ಹ್ಯಾಕಿಂಗ್‌ ಭೂತ : ಕದ್ದು ಕದ್ದು ನೋಡೋ ಕಳ್ಳ ಯಾರು?

ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆದರೆ ಫೇಸ್‌ಬುಕ್‌ನಕಡೆಯಿಂದ ನಿಮ್ಮ ಇ-ಮೇಲ್‌ ಐಡಿಗೆಒಂದು ಮೇಲ್‌ ಬರುತ್ತೆ.

Team Udayavani, Jan 8, 2021, 4:45 PM IST

ಹ್ಯಾಕಿಂಗ್‌ ಭೂತ : ಕದ್ದು ಕದ್ದು ನೋಡೋ ಕಳ್ಳ ಯಾರು?

ಮೊನ್ನೆ ಫೇಸ್‌ಬುಕ್‌ನ ಗೆಳೆಯರೊಬ್ಬರ ಪ್ರೊಫೈಲಿನಿಂದ “ಹಾಯ್’, “ಹೌ ಆರ್‌ ಯೂ’ ಎಂದು ಇಂಗ್ಲಿಷಿನಲ್ಲಿ ಮೆಸೇಜ್‌ ಬಂತು. ಯಾವತ್ತೂ ಇಂಗ್ಲಿಷಿನಲ್ಲಿ ಮೆಸೇಜ್‌ ಮಾಡಲ್ವಲ್ಲ ಇವರು. ಇವತ್ಯಾಕೆ ಮಾಡಿದ್ದಾರೆ ಎಂದು ನೋಡುವ ಹೊತ್ತಿಗೆ, “ನಂಗೆ ಅರ್ಜೆಂಟಾಗಿ ದುಡ್ಡು ಬೇಕಿದೆ. ಈ ನಂಬರಿಗೆ ಕಳಿಸಿ’ ಎಂದು ಮತ್ತೂಂದು ಮೆಸೇಜು! ಅರೆ, ಇದೇನು ಇದ್ದಕ್ಕಿದ್ದಂತೆ ದುಡ್ಡು ಕೇಳ್ತಾ ಇದ್ದಾರಲ್ಲ; ಇವರ ನಡೆಯೇ ಯಾಕೋ ಅನುಮಾನಾಸ್ಪದ ವಾಗಿದೆಯಲ್ಲಾ ಅಂತ ಅವರಿಗೆ ಫೋನ್‌ ಮಾಡಿದರೆ- “ಏನಂದ್ರಿ? ನಾನು ದುಡ್ಡು ಕೇಳಿದ್ನ? ಇಲ್ವಲ್ಲ, ನಾನು ನಿಮಗೆ ಫೋನೇ ಮಾಡಿಲ್ವಲ್ಲ’ ಅಂದಾಗ ಶಾಕ್‌. ಅವರಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆಗಿ ಕಳಿಸಿದ ಸಂದೇಶಗಳನ್ನ ನೋಡಿದರೆ, ಸುಮಾರು ಜನರಿಗೆ ಅವರಿಂದ ಈ ಥರದ ಸಂದೇಶಗಳು ಹೋಗಿತ್ತು. ಅವರ ಅಕೌಂಟು ಹ್ಯಾಕ್‌ ಆಗಿತ್ತು!

ಏನಿದು ಹ್ಯಾಕಿಂಗ್‌ ಅಂದರೆ? :  ನಿಮ್ಮ ಅನುಮತಿಯಿಲ್ಲದೇ ನಿಮ್ಮ ಕಂಪ್ಯೂಟರ್‌, ಮೊಬೈಲ್, ಇ ಮೇಲ್‌ ಅಥವಾಅಂತರ್ಜಾಲದ ಖಾತೆಗಳ ಒಳ ನುಸುಳಿ,ಅದರಲ್ಲಿನ ಮಾಹಿತಿಗಳನ್ನುದುರುಪಯೋಗಪಡಿಸಿಕೊಳ್ಳೋದನ್ನ ಹ್ಯಾಕಿಂಗ್‌ಅಂತಾರೆ. ನಿಮ್ಮ ಖಾತೆಯೊಳಗೆ ನಿಮ್ಮ ಅನುಮತಿ ಯಿಲ್ಲದೇ ಯಾರಾದ್ರೂ ನುಸುಳಿದ್ದಾರೆ ಅಂದರೆ ನಿಮ್ಮಕಂಪ್ಯೂಟರ್‌, ಖಾತೆ ಹ್ಯಾಕ್‌ ಆಗಿದೆ ಅಂದರ್ಥ.

