ಚರ್ಚೆ ಹುಟ್ಟುಹಾಕಿದೆ ಫೇಸ್‌ ಬುಕ್ ಪರಿಚಯಿಸಲು ಹೊರಟಿರುವ ಇನ್ಸ್ಟಾ ಗ್ರಾಂ ಫಾರ್ ಕಿಡ್ಸ್


ಶ್ರೀರಾಜ್ ವಕ್ವಾಡಿ, May 16, 2021, 6:14 PM IST

Current Instagram policy forbids children under the age of 13 from using the service.

ಸಾಮಾನ್ಯವಾಗಿ ಬಳಕೆಯಲ್ಲಿರುವ ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮಗಳು ಯುವಜನತೆಯನ್ನೇ ಗಮನದಲ್ಲಿರಿಸಿ, ಅವರ ಅಭಿರುಚಿಗಳಿಗೆ ತಕ್ಕಹಾಗೆ ನಿರ್ಮಾಣಗೊಂಡಿದೆ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಇದುವರೆಗೆ ಯಾವುದೇ ಸಾಮಾಜಿಕ ಮಾಧ್ಯಮವನ್ನು ನಿರ್ಮಿಸಲಾಗಿಲ್ಲ. ಸಾಮಾಜಿಕ ಮಾಧ್ಯಮದ ದೈತ್ಯ ಫೇಸ್‌ ಬುಕ್ ಅನ್ನು ಸಹ ಮೂಲತಃ ಕಾಲೇಜು ಮಕ್ಕಳಿಗಾಗಿಯೇ ತಯಾರಿಸಲಾಗಿತ್ತು. ಅದರ ಪ್ರೇರಣೆಯಿಂದಲೇ ವಾಟ್ಸಾಪ್, ಇನ್ಸ್ಟಾ ಗ್ರಾಂ, ಯೂಟ್ಯೂಬ್, ಡೇಟಿಂಗ್ ಆ್ಯಪ್ ಇತ್ಯಾದಿಗಳು ಜನ್ಮತಾಳಿದವು.

ಎಲ್ಲರಿಗಿಂತ ಹೆಚ್ಚಾಗಿ, ಹದಿಹರೆಯದವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಕೆಲವೊಂದು ಆ್ಯಪ್‌ಗಳಲ್ಲಿ ಲಾಗ್‌ಇನ್ ಆಗಲು ಕನಿಷ್ಠ 13 ರಿಂದ 18 ವರ್ಷ ತುಂಬಿರಬೇಕು. ಹಾಗಂತ ಹೇಳಿ, 13 ವರ್ಷದೊಳಗಿನ ಮಕ್ಕಳಿಗೆ ಇದರ ಬಗ್ಗೆ ಅರಿವೇ ಇಲ್ಲ ಎಂದೇನಿಲ್ಲ. ಅನೇಕ ಮಕ್ಕಳು ಈಗಾಗಲೇ ತಮ್ಮ ನೈಜ ವಯಸ್ಸನ್ನು ತಿಳಿಸದೇ ಸುಳ್ಳು ಮಾಹಿತಿ ನೀಡಿ ಬೇರೆ ಬೇರೆ ಪ್ಲಾಟ್‌ ಫಾರ್ಮ್ ಗಳಲ್ಲಿ ಅಕೌಂಟ್‌ ಗಳನ್ನು ಹೊಂದಿದ್ದಾರೆ. ಈ ಕೋವಿಡ್ ಸಮಯದಲ್ಲಂತೂ ಇಂಟರ್ನೆಟ್‌ನಲ್ಲಿ ಬ್ರೌಸ್ ಮಾಡುವುದನ್ನೂ ಕಲಿತಿದ್ದಾರೆ.

