ಆ್ಯಪಲ್ ಏರ್-ಪಾಡ್ ಬಿಡುಗಡೆ : ಆ್ಯಪಲ್ ಗ್ರಾಹಕರ ಬಹು ದಿನಗಳ ನಿರೀಕ್ಷೆಗೆ ಸಿಕ್ಕಿದ ಉತ್ತರ
Team Udayavani, Oct 30, 2019, 12:45 AM IST
ಹೊಸದಿಲ್ಲಿ: ಎಲೆಕ್ಟ್ರಾನಿಕ್ ಉಪಕರಣಗಳ ಖ್ಯಾತ ಕಂಪನಿ ಆ್ಯಪಲ್, ತನ್ನ ಗ್ರಾಹಕರು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಏರ್ ಪಾಡ್ಸ್ ಪ್ರೋ ಎಂಬ ವೈರ್‌ಲೆಸ್ ಲಿಸ ನಿಂಗ್ ಉತ್ಪನ್ನ ಬಿಡುಗಡೆ ಮಾಡಿದೆ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಆ್ಯಪಲ್‌ನ ವೈರ್‌ಲೆಸ್ ಕೇಳುವಿಕೆಯ ಉತ್ಪನ್ನಗಳಿಗಿಂತ ಇವು ಹೆಚ್ಚಿನ ಬೆಲೆಯುಳ್ಳದ್ದು. ಭಾರತದಲ್ಲಿ ಈಗ ಲಭ್ಯವಿರುವ ಆ್ಯಪಲ್ ಇರ್ಯ ಬಡ್ಸ್ ಎಂಬ ವೈರ್‌ಲೆಸ್ ಉತ್ಪನ್ನಕ್ಕೆ 18 ಸಾವಿರ ರೂ. ಆಗಿದ್ದರೆ, ಅದೇ ಹೆಸರಿನಡಿ ಹೊಸದಾಗಿ ಬಿಡು ಗಡೆಗೊಂಡಿರುವ ಏರ್ ಪಾಡ್ಸ್ ಪ್ರೋ 24 ಸಾವಿರ ರೂ. ಮೌಲ್ಯದ್ದು ಎಂದು ಮೂಲಗಳು ತಿಳಿಸಿವೆ. ಸದ್ಯದಲ್ಲೇ ಇದು ಭಾರತಕ್ಕೆ ಲಗ್ಗೆಯಿಡಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಎಂಬುದು ಈ ಹೊಸ ಉತ್ಪನ್ನದ ಮಹತ್ವದ ಸೌಲಭ್ಯವಾಗಿದ್ದು, ಕೇಳುಗರ ಕಿವಿಗೆ ಅನುಗುಣವಾಗಿ, ಸಂಗೀತದ ಏರಿಳಿತವನ್ನು ಈ ಪರಿಕರವೇ ನಿರ್ಧರಿಸುತ್ತದೆ. ಇದು ಈ ಪರಿಕರದ ಮತ್ತೂಂದು ವೈಶಿಷ್ಟ್ಯ. ಎಚ್1 ಎಂಬ ಚಿಪ್ ಹೊಂದಿದೆ. ಇದರ ಸಹಾಯದಿಂದ, ಏರ್ ಪಾಡ್ಸ್ ಪ್ರೋಗಳಿಂದ ಅತ್ಯಂತ ಉತ್ಕೃಷ್ಟ ಧ್ವನಿ ಕೇಳಬಹುದು. ಇವು, ವಾಟರ್‌ಪೂ›ಫ್ ತಂತ್ರ ಜ್ಞಾನ ಹೊಂದಿದೆ. ವೈರ್‌ಲೆಸ್ ಚಾರ್ಜಿಂಗ್ ಪರಿಕರವಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ, 24 ಗಂಟೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಲಾಗಿದೆ.
ವಿನ್ಯಾಸದ ಬಗ್ಗೆ ತಮಾಷೆ
ಈ ಏರ್‌ಪಾಡ್ ವಿನ್ಯಾಸದ ಬಗ್ಗೆ ಟ್ವಿಟರ್‌ನಲ್ಲಿ ಹಲವರು ಗೇಲಿ ಮಾಡಿದ್ದಾರೆ. ಆ್ಯಪಲ್ ಕಂಪನಿಯ ಹೊಸ ಏರ್ ಪಾಡ್‌ಗಳು ಹೇರ್ ಡ್ರೈಯರ್‌ನಂತಿದೆ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ. ಇನ್ನಷ್ಟು ಮಂದಿ ಇದು ಕೊಕ್ಕರೆಯ ಮೂತಿಯಂತಿದೆ ಎಂದು ತಮಾಷೆ ಮಾಡಿದ್ದರೆ, ಮತ್ತೆ ಕೆಲವರು, ಹೊಸ ಉಪಕರಣ ತುಂಬಾ ದುಬಾರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.