ಹ್ಯಾಕಿಂಗ್‌ನಿಂದ ಯಾರಿಗೇನು ಲಾಭ? : ಮುಂಚೆಯೆಲ್ಲಾ ಹಣ ಕೈಯಿಂದ ಕೈಗೆಬದಲಾಗುತ್ತಿತ್ತು. ಈಗ ಅಂತರ್ಜಾಲ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯಿಂದ ನೀವು ಮುಖವನ್ನೇನೋಡದವರಿಗೂ ಯುಪಿಐ ತಂತ್ರಾಂಶದ ಮೂಲಕ ಹಣ ಕಳುಹಿಸಬಹುದು, ಹಾಗೆಯೇ ಅವರಿಂದ ಹಣ ಪಡೆಯಬಹುದು.ಮುಖವನ್ನೇ ನೋಡದೆ ಅದ್ಹೆಂಗೆ ಹಣ ಕಳುಹಿಸುತ್ತೀರಾ ಅಂದಿರಾ? ಅದಕ್ಕೆ ಕಾರಣನಂಬಿಕೆ. ನೀವು ನಿಮಗೆ ಬೇಕಾದವರಿಗೆಕಳುಹಿಸುತ್ತಿದ್ದೀರ, ಅದು ಅವರಿಗೇ ತಲುಪುತ್ತೆಅನ್ನೋ ನಂಬಿಕೆಯೂ ನಿಮಗಿದೆ. ಆದರೆ ನೀವು- ಇವರು ನಮ್ಮವರು ಅಂದುಕೊಂಡವರು ನಿಮ್ಮವರಲ್ಲದಿದ್ದರೆ? ಇದೇನಪ್ಪ ಅಂದಿರಾ? ಅಂದರೆ, ನಿಮ್ಮ ತಂದೆಯವರ ಮೊಬೈಲಿಂದ, ಅವರ ಧ್ವನಿಯಲ್ಲೇ ಫೋನ್‌ ಮಾಡಿ ಏನೋ ಅರ್ಜೆಂಟಿದೆ, ಇಂತಹ ಜಾಗಕ್ಕೆ ತಕ್ಷಣ ಬಾ ಅಂದರೆ ಇನ್ನಾéವ ಯೋಚನೆಯೂ ಇಲ್ಲದೇ ಹೊರಡೋಕೆ ರೆಡಿಯಾಗಲ್ವಾ? ಅದಕ್ಕೆ ಕಾರಣ ಅಚಲ ನಂಬಿಕೆ. ಇಲ್ಲೂ ಮುಖ ನೋಡಿಲ್ಲ. ಯಾರೋ ಖದೀಮ ತಂದೆಯವರ ಫೋನ್‌ ಕದ್ದು ಈ ತರ ಮಾಡ್ತಿರಬಹುದು ಅನ್ನೋ ಆಲೋಚನೆ ನಮ್ಮಲ್ಲಿ ಮೂಡೋಕೆ ಸಾಧ್ಯನಾ? ಅದೇ ತರ ಈ ಫೇಸ್‌ಬುಕ್‌, ಜಿ ಮೇಲ್‌ಗ‌ಳಲ್ಲಿನೀವು ಬಳಸೋ ಪಾಸ್‌ವರ್ಡ್‌ಗಳನ್ನು ಒಂದು ಅಂದಾಜಿನ ಮೇಲೆ ಊಹಿಸಿ, ನಿಮ್ಮ ಖಾತೆಗೆಲಾಗಿನ್‌ ಆಗಿ ಅದರಲ್ಲಿ ನಿಮ್ಮ ಸಂಪರ್ಕದಲ್ಲಿರೋರಿಗೆ ಮೆಸೇಜ್‌ ಮಾಡಿ ದುಡ್ಡು ಕೇಳಿದ್ರೆ? ಎಲ್ಲೋಒಂದಿಷ್ಟು ಜನ ಹುಷಾರಿರುವವರು ಕೊಡದಿರಬಹುದು.

