ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಇಸ್ಪೋರ್ಟ್ಸ್ 2022 ವೇಳಾಪಟ್ಟಿ ಪ್ರಕಟ
Team Udayavani, Feb 19, 2022, 5:35 PM IST
ಬೆಂಗಳೂರು: ದಕ್ಷಿಣ ಕೊರಿಯಾದ ವಿಡಿಯೋ ಗೇಮ್ ಕಂಪನಿಯಾದ ಕ್ರಾಫ್ಟನ್, ಐಎನ್‌ಸಿ ಮತ್ತು ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ತಯಾರಕರು ತನ್ನ ಇಸ್ಪೋರ್ಟ್ಸ್ 2022 ಭಾರತದ ರೋಡ್‌ಮ್ಯಾಪ್ ಬಿಡುಗಡೆಗೊಳಿಸಿದೆ.
ಬಿಜಿಎಂಐನ ರೋಡ್‌ಮ್ಯಾಪ್, 2022ರಲ್ಲಿ ನಾಲ್ಕು ಆಕರ್ಷಕ ಪಂದ್ಯಾವಳಿಗಳು, 4 ಕೋಟಿ ರೂ.ಗಳ ನಗದು ಪುರಸ್ಕಾರ, ಮೆಗಾ ಪ್ರಶಸ್ತಿಗಳು ಮತ್ತು ಕ್ರೀಡಾ ಗೇಮರ್‌ಗಳಿಗೆ ತಮ್ಮ ಗುರುತು ಮೂಡಿಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅವಕಾಶಗಳನ್ನು ಕಲ್ಪಿಸಲಿದೆ.
ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಓಪನ್ ಚಾಲೆಂಜ್ (ಬಿಎಂಒಸಿ)ಯೊಂದಿಗೆ ಆರಂಭಿಸಿ, ಕ್ರಾಫ್ಟಾನ್ ಐಎನ್‌ಸಿ, 2022ರಲ್ಲಿ ಬಿಜಿಎಂಐಗಾಗಿ ನಾಲ್ಕು ಇಸ್ಪೋರ್ಟ್ಸ್ ಟೂರ್ನಮೆಂಟ್‌ಗಳನ್ನು ಹಮ್ಮಿಕೊಳ್ಳಲಿದೆ. ಈಗಾಗಲೇ ಬಿಜಿಎಂಐ 6 ಲಕ್ಷಕ್ಕೂ ಹೆಚ್ಚು ನೋಂದಣಿ, 200 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಹೊಂದಿದೆ.
ಕಳೆದ ವರ್ಷ ಅದರ ಅತ್ಯುತ್ತಮ ಪ್ರದರ್ಶನದ ನಂತರ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (ಬಿಜಿಎಂಐ) ಈಗ ತನ್ನ ವ್ಯಾಪ್ತಿ ವಿಸ್ತರಿಸಲು ಮುಂದಾಗಿದೆ.
2022 ರಲ್ಲಿ, BGMI ನಾಲ್ಕು ಪ್ರಮುಖ ಪಂದ್ಯಾವಳಿಗಳು
- ಬಿಎಂಒಸಿ – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಓಪನ್ ಚಾಲೆಂಜ್
- ಬಿಎಂಪಿಎಸ್ – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಪ್ರೊ ಸೀರೀಸ್ ಸೀಸನ್ 1
- ಬಿಎಂಐಎಸ್ – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಸೀರೀಸ್
- BMPS – ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಪ್ರೊ ಸೀರೀಸ್ ಸೀಸನ್ 2
2022 ರ ಮಾರ್ಗಸೂಚಿಯ ಕುರಿತು ಪ್ರತಿಕ್ರಿಯಿಸಿದ, ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಕ್ರಾಫ್ಟನ್, ಐಎನ್‌ಸಿಯ ಮುಖ್ಯಸ್ಥ ಮಿನು ಲೀ, ” ಭಾರತದಲ್ಲಿ ಇಸ್ಪೋರ್ಟ್ಸ್ ಅಭಿವೃದ್ಧಿಗೆ ಕ್ರಾಫ್ಟನ್ ಬದ್ಧವಾಗಿದೆ, 2022 ರಲ್ಲಿ, ನಾವು ಹಲವು ವಲಯಗಳಲ್ಲಿ ಆಟಗಾರರಿಗೆ ವೇದಿಕೆಯನ್ನು ಒದಗಿಸಲಿದ್ದೇವೆ. ಭಾರತದಲ್ಲಿ ಹೆಚ್ಚು ಹೆಚ್ಚು ಪ್ರತಿಭೆಗಳನ್ನು ಹೊರತರುವುದು ನಮ್ಮ ಗುರಿ. ಮತ್ತು ದೇಶದಲ್ಲಿ ಬೆಳೆಯುತ್ತಿರುವ ಇಸ್ಪೋರ್ಟ್ಸ್ ವ್ಯವಸ್ಥೆಯಡಿ ಪಂದ್ಯಾವಳಿಗಳನ್ನು ಆಯೋಜಿಸಲು ನಾವು ಎದುರು ನೋಡುತ್ತಿದ್ದೇವೆ. ಆಟಗಾರರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಬಳಸಿಕೊಳ್ಳಲು ಜಾಗತಿಕ ವೇದಿಕೆಯನ್ನು ನಾವು ಒದಗಿಸಲಿದ್ದೇವೆ” ಎಂದರು.
2022ರಲ್ಲಿ ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಓಪನ್ ಚಾಲೆಂಜ್ (BMOC) ಗಾಗಿ ನೋಂದಣಿಗಳು ಫೆಬ್ರವರಿ 2022 ರ ಕೊನೆಯಲ್ಲಿ ಪ್ರಾರಂಭವಾಗುತ್ತವೆ ಮತ್ತು ಮಾರ್ಚ್ ಅಂತ್ಯದಲ್ಲಿ ಪಂದ್ಯದ ಅರ್ಹತಾ ಪಂದ್ಯಗಳು ನಡೆಯುತ್ತವೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಪ್ರೊ ಸೀರೀಸ್ ಸೀಸನ್ 1 ಮತ್ತು ಸೀಸನ್ 2 ಗಾಗಿ 2 ಕೋಟಿ ರೂ. ಬಹುಮಾನ ಘೋಷಿಸಲಾಗಿದೆ. ಇದು ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಸರಣಿಯಲ್ಲೂ ಮುಂದುವರಿಯುತ್ತದೆ. 2 ಕೋಟಿ ಮೊತ್ತದ ಬಹುಮಾನದ ಭಾರತದಲ್ಲಿ ಇಸ್ಪೋರ್ಟ್ಸ್ ಈವೆಂಟ್‌ಗಾಗಿ ಅತಿದೊಡ್ಡ ಬಹುಮಾನವಾಗಿರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.