ಇದನ್ನೂ ಓದಿ :  ತೌಖ್ತೇ ಚಂಡಮಾರುತವನ್ನು ಎದುರಿಸಲು ಜನರ ಬೆನ್ನೆಲುಬಾಗಿರಿ : ಕಾರ್ಯಕರ್ತರಿಗೆ ನಡ್ಡಾ ಕರೆ

ಇದೀಗ 13 ವರ್ಷದ ಮಕ್ಕಳನ್ನೇ ಗುರಿಯಾಗಿಸಿಕೊಂಡು ಹೊಸ ಆ್ಯಪ್ ಪರಿಚಯಿಸಲು ಫೇಸ್‌ಬುಕ್ ಒಡೆತನದ ಇನ್ಸ್ಟಾ ಗ್ರಾಂ ಮುಂದಾಗುತ್ತಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಯೂಟ್ಯೂಬ್ ಫಾರ್ ಕಿಡ್ಸ್ ಹಾಗೂ ಮೆಸೆಂಜರ್ ಫಾರ್ ಕಿಡ್ಸ್ ಮಾದರಿಯಲ್ಲಿ ಇನ್ಸ್ಟಾ ಗ್ರಾಂ ಫಾರ್ ಕಿಡ್ಸ್ ಆ್ಯಪ್ ಪರಿಚಯಿಸಲು ಫೇಸ್‌ಬುಕ್ ಯೋಚಿಸುತ್ತಿದೆ.

ಈ ಕುರಿತಂತೆ ಈಗಾಗಲೇ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. ಅಮೇರಿಕಾದ ಅಟಾರ್ನಿ ಜನರಲ್, ಈ ಯೋಜನೆಯನ್ನು ಕೈಬಿಡುವಂತೆ ಫೇಸ್‌ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಗೆ ಪತ್ರ ಬರೆದಿದ್ದಾರೆ.

“ಸಾಮಾಜಿಕ ಮಾಧ್ಯಮವನ್ನು ಬಳಸುವುದು ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹಾನಿಕಾರಕವಾಗಿದೆ, 13 ವರ್ಷದ ಒಳಗಿನ ಮಕ್ಕಳು ಇಂಟರ್ನೆಟ್ ಪ್ರಪಂಚಕ್ಕೆ ಹೊಂದಿಕೊಂಡು ಹೋಗುವ ಮನಃಸ್ಥಿತಿಯನ್ನೂ ಬೆಳೆಸಿಕೊಂಡಿರುವುದಿಲ್ಲ. ಇದಲ್ಲದೆ, ಫೇಸ್‌ಬುಕ್ ಮಕ್ಕಳ ಹಕ್ಕನ್ನು ರಕ್ಷಿಸುವಲ್ಲಿ ಈಗಾಗಲೇ ಹಲವಾರು ಸನ್ನಿವೇಶಗಲ್ಲಿ ವಿಫಲವಾಗಿರುವುದು ನಾವು ಕಂಡಿದ್ದೇವೆ”ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಹಾಗೆಯೇ, 13 ವರ್ಷದ ಒಳಗಿನವರೂ ಇಂಟರ್ನೆಟ್ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸಿದರೆ, ಅವರ ಮನಸ್ಸಿನ ಮೇಲೆ ಬೀರಬಹುದಾದ ಋಣಾತ್ಮಕ ಪರಿಣಾಮಗಳನ್ನು ಮನಃಶಾಸ್ತçಜ್ಞರೊಬ್ಬರು ಖ್ಯಾತ ಜರ್ನಲ್ ಒಂದರಲ್ಲಿ ಪ್ರಕಟಿಸಿದ್ದಾರೆ.

