Bharti Airtel; 50 ಮಿಲಿಯನ್ 5ಜಿ ಗ್ರಾಹಕರನ್ನು ಹೊಂದಿದ ಏರ್‌ಟೆಲ್
ದೇಶದ ಎಲ್ಲ ಜಿಲ್ಲೆಗಳಲ್ಲೂ ಏರ್‌ಟೆಲ್ 5ಜಿ ಲಭ್ಯ
Team Udayavani, Oct 6, 2023, 9:20 PM IST
ನವದೆಹಲಿ: ಏರ್‌ಟೆಲ್ 5G ಪ್ಲಸ್ ಬಿಡುಗಡೆಯಾದ 1 ವರ್ಷದೊಳಗೆ,ಭಾರ್ತಿ ಏರ್‌ಟೆಲ್(Airtel)ತನ್ನ ನೆಟ್‌ವರ್ಕ್ ನಲ್ಲಿ 50 ಮಿಲಿಯನ್ 5G ಗ್ರಾಹಕರನ್ನು ಹೊಂದಿರುವುದಾಗಿ ಘೋಷಿಸಿದ್ದು, ಏರ್‌ಟೆಲ್ 5G ಪ್ಲಸ್ ಸೇವೆಗಳು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಲಭ್ಯವಿದೆ ಎಂದು ಕಂಪನಿಯು ಪ್ರಕಟಿಸಿದೆ.
ಇದು ದೇಶದಲ್ಲೇ ಅತ್ಯಂತ ವೇಗದ ರೋಲ್ಔಟ್ ಗಳಲ್ಲಿ ಒಂದಾಗಿದೆ, ಏರ್‌ಟೆಲ್ 5G ಪ್ಲಸ್ ದೇಶದ ಎಲ್ಲಾ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ. ಬಿಹಾರದ ರಮಣೀಯ ಬಲಿಯಾದಿಂದ ಒಡಿಶಾದ ಐತಿಹಾಸಿಕ ಕಟಕ್, ಜಾರ್ಖಂಡ್ ನ ಅತ್ಯಂತ ಚಿಕ್ಕ ರಾಮಗಢ ಜಿಲ್ಲೆ, ರಾಜಸ್ಥಾನದ ಬಿಷ್ಣೋಯಿ ವನ್ಯಜೀವಿ ತಾಣ, ಕೇರಳದ ಪ್ರಶಾಂತ ಸೆರಾಯ್ ನಿಂದ ಕಾಶ್ಮೀರದ ಜವುಗು ಹಳ್ಳಿಗಳವರೆಗೆ ಏರ್‌ಟೆಲ್ ಗ್ರಾಹಕರು ಈಗ ಡಿಜಿಟಲ್ ಸೂಪರ್ಹೈವೇಗೆ ಬಂದಿದ್ದಾರೆ.
ಈ ಮೈಲಿಗಲ್ಲಿನ ಕುರಿತು ಪ್ರತಿಕ್ರಿಯಿಸಿರುವ ಭಾರ್ತಿ ಏರ್‌ಟೆಲ್ ನ CTO, ರಣದೀಪ್ ಸೆಖೋನ್, “ನಮ್ಮ ಲಕ್ಷಾಂತರ ಗ್ರಾಹಕರು 5G ಗೆ ಪರಿವರ್ತಿಸಿಕೊಂಡಿರುವುದನ್ನು ಕಂಡು ಸಂತಸವಾಗಿದೆ.ನಾವು ಯೋಜಿಸಿದ್ದಕ್ಕಿಂತ ಮೊದಲೇ ಈ ಮೈಲಿಗಲ್ಲನ್ನು ತಲುಪುತ್ತಿದ್ದೇವೆ ಏರ್‌ಟೆಲ್ ನ 5G ಕವರೇಜ್ ನ ದೊಡ್ಡ ವಿಸ್ತರಣೆಯನ್ನು 2022 ರ ಅಕ್ಟೋಬರ್ ನಲ್ಲಿ ಆರಂಭಿಸಲಾಯಿತು. 12 ತಿಂಗಳಲ್ಲಿ 1 ಮಿಲಿಯನ್ ನಿಂದ 50 ಮಿಲಿಯನ್ ಗೆ ತಲುಪಿದ್ದೇವೆ ಎಂದಿದ್ದಾರೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಗಾಗಿ ಏರ್‌ಟೆಲ್ ವಿಶೇಷ ಪ್ಲಾನ್ ಗಳು : 99 ರೂ.ಗೆ 2 ದಿನ ಅನಿಯಮಿತ ಡಾಟಾ!