ಆದರೆ ನಿಮ್ಮ ಮೇಲಿನ ಅಚಲ ನಂಬಿಕೆಯಿಂದ ಆ ಕಳ್ಳ ಕೇಳಿದ ಖಾತೆಗೆ ದುಡ್ಡು ಹಾಕುವವರೂ ಇರುತ್ತಾರೆ. ಯಾರದೋ ದುಡ್ಡನ್ನ ಈ ಥರ ಸುಲಭದಲ್ಲಿ ದೋಚಿ ಆ ದುಡ್ಡಲ್ಲಿ ಮಜಾ ಉಡಾಯಿಸುತ್ತಾರೆ ಕಳ್ಳರು. ಇನ್ನು ಹ್ಯಾಕ್‌ ಆದ ಅಕೌಂಟಿನ ಮೂಲಕದುಡ್ಡು ಮಾತ್ರ ಕೇಳಬಹುದು ಅಂತಂದು ಕೊಳ್ಳಬೇಡಿ! ಅದರ ಮೂಲಕ ನಿಮ್ಮಗೆಳೆಯರಿಗೆ ಅಶ್ಲೀಲ ವಿಡಿಯೋ ಕಳಿಸಿ ನಿಮ್ಮ ಮರ್ಯಾದೆ ಕಳೆಯಬಹುದು! ಹ್ಯಾಕ್‌ ಆದ ಇ ಮೇಲ್‌ನಲ್ಲಿರುವ ಅಮೂಲ್ಯ ಮಾಹಿತಿಗಳನ್ನಿಟ್ಟುಕೊಂಡು ನಿಮ್ಮನ್ನು ಮತ್ತಷ್ಟು ದುಡ್ಡಿಗಾಗಿ ಬ್ಲಾಕ್‌ ಮೇಲ್ ಮಾಡಬಹುದು.ಒಟ್ಟಿನಲ್ಲಿ ಒಮ್ಮೆ ಫೇಸ್‌ಬುಕ್‌ನ ಅಕೌಂಟ್‌ಹ್ಯಾಕ್‌ ಆಯಿತು ಅಂದರೆ, ಆ ನಂತರದಲ್ಲಿ ಅತೀ ಅನ್ನುವಷ್ಟು ತಲೆನೋವು ಜೊತೆಯಾಗುವುದು ಗ್ಯಾರಂಟಿ.

ಇದರಿಂದ ಪಾರಾಗೋದು ಹೇಗೆ? :  ನಿಮ್ಮ ಕಂಪ್ಯೂಟರ್‌, ಮೊಬೈಲ್, ಇ ಮೇಲ್, ಫೇಸ್‌ಬುಕ್‌ ಮುಂತಾದವುಗಳಿಗೆ ಬೇರೆ ಬೇರೆ ಪಾಸ್‌ವರ್ಡ್‌ ಇಡಿ ಮತ್ತು ಅವುಗಳನ್ನು ಆಗಾಗ್ಗೆ ಬದಲಾಯಿಸುತ್ತಿರಿ. ನಿಮ್ಮ ಹೆಸರು, ಜನ್ಮದಿನ ಮುಂತಾದವೆಲ್ಲಾ ಇರದ, ಸುಲಭಕ್ಕೆ ಗ್ರಹಿಸಲಾಗದ ಪಾಸ್‌ವರ್ಡ್‌ ಇಡಿ. ಫೇಸ್‌ಬುಕ್‌ನಲ್ಲಿ ಲಾಗಿನ್‌ ಅಲರ್ಟ್‌ ಸೆಟ್‌ ಮಾಡಬಹುದು.ಅಂದರೆ, ನಿಮ್ಮದಲ್ಲದ ಕಂಪ್ಯೂಟರ್‌, ಮೊಬೈಲಿನಿಂದ ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆದರೆ ಫೇಸ್‌ಬುಕ್‌ನಕಡೆಯಿಂದ ನಿಮ್ಮ ಇ-ಮೇಲ್‌ ಐಡಿಗೆಒಂದು ಮೇಲ್‌ ಬರುತ್ತೆ. ಇಂತಹ ಐಪಿಅಡ್ರೆಸ್‌, ಊರು ಮತ್ತು ಕಂಪ್ಯೂಟರಿನಿಂದ ನಿಮ್ಮ ಫೇಸ್‌ಬುಕ್‌ಗೆ ಲಾಗಿನ್‌ ಆಗಿದೆ. ಇದುನೀವಾ ಅಂತ. ನೀವಲ್ಲದಿದ್ದರೆ ತಕ್ಷಣ ಕೆಳಗಿರೋ ಕೊಂಡಿಯನ್ನು ಒತ್ತಿ ಹ್ಯಾಕಿಂಗನ್ನು ತಡೆಯಿರಿಅಂತಿರುತ್ತೆ ಅದರಲ್ಲಿ. ಅಂತಹ ಸಂದೇಶ ಬಂತು ಅಂದರೆ, ನಿಮ್ಮ ಅಕೌಂಟ್‌ ಹ್ಯಾಕ್‌ಆಗಿದೆ ಅಂತ ಅರ್ಥ. ತಕ್ಷಣವೇ ಅದರ ಕೆಳಗಿರುವ ಕೊಂಡಿಯನ್ನು ಒತ್ತಿ ಮುಂದೆ ಆಗಬಹುದಾದ ಹೆಚ್ಚಿನ ಹಾನಿಯನ್ನು ತಡೆಯಬಹುದು.