ಸಣ್ಣ ವಯಸ್ಸಿನಲ್ಲೇ ಅವರು ಸಾಮಾಜಿಕ ಮಾಧ್ಯಮವನ್ನು ಪ್ರವೇಶಿಸಿದರೆ, ಬಾಡಿ ಶೇಮಿಂಗ್, ಸೈಬರ್ ಬೆದರಿಕೆ ಮತ್ತು ತಮ್ಮ ಅಂದ ಚಂದದ ಬಗ್ಗೆಯೇ ಚಿಂತೆ ಮಾಡಲು ಪ್ರಾರಂಭಿಸುತ್ತಾರೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ರಕ್ಷಣೆಯ ಕುರಿತು ಹಲವಾರು ತಜ್ಞರ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಆದರೆ ಈ ಕುರಿತಂತೆ ವಿಭಿನ್ನ ನಿಲುವನ್ನು ಫೇಸ್‌ ಬುಕ್ ಹೊಂದಿಕೊಂಡಿದೆ. ಪೋಷಕರ ಮೇಲ್ವಿಚಾರಣೆ ಅಥವಾ ಅನುಮತಿಯಿಲ್ಲದೆ ಯಾವುದೇ ವಯಸ್ಕ ಸೈಟ್‌ಗಳಿಗೆ ಹೋಗಲು ಆಗುವುದಿಲ್ಲ. ಮಕ್ಕಳು ಸುಳ್ಳು ಹೇಳುವುದನ್ನು ತಡೆಯಲು ಇಂತಹ ವೇದಿಕೆಗಳು ಅಗತ್ಯ ಎಂದು ಅದು ವಾದಿಸುತ್ತದೆ. ಇಂತಹ ಕಿಡ್ಸ್ ಆ್ಯಪ್‌ಗಳನ್ನು ಪರಿಚಯಿಸುವುದರಿಂದ ಪೋಷಕರಿಗೂ ತಮ್ಮ ಮಕ್ಕಳು ಏನ್ನನ್ನು ನೋಡುತ್ತಿದ್ದಾರೆ ಎಂದು ಅರಿವಿಗೆ ಬರುತ್ತದೆ. ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಖುದ್ದು ಪೋಷಕರೇ ನಿಯಂತ್ರಣವನ್ನು ಹೊಂದಿರುತ್ತಾರೆ ಎಂದು ಫೇಸ್‌ ಬುಕ್ ಸಂಸ್ಥೆ ಹೇಳುತ್ತದೆ.

ಇಲ್ಲಿ ನಮ್ಮ ಕಣ್ಣಮುಂದೆ ಕಾಣುವ ಮತ್ತೊಂದು ಸಮಸ್ಯೆಯೆಂದರೆ, ಮಕ್ಕಳ ಅಭಿರುಚಿ. 7 ವರ್ಷದ ಮಕ್ಕಳಿಗಾಗಿ ರಚಿತವಾದ ಒಂದು ಸೈಟ್, 12 ವರ್ಷದ ಮಕ್ಕಳಿಗೆ ಇಷ್ಟವಾಗುವುದಿಲ್ಲ. ನಮ್ಮನ್ನೇ ಉದಾಹರಣೆಯಾಗಿ ತೆಗೆದುಕೊಂಡರೂ, ವರ್ಷ ಕಳೆದಂತೆ ನಾವು ಟಿವಿಯಲ್ಲಿ ನೋಡುವ ಚಾನಲ್‌ಗಳೂ ಬದಲಾಗುತ್ತಾ ಹೋಗಿತ್ತು. 5-6ನೇ ವಯಸ್ಸಿನಲ್ಲಿದ್ದಾಗ ಕಾರ್ಟೂನ್ ನೋಡುತ್ತಿದ್ದವರು, 12-13 ನೇ ವಯಸ್ಸಿಗೆ ಬರುವಾಗ ಧಾರವಾಹಿ-ನ್ಯಾಶನಲ್ ಜಿಯೋಗ್ರಫಿಯಂತಹ ಪ್ರೋಗ್ರಾಂಗಳನ್ನು ವೀಕ್ಷಿಸಲು ಆರಂಭಿಸಿದೆವು. ಬಾಲ್ಯದಲ್ಲಿ ದಿನಕ್ಕೊಂದು ಆಸೆ, ಅಭುರುಚಿ ಬದಲಾಗುತ್ತಾ ಹೋಗುತ್ತದೆ. ಹೀಗಿರುವಾಗ 11-13 ವಯಸ್ಸಿನ ಮಕ್ಕಳು ನೇರವಾಗಿ ಹದಿಹರೆಯದವರೊಂದಿಗೆಯೇ ಹೊಂದಿಕೊಂಡು ಹೋಗಲು ಬಯಸುತ್ತಾರೆ.

