ಭಾರತದಲ್ಲಿ ಬಿಎಂಡಬ್ಲ್ಯು3 ಸೀರೀಸ್ ಗ್ರಾನ್ ಲಿಮೋಸಿನ್ ಬಿಡುಗಡೆ
ಭಾರತದಲ್ಲಿ ಬಿಎಮ್ ಡಬ್ಲ್ಯೂ ಇಂಡಿಯಾ ಬಿಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲೈಮಸೈನ್ ನ್ನು ಪರಿಚಯಿಸಿದೆ.
Team Udayavani, Jan 21, 2021, 3:02 PM IST
ನವ ದೆಹಲಿ: ಭಾರತದಲ್ಲಿ ಬಿಎಮ್ ಡಬ್ಲ್ಯೂ ಇಂಡಿಯಾ ಬಿಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲೈಮಸೈನ್ ನ್ನು ಪರಿಚಯಿಸಿದೆ. ಬಿ ಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲೈಮಸೈನ್ ಲಕ್ಸುರಿ ಲೈನ್ ಹಾಗೂ ಎಕ್ಸ್ ಕ್ಲೂಸಿವ್ ಎಮ್ ಸ್ಪೋರ್ಟ್ಸ್ ಎಂಬ ಎರಡು ಬಗೆಯ ಕಾರುಗಳನ್ನು ಅತ್ಯಾಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಳಿಸಲಾಗಿದೆ.
ಬಿ ಎಮ್ ಎಬ್ಲ್ಯೂ ಇಂಡಿಯಾದಿಂದ ಹೊರತರಲಾದ ಈ ನೂತನ ಕಾರನ್ನು ಚೆನ್ನೈನ ಬಿ ಎಮ್ ಡಬ್ಲ್ಯೂ ಗ್ರೂಪ್ ವಿಷೇಷವಾಗಿ ಭಾರತೀಯರಿಗಾಗಿಯೇ ತಯಾರಿಸಿದೆ. ಈ ಕಾರು ಡೀಸೆಲ್ ಹಾಗೂ ಪೆಟ್ರೋಲ್ ಎರಡೂ ಇಂಜಿನ್ ಗಳಲ್ಲಿ ಇಂದಿನಿಂದ ಲಭ್ಯವಿದೆ ಎಂದು ಬಿ ಎಮ್ ಡಬ್ಲ್ಯೂ ಇಂಡಿಯಾ ಹೇಳಿದೆ.
ಇದನ್ನೂ ಓದಿ: ಕುತೂಹಲ ಮೂಡಿಸಿದ ಬೊಮ್ಮಾಯಿ- ಕುಮಾರಸ್ವಾಮಿ ಭೇಟಿ: ರಾಜಕೀಯ ಮಾತಡಿಲ್ಲ ಎಂದ ಉಭಯ ನಾಯಕರು
ಬಿ ಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲಿಮೋಸಿನ್ ನ ಬೆಲೆ ಎಷ್ಟು..?
ಬಿ ಎಮ್ ಡಬ್ಲ್ಯೂ 320ಎಲ್ ಡಿ ಲಕ್ಸುರಿ ಲೈನ್ ಡಿಸೇಲ್ ಇಂಜಿನ್ ಕಾರ್ ಹಾಗೂ 330ಎಲ್ ಐ ಲಕ್ಸುರಿ ಲೈನ್ ಹಾಗೂ ಬಿ ಎಮ್ ಡಬ್ಲ್ಯೂ 330 ಎಲ್ ಐ ಎಮ್ ಸ್ಪೋರ್ಟ್ಸ್ “ಫರ್ಸ್ಟ್ ಎಡಿಷನ್” ಗಳ ಈಗೀನ ಶೋರೂಮ್ ಬೆಲೆ 51.50 ಲಕ್ಷ ರೂ.
ಬಿಎಮ್ ಡಬ್ಲ್ಯೂ 320 ಬಿಎಮ್ ಡಬ್ಲ್ಯೂ 320 ಎಲ್ ಡಿ ಲಕ್ಸುರಿ ಲೈನ್ ಕಾರ್ ಗೆ 52.50 ಲಕ್ಷ. ಬಿ ಎಮ್ ಡಬ್ಲ್ಯೂ 330 ೆಲ್ ಐ ಎಮ್ ಸ್ಪೋರ್ಟ್ಸ್ ‘ಫರ್ಸ್ಟ್ ಎಡಿಷನ್’ ಕಾರ್ ಗೆ 53.90 ಲಕ್ಷ.
ಇನ್ನು, ಬಿಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲಿಮೋಸಿನ್ ವೈಟ್, ಮೆಲ್ಬೊರ್ನ್ ರೆಡ್, ಕಾರ್ಬನ್ ಬ್ಲ್ಯಾಕ್ ಹಾಗೂ ಕಾಶ್ಮೀರಿ ಸಿಲ್ವರ್ ಎಂಬ ನಾಲ್ಕು ಬಗೆಯ ಮೆಟಾಲಿಕ್ ಪೈಂಟ್ ವರ್ಕ್ಸ್ ಗಳಲ್ಲಿ ಲಭ್ಯವಿದೆ.
ಬಿಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲಿಮೋಸಿನ್ ಹೊರನೋಟ ಹೇಗಿದೆ..?
