ಟೆಕ್ ಟ್ಯಾಂಕ್; ಆನ್‌ಲೈನ್‌ನಲ್ಲಿ ಫೈಲ್ ಕನ್ವರ್ಟ್ ಮಾಡಿ
ಐ ಲವ್ ಪಿಡಿಎಫ್' ಎಂಬ ತಾಣದಲ್ಲಿ ನೀವು ಸುಲಭವಾಗಿ ಫೈಲ್ ಗಳನ್ನು ಕನ್ವರ್ಟ್ ಮಾಡಬಹುದಾಗಿದೆ.
Team Udayavani, Feb 15, 2020, 12:25 PM IST
ಇಂದು ಫೈಲ್‌ಗಳನ್ನು ಅಥವಾ ಡಾಕ್ಯುಮೆಂಟ್‌ಗಳನ್ನು ಆನ್ ಲೈನ್‌ನಲ್ಲಿಯೇ ಒಂದು ಮತ್ತೂಂದು ಪಾರ್ಮೆಟ್‌ಗೆ ಕನ್ವರ್ಟ್ ಅಥವಾ ವರ್ಗಾವಣೆ ಮಾಡಬಹುದಾಗಿದೆ. ಗೂಗಲ್‌ನಲ್ಲಿ ನಾವು ಆನ್‌ಲೈನ್ ಕನ್ವರ್ಟರ್ ಎಂದು ಸರ್ಚ್ ಮಾಡಿದರೆ ನೂರಾರು ತಾಣಗಳು ತೆರೆದುಕೊಳ್ಳುತ್ತದೆ. ಇಲ್ಲಿ
ನೀವು ಜಾಹೀರಾತು ಅಲ್ಲದ ಪುಟಗಳನ್ನು ಆಯ್ದುಕೊಳ್ಳಬೇಕು.
ನೀವು ಹುಡುಕಿದ ಪುಟದಲ್ಲಿ ಜಾಹೀರಾತು ಇದೆಯೋ ಇಲ್ಲವೋ ಎಂಬುದನ್ನು ಗೂಗಲ್ ಪುಟದಲ್ಲೇ ನೋಡಬಹುದಾಗಿದೆ. ನಿಮ್ಮ ಸರ್ಚ್ ಲಿಸ್ಟ್ ನಲ್ಲಿನ ಆಯ್ಕೆಗಳು ad ಎಂದು ಕಾಣಿಸಿಕೊಂಡರೆ ಜಾಹೀರಾತು ಇರುವ ಪೇಜ್ ಎಂದರ್ಥ. ಅದೇ ad ಎಂದು ಇಲ್ಲದಿದ್ದರೆ ನೀವು ಪೇಜ್ ಅನ್ನು ಆಯ್ದುಕೊಳ್ಳಬಹುದು.
ಆನ್‌ಲೈನ್ ಕನ್ವರ್ಟರ್‌ನಲ್ಲಿ ಹಲವು ಆಯ್ಕೆಗಳಿರುತ್ತವೆ. ವೀಡಿಯೋ ಫೈಲ್‌ಗಳನ್ನು ಆಡಿಯೋ ಮಾಡುವುದು, ಡಾಕ್ಯುಮೆಂಟ್‌ಗಳನ್ನು ಕನ್ವರ್ಟ್ ಮಾಡುವುದು, ಜೆಪಿಜೆಗಳನ್ನು ಪಿಡಿಎಫ್ ಗಳನ್ನಾಗಿ ಮಾಡುವುದು ಸಾಮಾನ್ಯವಾಗಿ ಇರುತ್ತದೆ. “ಐ ಲವ್ ಪಿಡಿಎಫ್’ ಎಂಬ ತಾಣದಲ್ಲಿ ನೀವು ಸುಲಭವಾಗಿ ಫೈಲ್ ಗಳನ್ನು ಕನ್ವರ್ಟ್ ಮಾಡಬಹುದಾಗಿದೆ. ಎರಡು ಪಿಡಿಎಫ್ ಗಳು
ಮರ್ಜ್ ಮಾಡುವುದು, ಮರ್ಜ್ ಆಗಿದ್ದ ಪಿಡಿಎಫ್ ಗಳನ್ನು ಸಪರೇಟ್ ಮಾಡುವುದು, ಪಿಡಿಎಫ್ ಕಂಪ್ರಸ್, ಪಿಡಿಎಫ್ ಟು ವರ್ಡ್, ಪಿಡಿಎಫ್ ಟು ಪವರ್‌ಪಾಯಿಂಟ್, ಎಕ್ಸೆಲ್, ಎಕ್ಸೆಲ್ ಟು ಪಿಡಿಎಫ್, ಪವರ್‌ಪಾಯಿಂಟ್ ಟು ಪಿಡಿಎಫ್, ಜೆಪಿಜೆ ಟು ಪಿಡಿಎಫ್, ಪಿಡಿಎಫ್ ರೊಟೇಶನ್, ಪಿಡಿಎಫ್ ಡಿಟ್
ಮೊದಲಾದವುಗಳನ್ನು ಮಾಡಬಹುದಾಗಿದೆ.
ಇನ್ನು ಬ್ಯಾಂಕ್‌ಗೆ ಸಂಬಂಧಪಟ್ಟ ಕೆಲವು ಪಿಡಿಎಫ್ ಗಳು ಲಾಕ್ ಆಗಿರುತ್ತವೆ. ಅಂತಹವುಗಳನ್ನು ಈ ತಾಣದ ಮೂಲಕ ಆನ್‌ಲಾಕ್ ಮಾಡಬಹುದಾಗಿದೆ. ಪಿಡಿಎಫ್ ಫೈಲ್‌ಗಳಲ್ಲಿ ನಮಗೆ ಅಗತ್ಯವಿರದ ಪೇಜ್‌ಗಳನ್ನು ಡಿಲಿಟ್ ಮಾಡಬಹುದಾಗಿದೆ.ನಿಮಗೆ ಬೇಕಾದ ಆಯ್ಕೆಯನ್ನು ಕ್ಲಿಕ್ಕಿಸಿ ನಿಮ್ಮ ಫೈಲ್ ಅನ್ನು ಅಲ್ಲಿಗೆ ಅಟ್ಯಾಚ್ ಮಾಡಿ. ಬಳಿಕ ಕನ್ವರ್ಟ್ ಕೊಡಿ. ಬದಲಾದ ಫೈಲ್ ಅನ್ನು ಡೌನ್‌ಲೋಡ್
ಮಾಡಲು ಅಲ್ಲಿರುವ “ಡೌನ್‌ಲೋಡ್’ ಆಯ್ಕೆ ಮಾಡಿಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.