ಭಾರತ್ ಫೈಬರ್ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಗಳನ್ನು ಪರಿಚಯಿಸಿದ BSNL
Team Udayavani, Mar 17, 2021, 2:39 PM IST
ಸರ್ಕಾರಿ ಒಡೆತನದ BSNL ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವುದಕ್ಕೆ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಗಳನ್ನು ಪರಿಚಯಿಸಿದೆ.
BSNL ಟೆಲಿಕಾಂ ಅಗ್ಗದ ಬೆಲೆಯಿಂದ ಆರಂಭ ಮಾಡಿ ಹೈ ಎಂಡ್ ಪ್ರೈಸ್ ನ ವರೆಗೂ ವಿಶೇಷ ಭಾರತ್ ಫೈಬರ್ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಗಳನ್ನು ಪರಿಚಯಿಸಿದೆ.
BSNL ಸಂಸ್ಥೆಯು ತನ್ನ 999ರೂ. ಮತ್ತು 1,499ರೂ. ಭಾರತ್ ಫೈಬರ್ ಯೋಜನೆಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕ ವಿಲ್ಲದೇ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ವಿಐಪಿ ಚಂದಾದಾರಿಕೆಯ ಪ್ರಯೋಜನವನ್ನು ನೀಡಿದೆ. ಇತರೆ ಖಾಸಗಿ ಟೆಲಿಕಾಂಗಳು ಅವರ ಬ್ರಾಡ್ ಬ್ಯಾಂಡ್ ಯೋಜನೆಗಳಲ್ಲಿ ಓಟಿಟಿ ಪ್ರಯೋಜನ ಒದಗಿಸಿವೆ. ಆದರೆ ಅವುಗಳು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ವಿಐಪಿ ಸೇವೆ ಒದಗಿಸಿಲ್ಲ. BSNL ಟೆಲಿಕಾಂ ಈ ಸೇವೆ ಲಭ್ಯಮಾಡಿದೆ.
ಓದಿ : ರಬಕವಿ-ಬನಹಟ್ಟಿಯಲ್ಲಿ ಕೋವಿಡ್ 2ನೇ ಅಲೆ: ಬಾಗಲಕೋಟೆಗೂ ಬಂತು `ಮಹಾ ಆತಂಕ’
BSNl 999 ರೂ. ಭಾರತ್ ಫೈಬರ್ ಪ್ಲ್ಯಾನ್ ಹೇಗಿದೆ..?
BSNl 999ರೂ. ಭಾರತ್ ಫೈಬರ್ ಪ್ಲ್ಯಾನ್ ನನ್ನು ಫೈಬರ್ ಪ್ರೀಮಿಯಂ ಪ್ಲ್ಯಾನ್ ಎಂದು ಹೇಳಲಾಗಿದೆ. 3300GB ಅಥವಾ 3.3TB ವರೆಗೆ 100 Mbps ಸ್ಪೀಡ್ ನಲ್ಲಿ ಇಂಟರ್ನೆಟ್ ಸೌಲಭ್ಯ ಒದಗಿಸುತ್ತದೆ. ಡಾಟಾ ಮಿತಿ ಮುಗಿದ ಬಳಿಕ 2 Mbps ಸ್ಪೀಡ್ ಇಂಟರ್ನೆಟ್ ನಲ್ಲಿ ಮುಂದುವರಿಯಲಿದೆ. ಚಂದಾದಾರರಿಗೆ ಅನಿಯಮಿತ ಧ್ವನಿ ಕರೆ ಪ್ರಯೋಜನವನ್ನು ಕೂಡ ಒದಗಿಸಿದೆ. ಇನ್ನು, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ವಿಐಪಿ ಚಂದಾದಾರಿಕೆಯ ಪ್ರಯೋಜವನ್ನೂ ನೀಡಿದೆ.
BSNL 1,499ರೂ. ಭಾರತ್ ಫೈಬರ್ ಪ್ಲ್ಯಾನ್
BSNL ಈ ಪ್ಲ್ಯಾನ್ ಫೈಬರ್ ಅಲ್ಟ್ರಾ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ತಿಂಗಳ ಶುಲ್ಕ 1,499 ರೂ. ಆಗಿದ್ದು, 300 ಎಮ್ ಬಿ ಪಿ ಎಸ್ ಸ್ಪೀಡ್ ಒದಗಿಸುತ್ತದೆ. ಅಷ್ಟಲ್ಲದೇ, ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಯ ಪ್ರಯೋಜನವನ್ನು ಸಹ ಕೊಟ್ಟಿದೆ.
BSNL 499ರೂ. ಭಾರತ್ ಫೈಬರ್ ಪ್ಲ್ಯಾನ್
BSNL ಹೊಸ 499ರೂ.ಗಳ ಭಾರತ ಫೈಬರ್ ಪ್ಲ್ಯಾನ್ ಒಂದು ಅಗ್ಗದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಆಗಿದ್ದು, 3.3TB ಡಾಟಾ ಬಳಕೆಯ ವರೆಗೂ 30 Mbps ಸ್ಪೀಡ್ ನಲ್ಲಿ ಇಂಟರ್ನೆಟ್ ಇರಲಿದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ಸ್ಪೀಡ್ ನಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಇದರೊಂದಿಗೆ ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ವಾಯ್ಸ್ ಕಾಲ್ ಪ್ರಯೋಜನವಿದೆ.
BSNL 799ರೂ. ಭಾರತ್ ಫೈಬರ್ ಪ್ಲ್ಯಾನ್
ಭಾರತ್ ಫೈಬರ್ ಪ್ಲ್ಯಾನ್ ಅನ್ನು ಫೈಬರ್ ವ್ಯಾಲ್ಯೂ ತಿಂಗಳಿಗೆ 799ರೂ. ಆಗಿದ್ದು, 3300GB ಅಥವಾ 3.3TB ವರೆಗೆ 100 Mbps ಸ್ಪೀಡ್ ನಲ್ಲಿ ಇಂಟರ್ನೆಟ್ ಒದಗಿಸುತ್ತದೆ. ಡಾಟಾ ಮಿತಿ ಮುಗಿದ ಬಳಿಕ 2 Mbps ಸ್ಪೀಡ್ ಇಂಟರ್ನೆಟ್ ಒದಗಿಸಲಿದೆ.
ಓದಿ : ತಮಿಳುನಾಡು : ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ವೈಕೊ ನೇತೃತ್ವದ MDMK
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.