ಗ್ರಾಹಕರಿಗೆ ಗಣರಾಜ್ಯೋತ್ಸವದ ಗಿಫ್ಟ್ ನೀಡಿದ ಬಿ ಎಸ್ ಎನ್ ಎಲ್
ತನ್ನ ಎರಡು ದೀರ್ಘಾವಧಿಯ ಯೋಜನೆಗಳ ಸಿಂಧುತ್ವವನ್ನು ಹೆಚ್ಚಿಸಿದೆ ಬಿ ಎಸ್ ಎನ್ ಎಲ್
Team Udayavani, Jan 23, 2021, 2:14 PM IST
ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿ ಕಾಮ್ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ ಎನ್ ಎಲ್) ಗಣರಾಜ್ಯೋತ್ಸವದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಈ ದೊಡ್ಡ ಉಡುಗೊರೆಯನ್ನು ನೀಡುತ್ತಿದೆ.
ತನ್ನ ಎರಡು ದೀರ್ಘಾವಧಿಯ ಯೋಜನೆಗಳ ಸಿಂಧುತ್ವವನ್ನು ಹೆಚ್ಚಿಸಿದೆ ಎಂದು ಬಿ ಎಸ್ ಎನ್ ಎಲ್ ಘೋಷಿಸಿದೆ.
ಇದನ್ನೂ ಓದಿ : ಭಾರತದಲ್ಲಿ ಬಿಡುಗಡೆಗೊಂಡಿದೆ “ಟಾಟಾ ಆಲ್ಟ್ರೊಜ್ ಐಟರ್ಬೊ”
ಈ ಉಡುಗೊರೆಯೊಂದಿಗೆ ಬಿ ಎಸ್ ಎನ್ ಎಲ್ ದೀರ್ಘಾವಧಿಯ ಯೋಜನೆಗಳಲ್ಲಿ ಹೆಚ್ಚಿನ ಸಿಂಧುತ್ವವನ್ನು ನೀಡುವ ದೃಷ್ಟಿಯಿಂದ ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್, ಐಡಿಯಾ ಟೆಲಿಕಾಮ್ ನೆಟ್ ವರ್ಕ್ ಗಳನ್ನು ಹಿಂದಿಕ್ಕಿದೆ.
ಬಿ ಎಸ್ ಎನ್ ಎಲ್ ತನ್ನ ಬಳಕೆದಾರರಿಗೆ ಒಂದು ವರ್ಷದ ಯೋಜನೆಯಲ್ಲಿ 72 ದಿನಗಳ ಹೆಚ್ಚಿನ ಮಾನ್ಯತೆಯನ್ನು ನೀಡುತ್ತಿದೆ. ಇದು ಸೀಮಿತ ಅವಧಿಯ ಕೊಡುಗೆಯಾಗಿದ್ದು, ಜನವರಿ 31 ರ ನಂತರ ಮುಕ್ತಾಯಗೊಳ್ಳಲಿದೆ ಎಂದು ಬಿ ಎಸ್ ಎನ್ ಎಲ್ ಹೇಳಿದೆ.
ಬಿ ಎಸ್ ಎನ್ ಎಲ್ ಮಾಡಿದ ಎಲ್ಲಾ ಬದಲಾವಣೆಗಳು ಇಲ್ಲಿವೆ:
2,399 ರೂ.ಗಳ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಯಲ್ಲಿ 72 ದಿನಗಳ ವಿಸ್ತೃತ ಮಾನ್ಯತೆಯನ್ನು ನೀಡಿದೆ.
ಪ್ರಸ್ತುತ, ಎಲ್ಲಾ ಬಳಕೆದಾರರು ಈ ಯೋಜನೆಯೊಂದಿಗೆ 365 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. 72 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಬಿ ಎಸ್ ಎನ್ ಎಲ್ ಈ ಯೋಜನೆಯೊಂದಿಗೆ ಹೆಚ್ಚುವರಿ 72 ದಿನಗಳ ಮಾನ್ಯತೆಯನ್ನು ನೀಡುತ್ತಿದೆ. ಅಂದರೆ, 2,399 ರೂಗಳಲ್ಲಿ 437 ದಿನಗಳು ಆಫರ್ ಲಭ್ಯವಿರಲಿದೆ.
ಈ ಹೆಚ್ಚುವರಿ 72 ದಿನಗಳ ಸಿಂಧುತ್ವವನ್ನು ಪ್ರಚಾರದ ಕೊಡುಗೆಯಾಗಿ ನೀಡಲಾಗುತ್ತಿದ್ದು, ಇದು ಮಾರ್ಚ್ 31, 2021 ರವರೆಗೆ ಮಾನ್ಯವಾಗಿರುತ್ತದೆ.
