![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 28, 2021, 4:38 PM IST
ನವ ದೆಹಲಿ : ಭಾರತ್ ಸಂಚಾರ್ ಸಿಗಮ್ ಲಿಮಿಟಡ್ ಗ್ರಾಹಕ ಸ್ನೇಹಿ ರೀಚಾರ್ಜ್ ಪ್ಲ್ಯಾನಿಂಗ್ ವೊಂದನ್ನು ಜಾರಿಗೊಳಿಸಿದೆ. ಟೆಲಿಕಾಂ ಕ್ಷೇತ್ರದ ಇತರೆ ಖಾಸಗಿ ಸಂಸ್ಥೆಗಳ ಪ್ಲ್ಯಾನ್ ಗಳಿಗೆ ಇದನ್ನು ಹೋಲಿಸಿದರೇ ಇದು ದೀರ್ಘ ಮಾನ್ಯತೆಯ ಯೋಜನೆಯಾಗಿದೆ.
ಹೌದು, ಬಿ ಎಸ್ ಎನ್ ಎಲ್ ತಂದಿರುವ ಈ ಹೊಸ ಪ್ಲ್ಯಾನಿಂಗ್ ನಲ್ಲಿ ಕಾಲಿಂಗ್ ಹಾಗೂ ನೆಟ್ ಸೌಲಭ್ಯಗಳೆರಡನ್ನೂ ಗ್ರಾಹಕರು ಪಡೆಯಬಹುದಾಗಿದೆ.
ಓದಿ : ಪ್ರಚಾರದ ವೇಳೆ ದೋಸೆ ಮಾಡಿ, ಮಗುವನ್ನು ಆಡಿಸಿದ ನಟಿ ಖುಷ್ಬು
ಕೇವಲ 108 ರೂ.ಗಳಲ್ಲಿ ಲಭ್ಯವಾಗುವ ಈ ಪ್ಲ್ಯಾನ್ ಗ್ರಾಹಕ ಸ್ನೇಹಿ ಪ್ಲ್ಯಾನ್ ಎಂದು ಗುರುತಿಸಿಕೊಳ್ಳುತ್ತಿದೆ.
ಬಿ ಎಸ್ ಎನ್ ಎಲ್ ನ ಒಂದು ಪ್ಲಾನ್ ರೂ.108 ಕ್ಕೆ ಸಿಗುತ್ತಿದೆ. ಇದು 60 ದಿನಗಳ ಸಿಂಧುತ್ವ ಹೊಂದಿದ್ದು, ಈ ಪ್ಲ್ಯಾನ್ ನಲ್ಲಿ ನಿಮಗೆ ನಿತ್ಯ ಡೇಟಾ ಕಾಗೂ ಉಚಿತ ಕಾಲಿಂಗ್ ಬೆನಿಫಿಟ್ ಗಳನ್ನು ಸಂಸ್ಥೆ ನೀಡುತ್ತಿದೆ ಎಂದು ಗ್ಯಾಜೆಟ್ 360 ಪೋರ್ಟಲ್ ನ ವರದಿ ತಿಳಿಸಿದೆ.
ಅನಿಯಮಿತ ಕಾಲಿಂಗ್ ಹಾಗೂ 500 ಉಚಿತ ಎಸ್ ಎಮ್ ಎಸ್ ಸೌಲಭ್ಯ ಬಿ ಎಸ್ ಎನ್ ಎಲ್ ನ ಈ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಕಾಲಿಂಗ್ ಸೌಲಭ್ಯ ಸಿಗುತ್ತಿದೆ. ಇದರಲ್ಲಿ ದೆಹಲಿ ಹಾಗೂ ಮುಂಬೈ ನ ಎಮ್ ಟಿ ಎನ್ ಎಲ್ ನೆಟ್ ವರ್ಕ್ ಗಳು ಕೂಡ ಗಳೂ ಕೂಡ ಶಾಮೀಲಾಗಿವೆ.
ಆದರೆ, ನಿತ್ಯ 1 ಜಿಬಿ ಉಚಿತ ಡೇಟಾ ಖಾಲಿಯಾದ ಬಳಿಕ ಇಂಟರ್ನೆಟ್ ನ ವೇಗ 80Kbpsಗೆ ಇಳಿಯಲಿದೆ. ಇದರರ್ಥ 108 ಪ್ಲ್ಯಾನ್ ಅಡಿ ನಿಮಗೆ ನಿತ್ಯ 1 ಜಿಬಿ ಹೈ ಸ್ಪೀಡ್ ಡೇಟಾ ಬಳಸುವ ಅವಕಾಶ ಸಿಗಲಿದೆ. ಇನ್ನು, ಈ ಪ್ಲ್ಯಾನ್ ನ ಮೂಲಕ ಒಟ್ಟು 500 ಉಚಿತ ಎಸ್ ಎಮ್ ಎಸ್ ಮಾಡಬಹುದಾಗಿದೆ.
28 ದಿನಗಳ ಸಿಂಧುತ್ವದೊಂದಿಗೆ ಸಿಗುತ್ತಿದ್ದ ಬಿ ಎಸ್ ಎನ್ ಎಲ್ ನ ಈ ಪ್ಲ್ಯಾನ್, ಟೆಲಿಕಾಂ ಸೆಕ್ಟರ್ ನಲ್ಲಿ ಹೆಚ್ಚಾಗುತ್ತಿರುವ ಪ್ರತಿಸ್ಪರ್ಧೆಯನ್ನು ಪರಿಗಣಿಸಿ ಬಿ ಎಸ್ ಎನ್ ಎಲ್ ತನ್ನ ಈ ಪ್ಲಾನ್ ನ ಸಿಂಧುತ್ವವನ್ನು 60 ದಿನಗಳಿಗೆ ಹೆಚ್ಚಿಸಿದೆ.
ಓದಿ : ಪ್ರತಿಭಟನೆಗಳು ಎಸ್ಐಟಿ ತನಿಖೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ: ಬಸವರಾಜ ಬೊಮ್ಮಾಯಿ
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.