ಐಸಿಸಿ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆ, ಏರ್‌ಟೆಲ್ ತನ್ನ ಗ್ರಾಹಕರಿಗೆ ವಿಶೇಷ ಕ್ರಿಕೆಟ್ ಯೋಜನೆಗಳನ್ನು ಪ್ರಕಟಿಸಿದೆ.
ಎಲ್ಲಾ ಪ್ರಿಪೇಯ್ಡ್ ಗ್ರಾಹಕರಿಗೆ, ಏರ್‌ಟೆಲ್ ವಿಶೇಷ ಡೇಟಾ ಪ್ಯಾಕ್ ಅನ್ನು ಪ್ರಾರಂಭಿಸಿದೆ. 99 ರೂ. ಗೆ ರೀಚಾರ್ಜ್ ಮಾಡಿದರೆ 2 ದಿನಗಳವರೆಗೆ ಅನಿಯಮಿತ ಡಾಟಾ ಹಾಗೂ 49 ರೂ. ರೀಚಾರ್ಜ್ ಗೆ 1 ದಿನದ ಅವಧಿಗೆ 6 ಜಿಬಿ ಡಾಟಾ ದೊರಕುತ್ತದೆ.
ಭಾರ್ತಿ ಏರ್‌ಟೆಲ್ ಬಳಕೆದಾರರು ವಿಶ್ವಕಪ್ 2023 ಸ್ಟೇಡಿಯಂಗಳಾದ್ಯಂತ ವೇಗವಾಗಿ ಅಪ್‌ಲೋಡ್ ವೇಗವನ್ನು ಪಡೆಯಬಹುದು ಎಂದು ಓಪನ್‌ಸಿಗ್ನಲ್ ವರದಿ ತಿಳಿಸಿದೆ.
ಭಾರತೀಯ ಮೊಬೈಲ್ ಆಪರೇಟರ್‌ಗಳ ಕಾರ್ಯಕ್ಷಮತೆಯನ್ನು ನಿರ್ಣಯಿಸಲು Opensignal ಎಲ್ಲಾ ಕ್ರೀಡಾಂಗಣಗಳಲ್ಲಿ ಮೊಬೈಲ್ ನೆಟ್‌ವರ್ಕ್ ವೇಗವನ್ನು ಪರೀಕ್ಷಿಸಿದ್ದು. 5G ನೆಟ್‌ವರ್ಕ್‌ನಲ್ಲಿ ಏರ್‌ಟೆಲ್ ಎಲ್ಲಾ ಕ್ರೀಡಾಂಗಣಗಳಲ್ಲಿ ಧ್ವನಿ ಅಪ್ಲಿಕೇಶನ್‌ಗಳೊಂದಿಗೆ ಅತ್ಯುತ್ತಮ ಅನುಭವವನ್ನು ನೀಡಿದೆ.
ವರದಿಯ ಪ್ರಕಾರ, ಭಾರತದ 40 ದೊಡ್ಡ ನಗರಗಳಲ್ಲಿ ಮೊಬೈಲ್ ಲೈವ್ ವೀಡಿಯೊ ಸ್ಟ್ರೀಮಿಂಗ್ ಅನುಭವದ ಗುಣಮಟ್ಟದಲ್ಲಿ ಇತರ ಆಪರೇಟರ್‌ಗಳಿಗೆ ಹೋಲಿಸಿದರೆ ಏರ್‌ಟೆಲ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಓಪನ್ ಸಿಗ್ನಲ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್ ಪೇ ಇನ್ನು ಎಲ್ಲರಿಗೂ ಲಭ್ಯ
Airtel Outage:ದೇಶದ ಹಲವೆಡೆ ಏರ್ ಟೆಲ್ Network ಸಮಸ್ಯೆ; ಏರ್ ಟೆಲ್ ಗ್ರಾಹಕರಿಂದ ದೂರು
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.