ಬಳಸಿದ ಕಾರ್ ಖರೀದಿಗೆ ಬೆಂಗಳೂರಿಗರ ಸ್ಪಂದನೆ ಹೆಚ್ಚು.! ಕಾರ್ ಖರೀದಿಯಲ್ಲಿ ಮಹಿಳೆಯರೇ ಹೆಚ್ಚು!


Team Udayavani, Dec 30, 2021, 12:56 PM IST

ಬಳಸಿದ ಕಾರ್ ಖರೀದಿಗೆ ಬೆಂಗಳೂರಿಗರ ಸ್ಪಂದನೆ ಹೆಚ್ಚು.! ಕಾರ್ ಖರೀದಿಯಲ್ಲಿ ಮಹಿಳೆಯರೇ ಹೆಚ್ಚು!

ಬೆಂಗಳೂರು: ಬಳಸಿದ ಕಾರ್‌ಗಳ ಆನ್‌ಲೈನ್ ಮಾರಾಟ ತಾಣವಾಗಿರುವ ಸ್ಪಿನ್ನಿ (spinny), ಬಳಸಿದ ಕಾರ್‌ಗಳ ಖರೀದಿಗೆ ಬೆಂಗಳೂರಿನಲ್ಲಿ ಭಾರಿ ಬೇಡಿಕೆ ಇರುವುದಕ್ಕೆ ಸಾಕ್ಷಿಯಾಗಿದ್ದು, ಶೇ. 64ರಷ್ಟು ಹೊಸ ಖರೀದಿದಾರರನ್ನು ಕಂಡಿದೆ.

ಬಹುತೇಕ ಖರೀದಿದಾರರು ಯುವಕರಾಗಿದ್ದಾರೆ. ಬಳಸಿದ ಕಾರ್ ಖರೀದಿಸುವ ಮಹಿಳೆಯರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಪುರುಷರಿಗೆ ಹೋಲಿಸಿದರೆ ಬಳಸಿದ ಕಾರು ಖರೀದಿದಾರರಲ್ಲಿ ಸುಮಾರು ಶೇ‌. 35ರಷ್ಟು ಮಹಿಳೆಯರು ಇರುವುದು ಕಂಡುಬಂದಿದೆ.

ಅಚ್ಚುಮೆಚ್ಚಿನ ಬ್ರಾಂಡ್‌ಗಳು ಮತ್ತು ಕಾರ್ ಮಾದರಿಗಳ ವಿಷಯದಲ್ಲಿ, ನಗರದ ಹೆಚ್ಚಿನ ಖರೀದಿದಾರರು ಮಾರುತಿ, ಹುಂಡೈ ಮತ್ತು ಹೋಂಡಾ ಅಂಡ್ ಕಾರ್ಸ್ ಬ್ರಾಂಡ್ ನ ಕಾರ್‌ಗಳತ್ತ ಒಲವು ಹೊಂದಿದ್ದಾರೆ. ಸ್ವಿಫ್ಟ್, ಗ್ರಾಂಡ್ i10 ಮತ್ತು ಎಲೈಟ್ i20 ಮಾದರಿಗಳು ಹಾಗೂ ಬಿಳಿ, ಬೂದು ಮತ್ತು ಕೆಂಪು ಬಣ್ಣದ ಕಾರ್‌ಗಳು ಖರೀದಿದಾರರ ಆದ್ಯತೆಯ ಬಣ್ಣದ ಆಯ್ಕೆಗಳಾಗಿವೆ.

