ವಾಟ್ಸಾಪ್ ನಿಯಮಗಳಲ್ಲಿ ಬದಲಾವಣೆ: ಷರತ್ತು ಒಪ್ಪದಿದ್ದರೇ ನಿಮ್ಮ ಅಕೌಂಟ್ ಡಿಲೀಟ್ !
Team Udayavani, Jan 6, 2021, 9:49 AM IST
ನವದೆಹಲಿ: ಜನಪ್ರಿಯ ವಾಟ್ಸಾಪ್ ಮಂಗಳವಾರದಿಂದ (ಜ.5) ತನ್ನ ಬಳಕೆದಾರರಿಗೆ ಅದರ ಸೇವಾ ನಿಯಮಗಳಲ್ಲಿನ ಬದಲಾವಣೆ ಮತ್ತು ಗೌಪ್ಯತೆ ನೀತಿಯ ಬಗ್ಗೆ ತಿಳಿಸಲು ನೋಟಿಫಿಕೇಶನ್ ಗಳನ್ನು ಕಳುಹಿಸಲು ಆರಂಭಿಸಿದೆ.
ವಾಟ್ಸಾಪ್ ತನ್ನ ನಿಯಮಗಳು ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುತ್ತಿದೆ ಎಂದು ಕಂಪನಿಯು ಅಧಿಸೂಚನೆಯಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ತಿಳಿಸಿದೆ. ಕಂಪನಿಯು ಬಳಕೆದಾರರ ಡೇಟಾವನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಮುಂತಾದ ಪ್ರಮುಖ ಮಾಹಿತಿಗಳನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ವಾಟ್ಸಾಪ್ ನ ಈ ಹೊಸ ನಿಯಮಗಳು ಫೆಬ್ರವರಿ 8, 2021 ರಿಂದ ಜಾರಿಗೆ ಬರಲಿದೆ. ಒಂದು ವೇಳೆ ಈ ನೀತಿಗಳನ್ನು ಬಳಕೆದಾರರು ಒಪ್ಪದಿದ್ದರೆ ಅಥವಾ Agree ಆಯ್ಕೆಯನ್ನು ಕ್ಲಿಕ್ ಮಾಡದಿದ್ದರೇ ವಾಟ್ಸಾಪ್ ಖಾತೆ ಡಿಲೀಟ್ ಆಗುತ್ತದೆ. ಸರಳವಾಗಿ ಹೇಳುವುದಾದರೇ ಈ ಬದಲಾವಣೆಗಳನ್ನು ಸ್ವೀಕರಿಸದ ಬಳಕೆದಾರರನ್ನು ವಾಟ್ಸಾಪ್ ನಿಂದ ಬಹಿಷ್ಕರಿಸಲಾಗುತ್ತದೆ ಎಂದೇ ವರದಿಯಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಸಂಚಲನ ಸೃಷ್ಟಿಸಲು ಬರುತ್ತಿದೆ Renault Kiger: ಬಿಡುಗಡೆ ದಿನಾಂಕ ಪ್ರಕಟ
ವಾಟ್ಸಾಪ್ ತನ್ನ ವೆಬ್ ಸೈಟ್ ಅನ್ನು ಕೂಡ ಅಪ್ ಡೇಟ್ ಮಾಡಿದ್ದು, ಇಲ್ಲಿ ಹೊಸ ನಿಯಮಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಗಳನ್ನು ನೀಡಲಾಗಿದೆ. ಬಳಕೆದಾರರು ಹೊಸ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಹಲವು ವೈಶಿಷ್ಟ್ಯಗಳನ್ನು ಹೊತ್ತು ಬರಲಿದೆ ಸ್ಯಾಮ್ಸಂಗ್ Galaxy S21: ಹೇಗಿದೆ ಕಾರ್ಯಕ್ಷಮತೆ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.