ಕಾರಿನಲ್ಲಿ ಒಟ್ಟು 12 ಕ್ಯಾಮರಾಗಳು, 8 ಲಿಡಾರ್‌ಗಳನ್ನು ಅಳವಡಿಸಲಾಗಿದೆ: ಏನಿದರ ವಿಶೇಷ ?
Team Udayavani, Jul 22, 2022, 7:10 AM IST
ಬೀಜಿಂಗ್: ಚೀನಾದ ಬೈಡು ಸಂಸ್ಥೆಯು ಗುರುವಾರ ಸ್ಟೇರಿಂಗ್ ಇಲ್ಲದ ಕಾರೊಂದನ್ನು ಅನಾವರಣ ಮಾಡಿದೆ.
ದೇಶದಲ್ಲಿ ಮುಂದಿನ ವರ್ಷದಿಂದ ರೋಬೋಟ್ಯಾಕ್ಸಿ ಸೇವೆ ಆರಂಭವಾಗುವ ಸಾಧ್ಯತೆಯಿದ್ದು, ಅದೇ ನಿಟ್ಟಿನಲ್ಲಿ ಈ ಸ್ಟೇರಿಂಗ್ ಇಲ್ಲದ ಅಟೋನೊಮಸ್ ವಾಹನ(ಎವಿ) ಅನಾವರಣ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ.
ಕಾರನ್ನು ಮನುಷ್ಯರೇ ನಿಯಂತ್ರಿಸಬೇಕೆಂದರೆ ಅದಕ್ಕೆ ಸ್ಟೇರಿಂಗ್ ಹಾಕಿಕೊಳ್ಳುವ ಅವಕಾಶವನ್ನೂ ಕೊಡಲಾಗಿದೆ. ಕಾರಿನಲ್ಲಿ ಒಟ್ಟು 12 ಕ್ಯಾಮರಾಗಳು, 8 ಲಿಡಾರ್‌ಗಳನ್ನು ಅಳವಡಿಸಲಾಗಿದೆ. ಲಿಡಾರ್‌ಗಳು ರೆಡಾರ್ ಸೆನ್ಸಾರ್‌ಗಳಂತೆಯೇ ಕೆಲಸ ಮಾಡುವ ಸಾಧನವಾಗಿವೆ.
ಈ ಆಟೋಮೆಟಿಕ್ ಕಾರು 20 ವರ್ಷ ಅನುಭವವಿರುವ ಚಾಲಕ ಕಾರನ್ನು ಚಲಾಯಿಸಿದರೆ ಎಷ್ಟು ಸುರಕ್ಷಿತವಾಗಿ ಸಂಚರಿಸುತ್ತಾನೆಯೋ ಅಷ್ಟೇ ಸುರಕ್ಷಿತವಾಗಿ ಸಂಚರಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ಚೀನಾದಲ್ಲಿ ಸ್ಟೇರಿಂಗ್ ಇಲ್ಲದ ಕಾರನ್ನು ರಸ್ತೆಗಿಳಿಸುವುದಕ್ಕೆ ಅನುಮತಿಯಿಲ್ಲ. ಸದ್ಯದಲ್ಲೇ ಅದಕ್ಕೆ ಅನುಮತಿ ಸಿಗುವ ಸಾಧ್ಯತೆಯಿದ್ದು, ಆಗ ಈ ಕಾರುಗಳನ್ನು ರಸ್ತೆಗಿಳಿಸಲು ಸಂಸ್ಥೆ ಸಿದ್ಧತೆ ನಡೆಸಿಕೊಂಡಿದೆ.
ಅಂದಹಾಗೆ, ಈ ಕಾರಿನ ಬೆಲೆ 29.57 ಲಕ್ಷ ರೂ. ಸಂಸ್ಥೆಯು ಈ ಹಿಂದೆಯೇ ಒಂದು ಸ್ಟೇರಿಂಗ್ ಇಲ್ಲದ ಕಾರನ್ನು ಬಿಟ್ಟಿದ್ದು, ಈ ಕಾರಿನ ಬೆಲೆ ಹಳೆಯ ಕಾರಿಗಿಂತ ಕಡಿಮೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.