ಗ್ರಾಹಕರು ಪರೀಕ್ಷಾರ್ಥ ಚಾಲನೆಗೆ ಮನೆಗೆ ಕಾರ್‌ಗಳನ್ನು ತೆಗೆದುಕೊಂಡು ಹೋಗಲು ಹೆಚ್ಚಿನ ಒಲವು ತೋರುತ್ತಾರೆ. ಬಹುತೇಕ ಅಂದರೆ ಶೇ. 54ರಷ್ಟು ಜನರು ಕಾರ್ ಖರೀದಿ ಪ್ರಕ್ರಿಯೆಯಲ್ಲಿ ಮನೆಗೆ ಕಾರ್ ತಲುಪಿಸುವುದನ್ನು ತಮ್ಮ ಆದ್ಯತೆಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕಾರ್ ಖರೀದಿಯ ಹೊಸ ಅನುಭವಕ್ಕಾಗಿ ಗ್ರಾಹಕರು ಹೆಚ್ಚಾಗಿ ಆನ್‌ಲೈನ್‌ನಲ್ಲಿ ಕಾರುಗಳನ್ನು ಬುಕ್ ಮಾಡುತ್ತಿದ್ದಾರೆ. ಇದರಿಂದಾಗಿ Spinny.com ನಲ್ಲಿ ಸಂಪೂರ್ಣ ಆನ್‌ಲೈನ್ ಖರೀದಿ ಪ್ರಮಾಣವು ಶೇ. 52ರಷ್ಟಾಗಿದೆ.

ಸ್ಪಿನ್ನಿಯ ನೀರಜ್ ಸಿಂಗ್ ಮಾತನಾಡಿ, “ಕೋವಿಡ್ ಪಿಡುಗು ಮತ್ತು ನಂತರದ ದಿನಗಳಲ್ಲಿ ಸ್ಪಿನ್ನಿಯು ಖರೀದಿದಾರರ ಮನೆ ಬಾಗಿಲಿಗೆ ಕಾರ್ ತಲುಪಿಸುವ ಮತ್ತು ಮನೆ ಅಥವಾ ಕಚೇರಿ ಸಮೀಪ ಪರೀಕ್ಷಾರ್ಥ ಚಾಲನೆಗೆ ಖರೀದಿದಾರರಿಗೆ ಕಾರ್ ತಲುಪಿಸುವ ಸೌಲಭ್ಯ ಒದಗಿಸುವುದಕ್ಕೆ ಗಮನ ಕೇಂದ್ರೀಕರಿಸಿದೆ. ಯಾರೇ ಆಗಲಿ ಸ್ವಂತದ ಹೊಸ ಕಾರ್ ಹೊಂದುವುದರಲ್ಲಿ ಈಗ ಅಂತಹ ವಿಶೇಷತೆ ಏನಿಲ್ಲ. ದೇಶದ ನಗರ ಪ್ರದೇಶಗಳಲ್ಲಿ ಕಾರ್ ಹೊಂದುವುದು ಈಗ ಅಗತ್ಯ ಎನ್ನುವ ಭಾವನೆ ಬೆಳೆಯುತ್ತಿದೆ. ಸ್ಪಿನ್ನಿಯ ಭರವಸೆಯು ನಾಲ್ಕು ಆಧಾರ ಸ್ತಂಭಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಗುಣಮಟ್ಟ, ಪ್ರಮಾಣೀಕರಣ ಮತ್ತು ಗ್ರಾಹಕ-ಕೇಂದ್ರಿತ ಅತ್ಯುತ್ತಮ ಮಟ್ಟವನ್ನು ಸ್ಥಾಪಿಸುವ ರೀತಿಯಲ್ಲಿ ಬಳಸಿದ ಕಾರ್‌ಗಳ ಮಾರಾಟ ವಹಿವಾಟನ್ನು ವಿನ್ಯಾಸಗೊಳಿಸಲಾಗಿದೆ. ಜನರು ಬಳಸಿದ ಕಾರ್ ಮಾರಾಟ ಕಾರು ಕಂಪನಿಯಲ್ಲಿ ಹೆಚ್ಚಿನ ವಿಶ್ವಾಸ ಇರಿಸಲು ಬಯಸುತ್ತಾರೆ. ಕಾರು ಖರೀದಿದಾರರ ಜೊತೆ ಜೀವಿತಾವಧಿಯ ಸಂಬಂಧ ಹೊಂದುವುದನ್ನು ಅಭಿವೃದ್ಧಿಪಡಿಸಲು ನಾವು ಉದ್ದೇಶಿಸಿದ್ದೇವೆ. ದೇಶದಲ್ಲಿನ ಪ್ರತಿಯೊಂದು ಮನೆಗೆ ಗುಣಮಟ್ಟದ ಕಾರನ್ನು ತಲುಪಿಸುವುದು ನಮ್ಮ ಉದ್ದೇಶವಾಗಿದೆ. ನಾವು ಮಾರಾಟ ಮಾಡುವ ಕಾರ್‌ಗಳ ಸಂಖ್ಯೆಯು ನಾವು ಆ ದಿಕ್ಕಿನಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ಸೂಚಿಸುತ್ತವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:2021: ಕ್ರೀಡಾಲೋಕದ ಮಹತ್ವದ ಘಟನೆಗಳ ಹಿನ್ನೋಟ

