ಬ್ರೇಕ್ ಹಾಕೋ ಮೊದಲು.. ಎಚ್ಚರ!
Team Udayavani, Jul 26, 2019, 5:00 AM IST
ದ್ವಿಚಕ್ರ ವಾಹನದಲ್ಲಿ ಹೋಗೋದು ಅಂದರೆ ಎಲ್ಲರಿಗೂ ಇಷ್ಟ. ಪಾರ್ಕಿಂಗ್ ಕಿರಿಕ್ ಇಲ್ಲ, ಪೇಟೇಲೂ, ಹಳ್ಳಿಲೂ ಬೇಕಾದಂತೆ ಹೋಗಬಹುದು. ರಸ್ತೆ ಸರಿ ಇಲ್ಲ ಎನ್ನೋ ಸಮಸ್ಯೆನೂ ಇಲ್ಲ. ಆದರೆ, ಹೀಗೆ ದ್ವಿಚಕ್ರ ವಾಹನದಲ್ಲಿ ಬಿಡುಬೀಸಾಗಿ ಹೋಗೋದು ಒಂದು ರೀತಿಯಲ್ಲಿ ಡೇಂಜರ್! ಕಾರಣ ನಿಮ್ಮ ಬ್ರೇಕಿಂಗ್ ಕರೆಕ್ಟಾಗಿರಬೇಕು. ಅಷ್ಟೇ ಅಲ್ಲ, ಪರಿಣಾಮಕಾರಿಯೂ ಆಗಿರಬೇಕು. ಇಲ್ಲದಿದ್ದರೆ ಸಮಸ್ಯೆಗೆ ಕಾರಣವಾಗುತ್ತೆ. ಬ್ರೇಕಿಂಗ್ ಪರಿಣಾಮಕಾರಿಯಾಗಿ ಹಾಕೋದು ಹೇಗೆ ಎನ್ನುವ ಬಗ್ಗೆ ನಾವು ಚಾಲನೆಯ ವೇಳೆಯೇ ಕಲಿಯಬೇಕಾಗುತ್ತದೆ. ಅಷ್ಟೇ ಅಲ್ಲದೆ, ಹಲವು ಸಂದರ್ಭಗಳಲ್ಲಿ ಆದ ಅಪಾಯಗಳಿಂದ ನಾವು ಪಾಠ ಕಲಿತು ಉತ್ತಮ ಚಾಲನೆ ಅಭ್ಯಾಸವನ್ನು ನಾವು ಮೈಗೂಡಿಸಿಕೊಳ್ಳಬಹುದು. ಅದಕ್ಕಾಗಿ ಬ್ರೇಕ್ ಯಾವಾಗ ಹಾಗಬೇಕು? ಎಲ್ಲಿ ಯಾವಾಗ ಹಾಕಬಾರದು ಎಂಬುದನ್ನು ನೋಡೋಣ.
ರಸ್ತೆ ಒದ್ದೆಯಾಗಿದ್ದರೆ ಫೋರ್ಸ್ ಬ್ರೇಕ್ ಬೇಡ
ರಸ್ತೆ ಒದ್ದೆಯಾಗಿದೆ, ಯಾವುದೋ ಒಂದು ಸಂದರ್ಭ ಬ್ರೇಕ್ ಹಾಕಬೇಕಾಯ್ತು, ಅನ್ನಿ. ಆದರೆ ಈ ವೇಳೆ ಏಕಾಏಕಿ ಫೋರ್ಸ್ ಹಾಕಿ ಬ್ರೇಕ್ ಹಾಕಬೇಡಿ. ಇದರಿಂದ ಟಯರ್ ರಸ್ತೆಯಿಂದ ಜಾರುವ ಅಪಾಯ ಹೆಚ್ಚು. ಹಿಂಭಾಗದ ಬ್ರೇಕ್ ತುಸು ಹೆಚ್ಚು, ಮುಂಭಾಗದ ಬ್ರೇಕ್ ತುಸು ಕಡಿಮೆ ಎಂಬಂತೆ (ಶೇ.75-ಶೇ.25) ಅನುಪಾತದಲ್ಲಿ ಬ್ರೇಕ್ ಹಾಕಬಹುದು. ಬ್ರೇಕ್ ಹಾಕುವ ಮುನ್ನ ಅಕ್ಸಲರೇಟರ್ ತಗ್ಗಿಸಿ, ನಿಧಾನಗೊಳಿಸಿ ಬ್ರೇಕ್ ಹಾಕುವುದೇ ಉತ್ತಮ.
