Apple ಹೊಸ ಐಫೋನ್ 15 ಪ್ರೊ; ಕಿರು ಅವಲೋಕನ


Team Udayavani, Oct 4, 2023, 8:12 PM IST

1-reqe

Apple ತನ್ನ ಐಫೋನ್ 15 (iPhone 15) ಸರಣಿಯನ್ನು ಇತ್ತೀಚಿಗಷ್ಟೇ ಬಿಡುಗಡೆ ಮಾಡಿದೆ. ಹೊಸ ಮಾದರಿಯನ್ನು ತಾವೇ ಮೊದಲು ಹೊಂದಬೇಕೆಂದು ಐಫೋನ್ ಅಭಿಮಾನಿಗಳು, ಫೋನ್ ಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಈ ಸರಣಿಯಲ್ಲಿ ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಆವೃತ್ತಿಗಳನ್ನು ಹೊರತರಲಾಗಿದೆ.

ಇವುಗಳ ಪೈಕಿ 15 ಪ್ರೊ ಆವೃತ್ತಿಯ ವಿಶೇಷಗಳೇನು ಎಂಬ ಮಾಹಿತಿ ಇಲ್ಲಿದೆ

ದರ: ಐಫೋನ್ 15 ಮತ್ತು 15 ಪ್ಲಸ್ ಆರಂಭಿಕ ಮಾದರಿಗಳಾದರೆ, 15 ಪ್ರೊ ಅವೆರಡಕ್ಕಿಂತ ಹೆಚ್ಚಿನ ವಿಶೇಷಗಳುಳ್ಳ ಮಾದರಿಯಾಗಿದೆ. ಐಫೋನ್ 15 ಪ್ರೊ 128 ಜಿಬಿ ಆವೃತ್ತಿ 1,34,900 ರೂ., 256 ಜಿಬಿಗೆ 1,44,900 ರೂ., 512 ಜಿಬಿ ಗೆ 1,64,900 ರೂ., 1 ಟಿಬಿ ಆವೃತ್ತಿಗೆ 1,84,900 ರೂ. ದರವಿದೆ.

ವಿನ್ಯಾಸ: ಇದರ ವಿನ್ಯಾಸದ ಬಗ್ಗೆ ಹೇಳುವುದಾದರೆ ಇದರಲ್ಲಿ ಹಿಂದಿನಂತೆ ಸ್ಟೆನ್ ಲೆಸ್ ಸ್ಟೀಲ್ ಬಾಡಿಯ ಬದಲು ಟೈಟಾನಿಯಂ ಲೋಹವನ್ನು ಬಳಸಲಾಗಿದೆ. ಇದು ಅತ್ಯಂತ ಕಠಿಣ ಲೋಹ. ಇದನ್ನು ಉಪಗ್ರಹಗಳಿಗೆ ಬಳಸಲಾಗುತ್ತದೆ. ಇದರಿಂದಾಗಿ 15 ಪ್ರೊ ತೂಕ ಹಿಂದಿನ ಆವೃತ್ತಿಗಿಂತ 19 ಗ್ರಾಂ ಕಡಿಮೆಯಾಗಿದೆ. 14 ಪ್ರೊ ನ ಮೂಲೆ ಅಂಚುಗಳಿಗಿಂತ ಇದು ಹೆಚ್ಚು ವೃತ್ತಾಕಾರವಾಗಿದೆ.
ಇದರಲ್ಲಿ ಹೊಸದಾಗಿ ನ್ಯಾಚುರಲ್ ಟೈಟಾನಿಯಂ ಬಣ್ಣವನ್ನು ಪರಿಚಯಿಸಲಾಗಿದೆ. ಇದಲ್ಲದೆ ಬ್ಲೂ ಟೈಟಾನಿಯಂ, ವೈಟ್ ಟೈಟಾನಿಯಂ ಮತ್ತು ಬ್ಲ್ಯಾಕ್ ಟೈಟಾನಿಯಂ ಬಣ್ಣದ ಮಾದರಿಗಳನ್ನು ಹೊಂದಿದೆ.

