Boult Crown ಸ್ಮಾರ್ಟ್ ವಾಚ್ ವೈಶಿಷ್ಟ್ಯಗಳು ಹೀಗಿವೆ ನೋಡಿ


Team Udayavani, Jul 28, 2023, 8:59 PM IST

watchBoult Crown ಸ್ಮಾರ್ಟ್ ವಾಚ್ ವೈಶಿಷ್ಟ್ಯಗಳು ಹೀಗಿವೆ ನೋಡಿ

ಆಪಲ್ ವಾಚ್ ಅಲ್ಟ್ರಾದ ವಿನ್ಯಾಸವನ್ನು ಹೋಲುವ ಹೊಸ ಸ್ಮಾರ್ಟ್ ವಾಚನ್ನು ಭಾರತೀಯ ಬ್ರಾಂಡ್ ಆದ ಬೌಲ್ಟ್ ಕಂಪೆನಿ ಇತ್ತೀಚೆಗೆ ತನ್ನ ಹೊಸ ವಾಚ್ ಬೌಲ್ಟ್ ಕ್ರೌನ್ ಬಿಡುಗಡೆ ಮಾಡಿದೆ.

ಇದು ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದ್ದು 1799 ರೂ. ದರ ಹೊಂದಿದೆ. ಗಡಿಯಾರವು ಕಪ್ಪು, ಕಿತ್ತಳೆ, ಹಳದಿ ಮತ್ತು ನೀಲಿ ಬಣ್ಣದಲ್ಲಿ ಲಭ್ಯವಿದೆ.

ಈ ವಾಚ್ ನ ವಿಶೇಷಗಳೇನು ಎಂಬುದರ ಮಾಹಿತಿ ಇಲ್ಲಿದೆ.
ವಿನ್ಯಾಸ: ಸ್ಮಾರ್ಟ್ ವಾಚ್ ಜಿಂಕ್-ಅಲಾಯ್ ಮೆಟಾಲಿಕ್ ಫ್ರೇಮ್ ಮತ್ತು ತಿರುಗುವ ಕ್ರೌನ್ ಕೀಯನ್ನು ಹೊಂದಿದೆ. ಕೀಯನ್ನು ತಿರುಗಿಸಿದಾಗ ವಾಚ್ ನ ಫೇಸ್ ಗಳು ಬದಲಾಗುತ್ತವೆ. ಮೆಟಲ್ ಫ್ರೇಮ್ ಮತ್ತು ಚೌಕದ ವಿನ್ಯಾಸ ಪ್ರೀಮಿಯಂ ಆಗಿದೆ. ಈ ದರದಲ್ಲಿ ಹಲವು ಕಂಪೆನಿಗಳ ವಾಚ್ ಗಳು ಪ್ಲಾಸ್ಟಿಕ್ ಕೇಸ್ ಗಳನ್ನು ಹೊಂದಿರುತ್ತವೆ.ಕ್ರೌನ್ ಕೀ ಪಕ್ಕದಲ್ಲಿ ಇನ್ನೊಂದು ಬಟನ್ ನೀಡಿದ್ದು, ಇದನ್ನು ಒತ್ತಿದಾಗ ವಾಚ್ ಸೆಟಿಂಗ್ ಆಯ್ಕೆ ಇತ್ಯಾದಿಗಳನ್ನು ಮಾಡಬಹುದು. ವಾಚ್ ನ ಎಡಬದಿಯಲ್ಲಿ ಸ್ಪೀಕರ್ ಕಿಂಡಿಗಳಿವೆ. ಅದರ ಪಕ್ಕದಲ್ಲಿ ಮೈಕ್ ಕಿಂಡಿ ಇದೆ. ವಾಚಿನ ಸ್ಟ್ರಾಪ್ ಸಿಲಿಕಾನ್ ನದ್ದಾಗಿದೆ. ಚೈನ್ ನಂತೆ ಕಾಣುವ ಕಂಡಿಕೆಗಳನ್ನು ಸ್ಟ್ರಾಪ್ ಹೊಂದಿದೆ. ಗಡುಸಾಗಿರುವ ಡಯಲ್ ಗೆ ಹೊಂದಿಕೆಯಾಗುತ್ತದೆ. ಒಟ್ಟಾರೆ ಈ ವಾಚು ಕೈಗೆ ಕಟ್ಟಿಕೊಂಡಾಗ ದುಬಾರಿ ವಾಚ್ ನಂತೆ ತೋರುತ್ತದೆ.

ಪರದೆ: ಈ ವಾಚು 1.95-ಇಂಚಿನ HD display ಹೊಂದಿದೆ, ಅದು 900 nits ವರೆಗಿನ ಗರಿಷ್ಠ ಹೊಳಪನ್ನು ನೀಡುತ್ತದೆ. ಹೊರಾಂಗಣದಲ್ಲಿ ಬಿಸಿಲಿನಲ್ಲಿದ್ದರೂ ಪರದೆ ಪ್ರಕಾಶಮಾನವಾಗಿ ಕಾಣುತ್ತದೆ. ಪರದೆಯ ಸಂವೇದಕದ ಗುಣಮಟ್ಟ ಚೆನ್ನಾಗಿದೆ. ಸ್ಮಾರ್ಟ್ ವಾಚ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಆಗಿದೆ. 150ಕ್ಕೂ ಹೆಚ್ಚು ವಾಚ್ ಫೇಸ್ ಗಳನ್ನು ಮೊಬೈಲ್ ಆಪ್ ಗೆ ಸಂಪರ್ಕ ಮಾಡಿಕೊಂಡು ಬದಲಿಸಿಕೊಳ್ಳಬಹುದು.