ಈ ಹ್ಯಾಕಿಂಗ್‌ ಹೇಗಾಗುತ್ತೆ? :  ಹೆಚ್ಚಿನ ಹ್ಯಾಕರ್‌ಗಳು ಸುಲಭದ ಪಾಸ್‌ವರ್ಡ್‌ಗಳು ಇರಬಹುದಾದ ಅಕೌಂಟುಗಳಿಗಾಗಿ ಹುಡುಕುತ್ತಿರುತ್ತಾರೆ. ಸುಲಭದ ಪಾಸ್‌ವರ್ಡುಗಳು ಅಂದರೆ ವೆಲ್‌ಕಂ, ಪಾಸ್‌ವರ್ಡ್‌, ನವೆಂಬರ್‌ 1980 ಇತ್ಯಾದಿ. ಇದರಲ್ಲಿ ನೀವು ನವೆಂಬರ್‌ 1980ರಲ್ಲಿ ಹುಟ್ಟಿದವರೆಂದರೆ, ಇಂಥದ್ದನ್ನು ಗ್ರಹಿಸೋದು ಇನ್ನೂ ಸುಲಭ! ಇನ್ನು ಕೆಲವರಿಗೆ ತಮ್ಮ ಕಂಪ್ಯೂಟರ್‌, ಇಮೇಲ್, ಫೇಸ್‌ ಬುಕ್‌ ಎಲ್ಲಕ್ಕೂ ಒಂದೇ ಪಾಸ್‌ವರ್ಡ್‌ ಇಡೋ ಖಯಾಲಿ.ಐದಾರು ಪಾಸ್‌ವರ್ಡ್‌ ಇಟ್ಟುಕೊಂಡರೆ ಅವನ್ನೆಲ್ಲಾ ನೆನಪಲ್ಲಿಇಟ್ಟುಕೊಳ್ಳುವುದೇ ಒಂದು ಸಮಸ್ಯೆ ಅಂತ! ಇಂಥ ಸಂದರ್ಭದಲ್ಲಿಹ್ಯಾಕರ್‌ಗಳೇನಾದರೂ ಒಂದರ ಪಾಸ್‌ವರ್ಡ್‌ ಕದ್ದರೂ ಸಾಕು; ಉಳಿದ ಎಲ್ಲಾ ಅಕೌಂಟ್‌ಗಳಿಗೂ ಪ್ರವೇಶಿಸಲು ಅವರಿಗೆ ರಾಜಮಾರ್ಗ ತೆರೆದುಕೊಳ್ಳುತ್ತದೆ! ಪಾಸ್‌ವರ್ಡುಗಳು ಮರೆತುಹೋಗುತ್ತವೆ ಅಂತ ಡೈರಿಯಲ್ಲಿ, ಕ್ಯಾಲೆಂಡರ್‌ ಮೇಲೆಬರೆದಿಡೋರೂ ಇದ್ದಾರೆ. ಪಾಸ್‌ವರ್ಡ್‌ ಅನ್ನು ಹಿಂಗೆಲ್ಲಾ ಇಟ್ಟರೆ,ಈ ಹ್ಯಾಕರ್‌ ಹೊರಗಿನೋರು ಯಾರೋ ಆಗಬೇಕೆಂದೇನಿಲ್ಲ. ನಿಮ್ಮ ಕ್ಯಾಲೆಂಡರ್‌ ನೋಡುವ ಯಾರು ಬೇಕಾದರೂ ನಿಮ್ಮ ಅಕೌಂಟ್‌ ಅನ್ನು ಹ್ಯಾಕ್‌ ಮಾಡಬಹುದು!

-ಪ್ರಶಸ್ತಿ. ಪಿ. ಸಾಗರ

ಟಾಪ್ ನ್ಯೂಸ್

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ

ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

7

Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.