ಹೊಸ TRK 251 ಸರಣಿಯ ಇಟಾಲಿಯನ್ ಬೈಕ್
Team Udayavani, Dec 17, 2021, 8:04 AM IST
ಇಟಾಲಿಯನ್ ಬೈಕ್ ತಯಾರಕಾ ಕಂಪನಿ ಬೆನೆಲ್ಲಿ (Benelli) ಹೊಸ TRK 251 ಸರಣಿಯ ಬೈಕ್ ಬಿಡುಗಡೆ ಮಾಡಿದೆ. ಇದು ಕಂಪನಿಯ ಜನಪ್ರಿಯ ಸಾಹಸ ಕ್ರೀಡೆಗೆ ಬಳಸಲು ವಿನ್ಯಾಸಗೊಂಡಂತಿದೆ.
ಇದು ಲಿಕ್ವಿಡ್-ಕೂಲ್ಡ್ ಸಿಂಗಲ್-ಸಿಲಿಂಡರ್ 249cc ಎಂಜಿನ್‌ನಿಂದ ಕೂಡಿದೆ, ಭಾರತದಲ್ಲಿ ಹಿಂದೆ ನೀಡಲಾಗಿದ್ದ (Leoncino 250) ಲಿಯೊನ್ಸಿನೊ 250 ಯನ್ನೇ ಹೋಲುವ ಬೈಕ್ ಇದಾಗಿದೆ. ಇದು 9,250 rpm ನಲ್ಲಿ 25.8 hp ಗರಿಷ್ಠ ಶಕ್ತಿಯನ್ನು ಮತ್ತು 8,000 rpm ನಲ್ಲಿ 21.1 Nm ಗರಿಷ್ಠ (ಟಾರ್ಕ್) ಪರಿವರ್ತಕವನ್ನು ಹೊಂದಿದೆ,
ಈ ಬೈಕ್ ಅದರ ನೇರ ಪ್ರತಿಸ್ಪರ್ಧಿ KTM 250 ಅಡ್ವೆಂಚರ್‌ಗಿಂತ ಸ್ವಲ್ಪ ಕಡಿಮೆಯಾಗಿದೆ, ಇದು 29.9hp ಮತ್ತು 24Nm(Newton metres) ಸಾಮರ್ಥ್ಯ ನೀಡುತ್ತದೆ. KTM 250 ಅಡ್ವೆಂಚರ್ ರೂ 2.30 ಲಕ್ಷ (ಎಕ್ಸ್ ಶೋ ರೂಂ, ದೆಹಲಿ) ಬೆಲೆಯನ್ನು ಹೊಂದಿದೆ.
TRK251 ಉಕ್ಕಿನಿಂದ ಮಾಡಲ್ಪಟ್ಟ ವಿನ್ಯಾಸವನ್ನು ಇದು ಹೊಂದಿದೆ, ಇದನ್ನು ಅಡ್ವೆಂಚರ್ ಟೂರರ್ ಎಂದು ಮಾರಾಟ ಮಾಡಲಾಗಿದ್ದರೂ, ಅದರ ಗ್ರೌಂಡ್ ಕ್ಲಿಯರೆನ್ಸ್ ಕೇವಲ 170mm ಆಗಿದೆ, ಇದು Yamaha R15 V4 ನಂತೆಯೇ ಇರುತ್ತದೆ. ಆದಾಗ್ಯೂ, ಇದು ದೊಡ್ಡ 18 ಲೀಟರ್ ಇಂಧನ ಟ್ಯಾಂಕ್ ಅನ್ನು ಹೊಂದಿದೆ.
TRK ಯ 17-ಇಂಚಿನ ಮಿಶ್ರಲೋಹದ ಚಕ್ರಗಳು ಸ್ಪಷ್ಟವಾಗಿ ರಸ್ತೆ-ಆಧಾರಿತವಾಗಿವೆ ಮತ್ತು ಅತ್ಯಾಧುನಿಕ ಅಟೋಮೊಬೈಲ್ ತಂತ್ರಜ್ಞಾನವನ್ನು ಹೊಂದಿ ಆಕರ್ಷಕವಾಗಿದೆ. ಇದು ಆಲ್-ಡಿಜಿಟಲ್ ಇನ್‌ಸ್ಟ್ರುಮೆಂಟೇಶನ್, ಡ್ಯುಯಲ್-ಚಾನೆಲ್ ಹಾಗು ಎಬಿಎಸ್ ಮತ್ತು ಎಲ್ ಇಡಿ ಹೆಡ್‌ಲೈಟ್ ಅನ್ನು ಸಹ ಒಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.