ಹೀಗೆ ಪುಸ್ತಕ ಹಿಡಿಯುವ ಕೈಗಳಲ್ಲಿ ಕಾನೂನುಬದ್ಧವಾಗಿ ಮೊಬೈಲ್‌ಗಳನ್ನು ನೀಡಿದರೆ, ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮಗಳು ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ‘ಕಿಡ್ಸ್’ ಆ್ಯಪ್‌ ಗಳನ್ನು ಪರಿಚಯಿಸುವ ಮೊದಲು, ಫೇಕ್ ಅಕೌಂಟ್ ಹಾಗೂ ವಯಸ್ಸಿನ ಸುಳ್ಳು ಮಾಹಿತಿ ನೀಡಿ ಸಾಮಾಜಿಕ ಮಾಧ್ಯಮಗಳನ್ನು ಬಳಸುವವರನ್ನು ಅದರಿಂದ ಹೊರತರುವ ಪ್ರಯತ್ನಗಳು ನಡೆದರೆ ಉತ್ತಮ.

ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಫೇಸ್ ಬುಕ್ ಸ್ನೇಹಿತನಿಂದ ಹೀನ ಕೃತ್ಯ : ಮಹಿಳೆ ಮೇಲೆ 25 ಕಾಮುಕರಿಂದ ಅತ್ಯಾಚಾರ

ಟಾಪ್ ನ್ಯೂಸ್

kushtagi-School

Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

9-rabakavi

Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ

8-

Panaji: ಕಲಂಗುಟ್ ಬೀಚ್ ನಲ್ಲಿ ಪ್ರವಾಸಿ ಕೊಲೆ

Glass Bridge: India’s first glass bridge inaugurated at Kanyakumari

Glass Bridge: ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗಾಜಿನ ಸೇತುವೆ ಉದ್ಘಾಟನೆ

Rane-Kerala-Cm

Rane’s Remark: ಕೇರಳ ʼಮಿನಿ ಪಾಕಿಸ್ಥಾನʼವೆಂದ ಸಚಿವ ನಿತೇಶ್ ರಾಣೆ; ಸಿಎಂ ಪಿಣರಾಯಿ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Airtel Outage:ದೇಶದ ಹಲವೆಡೆ ಏರ್‌ ಟೆಲ್‌ Network ಸಮಸ್ಯೆ; ಏರ್‌ ಟೆಲ್‌ ಗ್ರಾಹಕರಿಂದ ದೂರು

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

YearEnd Offers:ಭಾರತದಲ್ಲಿ Skoda Superb ಖರೀದಿಸುವವರಿಗೆ 18 ಲಕ್ಷ ರೂ.ವರೆಗೆ ಡಿಸ್ಕೌಂಟ್!

ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ

ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

ಶೀಘ್ರವೇ ದೇಶದ ಬುಲೆಟ್‌; ರೈಲು ವಿನ್ಯಾಸ ಅಂತಿಮ: ಮುಂಬಯಿ-ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Assam; 4 villages in Chahar district child marriage free: CM himanta biswa

Assam; ಚಹಾರ್‌ ಜಿಲ್ಲೆ 4 ಗ್ರಾಮ ಬಾಲ್ಯ ವಿವಾಹ ಮುಕ್ತ: ಸಿಎಂ ಹಿಮಾಂತ್‌

kushtagi-School

Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು

50 vehicles get punctured simultaneously on Mumbai-Nagpur highway

Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್‌ ಪಂಕ್ಚರ್‌

11-

Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು

Test Team; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್‌ ತಂಡಕ್ಕೆ ಭಾರತೀಯ ನಾಯಕ; ರೋಹಿತ್‌ ಅಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.