‘ನಮ್ಮ ತತ್ವಗಳು ಮತ್ತು ಕಾರ್ಯತಂತ್ರಗಳಿಗೆ ಅನುಗುಣವಾಗಿ, ಕೋವಿಡ್ ಪಿಡುಗು ಉತ್ತುಂಗದ ಸ್ಥಿತಿಯಲ್ಲಿದ್ದ ಸಮಯದಲ್ಲಿ ನಾವು ಸ್ಪಿನ್ನಿಯ ವಿಶೇಷ ಕಾಳಜಿ ಎಂಬ ವಿಶೇಷ ಉಪಕ್ರಮವನ್ನು ಪರಿಚಯಿಸಿದ್ದೆವು. ಈ ಉಪಕ್ರಮದ ಮೂಲಕ, ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾರ್ಗಸೂಚಿಗಳ ಪ್ರಕಾರ ಕಟ್ಟುನಿಟ್ಟಾದ ಮತ್ತು ಸಾಂಕ್ರಾಮಿಕ ತಡೆಗಟ್ಟುವ ಕ್ರಮಗಳ ಜೊತೆಗೆ ಖರೀದಿದಾರರ ಮನೆ ಬಾಗಿಲಲ್ಲಿ ಕಾರ್‌ಗಳ ಪರೀಕ್ಷಾರ್ಥ ಚಾಲನೆಯ ಅವಕಾಶ ಒದಗಿಸಿದ್ದೇವೆ” ಎಂದು ಅವರು ತಿಳಿಸಿದ್ದಾರೆ.

ಮನೆಬಾಗಿಲಲ್ಲಿ ಕಾರ್‌ಗಳ ಪರೀಕ್ಷಾರ್ಥ ಚಾಲನೆ ಸೌಲಭ್ಯವು ಬಳಕೆದಾರರ ಬದಲಾಗುತ್ತಿರುವ ನಡವಳಿಕೆಯನ್ನು ಮತ್ತು ಸ್ಪಿನ್ನಿಯ ಸೇವೆಗಳಲ್ಲಿ ಗ್ರಾಹಕರು ಹೊಂದಿರುವ ನಂಬಿಕೆಯನ್ನು ಸೂಚಿಸುತ್ತದೆ. ಅಂತರ್ಜಾಲ ತಾಣದಲ್ಲಿನ ಎಲ್ಲಾ ವಿವರಗಳೊಂದಿಗೆ, ಸ್ಥಿರ ಬೆಲೆಯ ಭರವಸೆ, 5-ದಿನಗಳಲ್ಲಿ ಹಣ ಮರಳಿಸುವ ಖಾತರಿ, 200 ತಪಾಸಣೆ ಅಂಕಗಳು ಮತ್ತು 1 ವರ್ಷದ ಸ್ಪಿನ್ನಿ ವಾರಂಟಿಯಂತಹ ಪಾರದರ್ಶಕ ನೀತಿಗಳಿಂದಾಗಿ ಬಳಸಿದ ಕಾರ್ ಖರೀದಿಸುವವರು ಮನೆಯಲ್ಲಿ ಆರಾಮವಾಗಿ ಕುಳಿತುಕೊಂಡೇ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

JioHotstar domain: ಜಿಯೋ ಹಾಟ್‌ಸ್ಟಾರ್‌ ಡೊಮೈನ್‌ ನಮ್ಮದು: ದುಬೈ ಮಕ್ಕಳ ವಾದ!

Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್

Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್

Jio-Bharath

Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್‌ಗೆ ವಿಶೇಷ ರಿಯಾಯಿತಿ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.