ಯುಎಸ್ ಬಿ ಟೈಪ್ ಸಿ ವಿಶೇಷ ಅಂಶ!
ಸಾಮಾನ್ಯವಾಗಿ ಐಫೋನ್ ಬಳಕೆದಾರರಲ್ಲಿ ಒಂದು ಕೊರಗಿತ್ತು. ಎಲ್ಲೇಹೊರ ಹೋದರೂ ಐಫೋನ್ ಕೇಬಲ್ ಮತ್ತು ಚಾರ್ಜರ್ ಅನ್ನೇ ಕೊಂಡೊಯ್ಯಬೇಕಾಗಿತ್ತು. 15 ಸರಣಿಯಲ್ಲಿ ಮಹತ್ವದ ಬದಲಾವಣೆಯನ್ನು ಆಪಲ್ ಮಾಡಿದೆ. ಅದುವೇ ಸಿ ಟೈಪ್ ಕೇಬಲ್!
15 ಸರಣಿಯ ಐಫೋನ್ ಗಳಿಗೆ ಸಿ ಟೈಪ್ ಪೋರ್ಟ್ ಪರಿಚಯಿಸಲಾಗಿದೆ ಬಾಕ್ಸ್ ನಲ್ಲಿ ಸಿ ಟೈಪ್ ಕೇಬಲ್ ನೀಡಲಾಗಿದೆ. ಅದನ್ನು ನೀವು ನಿಮ್ಮ ಯಾವುದೇ ಸಿ ಟೈಪ್ ವೇಗದ ಚಾರ್ಜರ್ ಗಳಿಗೆ ಹಾಕಿ ಚಾರ್ಜ್ ಮಾಡಬಹುದು. ಐಫೋನ್ ಬಾಕ್ಸ್ ನಲ್ಲಿರುವ ಸಿ ಟೈಪ್ ಕೇಬಲ್ ಮಾತ್ರವಲ್ಲ ನಿಮ್ಮ ಆಂಡ್ರಾಯ್ಡ್ ಫೋನಿನ ಸಿ ಟೈಪ್ ಕೇಬಲ್ ಚಾರ್ಜರ್ ನಲ್ಲೇ ಚಾರ್ಜ್ ಮಾಡಬಹುದು!

ಪರದೆ: 15 ಪ್ರೊ ಹಿಂದಿಗಿಂತ ಸ್ಲಿಮ್ ಆದ ಬೆಜೆಲ್ ಹೊಂದಿದೆ. 6.1 ಇಂಚಿನ ಓ ಎಲ್ ಇಡಿ, ಸುಪರ್ ರೆಟಿನಾ ಎಕ್ಸ್ ಡಿ ಆರ್, ಡೈನಾಮಿಕ್ ಐಲ್ಯಾಂಡ್, ಡಿಸ್ಪ್ಲೇ ಇದೆ. 2000 ನಿಟ್ಸ್ ಅತ್ಯಂತ ಪ್ರಕಾಶಮಾನ ಡಿಸ್ಪ್ಲೇ ಹೊಂದಿದೆ.

ಪ್ರೊಸೆಸರ್
ಇದರಲ್ಲಿ ಹೊಚ್ಚ ಹೊಸದಾದ ಎ17 ಪ್ರೊ ಚಿಪ್ ಸೆಟ್ (ಪ್ರೊಸೆಸರ್) ಅಳವಡಿಸಲಾಗಿದೆ. ಇದು ಹಿಂದಿನ ಪ್ರೊಸೆಸರ್ ಗಳಿಗಿಂತ ಶಕ್ತಿಶಾಲಿ, ಅತ್ಯುತ್ತಮ ಗ್ರಾಫಿಕ್ಸ್ , ಮೊಬೈಲ್ ಗೇಮ್ಸ್, ಅತ್ಯಂತ ವೇಗವಾದ ಕಾರ್ಯಾಚರಣೆ ಹೊಂದಿದೆ. ಇದರಲ್ಲಿ ಹೊಸದಾದ ಐಓಎಸ್ 17.0.2 ಕಾರ್ಯಾಚರಣೆ ವ್ಯವಸ್ಥೆ ಇದೆ.
ಇದರಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿಯೂ ಟೈಪ್ ಮಾಡಲು ಲಿಪ್ಯಂತರ ಕೀಬೋರ್ಡ್ ಅನ್ನು ಪರಿಚಯಿಸಲಾಗಿದೆ.
ಕ್ಯಾಮರಾ ವಿಷಯಕ್ಕೆ ಬಂದರೆ, ಇದರಲ್ಲಿ 48 ಮೆ.ಪಿ. ಮುಖ್ಯ ಕ್ಯಾಮರಾ, 12 ಮೆ.ಪಿ. ಅಲ್ಟ್ರಾ ವೈಡ್ ಮತ್ತು 12 ಮೆ.ಪಿ. ಟೆಲಿಫೋಟೋ ತ್ರಿವಳಿ ಕ್ಯಾಮರಾಗಳಿವೆ. ಸೆಲ್ಫಿಗೆ 12 ಮೆ.ಪಿ. ಕ್ಯಾಮರಾ ಇದೆ.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಇದೀಗ ಜಿಯೋ ಹಾಟ್‌ಸ್ಟಾರ್‌

drdo

DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್‌ ಪರೀಕ್ಷೆ ಯಶಸ್ವಿ

PM-Modi-Paris

AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

India’s Fastest Train: ತೇಜಸ್‌, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.