ಸ್ಟ್ರಿಕಿಂಗ್ ಫ್ರಂಟ್ ಲುಕ್ ಹೊಂದಿರುವ ಕಾರು ಎಲ್ಇಡಿ
ಹೆಡ್ ಲೈಟ್ ಗಳೊಂದಿಗೆ ಕಂಗೊಳಿಸುತ್ತದೆ. ಸೆಕ್ಸಿ ಲುಕ್ ನೊಂದಿಗೆ ಸೆಳೆಯುವ ಈ ಕಾರು, ಮೂರು ಆಯಾಮಗಳಲ್ಲಿ ಎಲ್ಇಡಿ ಟೈಲೈಟ್ಸ್ ನೊಂದಿಗೆ ಎರಡು ದೊಡ್ಡ ಇಂಗ್ಲೀಷ್ ಎಲ್ ಆಕಾರದ ಟೈಲ್ ಪೈಪ್ಸ್ ನೊಂದಿಗೆ ತಯಾರಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ ಗಡಿಯಲ್ಲಿ ಶಿವಸೇನೆ-ಪೊಲೀಸರ ಮಧ್ಯೆ ನೂಕಾಟ-ತಳ್ಳಾಟ
ಬಿಎಮ್ ಡಬ್ಲ್ಯೂ 3 ಸೀರೀಸ್ ಗ್ರಾನ್ ಲಿಮೋಸಿನ್ ಆಂತರಿಕ ವಿನ್ಯಾಸ ಹೇಗಿದೆ..?
ಈ ಕಾರಿನ ಆಂತರಿಕ ಸೌಂದರ್ಯವೂ ಬಹಳ ಸುಂದರವಾಗಿದೆ. ವಿಶಾಲವಾದ ಗ್ರ್ಯಾಂಡ್ ಕ್ಯಾಬಿನ್ ಹೊಂದಿದ್ದು, ವೆಲ್ ಕಮ್ ಲೈಟ್ ಕಾರ್ಪೆಟ್, ಪ್ರಕಾಶಮಾನವಾಗಿ ಹೊಳೆಯುವ ಡೋರ್ ಸಿಲ್ ಪ್ಲೇಟ್ಸ್, ಆರು ಬಣ್ಣಗಳಲ್ಲಿ ಸುತ್ತುವರಿದ ಬೆಳಕನ್ನು ಹೊಂದಿದೆ ಈ ಲಕ್ಸುರಿಯಸ್ ಕಾರು.
ಇಂಜಿನ್ ನ ವಿಶೇಷತೆಗಳೇನು..?
ಬಿಎಂಡಬ್ಲ್ಯು 330ಯ ಎರಡು ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 258 ಎಚ್‌ಪಿ ಉತ್ಪಾದನೆ ಮತ್ತು 1,550 – 4,400 ಆರ್‌ಪಿಎಂನಲ್ಲಿ ಗರಿಷ್ಠ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕಾರು ಕೇವಲ 6.2 ಸೆಕೆಂಡುಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಹೆಚ್ಚಿಸುತ್ತದೆ. ಬಿಎಂಡಬ್ಲ್ಯು 320 ಎಲ್ ಡಿ ಯ ಎರಡು ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 190 ಎಚ್‌ಪಿ ಉತ್ಪಾದನೆ ಮತ್ತು 1,750 – 2,500 ಆರ್‌ಪಿಎಂನಲ್ಲಿ ಗರಿಷ್ಠ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕಾರು ಕೇವಲ 7.6 ಸೆಕೆಂಡುಗಳಲ್ಲಿ ಗಂಟೆಗೆ 0 -100 ಕಿಮೀ ವೇಗವನ್ನು ಹೆಚ್ಚಿಸುತ್ತದೆ.
ಬಿಎಂಡಬ್ಲ್ಯು 3 ಸೀರೀಸ್ ಗ್ರ್ಯಾನ್ ಲಿಮೋಸಿನ್ ಕನೆಕ್ಟೆಡ್ ಡ್ರೈವ್
ಬಿಎಂಡಬ್ಲ್ಯು ಕನೆಕ್ಟೆಡ್ ಡ್ರೈವ್ ತಂತ್ರಜ್ಞಾನಗಳ ಹೋಸ್ಟ್ ಬಿಎಂಡಬ್ಲ್ಯು ಲೈವ್ ಕಾಕ್‌ಪಿಟ್ ಪ್ರೊಫೆಷನಲ್ 3 ಡಿ ನ್ಯಾವಿಗೇಷನ್, ಸ್ಟೀರಿಂಗ್ ವೀಲ್‌ನ ಹಿಂದೆ 12.3 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಡಿಸ್ಪ್ಲೇ ಮತ್ತು 10.25 ಇಂಚಿನ ಕಂಟ್ರೋಲ್ ಡಿಸ್ಪ್ಲೇ ಅನ್ನು ಒಳಗೊಂಡಿದೆ.
ಬಿಎಂಡಬ್ಲ್ಯು 3 ಸೀರೀಸ್ ಗ್ರ್ಯಾನ್ ಲೈಮೋಸಿನ್ ಕಾರಿನ ಸುರಕ್ಷತೆ ಹೇಗೆ..? ಬಿಎಂಡಬ್ಲ್ಯು ಸುರಕ್ಷತಾ ತಂತ್ರಜ್ಞಾನಗಳಲ್ಲಿ ಆರು ಏರ್‌ಬ್ಯಾಗ್‌ಗಳು, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ) ಸೇರಿದಂತೆ ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಆಟೋ ಹೋಲ್ಡ್ ಹೊಂದಿರುವ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಸರ್ ಮತ್ತು ಕ್ರ್ಯಾಶ್ ಸೆನ್ಸಾರ್ ಸೇರಿ ಹಲವು ಅತ್ಯಾಧುನಿಕ ತಂತ್ರಜ್ಙಾನವನ್ನೊಳಗೊಂಡಿದೆ.
ಇದನ್ನೂ ಓದಿ: ಬಿಜೆಪಿ ಯೋಜನೆಗಳೇ ಮಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.