ಭಾರತದಲ್ಲಿ ಐಫೋನ್ ಉತ್ಪಾದನೆ ಆರಂಭ: ಕಡಿಮೆ ಬೆಲೆಗೆ ಸಿಗಲಿದೆಯೇ ಆ್ಯಪಲ್ ?
Team Udayavani, Oct 22, 2019, 12:11 PM IST
ಚೆನ್ನೈ: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ ಆ್ಯಪಲ್ ತನ್ನ ಜನಪ್ರಿಯ ಐಫೋನ್ ಸರಣಿಯನ್ನು ಭಾರತದಲ್ಲೆ ಉತ್ಪಾದನೆ ಮಾಡಲು ಆರಂಭಿಸಿದೆ ಎಂದು ವರದಿಯಾಗಿದೆ.
ಈಗಾಗಲೇ ಚೆನ್ನೈನಲ್ಲಿ ಐಫೋನ್ ಎಕ್ಸ್ ಆರ್ ಉತ್ಪಾದನಾ ಘಟಕ ಆರಂಭವಾಗಿದ್ದು, ಐಫೋನ್ ಎಸ್ ಇ, ಐಫೋನ್ 7, ಐಫೋನ್ 6 ಸೇರಿದಂತೆ ಹಳೆಯ ಮಾದರಿಗಳ ಫೋನ್ ಗಳ ಉತ್ಪಾದನೆಯನ್ನು ಜೊತೆಯಲ್ಲಿಯೇ ಮಾಡಲಾಗುವುದು ಎಂದು ವರದಿ ತಿಳಿಸಿದೆ.
ಅಮೇರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರದಿಂದಾಗಿ ಭಾರತದಲ್ಲೂ ಐಫೋನ್ ಉತ್ಪಾದನಾ ಘಟಕವನ್ನು ಆರಂಭಿಸಲಾಗುವುದು ಎಂದು ಆ್ಯಪಲ್ ಸಂಸ್ಥೆ ಈ ಹಿಂದೆಯೇ ತಿಳಿಸಿತ್ತು. ಇದರಿಂದ ಆ್ಯಪಲ್ ಉತ್ಪನ್ನಗಳಿಗಾಗಿ ಚೀನಾ ಮೇಲಿನ ಅವಲಂಬನೆ ಕೂಡ ತಪ್ಪಲಿದೆ. ಜೊತೆಗೆ ಬೆಲೆ ಏರಿಕೆಯಾಗುವುದು ಕೂಡ ತಪ್ಪಲಿದೆ. ಭಾರತದಲ್ಲಿ ತಯಾರಾಗುವ ಆ್ಯಪಲ್ ಉತ್ಪನ್ನಗಳು ಮೆಕ್ಸಿಕೊ, ವಿಯೇಟ್ನಾಂ , ಇಂಡೋನೇಷ್ಯಾ, ಮಲೇಷಿಯಾ, ಮುಂತಾದ ದೇಶಗಳಿಗೆ ರಫ್ತು ಮಾಡಲಾಗುವುದೆಂದು ಕಂಪೆನಿ ತಿಳಿಸಿದೆ.
ಭಾರತದಲ್ಲಿ ಐಫೋನ್ ಗಳಿಗೆ ಭಾರೀ ಬೇಡಿಕೆಯಿರುವುದರಿಂದ ದೇಶದಲ್ಲೇ ಫೋನ್ ಗಳ ತಯಾರಿಕೆ ಕಂಪೆನಿ ನಿರ್ಧರಿಸಿದೆ. ಮಾತ್ರವಲ್ಲದೆ ಭಾರತ ಸರ್ಕಾರವು ಮೇಕ್ ಇನ್ ಇಂಡಿಯಾ ಯೋಜನೆ ಜೊತೆ ಶೇ.30 ರಷ್ಟು ಉತ್ತಪನ್ನಗಳನ್ನು ಭಾರತದಲ್ಲೇ ತಯಾರಿಸಬೇಕೆಂಬ ನಿಯಮ ರೂಪಿಸಿತ್ತು. ಭಾರತದಲ್ಲಿ ಉತ್ಪಾದನೆ ಮಾಡುವುದರಿಂದ ಆಮದು ಸುಂಕ ಕೂಡ ಕಡಿತವಾಗಲಿದೆ. ಇದರಿಂದ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಐಫೋನ್ ದೊರಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್‌ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.