ವಿಶೇಷಗಳು:ಈ ವಾಚಿನಲ್ಲಿ ಬ್ಲೂಟೂತ್ ಕರೆ, ಹೃದಯ ಬಡಿತ ಸಂವೇದಕ, ರಕ್ತದೊತ್ತಡ ಮಾನಿಟರ್, SpO2 ಸಂವೇದಕ ಮತ್ತು ನಿದ್ರೆ ಮಾನಿಟರಿಂಗ್ ಸೇರಿದಂತೆ ಸ್ಮಾರ್ಟ್ ಹೆಲ್ತ್ ಟ್ರ್ಯಾಕರ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಬ್ಲೂಟೂತ್ 5.2 ಹೊಂದಿದೆ. ಮತ್ತು ಕರೆ ಮಾಡಲು ಮೀಸಲಾದ ಮೈಕ್ ಮತ್ತು ಸ್ಪೀಕರ್ ಅನ್ನು ಒಳಗೊಂಡಿದೆ.

ವಾಚನ್ನು ಮೊಬೈಲ್ ಫೋನ್ ನಲ್ಲಿ ಬೌಲ್ಟ್ ಫಿಟ್ ಎಂಬ ಆಪ್ ಮೂಲಕ ಸಂಪರ್ಕ ಮಾಡಬೇಕು. ಆಪ್ ಇನ್ ಸ್ಟಾಲ್ ಮಾಡಿಕೊಂಡ ಬಳಿಕ ಬ್ಲೂಟೂತ್ ಮೂಲಕ, ಸೈನ್ ಇನ್ ಇತ್ಯಾದಿ ಕಿರಿಕಿರಿಯಿಲ್ಲದೇ ಸಂಪರ್ಕಗೊಳ್ಳುತ್ತದೆ. ಜೊತೆಗೆ ಸ್ತ್ರೀ ಆರೋಗ್ಯ ಟ್ರ್ಯಾಕರ್, ಚಟುವಟಿಕೆ ಟ್ರ್ಯಾಕರ್ ಮತ್ತು ನಿದ್ರೆ ಟ್ರ್ಯಾಕಿಂಗ್ ಅನ್ನು ಹೊಂದಿದೆ. ಇದು ಕ್ರಿಕೆಟ್, ಓಟ, ಸೈಕ್ಲಿಂಗ್, ಬ್ಯಾಸ್ಕೆಟ್‌ಬಾಲ್, ಯೋಗ ಮತ್ತು ಈಜು ಸೇರಿದಂತೆ 100 ಕ್ಕೂ ಹೆಚ್ಚು ಮೋಡ್ ಗಳನ್ನು ಹೊಂದಿದೆ. ಕ್ರೀಡಾ ಮೋಡ್‌ಗಾಗಿ ಮೀಸಲಾದ ಬಟನ್ ಇದೆ.

ಸ್ಮಾರ್ಟ್ ವಾಚ್‌ಗಾಗಿ ಬಳಕೆದಾರರು 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳು ಮತ್ತು ಎಂಟು ವಿಭಿನ್ನ UI ಗಳಿಂದ ಆಯ್ಕೆ ಮಾಡಬಹುದು. ಇದಲ್ಲದೆ, ವಾಚ್‌ನಲ್ಲಿ AI ಧ್ವನಿ ಸಹಾಯ ಮತ್ತು ಫೈಂಡ್ ಮೈ ಫೋನ್ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

ವಾಚ್‌ನಲ್ಲಿನ ಇತರ ವೈಶಿಷ್ಟ್ಯಗಳು: ವಾಚ್ ನಲ್ಲೇ ಎಸ್ ಎಂ ಎಸ್ ನೋಡಬಹುದು, ಸೋಶಿಯಲ್ ಆಪ್ ಗಳ ನೊಟಿಫಿಕೇಷನ್ ತಿಳಿಯಬಹುದು. ಅಂತರ್ಗತ ಅಲಾರಾಂ ಗಡಿಯಾರ, ಟೈಮರ್, ಸ್ಟಾಪ್‌ವಾಚ್, ಹವಾಮಾನ ಅಧಿಸೂಚನೆಗಳು, ಬಹುಕಾಲ ಕುಳಿತಿದ್ದೀರಿ ಎಂದು ಜ್ಞಾಪಿಸುವ ಸೂಚನೆ, ಮತ್ತು ಅಂತರ್ಗತ ಮಿನಿ ಗೇಮ್‌ಗಳನ್ನು ಒಳಗೊಂಡಿವೆ. ಬೌಲ್ಟ್ ಕ್ರೌನ್ ಸಂಪರ್ಕಿತ ಸ್ಮಾರ್ಟ್‌ಫೋನ್‌ನಿಂದ ಸಂದೇಶಗಳು, ಕರೆಗಳು ಮತ್ತು ಇತರ ಅಪ್ಲಿಕೇಶನ್‌ಗಳಿಗೆ ಸ್ಮಾರ್ಟ್ ಅಧಿಸೂಚನೆಗಳನ್ನು ಸಹ ನೀಡುತ್ತದೆ.

ಬ್ಯಾಟರಿಯನ್ನು 150 ನಿಮಿಷಗಳ ಕಾಲ ಚಾರ್ಜ್ ಮಾಡಬೇಕು. ಸುಮಾರು 5-6 ದಿವಸಗಳ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ.

ಒಟ್ಟಾರೆ ಬೆಲೆ ಕಡಿಮೆಯಿದ್ದೂ ಗಡುಸಾದ ಲೋಹದ ಫ್ರೇಮ್, ಉತ್ತಮ ಪರದೆ, ವಿನ್ಯಾಸದ ಮೂಲಕ ಈ ವಾಚ್ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ ಎನ್ನಬಹುದು.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.