ಇದನ್ನೂ ಓದಿ : ಮೆಹರುನ್ನೀಸಾ ಎತ್ತುವ ಪ್ರಶ್ನೆ-> 80 ಆದರೂ ಹೀರೋ ಆಗಬಹುದಾದರೆ ನಟಿಯರಿಗೇಕೆ ವಯಸ್ಸಿನ ಲೆಕ್ಕ?
ಈಗ ಈ ಯೋಜನೆಯೊಂದಿಗೆ, ಯಾವುದೇ ನ್ಯಾಯಯುತ ಬಳಕೆ ನೀತಿ (ಎಫ್‌ಯುಪಿ)ಯೊಂದಿಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಉಚಿತ ಕರೆ ಲಭ್ಯವಿರುತ್ತದೆ. ಹಾಗೂ 250 ನಿಮಿಷಗಳ ದೈನಂದಿನ ಮಿತಿಯನ್ನು ತೆಗೆದುಹಾಕಲಾಗಿದೆ. ಇದರೊಂದಿಗೆ, ಬಳಕೆದಾರರು ಈ ಯೋಜನೆಯಲ್ಲಿ ಪ್ರತಿದಿನ 3 ಜಿಬಿ ಇಂಟರ್ನೆಟ್ ಡೇಟಾವನ್ನು ಪಡೆಯುತ್ತಾರೆ. ಬಳಕೆದಾರರಿಗೆ 100 ಎಸ್ ಎಂ ಎಸ್ ಸಹ ಬ ೆಸ್ ಎನ್ ಎಲ್ ನೀಡುತ್ತಿದೆ.
ಹೆಚ್ಚುವರಿಯಾಗಿ, ಈ ಯೋಜನೆಯೊಂದಿಗೆ, ಬಿ ಎಸ್ ಎನ್ ಎಲ್ 1 ವರ್ಷಕ್ಕೆ ಇ ಆರ್ ಒ ಎಸ್ ಚಂದಾದಾರಿಕೆಯನ್ನು ಸಹ ಕೊಡಮಾಡುತ್ತಿದೆ.
1,999 ರೂ ಯೋಜನೆಯೊಂದಿಗೆ, 21 ದಿನಗಳವರೆಗೆ ಸಿಂಧುತ್ವವನ್ನು ಹೆಚ್ಚಿಸಲಾಗಿದೆ. ಅಂದರೆ, ನೀವು ಈಗ ಈ ಯೋಜನೆಯನ್ನು ಖರೀದಿಸಿದರೆ, ನಿಮಗೆ 386 ದಿನಗಳ ಸಿಂಧುತ್ವ ಸಿಗುತ್ತದೆ.
ಬಿ ಎಸ್ ಎನ್ ಎಲ್ ನ 1,999 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ 3 ಜಿಬಿ ಡೇಟಾ, ಅನಿಯಮಿತ ಕರೆ ಮತ್ತು 100 ಎಸ್‌ಎಂಎಸ್ ಸಿಗುತ್ತದೆ. ಈ ಯೋಜನೆಯಲ್ಲಿ ಬಿ ಎಸ್ ಎನ್ ಎಲ್ ಟ್ಯೂನ್ ಗಳಿಗೂ ಪ್ರವೇಶವನ್ನು ಸಹ ನೀಡಲಾಗಿದೆ.
ಇದಲ್ಲದೆ, ಈ ಯೋಜನೆಯನ್ನು ಖರೀದಿಸುವ ಗ್ರಾಹಕರು ಎರಡು ತಿಂಗಳವರೆಗೆ ಲೋಕಧನ್ ವಿಷಯವನ್ನು ಮತ್ತು 365 ದಿನಗಳವರೆಗೆ ಇ ಆರ್ ಒ ಎಸ್ ಚಂದಾದಾರಿಕೆಯನ್ನು ಪಡೆಯಲಿದ್ದಾರೆ.
ಇದನ್ನೂ ಓದಿ : ಗಣರಾಜ್ಯೋತ್ಸವ ಪರೇಡ್ ಪೂರ್ವಾಭ್ಯಾಸ, ಬದಲಿ ಮಾರ್ಗ ಕಂಡುಕೊಳ್ಳಿ : ಸಂಚಾರಿ ಪೋಲಿಸರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸಪೇಟೆ: ಸ್ಕ್ಯಾನ್ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.