ಒಂದೇ ರೀತಿ ಲೆಕ್ಕಾಚಾರ ಬೇಡ
ರಸ್ತೆಯಲ್ಲಿ ಮರಳಿನ ಹುಡಿ, ಚರಳು ಕಲ್ಲು, ಒದ್ದೆಯಿದ್ದ ಸಂದರ್ಭದಲ್ಲಿ ಯಾವತ್ತೂ ಬ್ರೇಕ್ ಹಾಕಿದಂತೆ ಬ್ರೇಕ್ ಹಾಕಿದರೆ ನಡೆಯುತ್ತದೆ ಎಂಬ ಆಲೋಚನೆಯನ್ನು ಮಾಡದಿರಿ. ರಸ್ತೆ ಒದ್ದೆಯಿದೆಯೇ, ಬದಿಯಲ್ಲಿ ಮರಳು, ಚರಳು ಇದೆಯೇ ಎಂಬುದನ್ನು ಗಮನಿಸಿಯೇ ನೀವು ಬ್ರೇಕ್ ಹಾಕಬೇಕು. ಈ ಲೆಕ್ಕಾಚಾರ ಅತಿಮುಖ್ಯ.
ಕೈಯ ನಾಲ್ಕು ಬೆರಳುಗಳು ಅಥವಾ ಕಾಲು ಬ್ರೇಕ್‌ನ ಮೇಲಿಟ್ಟುಕೊಂಡೇ ಚಾಲನೆ ಮಾಡುವುದು ಒಳ್ಳೆಯದಲ್ಲ. ಭಾರೀ ಟ್ರಾಫಿಕ್ ವೇಳೆ ಇದು ಸರಿಯಾದ್ದಿರಬಹುದು. ಹೀಗೆ ಚಾಲನೆ ಮಾಡುವುದರಿಂದ ಗೊತ್ತಿಲ್ಲದೆ ಕೆಲವೊಮ್ಮೆ ಬ್ರೇಕ್ ಅಪ್ಲೆ„ಯಾಗುತ್ತಿರುತ್ತದೆ. ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ.
ಒಂದು ಬ್ರೇಕ್ ಮಾತ್ರ ಬೇಡ
ಯಾವುದಾದರೂ ಒಂದು ಬ್ರೇಕ್ ಅನ್ನು ಮಾತ್ರ ಹಾಕುವ ಅಭ್ಯಾಸ ನಮ್ಮಲ್ಲಿ ಹಲವರಿಗಿದೆ. ಕೆಲವರು ಮುಂಭಾಗದ ಬ್ರೇಕ್ ಮಾತ್ರ, ಇನ್ನು ಕೆಲವರು ಹಿಂಭಾಗದ ಬ್ರೇಕ್ ಮಾತ್ರ ಹಾಕುತ್ತಾರೆ. ಇದು ಎರಡೂ ಒಳ್ಳೆಯ ಚಾಲಕನ ಅಭ್ಯಾಸವಲ್ಲ. ಎರಡೂ ಬ್ರೇಕ್‌ಗಳನ್ನು ಸಮ ಪ್ರಮಾಣ ದಲ್ಲಿ ಹಾಕುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ದ್ವಿಚಕ್ರ ವಾಹನದ ಮೇಲೆ ಕಂಟ್ರೋಲ್ ಹೆಚ್ಚಿರುತ್ತದೆ.
ತಿರುವಿನಲ್ಲಿ ಫ್ರಂಟ್ ಬ್ರೇಕ್ ಬೇಡ
ತಿರುವಿನಲ್ಲಿ ಚಾಲನೆ ವೇಳೆ ದ್ವಿಚಕ್ರ ವಾಹನಗಳಿಗೆ ಒಂದಷ್ಟು ಪ್ರಮಾಣದ ಗ್ರಿಪ್ ಮಾತ್ರ ಇರುತ್ತದೆ. ಒಂದು ವೇಳೆ ರಸ್ತೆಯಲ್ಲೂ ಮರಳು, ನೀರು ಇದ್ದರೆ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕಾರಣಕ್ಕೆ ತಿರುವಿನಲ್ಲಿ ಯಾವುದೇ ಕಾರಣಕ್ಕೆ ಮುಂಭಾಗದ ಬ್ರೇಕ್ ಅನ್ನು ಮಾತ್ರವೇ ಹಾಕಬಾರದು. ಎರಡೂ ಬ್ರೇಕ್ ಅಥವಾ ಹಿಂಭಾಗದ ಬ್ರೇಕ್ ಮಾತ್ರ ಹಾಕಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.