ಬರಾಕ್ ಒಬಾಮ ಸೇರಿದಂತೆ ಹಲವರ ಟ್ವಿಟ್ಟರ್ ಅಕೌಂಟ್ ಹ್ಯಾಕ್: ಹ್ಯಾಕರ್ ಬೇಡಿಕೆಯೇನು ಗೊತ್ತಾ ?
Team Udayavani, Jul 16, 2020, 8:12 AM IST
ಸನ್ ಫ್ರಾನ್ಸಿಸ್ಕೋ: ಹಣಕ್ಕಾಗಿ ಜುಲೈ 15ರ ಬುಧವಾರದಂದು ಪ್ರತಿಷ್ಟಿತ ವ್ಯಕ್ತಿಗಳ ಟ್ವಿಟ್ಟರ್ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗಿದ್ದು ಭದ್ರತಾ ವೈಫಲ್ಯವನ್ನು ಸರಿಪಡಿಸಲಾಗುತ್ತಿದೆ ಎಂದು ಟ್ವಿಟ್ಟರ್ ಇಂಕ್ ತಿಳಿಸಿದೆ.
ಹಲವರ ಟ್ವಿಟ್ಟರ್ ಖಾತೆಗಳು ಹ್ಯಾಕ್ ಆಗಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಮಾತ್ರವಲ್ಲದೆ ಲೋಪ ಸರಿಪಡಿಸಸಲು ಕ್ರಮಕೈಗೊಳ್ಳಲಾಗುತ್ತಿದೆ. ಹ್ಯಾಕ್ ಆದ ಹಲವರ ಅಕೌಂಟ್ ಗಳನ್ನು ಲಾಕ್ ಮಾಡಲಾಗಿದ್ದು, ಅವರ ಖಾತೆ ಮೂಲಕ ಮಾಡಲಾದ ಟ್ವಿಟ್ ಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿದೆ.
We are aware of a security incident impacting accounts on Twitter. We are investigating and taking steps to fix it. We will update everyone shortly.
— Twitter Support (@TwitterSupport) July 15, 2020
ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಜೋ ಬಿಡೆನ್, ಟೆಸ್ಲಾ ಕಂಪೆನಿಯ ಸಿಇಓ ಎಲೋನ್ ಮಾಸ್ಕ್, ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಓಬಾಮ, ಬಿಲ್ ಗೇಟ್ಸ್, ಉಬರ್, ಆ್ಯಪಲ್ ಸೇರಿದಂತೆ ಹಲವು ಪ್ರತಿಷ್ಟಿತ ಕಂಪೆನಿಗಳು ಮತ್ತು ವ್ಯಕ್ತಿಗಳ ಟ್ವಿಟ್ಟರ್ ಖಾತೆಗಳು ಬುಧವಾರ ರಾತ್ರಿ ಹ್ಯಾಕ್ ಆಗಿದ್ದವು.
ಹ್ಯಾಕ್ ಆದ ಎಲ್ಲರ ಟ್ಟಿಟ್ಟರ್ ಗಳಲ್ಲೂ ‘ಈ ವಿಳಾಸಕ್ಕೆ ನೀವು ಇನ್ನು 30 ನಿಮಿಷಗಳಲ್ಲಿ 1000 ಬಿಟ್ ಕಾಯಿನ್ ಕಳುಹಿಸಿದರೆ ನಾನು ನಿಮಗೆ ಅದರ ಎರಡು ಪಟ್ಟನ್ನು ಹಿಂದಿರುಗಿಸುತ್ತೇನೆ’ ಎಂಬ ಒಕ್ಕಣೆಯಿದ್ದವು.
ಘಟನೆ ಹಿನ್ನಲೆ ಟ್ಟಿಟ್ಟರ್ ಕೆಲಕಾಲ ವೆರಿಫೈಡ್ ಅಕೌಂಟ್ ಗಳಿಂದ ಟ್ವೀಟ್ ಮಾಡುವುದಕ್ಕೆ ನಿಷೇಧ ಹೇರಿತ್ತು. ಅಲ್ಲದೆ ಪಾಸ್ ವರ್ಡ್ ಬದಲಾಯಿಸುವುದಕ್ಕೂ ಅವಕಾಶ ನೀಡಿರಲಿಲ್ಲ. ಇದೀಗ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದಿದೆ.
You may be unable to Tweet or reset your password while we review and address this incident.
— Twitter Support (@TwitterSupport) July 15, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.