲ್ಲಿ ಉಚಿತವಾಗಿ ಲಭ್ಯವಿದೆ. ಹಾಗೆಯೇ, ವಿಂಡೋಸ್‌ ನಲ್ಲಿ ಬ್ಲೂಸ್ಟ್ಯಾಕ್ಸ್ ನಲ್ಲಿ ಉಚಿತ ಹಾಗೂ ಸ್ಟೀಮ್ ಸ್ಟೋರ್‌ ನಲ್ಲಿ 199 ರೂ ಗೆ ಲಭ್ಯವಿದೆ.

ಅಮಾಂಗ್ ಅಸ್ ಆಡುವುದು ಹೇಗೆ?

ಅಮಾಂಗ್ ಅಸ್ ಒಂದು ಚಾಣಾಕ್ಷರ ಆಟವಾಗಿದೆ. ಇದೊಂದು ಆನ್ಲೈನ್ ಗೇಮ್ ಆಗಿದ್ದು, ಇದರಲ್ಲಿ ಕೊನೆಯವರೆಗೆ ಬದುಕುಳಿಯುವವನೇ ವಿಜಯಿ. ಕನಿಷ್ಠ 4, ಗರಿಷ್ಠ 10 ಆಟಗಾರರು ಒಂದು ಕೋಣೆಯಲ್ಲಿ ಸೇರುತ್ತಾರೆ. ಅದರಲ್ಲಿ ಕನಿಷ್ಠ 1, ಗರಿಷ್ಠ 3 ಜನ ಇಂಪೋಸ್ಟರ್ ಆಗಿರುತ್ತಾರೆ. ಇದು ನಮ್ಮ ಆಯ್ಕೆಯಲ್ಲಿರುವುದಿಲ್ಲ. ಯಾಂತ್ರಿಕವಾಗಿಯೇ, 10 ಆಟಗಾರರಲ್ಲಿ 3 ಮಂದಿಯನ್ನು ಇಂಪೋಸ್ಟರ್ ಆಗಿ ಆಯ್ಕೆ ಮಾಡಲಾಗುತ್ತದೆ. ಆ ಮೂವರಿಗೆ ಬಿಟ್ಟರೆ, ಉಳಿದವರಿಗೆ ಇದು ಗೊತ್ತಿರುವುದಿಲ್ಲ. ಆ ಉಳಿದ ಆಟಗಾರರು, ‘ಇಂಪೋಸ್ಟರ್’ ಯಾರು ಎಂದು ಕಂಡುಹಿಡಿಯಬೇಕು.

ಕೋಣೆಯಲ್ಲಿ ಸೇರಿದ ಬಳಿಕ, ಗೇಮ್ ಹೋಸ್ಟ್ ಆಟಕ್ಕೆ ಚಾಲನೆ ನೀಡುತ್ತಾನೆ. ಆ ಮನೆಯೊಳಗೆ ಕೆಲವೊಂದಿಷ್ಟು ಟಾಸ್ಕ್ ಗಳು ಇರುತ್ತವೆ. ಎಲ್ಲಾ 10 ಆಟಗಾರರು ಅದನ್ನು ಮಾಡುತ್ತಾ ಇರಬೇಕು. ಈ ನಡುವೆ, ಇಂಪೋಸ್ಟರ್‌ ಗಳು ಕ್ರೀವ್‌ ಮೇಟ್ಸ್ ಗಳ ಮೇಲೆಯೇ ಕಣ್ಣಿಟ್ಟಿರುತ್ತಾರೆ. ಒಬ್ಬರೇ ಇರುವಾಗ ಅವರನ್ನು ಹೊಡೆದು ಬೀಳಿಸುತ್ತಾರೆ. ಇದನ್ನು ಯಾರಾದರೂ ಕಂಡರೆ, ಅವರು ತುರ್ತು ಸಭೆ ಕರೆದು, ಇಂಪೋಸ್ಟರ್ ಯಾರು ಎಂದು ಚರ್ಚಿಸಿ, ಅವರನ್ನು ಆಟದಿಂದ ಹೊರಗಟ್ಟುತ್ತಾರೆ. ಹೀಗೆ, ಇಂಪೋಸ್ಟರ್ ಆಗುರುವವರು ಕೊನೆಯವರೆಗೂ ಉಳಿದುಕೊಂಡರೆ ಅವರು ವಿಜಯಿ. ಹಾಗೆಯೇ, ಕ್ರೀವ್‌ಮೇಟ್‌ಗಳೂ, ಇಂಪೋಸ್ಟರ್ ಯಾರು ಎಂದು ಗುರುತಿಸಲು ಯಶಸ್ವಿಯಾದರೆ, ಅವರು ಗೆದ್ದಂತೆ.

ಇಂಪೋಸ್ಟರ್ ಎಂದರೇನು?

ಇಂಪೋಸ್ಟರ್ ಸಾಮಾನ್ಯವಾಗಿ ಎಲ್ಲರಂತೆ ಸಮಾನರಾಗಿ ಕಂಡರೂ, ಇತರರನ್ನು ಹೊಡೆಯುವ ಅವಕಾಶ ಆತನಲ್ಲಿರುತ್ತದೆ. ಆತನ ಕ್ರಿಯೆಯ ಮೂಲಕ ಮಾತ್ರ ಆತ ಇಂಪೋಸ್ಟರ್ ಎಂದು ಇತರರು ಪತ್ತೆಹಚ್ಚಬಹುದು.

ಒಟ್ಟಾರೆ, ಸಂಕ್ಷಿಪ್ತವಾಗಿ ಹೇಳುವುದಾದರೆ, ಅಮಾಂಗ್ ಅಸ್ ಒಂದು ಅತ್ಯಂತ ಸರಳ ಆನ್ಲೈನ್ ಮಲ್ಟಿಪ್ಲೇಯರ್ ಗೇಮ್ ಆಗಿದ್ದು, ಇದರಲ್ಲಿ ಮೋಸದಾಟ ಪ್ರಮುಖವಾಗಿದೆ. ತಮ್ಮ ಕ್ರೀವ್‌ ಮೇಟ್ಸ್‌ಗಳನ್ನೇ ವಂಚಿಸಿ, ಅವರನ್ನು ಹೊಡೆದುರುಳಿಸಿ, ಯಾರಿಗೂ ಶಂಕೆ ಬರದಂತೆ ನಟಿಸಿ ಆಡುವುದೇ ಅಮಾಂಗ್ ಅಸ್.

ಇಂದುಧರ ಹಳೆಯಂಗಡಿ

ಓದಿ : ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮೂರು ಕೋವಿಡ್ ಕೇರ್ ಕೇಂದ್ರಗಳು ಎರಡು ದಿನದಲ್ಲಿ ಕಾರ್ಯಾರಂಭ

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.